Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಜನವರಿ 29ಕ್ಕೆ ಮೌನಿ ಅಮವಾಸ್ಯೆ: ಈ ದಿನ ಏನು ಮಾಡಬೇಕು, ಧಾರ್ಮಿಕ ನಿಯಮಗಳೇನಿದೆ?
ಜನವರಿ 29ಕ್ಕೆ ಮೌನಿ ಅಮವಾಸ್ಯೆ, ಧಾರ್ಮಿಕ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವವಾದ ದಿನ. ಈ ದಿನ ಕುಂಭಸ್ನಾನಕ್ಕೆ ತುಂಬಾನೇ ಮಹತ್ವವಿದೆ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಕುಂಭಮೇಳಕ್ಕೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ.

ಮೌನಿ ಅಮವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಮಕರ ರಾಶಿಯಲ್ಲಿರುತ್ತದೆ, ಹಾಗಾಗಿ ಈ ದಿನದಂದು ಧನಾತ್ಮಕ ಶಕ್ತಿ ಅಧಿಕವಿರುತ್ತದೆ ಎಂದು ಧಾರ್ಮಿಕ ಶಾಸ್ತ್ರ ಹೇಳುತ್ತದೆ. ಈ ಕಾರಣದಿಂದಲೇ ಈ ದಿನಕ್ಕೆ ಯೋಗಿಗಳು, ಅಘೋರಿಗಳು, ಸಂನ್ಯಾಸಿಗಳು, ನಾಗಾ ಸಾಧುಗಳು ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಈ ದಿನದಂದು ವಿಶೇಷ ಪೂಜೆಗಳನ್ನು ಮಾಡಲಾಗುವುದು. ಈ ದಿನದಂದು ಮಹಾಕುಂಭದ ಅಮೃತ ಸ್ನಾನ ನಡೆಯಲಿದೆ. ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ.
ಮೌನಿ ಅಮವಾಸ್ಯೆಯಂದುಏನು ಮಾಡಿದರೆ ಒಳಿತಾಗುತ್ತದೆ? ಏನು ಮಾಡಬಾರದು ಎಂಬ ಕೆಲ ಧಾರ್ಮಿಕ ನಿಯಮಗಳಿವೆ, ಅವುಗಳ ಬಗ್ಗೆ ನೋಡುವುದಾದರೆ:
ಏನು ಮಾಡಬೇಕು?
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವನ್ನು ಪೂಜಿಸಬೇಕು
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವೆಂದು ಭಾವಿಸಲಾಗದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲಿ ಸ್ನಾನ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ ಸ್ನಾನ ಮಾಡಬೇಕು.
ಈ ದಿನ ಉಪವಾಸವಿದ್ದು ಪೂಜೆ ಕಾರ್ಯಗಳನ್ನು ಮಾಡಬೇಕು.
ಮೌನಿ ಅಮವಾಸ್ಯೆಯಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ.ಈ ದಿನ ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ, ವಸ್ತ್ರಗಳನ್ನು ದಾನ ಮಾಡಿ.
ಈ ದಿನ ಪಿತೃತರ್ಪಣಕ್ಕೆ ಕೂಡ ಸೂಕ್ತವಾದ ದಿನವಾಗಿದೆ. ಪಿತೃತರ್ಪಣ ಮಾಡುವುದರಿಂದ ಪಿತೃದೋಷವಿದ್ದರೆ ಅದು ನಿವಾರಣೆಯಾಗುತ್ತದೆ.
ಮೌನಿ ಅಮವಾಸ್ಯೆಗೆ ಏನು ಮಾಡಬಾರದು?
ಈ ದಿನ ಮೀನು, ಮಾಂಸ, ಮದ್ಯ ಇವುಗಳಿಂದ ದೂರವಿರಬೇಕು
ಹಿರಿಯರನ್ನು ಅಗೌರವದಿಂದ ಕಾಣಬೇಡಿ
ಕಾಗೆ, ನಾಯಿ ಈ ಬಗೆಯ ಪ್ರಾಣಿಗಳನ್ನು ನೋಯಿಸಬೇಡಿ, ಇದರಿಂದಪಿತೃದೋಷ ಉಂಟಾಗುವುದು
ಮನೆಯನ್ನು ಗಲೀಜಾಗಿ ಇಡಬಾರದು, ಇವೆಲ್ಲಾ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮನೆಗೆ ಒಳ್ಳೆಯದಲ್ಲ.



Click it and Unblock the Notifications
