Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಮಂಗಳ ಗೋಚಾರಫಲ: ಈ 4 ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ
ವೈದಿಕ ಶಾಸ್ತ್ರದಲ್ಲಿ ಮಂಗಳವನ್ನು ಕ್ಷುದ್ರಗ್ರಹವೆಂದು ಹೇಳಲಾಗುವುದು, ಮಂಗಳ ಗ್ರಹದ ರಾಶಿ ಬದಲಾವಣೆಗೆ ತುಂಬಾನೇ ಮಹತ್ವವಿದೆ. ಮಂಗಳನ ಚಲನೆ ಪ್ರತಿಯೊಂದು ರಾಶಿಗಳ ಮೇಲೆ ಪ್ರಭಾವ ಬೀರುವುದು. ಆಗಸ್ಟ್ 18ಕ್ಕೆ ಮಂಗಳ ಗ್ರಹವು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಗೆ ಸಂಚರಿಸಲಿದೆ.
ಮಂಗಳ ಗ್ರಹ ವ್ಯಕ್ತಿಯ ಸಂಪತ್ತು, ಆತ್ಮವಿಶ್ವಾಸ, ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಇದೀಗ ಕನ್ಯಾ ರಾಶಿಗೆ ಮಂಗಳನ ಸಂಚಾರ 12 ರಾಶಿಗಳ ಮೇಲೂ ಪ್ರಭಾವ ಬೀರಿದೆ, ಆದರೆ 4 ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ:

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಏನಾದರೂ ಕಾನೂನು ವಿಷಯಗಳಿದ್ದರೆ ನಿಮ್ಮ ಪರವಾಗಿ ಬರಲಿದೆ. ಈ ಅವಧಿಯಲ್ಲಿ ಆರೋಗ್ಯ ಚೆನ್ನಾಗಿರಲಿದೆ, ವೃತ್ತಿ ಜೀವನದಲ್ಲಿ ಎಲ್ಲವೂ ಚೆನ್ನಾಗಿರಲಿದೆ. ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಅದೃಷ್ಟದ ಬೆಂಬಲವಿರಲಿದೆ. ಈ ಸಮಯದಲ್ಲಿ ಉದ್ಯೋಗಿಗಳು ಹಾಗೂ ವ್ಯವಹಾರಸ್ಥರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಈ ಸಮಯದಲ್ಲಿ ನೀವು ಆಕರ್ಷಕವಾಗಿ ಡ್ರೆಸ್ಸಿಂಗ್ ಮಾಡಿ.
ಕರ್ಕ ರಾಶಿ
ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುವುದು, ಕಲಿಕೆ ಕಡೆ ಗಮನ ಕೊಡಲು ಸಾಧ್ಯವಾಗುವುದು. ಅವಾಹಿತರಾಗಿದ್ದು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಸಮಯದಲ್ಲಿ ಕಂಕಣ ಬಲ ಕೂಡಿ ಬರಲಿದೆ.
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುವುದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ.
ಈ ರೀತಿಯ ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು
* ಮಂಗಳವಾರ ಕಹಿ ಬೇವಿನ ಗಿಡಕ್ಕೆ ನೀರನ್ನು ಅರ್ಪಿಸಿ
* ಮಂಗಳವಾರ ಹನುಮಾನ್ ಚಾಲೀಸ ಪಠಿಸಿ
* ಹನುಮಂತನಿಗೆ ಸಿಂಧೂರ ಅರ್ಪಿಸಿ
* ಮಂಗಳವಾರ ಮಾಂಸಾಹಾರ ಸೇವಿಸಬೇಡಿ
* ಮಂಗಳವಾರ ಕೆಂಪು ಧಾನ್ಯಗಳು, ಕೆಂಪು ಸಿಹಿ ಪದಾರ್ಥ, ಕೆಂಪು ಹಣ್ಣುಗಳನ್ನು ಅರ್ಪಿಸಿ.
* ಸಾಧ್ಯವಾದರೆ ಮಂಗಳವಾರ ಉಪವಾಸ ಮಾಡಿ.



Click it and Unblock the Notifications