Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸೆ. 24ಕ್ಕೆ ಶತ್ರು ರಾಶಿಯಲ್ಲಿ ಮಂಗಳ ಅಸ್ತಂಗತ: 3 ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು
ವೈದಿಕ ಗ್ರಂಥಗಳಲ್ಲಿ ಮಂಗಳ ಗ್ರಹ ನಮ್ಮ ಕ್ರಿಯೆಗೆ ಸಂಬಂಧಿಸಿದ ಗ್ರಹವೆಂದು ಹೇಳಲಾಗಿದೆ. ಮಂಗಳ ಗ್ರಹದ ಆಶೀರ್ವಾದವಿಲ್ಲದೆ ಯಾವುದೇ ವ್ಯಕ್ತಿಯು ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ಜಾತಕದಲ್ಲಿ ಮಂಗಳ ಬಲವಾದ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ತುಂಬಾನೇ ಚೆನ್ನಾಗಿರುತ್ತಾನೆ. ಅದೇ ದುರ್ಬಲ ಸ್ಥಾನದಲ್ಲಿದ್ದರೆ ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಈ ಸೆಪ್ಟೆಂಬರ್ 24 ಕ್ಕೆ ಮಂಗಳ ಕನ್ಯಾರಾಶಿಯಲ್ಲಿ ಅಸ್ತಮಿಸಲಿದೆ. ಕನ್ಯಾ ರಾಶಿಯನ್ನು ಮಂಗಳದ ಶತ್ರು ರಾಶಿ ಎಂದು ಹೇಳಲಾಗುವುದು. ಕನ್ಯಾ ರಾಶಿಯಲ್ಲಿ ಅಸ್ತಮಿಸಿದಾಗ ಈ 3 ರಾಶಿಯವರಿಗೆ ತುಂಬಾನೇ ಸವಾಲುಗಳು ಎದುರಾಗುವುದು.

ವೃಷಭ ರಾಶಿ
ಮಂಗಳ ಕನ್ಯಾ ರಾಶಿಯಲ್ಲಿ ಅಸ್ತವಾದಾಗ ವೃಷಭ ರಾಶಿಯವರಿಗೆ ಕೆಲವು ಸವಾಲುಗಳು ಎದುರಾಗುವುದು. ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಉದ್ಯೋಗದಲ್ಲಿ ಹಲವು ಸವಾಲುಗಳು ಎದುರಾಗುವುದು. ಕೆಲಸದ ವಿಷಯಕ್ಕೆ ನಿಮ್ಮ ಹಾಗೂ ಮೇಲಾಧಿಕಾರ ನಡುವೆ ತರ್ಕ ಉಂಟಾಗಬಹುದು. ಈ ಅವಧಿಯಲ್ಲಿ ತಾಳ್ಮೆ ತುಂಬಾನೇ ಕಡಿಮೆ ಇರಲಿದೆ. ಪ್ರಯಾಣದಲ್ಲಿ ಅಜಾಗರೂಕತೆಯಿಂದ ಆರ್ಥಿಕ ನಷ್ಟ ಉಂಟಾಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಸಿಂಹ ರಾಶಿ
ಮಂಗಳ ಗ್ರಹ ಅಸ್ತವಾದಾಗ ಹಣಕಾಸಿನ ತೊಂದರೆಗಳು ಎದುರಾಗುವುದು. ನಿಮ್ಮ ಆದಾಯದಲ್ಲಿ ಇಳಿಕೆಯಾಗುವುದು, ಆದರೆ ಖರ್ಚುಗಳು ಅಧಿಕವಿರಲಿದೆ. ಸಂಗಾತಿಯ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗಬಹುದು. ಮಾನಸಿಕ ಒತ್ತಡ ಅಧಿಕವಾಗಿರಲಿದೆ, ಆರೋಗ್ಯ ಸಮಸ್ಯೆಗಳು ಕಂಡು ಬರುವುದು. ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರುವುದು. ಕೆಲಸದಲ್ಲಿ ನಿರಾಸಕ್ತಿ ಕಂಡು ಬರುವುದು. ಕೆಲಸದಲ್ಲಿ ಸಮಸ್ಯೆಗಳು ಉಂಟಾಗುವುದು.
ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಆದಿತ್ಯ ಹೃದಯ ಸ್ತೋತ್ರ ಪ್ರತಿದಿನ ಪಠಿಸಿ
ಮೀನ ರಾಶಿ
ಮಂಗಳ ಮೀನ ರಾಶಿಯಲ್ಲಿ ಅಸ್ತವಾದಾಗ ಮೀನ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ. ವ್ಯಾಪಾರಸ್ಥರು ತೀವ್ರ ಸ್ಪರ್ಧೆಯನ್ನು ಎದುರಿಸಬಹುದು. ನೀವು ಆರ್ಥಿಕ ನಷ್ಟವನ್ನು ಸಹ ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಹಣಕಾಸಿನ ವಿಚಾರದಲ್ಲಿಯೂ ಈ ವಾರ ಅನುಕೂಲಕರವಲ್ಲ. ಸಂಗಾತಿಯ ಜೊತೆಯೂ ಕೆಲ ಸಮಸ್ಯೆಗಳು ಉಂಟಾಗಬಹುದು.
ಪರಿಹಾರ: ಪ್ರತಿದಿನ 27 ಬಾರಿ "ಓಂ ಮಂಗಳಾಯ ನಮಃ" ಎಂದು ಜಪಿಸಿ.
ಮಂಗಳ ದುರ್ಬಲ ಸ್ಥಾನದಲ್ಲಿದ್ದಾಗ ಈ ಸಮಸ್ಯೆಗಳು ಉಂಟಾಗುವುದು
* ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು
* ಮಾನಸಿಕವಾಗಿ ತುಂಬಾನೇ ದುರ್ಬಲವಾಗಿರುತ್ತದೆ, ಏನೂ ದುಗುಡ-ದುಃಖಗಳ ಉಂಟಾಗುವುದು.
* ಮಹಿಳೆಯರಲ್ಲಿ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು
* ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು.
* ದೈಹಿಕವಾಗಿ ನೋವುಗಳು ಕಂಡು ಬರುವುದು.
ಪರಿಹಾರವೇನು?
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ, ಮಂಗಳವಾರ, ಶನಿವಾರ ಹನುಮಂತನಿಗೆ ಪೂಜೆ ಸಲ್ಲಿಸಿ.'
* ಮಂಗಳ ಯಂತ್ರ ಸ್ಥಾಪಿಸಿ ಪೂಜಿಸಿ
* ಕೋಪವನ್ನು ನಿಯಂತ್ರಣದಲ್ಲಿಡಿ
* ರಕ್ತದಾನ ಮಾಡಿ
* ಮಂಗಳವಾರ ಮಂಗಳಗಳಿಗೆ ಬೆಲ್ಲವನ್ನು ಅರ್ಪಿಸಿ.



Click it and Unblock the Notifications