Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ಮಾರ್ಗಶಿರ ಮಾಸ ಶುರು: ಹಿಂದೂ ನಂಬಿಕೆ ಪ್ರಕಾರ ಈ ಧಾರ್ಮಿಕ ಕಾರಣಗಳಿಗೆ ಈ ಮಾಸ ವಿಶೇಷವಾಗಿದೆ
ಹಿಂದೂ ಪಂಚಾಂಗ ಪ್ರಕಾರ ಕಾರ್ತಿಕ ಮಾಸದ ನಂತರ ಬರುವ ಒಂಭತ್ತನೇ ಮಾಸವೇ ಮಾರ್ಗಶಿರ ಅಥವಾ ಮಾರ್ಗಶೀರ್ಷ. ಈ ವರ್ಷ ಮಾರ್ಗಶಿರ ಮಾಸವು ಡಿಸೆಂಬರ್ 2ರಿಂದ ಪ್ರಾರಂಭವಾಗಿ ಡಿಸೆಂಬರ್ 30ಕ್ಕೆ ಮುಕ್ತಾಯವಾಗಲಿದೆ, ಧಾರ್ಮಿಕ ಕಾರಣಗಳಿಂದ ಮಾರ್ಗಶಿರ ಮಾಸವು ತುಂಬಾನೇ ವಿಶೇಷತೆಯಿಂದ ಕೂಡಿದೆ. ಮಾರ್ಗಶಿರ ಮಾಸದಲ್ಲಿ ಬರುವ ಹಬ್ಬಗಳಾವುವು, ಮಾಘ ಸ್ನಾನದ ಮಹತ್ವವೇನು, ಈ ತಿಂಗಳಿನಲ್ಲಿ ಯಾವ ಕಾರ್ಯ ಮಾಡಿದರೆ ಒಳ್ಳೆಯದು ಈ ಬಗ್ಗೆ ನೋಡೋಣ:

ಮಾರ್ಗಶಿರ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಧರ್ನುಮಾಸ ಪ್ರಾರಂಭ ಡಿಸೆಂಬರ್ 16
ಸುಬ್ರಹ್ಮಣ್ಯ ಷಷ್ಠಿ ಡಿಸೆಂಬರ್ 6
ಗೀತಾ ಜಯಂತಿ: ಡಿಸೆಂಬರ್ 11
ಹನುಮಾನ್ ವ್ರತ: ಡಿಸೆಂಬರ್ 13
ದತ್ತಾತ್ರೇಯ ಜಯಂತ ಡಿಸೆಂಬರ್ 14
ಸಂಕಷ್ಟಹರ ಚತುರ್ಥಿ ವ್ರತ ಡಿಸೆಂಬರ್ 18ಕ್ಕೆ ಆಚರಿಸಲಾಗುವುದು.
ಮಾರ್ಗಶಿರ ಮಾಸದಲ್ಲಿ ಬರುವ ಏಕಾದಶಿ
ಡಿಸೆಂಬರ್ 11ಕ್ಕೆ: ಮೋಕ್ಷದ ಏಕಾದಶಿ
ಡಿಸೆಂಬರ್ 26: ಸಫಲಾ ಏಕಾದಶಿ
ಮಾರ್ಗಶಿರ ಮಾಸದಲ್ಲಿ ಬರುವ ಹುಣ್ಣಿಮೆ ಮತ್ತು ಅಮವಾಸ್ತೆ
ಡಿಸೆಂಬರ್ 15ಕ್ಕೆ ಹುಣ್ಣಿಮೆ
ಡಿಸೆಂಬರ್ 30ಕ್ಕೆ ಅಮವಾಸ್ಯೆ
ಮಾಘ ಸ್ನಾನಕ್ಕೆ ತುಂಬಾನೇ ಮಹತ್ವವಿದೆ
ಮಾರ್ಗಶಿರ ಮಾಸದಲ್ಲಿ ವ್ಯಕ್ತಿ ಬೇಗನೆ ಎದ್ದು ಸ್ನಾನ ಮಾಡಿ ದೇವರನ್ನು ಪೂಜಿಸಬೇಕು. ಈ ಮಾಸದಲ್ಲಿ ಬೆಳಗ್ಗೆ ಬೇಗನೆ ಎದ್ದು ನದಿಯಲ್ಲಿ ಸ್ನಾನ ಮಾಡಿದರೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಅಯ್ಯಪ್ಪಸ್ವಾಮಿ ವ್ರತ ನಿಯಮ ಪಾಲಿಸುವವರು ಈ ತಿಂಗಳಿನಲ್ಲಿ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಯ್ಯಪ್ಪಸ್ವಾಮಿ ಮಂತ್ರಗಳನ್ನು ಪಠಿಸುತ್ತಾರೆ. ಮಾರ್ಗಶಿರ ಮಾಸದಲ್ಲಿ ಪೂಜೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗುತ್ತೇವೆ.
ಮಾರ್ಗಶೀರ್ಷ ಮಾಸದಲ್ಲಿ ದಾನಕ್ಕೂ ಮಹತ್ವವಿದೆ
ಈ ಮಾಸದಲ್ಲಿ ಅನ್ನದಾನ,ಬೆಳ್ಳಿದಾನ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ದಾನಗಳನ್ನು ಮಾಡುವುದರಿಂದ ವ್ಯಕ್ತಿಯು ಪಾಪದಿಂದ ಮುಕ್ತನಾಗುತ್ತಾನೆ, ಅವನ ವಂಶವೃದ್ಧಿಸುತ್ತದೆ ಎಂದು ನಂಬಲಾಗಿದೆ.
ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದಿದ್ದ ಶ್ರೀಕೃಷ್ಣ
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ "ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮ ಆಕರಃ -ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು" ಎಂಬ ಮಾತು ಹೇಳುತ್ತಾನೆ, ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ್ದು ಕೂಡ ಇದೇ ಮಾಸದಲ್ಲಿ ಎಂದು ಹೇಳಲಾಗುತ್ತಿದೆ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವನ್ನು ಗೀತಾ ಜಯಂತಿ, ಮೋಕ್ಷದಾ ಏಕಾದಶಿ ಎದು ಆಚರಿಸಲಾಗಿದೆ.
ಮಾರ್ಶಶಿರ ಮಾಸದ ಹುಣ್ಣಿಮೆಯಂದು ತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುವುದು, ಈ ಮಾಸದಲ್ಲಿ ಬರುವ ಸಫಲಾ ಏಕಾದಶಿಯಂದು ಏಕಾದಶಿ ಆಚರಣೆ ಮಾಡಿದರೆ ಜ್ಞಾನ ಹೆಚ್ಚಾಗುವುದು ಎಂದು ಕರೆಯಲಾಗುವುದು. ಈ ಮಾಸದಲ್ಲಿ ಸ್ಕಂದ ಷಷ್ಠಿಗೆ ಸುಬ್ರಹ್ಮಣ್ಯನಿಗೆ ಪೂಜೆ ಮಾಡುತ್ತಾರೆ. ಈ ದಿನ ಪೂಜೆ ಮಾಡುವುದರಿಂದ ಸರ್ಪದೋಷ ನಿವಾರಣೆಯಾಗಲಿದೆ, ಸಂತಾನ ಭಾಗ್ಯ ಅಪೇಕ್ಷಿಸಿ ಪೂಜೆ ಸಲ್ಲಿಸುವವರೆಗೆ ಒಳ್ಳೆಯ ಫಲ ಸಿಗುವುದು, ಕಷ್ಟಗಳು ದೂರಾಗುವುದು. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಿನ ವಿಶೇಷ ಪೂಜೆ ಇರಲಿದೆ, ಲಕ್ಷಾಂತರ ಭಕ್ತಾಧಿಗಳು ಸೇರಲಿದ್ದಾರೆ.



Click it and Unblock the Notifications
