Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಮೊದಲ ಮಂಗಳಗೌರಿ ವ್ರತ: ವೈವಾಹಿಕ ಬದುಕಿನ ಸಮಸ್ಯೆ ದೂರಾಗಲು ಈ ಪರಿಹಾರ ಒಳ್ಳೆಯದು
ಶ್ರಾವಣ ಮಾಸದಲ್ಲಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಮಂಗಳವಾರ ಗೌರಿ ಮಾತೆಯನ್ನು ಪೂಜಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಹಿಳೆಯರು ಉಪವಾಸವಿದ್ದು ಈ ಮಂಗಳ ಗವರಿ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ಮಹತ್ವವೇನು? ವೈವಾಹಿಕ ಬದುಕಿನ ಸಮಸ್ಯೆ ಪರಿಹಾರಕ್ಕೆ, ಕಂಕಣ ಭಾಗ್ಯಕ್ಕೆ ಈ ವ್ರತ ಹೇಗೆ ಪರಿಣಾಮಕಾರಿ, ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಬಗ್ಗೆ ಮಾಹಿತಿ ತಿಳಿಯೋಣ:

ಈ ಬಾರಿ ಮಂಗಳವಾರ ವ್ರತ 5 ವಾರ ಆಚರಿಸಬಹುದು
ಆಗಸ್ಟ್ 6
ಆಗಸ್ಟ್ 13
ಆಗಸ್ಟ್ 20
ಆಗಸ್ಟ್ 27
ಸೆಪ್ಟೆಂಬರ್ 3
ನವ ವಿವಾಹಿತರು ಈ ವ್ರತವನ್ನು ಆಚರಿಸುತ್ತಾರೆ
ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುತ್ತಾರೆ. ಅಲ್ಲದೆ ಇದನ್ನು 5 ವರ್ಷದವರೆಗೆ ಆಚರಿಸುತ್ತಾರೆ. ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು-ಸಂಪತ್ತು ವೃದ್ಧಿಗೆ ಈ ವ್ರತವನ್ನು ಮಾಡುತ್ತಾರೆ, ಅಲ್ಲದೆ ಈ ವ್ರತವನ್ನು ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು ಎಂದು ಹೇಳಲಾಗುವುದು.
ಓಂ ಉಮಾಮಹೇಶ್ವರಾಭ್ಯಂ ನಮಃ' '
''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ'' ''
ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ'
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಲಾಗುವುದು:
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ನಂತರ ಒಂದು ಹಲಗೆಯನ್ನು ಇಟ್ಟು ಕೆಂಪು ಬಟ್ಟೆ ಹಾಸಿ, ನಂತರ ದೇವಿಯ ಫೋಟೋವನ್ನು ಇಡಿ, ಬಲಿಕ ಹೂವು, ಆಭರಣಗಳಿಂದ ಅಲಂಕರಿಸಿ.
ಈ ದಿನ ಹಿಟ್ಟಿನಿಂದ ದೀಪ ಮಾಡಿ ಅದರಲ್ಲಿ ತುಪ್ಪ ಹಾಕ ದೀಪವನ್ನು ಹಚ್ಚಲಾಗುವುದು.
ಒಂದು ತಟ್ಟೆಯಲ್ಲಿ 16 ವೀಳ್ಯೆದೆಲೆ, 16 ಬಳೆಗಳು, 16 ಲವಂಗ, ಏಲಕ್ಕಿ, 16 ಬಗೆಯ ಹಣ್ಣುಗಳು, ಡ್ರೈ ಫ್ರೂಟ್ಸ್, ನವ ಧಾನ್ಯಗಳನ್ನು ಇಡಬೇಕು.
ದೇವಿಗೆ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸಿ
ನಂತರ ಗೌರಿಗೆ ಪೂಜೆ ಸಲ್ಲಿಸಿ, ಗೌರಿ ಮಾತೆಯ ಮಂತ್ರಗಳನ್ನು ಪಠಿಸಿ, ಹಾಡುಗಳನ್ನು ಹಾಡಿ ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.
ಈ ರೀತಿ ಪ್ರತಿ ಮಂಗಳವಾರ ಆಚರಿಸಲಾಗುವುದು.
ಯಾರಿಗೆ ಮಂಗಳವಾರ ಈ ವ್ರತವನ್ನು ಮಾಡಲಾಗುವುದಿಲ್ಲವೋ ಅವರು ಶುಕ್ರವಾರ ವ್ರತವನ್ನ ಕೈಗೊಳ್ಳಬಹುದು.
ಶ್ರಾವಣ ಮಾಸದ ಸುಂದರಕಾಂಡ ಪಠಿಸಿ
ಈ ದಿನ ಹನುಮಂತನನ್ನು ಆರಾಧಿಸಿ, ಸುಂದರ ಕಾಂಡವನ್ನು ಪಠಿಸುವುದರಿಂದ ಮಂಗಳ ದೋಷವಿದ್ದರೆ ನಿವಾರಣೆಯಾಗುವುದು, ಅವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವುದು, ವಿವಾಹಿತರ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.
ಈ ಮಂಗಳ ದೋಷವಿದ್ದರೆ ಏನಾಗುತ್ತದೆ?
ಮಂಗಳ ದೋಷವಿದ್ದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ , ಜಗಳ, ಹೊಂದಾಣಿಕೆಗೆ ಕಷ್ಟ ಈ ಎಲ್ಲಾ ಸಮಸ್ಯೆಗಳು ಉಂಟಾಗುವುದು, ಅಲ್ಲದೆ ತೇಜೋವಧೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು.
ಮಂಗಳ ಗವರಿ ವ್ರತದಂದು ದೇವಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಬೇಕು, ಇದರಿಂದ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.



Click it and Unblock the Notifications
