Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಮಂಗಳ ಗೌರಿ ವ್ರತ 2023: ಮಂಗಳ ದೋಷಕ್ಕೆ ಪರಿಹಾರ ಕಂಡುಕೊಳ್ಳೋದು ಹೇಗೆ?
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಷ್ಟೇ ಅಲ್ಲದೇ, ಶ್ರಾವಣ ಮಾಸದಲ್ಲಿ ಅನೇಕ ಉಪವಾಸಗಳು ಮತ್ತು ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ಶಿವಭಕ್ತರು ಶ್ರಾವಣ ಸೋಮವಾರದಂದು ಉಪವಾಸವನ್ನು ಆಚರಿಸುತ್ತಾರೆ. ಮತ್ತು ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ಮಾಡುತ್ತಾರೆ. ಇದ್ರ ಜೊತೆಗೆ ಈ ತಿಂಗಳ ಮಂಗಳವಾರಗಳನ್ನು ಸಹ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಶ್ರಾವಣ ಸೋಮವಾರದಂದು ಶಿವನನ್ನು ಹೇಗೆ ಪೂಜಿಸಲಾಗುತ್ತದೆಯೋ ಅದೇ ರೀತಿ ಈ ತಿಂಗಳ ಎಲ್ಲಾ ಮಂಗಳವಾರಗಳು ಮಂಗಳ ಗೌರಿಗೆ ಮೀಸಲಾಗಿವೆ. ಈ ದಿನ ವಿವಾಹಿತ ಮಹಿಳೆಯರು ಅಖಂಡ ಸೌಭಾಗ್ಯವನ್ನು ಪಡೆಯಲು ಉಪವಾಸವನ್ನು ಮಾಡುತ್ತಾರೆ. ಇಷ್ಟೇ ಅಲ್ಲದೇ, ಮದುವೆ ವಿಳಂಬವಾಗುತ್ತಿರುವವರು ಅಥವಾ ಯಾರ ಜಾತಕದಲ್ಲಿ ಮಂಗಳ ದೋಷ ಇರುತ್ತದೆಯೋ ಅವರು ಮಂಗಳ ಗೌರಿ ವ್ರತವನ್ನು ಕೈಗೊಂಡರೆ ಒಳ್ಳೆಯದಾಗುತ್ತಂತೆ. ಅಷ್ಟಕ್ಕೂ ಮಂಗಳ ಗೌರಿ ವ್ರತದಂದು ಮಂಗಳ ದೋಷ ನಿವಾರಣೆಗೆ ಏನು ಪರಿಹಾರ ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.
ಪೂಜಾ ಕ್ರಮ ಹೇಗಿರಬೇಕು?
ಮಂಗಳಗೌರಿ ವ್ರತದ ದಿನದಂದು ಬೆಳಿಗ್ಗೆ ಸ್ನಾನದ ನಂತರ ಮಾತೆ ಮಂಗಳ ಗೌರಿಯನ್ನು ಪೂಜಿಸಿ. ಮಂಗಳ ಗೌರಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ. ಅದರ ನಂತರ ಮಂಗಳ ಗೌರಿ ವ್ರತದ ಕಥೆಯನ್ನು ಕೇಳಿ. ಹೀಗೆ ಮಾಡುವುದರಿಂದ ಮಂಗಳಗೌರಿಯ ಆಶೀರ್ವಾದ ಲಭಿಸುತ್ತದೆ. ಮತ್ತು ನಿಮ್ಮ ಪತಿಯ ಆಯುಷ್ಯವು ದೀರ್ಘವಾಗಿರುತ್ತದೆ.
ವೈವಾಹಿಕ ತೊಡಕುಗಳಿದ್ದರೆ ಹೀಗೆ ಮಾಡಿ!
ಶ್ರಾವನ ಮಾಸದಲ್ಲಿ ಮಂಗಳಗೌರಿ ವ್ರತದ ದಿನದಂದು ಮಾತೆ ಮಂಗಳಗೌರಿಯನ್ನು ಕ್ರಮಬದ್ಧವಾಗಿ ಪೂಜಿಸಿ. ಅದರ ನಂತರ ಶ್ರೀ ಮಂಗಳ ಗೌರಿ ಮಂತ್ರವನ್ನು "ಓಂ ಗೌರಿ ಶಂಕರಾಯ ನಮಃ" ಎಂದು ಪಠಿಸಿ. ಇದರಿಂದ ಮಂಗಳಗೌರಿಯ ಆಶೀರ್ವಾದ ದೊರೆಯುತ್ತದೆ. ಹಾಗೂ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ವ್ಯಕ್ತಿಯ ಜಾತಕದಲ್ಲಿ ಮಂಗಳದೋಷವಿದ್ದರೆ ಮದುವೆ ವಿಳಂಬವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಂಗಳದೋಷವನ್ನು ತೊಡೆದುಹಾಕಲು ಶ್ರಾವಣ ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಇದರಿಂದ ನಿಮಗೆ ಆಂಜನೇಯನ ಆಶೀರ್ವಾದ ದೊರೆಯುತ್ತದೆ. ಹಾಗೂ ಮಂಗಳ ದೋಷವು ನಿವಾರಣೆಯಾಗುತ್ತದೆ. ವಿವಾಹದ ಮಾತುಕತೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ.
ನಿಮ್ಮ ಜಾತಕದಲ್ಲಿ ತೊಂದರೆಯಿದ್ದು, ನಿಮ್ಮೆಲ್ಲಾ ಶುಭ ಕಾರ್ಯಗಳಿಗೆ ಅಡ್ಡಿ-ಆತಂಕ ಉಂಟಾಗುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರದಂದು ಮಂಗಳಗೌರಿ ಮತ್ತು ಆಂಜನೇಯನನ್ನು ಪೂಜಿಸಿ. ಇವರ ಜೊತೆಗೆ ಮಾತೆ ಮಂಗಳ ಗೌರಿ ಮತ್ತು ಆಂಜನೇಯನಿಗೆ ಸಿಂಧೂರವನ್ನು ಅರ್ಪಿಸಿ. ನಂತರ ಆ ಸಿಂಧೂರವನ್ನು ಅವರ ಪಾದಗಳಿಗೆ ಹಚ್ರಿ. ನಂತರ ನೀವು ಸಿಂಧೂರವನ್ನು ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮಂಗಳದೋಷಕ್ಕೆ ಪರಿಹಾರ ಸಿಗುತ್ತದೆ.
ಸೂಚನೆ : ಈ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿ ಜವಾಬ್ದಾರಿಯಾಗಿ ಇರೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರ ಸಲಹೆ ಪಡೆಯಿರಿ



Click it and Unblock the Notifications
