Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎಚ್ಚರ..! ಯುವಕನ ಡಿಜಿಟಲ್ ಅರೆಸ್ಟ್ ಮಾಡಿ 6 ದಿನದಲ್ಲಿ ₹14 ಲಕ್ಷ ವಂಚನೆ..!
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದ್ರಲ್ಲೂ ಹೊಸ ಹೊಸ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇತ್ತೀಚಿಗೆ ಹೊಸದೊಂದು ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಿಮ್ಮ ಅಕೌಂಟ್‌ನಲ್ಲಿ ಹಣವಿದ್ದರೆ ಇಂತಹ ಕರೆಯೊಂದು ನಿಮಗೂ ಬರಬಹುದು.
ಹೌದು ಬೆಂಗಳೂರಿನಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಒಂದೇ ಒಂದು ಫೋನ್ ಕಾಲ್‌ನಿಂದಾಗಿ ಯುವಕನೊಬ್ಬ ಬರೋಬ್ಬರಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಇದೊಂದು ಹೊಸ ರೀತಿಯ ಜಾಲವಾಗಿದ್ದು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ಕೇಳುತ್ತಾರೆ. ಹಾಗಾದ್ರೆ ಆತನಿಗೆ ಕರೆ ಮಾಡಿದ್ದು ಯಾರು? ಡಿಜಿಟಲ್ ಅರೆಸ್ಟ್ ಅಂದ್ರೆ ಏನು?

ಸೈಬರ್ ವಂಚಕರ ಹೊಸ ಮೋಸದ ವಿಧಾನವಾಗಿ ಈ ಡಿಜಿಟಲ್ ಅರೆಸ್ಟ್ ಎಂಬುದನ್ನು ಬಳಸುತ್ತಿದ್ದಾರೆ. ಬೆಂಗಳೂರಿನ 29 ವರ್ಷದ ಯುವಕ ಈ ಜಾಲಕ್ಕೆ ಸಿಲುಕಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಅದ್ರಲ್ಲೂ ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರ ಆತನಿಗೆ 14 ಲಕ್ಷ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಿರುವುದು ವರದಿಯಾಗಿದೆ.
ಹಾಗಾದ್ರೆ ಆತ 14 ಲಕ್ಷ ರೂ.ಕಳೆದುಕೊಂಡಿದ್ದು ಹೇಗೆ?
29 ವರ್ಷದ ಯುವಕನಿಗೆ 6 ದಿನಗಳ ಹಿಂದೆ ಒಂದು ಕರೆ ಬಂದಿದೆ. ಟೆಲಿಕಾಂ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿ ಎಂದು ಆತ ಹೇಳಿಕೊಂಡಿದ್ದಾನೆ. ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ರಾಜೇಶ್ ಮಿತ್ತಲ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಹಾಗೆ ಆತನ ಹೆಸರಿನಲ್ಲಿ ನೋಂದಾಯಿಸಲಾದ ನಂಬರ್‌ನಿಂದ ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆ. ಇದರಿಂದ ಹಲವರಿಗೆ ಮೋಸ ಮಾಡಲಾಗಿದೆ ಎಂದು ಹೇಳಿದ್ದಾನೆ. ನಿಮ್ಮ ಹೆಸರಿನಲ್ಲಿ ಮೊಬೈಲ್ ನಂಬರ್‌ನಿಂದ ಅಕ್ರಮವಾಗಿ ಬಳಸಿಕೊಂಡು ಹಣ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ನಿಮ್ಮ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಆತ ಕರೆಯಲ್ಲಿ ಹೇಳಿದ್ದಾನೆ.
ಕರೆಯಲ್ಲಿ ಬಂದ ಈ ಮಾತು ಕೇಳಿ ಯುವಕ ದಂಗಾಗಿದ್ದಾನೆ. ಆದ್ರೆ ಈ ನಂಬರ್ ನನ್ನದಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಆದ್ರೆ ಕರೆ ಮಾಡಿದಾಗ ಹಾಗಾದ್ರೆ ಈ ಕೇಸ್ ಅನ್ನು ನಾವು ಸಿಬಿಐಗೆ ವರ್ಗಾಯಿಸಬೇಕಾಗುತ್ತದೆ. ನೀವು ಅವರಿಗೆ ಈ ಪ್ರಕರಣದಲ್ಲಿ ನಿಮ್ಮ ಹಸ್ತಕ್ಷೇಪವಿಲ್ಲ ಎಂಬುದನ್ನು ದೃಢಪಡಿಸಿ ಎಂದಿದ್ದಾನೆ.
ಇದಾದ ಬಳಿಕ ಹೆಸರು ಹೇಳದ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆ ಮಾಡಿದ್ದಾನೆ. ಹಾಗೆ ಅದೇ ದಿನ ವಿಚಾರಣೆಗಾಗಿ ಮುಂಬೈನ ಸಿಬಿಐ ಕಚೇರಿಗೆ ಬರುವಂತೆ ತಿಳಿಸಿದ್ದಾನೆ. ಆದರೆ ಬೆಂಗಳೂರಿನಿಂದ ಮುಂಬೈಗೆ ಅದೇ ದಿನ ಪ್ರಯಾಣ ಮಾಡುವುದು ಅಸಾಧ್ಯ ಎಂದು ತಿಳಿದರೂ ಕೂಡ ಆತ ಒತ್ತಡ ಹಾಕುತ್ತಲೇ ಇದ್ದ.
ಆದ್ರೆ ಕೊನೆಯಲ್ಲಿ ಆನ್‌ಲೈನ್ ವಿಡಿಯೋ ಕಾಲಿಂಗ್ ಮೂಲಕ ವಿಚಾರಣೆ ನಡೆಸಲಾಗುವುದು ಎಂದು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಾತ ಒಪ್ಪಿಕೊಂಡಿದ್ದ. ಆದ್ರೆ ವಿಚಾರಣೆಯನ್ನು ನಡೆಸುವಾಗ ಸಂತ್ರಸ್ತನ ಬ್ಯಾಂಕ್ ಖಾತೆಯಲ್ಲಿ 6 ಮಿಲಿಯನ್ ವಹಿವಾಟು ನಡೆಸಲು ಬಳಸಲಾಗಿದೆ ಈ ಖಾತೆ ಮೇಲೆ ನಾವು ನಿರಂತರ ಕಣ್ಣಿಡುತ್ತೇವೆ ಎಂದಿದ್ದಾನೆ. ಹಾಗೆ ತನಿಖೆಗೆ ನೆರವಾಗಲು ಸಿಗ್ನಲ್ ಆಪ್ ಡೌನ್‌ಲೋಡ್ ಮಾಡುವಂತೆಯೂ ತಿಳಿಸಲಾಗಿದೆ.
ಹಾಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ಅಕ್ರಮ ವರ್ಗಾವಣೆ ನಡೆದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾದರೆ ನೀವು ನಿಮ್ಮ ಖಾತೆಯಲ್ಲಿರುವ ಶೇ.80ರಷ್ಟು ಹಣ ಆರ್‌ಬಿಐಗೆ ವರ್ಗಾಯಿಸಬೇಕಾಗುತ್ತದೆ. ಈ ಹಣ ಸುರಕ್ಷಿತವಾಗಿರಲಿದ್ದು, ವಿಚಾರಣೆ ಮುಗಿದು 24 ಗಂಟೆಯಲ್ಲಿ ನಿಮ್ಮ ಖಾತೆಗೆ ವಾಪಾಸಾಗಲಿದೆ ಎಂದಿದ್ದಾನೆ. ಈ ಹಣ ನೀಡದಿದ್ದರೆ ನೀವು ಖುದ್ದು ದಾಖಲಾತಿಗಳ ಹಿಡಿದು ಕಚೇರಿಗೆ ಬರಬೇಕಾಗುತ್ತದೆ ಎಂದಿದ್ದಾರೆ.
ಹೀಗಾಗಿ ಸಂತ್ರಸ್ತ ಹಂತ ಹಂತವಾಗಿ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬರೋಬ್ಬರಿ 14.57 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ. ಈ ಹಣವನ್ನು ಸೆಪ್ಟೆಂಬರ್ 25ರಿಂದ ಅಕ್ಟೋಬರ್ 2ರ ನಡುವೆ ವರ್ಗಾಯಿಸಲಾಗಿದೆ. ಆದರೆ ಅಕ್ಟೋಬರ್ 2ರ ನಂತರ ಇದೊಂದು ಮೋಸದ ಜಾಲ ಎಂಬುದು ತಿಳಿದು ಅಕ್ಟೋಬರ್ 3ರಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
