Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ವಿದೇಶದಲ್ಲಿ 30 ಲಕ್ಷ ಸಂಬಳದ ಕೆಲಸ ಬಿಟ್ಟು ತನ್ನೂರಲ್ಲಿ ಸ್ವಂತ ಉದ್ಯಮ ಕಟ್ಟಿದ ಸಾಹಸಿಗ..!
ನೀವು ಲಕ್ಷ ಲಕ್ಷ ಸಂಭಾವನೆಯ ವೇತನ ಪಡೆದು ಒಳ್ಳೆಯ ಕಂಪನಿಯಲ್ಲಿ ಕೆಲಸ ಹಿಡಿದರೆ ಮುಂದಿನ ಜೀವನ ಸುಂದರವಾಗುತ್ತೆ ಎಂದುಕೊಂಡಿದ್ದೇವೆ. ಬಹುಪಾಲು ಮಂದಿ ಇದನ್ನೇ ಎದುರು ನೋಡುತ್ತಾರೆ. ಒಳ್ಳೆಯ ಕೆಲಸ ಕೈತುಂಬ ಸಂಬಳ ಬಂದರೆ ಸಾಕು ಎಂದು ದಿನ ದೂಡುವವರೆ ಹೆಚ್ಚು. ಅದರಲ್ಲು ಭಾರತದ ಕೋಟಿ ಕೋಟಿ ಮಂದಿ ವಿದೇಶದಲ್ಲಿ ನೆಲಸಬೇಕು ಎಂಬ ಆಸೆ ಹಿಂದಿನಿಂದಲೂ ಇದ್ದು, ಇದಕ್ಕಾಗಿ ಶತಾಯಗತಾಯ ಅವರು ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ವಿದೇಶದಲ್ಲಿ ಕೆಲಸ ಸಿಕ್ಕಿ ಕೈತುಂಬ ಸಂಬಳವಿದ್ದರೆ ಭವಿಷ್ಯದಲ್ಲಿ ಆರಾಮಾಗಿ ಇರಬಹುದು ಎಂಬುದು ಯುವ ಪೀಳಿಗೆಯ ಮನೋದೃಷ್ಟಿಯಾಗಿದೆ. ಇದರಲ್ಲಿ ಕೆಲವರು ಯಶಸ್ವಿಯೂ ಆಗಿ ವಿದೇಶದಲ್ಲಿ ನೆಲೆಸಿದವರು ಇದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿದೇಶದಲ್ಲಿದ್ದ ಕೆಲಸ ತೊರೆದು ಭಾರತಕ್ಕೆ ಬಂದು ಇಲ್ಲಿ ಉದ್ಯಮ ಕಟ್ಟಿರುವ ಸಾಹಸಮಯ ಕಥೆ ಇದಾಗಿದೆ.

ಹೌದು ವಿದೇಶದಲ್ಲಿ ಲಕ್ಷ ಲಕ್ಷ ವೇತನದ ಕೆಲಸವನ್ನು ಬಿಟ್ಟು ಭಾರತಕ್ಕೆ ಬಂದು ಪರಿಸರ ಸ್ನೇಹಿ ಉದ್ಯಮ ಕಟ್ಟಿ ಬೆಳೆಸಿದ್ದಾನೆ. ಮಹಾರಾಷ್ಟ್ರದ ಪುಣೆ ಮೂಲದ ಭೌಸಾಹೇಬ್ ನವಲೆ ಎಂಬಾತ ವಿದೇಶದಿಂದ ಬಂದು ಭಾರತದಲ್ಲಿಯೇ ನರ್ಸರಿ ಉದ್ಯಮ ಆರಂಭಿಸಿ ಯಶಸ್ಸುಗಳಿಸಿದ ವ್ಯಕ್ತಿಯಾಗಿದ್ದಾರೆ.
ವಿದೇಶದಲ್ಲಿದ್ದ ನವಲೆಗೆ ಬರೋಬ್ಬರಿ 30 ಲಕ್ಷ ವಾರ್ಷಿಕ ಆದಾಯದ ಕೆಲಸವಿತ್ತಂತೆ. ಅಂದರೆ ತಿಂಗಳಿಗೆ ಬರೋಬ್ಬರು 2.5 ಲಕ್ಷ ರೂಪಾಯಿಯ ಕೆಲಸ ಅದಾಗಿತ್ತು. ಆದರೆ ಇಷ್ಟಕ್ಕೆ ತೃಪ್ತಿಯಾಗದ ಅವರು, ಭಾರತಕ್ಕೆ ವಾಪಸಾದರು. ಇಲ್ಲಿಯೆ ಸ್ವಂತ ಉದ್ಯೋಗಕ್ಕೆ ಮುಂದಾಗಿ ಈಗ ಕೋಟಿ ಕೋಟಿ ಮೌಲ್ಯದ ಬೃಹತ್ ಉದ್ಯಮವಾಗಿ ಮಾಡಿದ್ದಾರೆ.
50ನೇ ವಯಸ್ಸಿನಲ್ಲಿ ಉದ್ಯಮಕ್ಕೆ ಕಾಲಿಟ್ಟರು
ಸಾಫ್ಟ್‌ವೇರ್ ವೃತ್ತಿಯಲ್ಲಿದ್ದ ಅವರು, ವಿದೇಶದಲ್ಲಿ ಉತ್ತಮ ವೇತನ ಪಡೆಯುತ್ತಿದ್ದರು. ಆದರೆ ಉದ್ಯಮ ಆರಂಭಿಸುವ ಕನಸನ್ನು ಹಾಗೆಯೇ ಇಟ್ಟುಕೊಂಡಿದ್ದರು. ಬಳಿಕ ಭಾರತಕ್ಕೆ ತೆರಳಿ ಉದ್ಯಮ ಕಟ್ಟುವುದಾಗಿ ನಿರ್ಧರಿಸಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದರು. ಹೀಗೆ ಭಾರತಕ್ಕೆ ಬರುವಾಗ ಅವರಿಗೆ 50 ವರ್ಷವಾಗಿತ್ತು.
ಭೌಸಾಹೇಬ್ ನವಲೆ ಯಾರು?
ಮಹಾರಾಷ್ಟ್ರದ ಪುಣೆ ಮೂಲದ ಭೌಸಾಹೇಬ್ ನವಲೆ ತಮ್ಮದೇ ಆದ ನರ್ಸರಿ ಕಂಪನಿಯನ್ನು ಸ್ಥಾಪಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರು ಎಲ್ಲೆಡೆ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭೌಸಾಹೇಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದರು.
ಭೌಸಾಹೇಬ್ ನವಲೆ ಅವರು ಹೊಸ ಕಂಪನಿಯನ್ನು ಪ್ರಾರಂಭಿಸಿದರು. ಅವರು ಭಾರತಕ್ಕೆ ಮರಳಿದ ನಂತರ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಲ್ ತಾಲೂಕಿನಲ್ಲಿ ಗ್ರೀನ್ ಮತ್ತು ಬ್ಲೂಮ್ಸ್ ನರ್ಸರಿ ಆರಂಭಿಸಿದರು. ಬಾವುಸಾಹೇಬ ನವಲೆ ಅವರು ಬಿ.ಎಸ್ಸಿ ಪದವೀಧರರಾಗಿದ್ದರು. ಅನೇಕರು ಕೆಲಸ ಹುಡುಕಲು ತೊಂದರೆ ಅನುಭವಿಸುತ್ತಿರುವ ಸಮಯದಲ್ಲಿ ಅವರು ತಮ್ಮದೆ ನರ್ಸರಿ ಉದ್ಯಮ ಆರಂಭಿಸಿದರು.
ಮೂಲತಃ 27 ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭೌಸಾಹೇಬ್ ನವಲೆ ಅವರ ವ್ಯಾಪಾರವು ಈಗ ಒಂದು ಎಕರೆಯನ್ನು ಆಕ್ರಮಿಸಿಕೊಂಡಿದೆ ಮತ್ತು ರಾಷ್ಟ್ರದಾದ್ಯಂತ ಸಸ್ಯಗಳನ್ನು ಸಾಗಿಸುತ್ತದೆ. ಬಾವುಸಾಹೇಬರು ಸ್ಥಾಪಿಸಿದ ಈ ನರ್ಸರಿಯಲ್ಲಿ ನೂರು ಬಗೆಯ ಗಿಡಗಳನ್ನು ಬೆಳೆಸಲಾಗಿದೆ. ಅವರು ತಮ್ಮ ಸಸ್ಯಗಳನ್ನು ರಾಷ್ಟ್ರದ 300 ದೊಡ್ಡ ಮತ್ತು ಸಣ್ಣ ನರ್ಸರಿಗಳಿಗೆ ಮಾರಾಟ ಮಾಡುತ್ತಾರೆ.
ಹೆಚ್ಚುವರಿಯಾಗಿ, ಭೌಸಾಹೇಬ್ ಇಥಿಯೋಪಿಯಾದಲ್ಲಿ ಪಾಲಿಹೌಸ್‌ಗಳಲ್ಲಿ ಗುಲಾಬಿಗಳನ್ನು ಬೆಳೆಸುವ ಹತ್ತು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು 1995 ರಿಂದ 2020ರ ವರೆಗೆ ತಿಂಗಳಿಗೆ 2.5 ಲಕ್ಷ ರೂಪಾಯಿಗಳ ಸಂಬಳವನ್ನು ಪಡೆಯುತ್ತಿದ್ದರು. ಸುಮಾರು 25 ವರ್ಷಗಳ ಕಾಲ ವಿದೇಶದಲ್ಲೇ ನೆಲೆಸಿದ್ದರೂ. ಹೀಗಿದ್ದರೂ ಭಾರತಕ್ಕೆ ಬಂದು ಉದ್ಯಮ ಕಟ್ಟಬೇಕು ಎಂಬ ಒಲವು ಕಡಿಮೆಯಾಗಿರಲಿಲ್ಲ.



Click it and Unblock the Notifications