Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಶವವೆಂದು ಹೊರತೆಗೆಯಲು ಬಂದರೆ ನೀರಿನಿಂದ ಎದ್ದು ಬಂದ ವ್ಯಕ್ತಿ..! ಪೊಲೀಸರು ಶಾಕ್!
ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಎಂತೆಂತಹ ವಿಚಿತ್ರ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನಾವು ನೋಡಿ ಶಾಕ್ ಆಗುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಹ ನೋಡುಗರಲ್ಲಿ ಅಚ್ಚರಿ ಜೊತೆ ಒಂದಿಷ್ಟು ನಗು ತರಿಸಿದೆ. ಆನ್‌ಲೈನ್‌ನಲ್ಲಿ ಈ ವಿಡಿಯೋ ನೋಡಿದ ಮಂದಿ ಶಾಕ್ ಜೊತೆಗೆ ಇಂತಹ ವಿಡಿಯೋ ಈವರೆಗೂ ನೋಡಿಲ್ಲ ಎನ್ನುತ್ತಿದ್ದಾರೆ.
ವಿಡಿಯೋವೊಂದರಲ್ಲಿ ಪೊಲೀಸರು ಹೊಳೆಯ ದಡದಲ್ಲಿ ಬಿದ್ದಿರುವ ವ್ಯಕ್ತಿಯನ್ನು ಶವವೆಂದು ಹೊರ ತೆಗೆಯಲು ಬಂದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಹೊಳೆಯಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಬಂದಿರುವುದು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತೆಲಂಗಾಣದ ಕೊಳದಲ್ಲಿ ತೇಲುತ್ತಿರುವ ವ್ಯಕ್ತಿಯನ್ನು ಸ್ಥಳೀಯರು ಪತ್ತೆ ಹಚ್ಚಿದ್ದರು.

ಈ ಹೊಳೆಯಲ್ಲಿ ತೇಲುತ್ತಿರುವುದ ಕಂಡು ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು 108 ಆಂಬುಲೆನ್ಸ್‌ಗೆ ಕರೆ ಮಾಡಿ ಸ್ಥಳಕ್ಕೆ ಬರಲು ಸೂಚಿಸಿದ್ದಾರೆ. ಹನುಮಕೊಂಡದ ರೆಡ್ಡಿಪುರಂ ಕೋವೆಲಕುಂಟ್ಲಾ ಬಳಿಯ ಹೊಳೆಯಲ್ಲಿ ಈ ಘಟನೆ ನಡೆದಿದೆ.
ಕಲ್ಲು ಕ್ವಾರಿ ಕೆಲಸಗಾರನಾಗಿದ್ದ ಈ ವ್ಯಕ್ತಿ ಸುಮಾರು 5 ಗಂಟೆಗಳ ಕಾಲ ನೀರಿನಲ್ಲಿ ಮಲಗಿರುವುದು ಕಂಡುಬಂದಿದೆ. ಇದನ್ನು ನೋಡಿಯೇ ಜನರು ಪೊಲೀಸರಿಗೆ ಶವ ತೇಲುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬಂದು ಶವ ಮೇಲೆ ಎತ್ತುವಾಗ ಆತ ಎಚ್ಚರಗೊಂಡಿದ್ದಾನೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಆತ ಬಿಸಿಲಿನಲ್ಲಿ ಮದ್ಯಪಾನ ಮಾಡಿ ಹೊಳೆಯ ದಡದಲ್ಲಿ ಗಾಢ ನಿದ್ರೆಗೆ ಜಾರಿದ್ದಾನೆ, ಆದರೆ ಸತತ 5 ಗಂಟೆಗಳ ಕಾಲ ನೋಡಿದ್ದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳದಲ್ಲಿ ಜನಸಮೂಹ ಜಮಾಯಿಸುತ್ತಿದ್ದಂತೆ ಪೊಲೀಸರು "ದೇಹ"ವನ್ನು ಕೈಯಿಂದ ಹಿಡಿದುಕೊಂಡು ಸೂಕ್ಷ್ಮವಾಗಿ ದಡಕ್ಕೆ ಎಳೆಯಲು ಪ್ರಾರಂಭಿಸಿದರು. ಥಟ್ಟನೆ ಎಚ್ಚರಗೊಂಡ ಆತ ಪೊಲೀಸ್ ಕಡೆ ತಿರುಗಿ ನಾನು ಬದುಕಿರುವುದಾಗಿ ಹೇಳುತ್ತಿದ್ದಾನೆ.
ಶವವೆಂದು ಮೇಲೆ ಎತ್ತಲು ಬಂದ ಪೊಲೀಸರು ಇದ್ದಕ್ಕಿದ್ದಂತೆ ಎಚ್ಚರಗೊಂಡ ವ್ಯಕ್ತಿ ಕಂಡು ಶಾಕ್ ಆಗಿದ್ದಾರೆ. ಅಚ್ಚರಿ ಎಂದರೆ ಆತ ಕಲ್ಲು ಕ್ವಾರಿಯ ನೌಕರನಾಗಿದ್ದು, ಮದ್ಯಪಾನ ಮಾಡಿ ಬೇಸಿಗೆಯ ಬಿಸಿ ತಾಳಲಾಗದೆ ಹೊಳೆಯ ಬದಿಯಲ್ಲಿ ಮಲಗಿರುವುದಾಗಿ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ನಗುವಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಈ ವಿಚಿತ್ರ ಘಟನೆಯಿಂದ ನಗೆ ಕಡಲಲ್ಲಿ ತೇಲಿದ್ದಾರೆ. ಅಲ್ಲಿದ್ದವರು ಸಹ ಅಚ್ಚರಿಯಲ್ಲಿ ನಗುವಿನಲ್ಲಿ ತೇಲಿದ್ದಾರೆ.
ಜೊತೆಗೆ ವಿಡಿಯೋ ನೋಡಿದ ನೆಟ್ಟಿಗರು ಸಹ ಇಂತಹ ವಿಡಿಯೋ ಎಂದಿಗೂ ನೋಡಿಲ್ಲ ಎನ್ನುತ್ತಿದ್ದಾರೆ. ನಾವು ಇದು ನಿಜವಾಗಲು ಶವದ ವಿಡಿಯೋ ಎಂದುಕೊಂಡಿದ್ದವು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕಂಡು ಅಚ್ಚರಿ ಹೊರಹಾಕಿದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಆತ ನೆಲ್ಲೂರು ಜಿಲ್ಲೆಯ ಕವಲಿ ಪ್ರದೇಶದ ಸ್ಥಳೀಯರೆಂದು ಗುರುತಿಸಲಾಗಿದೆ. ಆತ ಆಯಾಸವನ್ನು ನಿವಾರಿಸಲು ನೀರಿನಲ್ಲಿ ನಿದ್ದೆ ಮಾಡಲು ಮುಂದಾಗಿದ್ದನಂತೆ. ಆತನ ಪ್ರಕಾರ ನಿತ್ಯ 12 ಗಂಟೆ ಕೆಲಸ ಮಾಡುತ್ತಾನಂತೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಮುಂದಾಗಿರುವುದಾಗಿ ಹೇಳಿದ್ದಾನೆ. ಜೊತೆಗೆ ಮನೆಗೆ ಹೋಗಲು ಹಣ ನೀಡಿ ಎಂದು ಪೊಲೀಸರನ್ನೇ ಕೇಳಿದ ಆತ 50 ರೂಪಾಯಿ ಪಡೆದು ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಬಿದ್ದು ಬಿದ್ದು ನಗುತ್ತಿದ್ದಾರೆ. ಆತನ ನಿದ್ರೆ ಹಾಳು ಮಾಡಿದ್ದೀರಿ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.



Click it and Unblock the Notifications
