Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಾಯಿ ಕಚ್ಚಿದ ಬಳಿಕ ಹಸಿ ಮಾಂಸ ತಿನ್ನುವ ವ್ಯಕ್ತಿ.! ಕಂಡ ಕಂಡವರ ಮೇಲೂ ದಾಳಿ!
ದೇಶದಲ್ಲಿ ಬೀದಿ ನಾಯಿ ಕಡಿತದಿಂದಾಗಿ ದಾಳಿಯಿಂದಾಗಿ ವರ್ಷವೊಂದಕ್ಕೆ ಸಾವಿರಾರು ಮಂದಿ ಮರಣ ಹೊಂದುತ್ತಾರೆ. ನಿತ್ಯವು ಬೀದಿ ನಾಯಿಗಳು ಒಬ್ಬರಿಗಾದರು ದಾಳಿ ಮಾಡಿ ಗಾಯಗೊಳಿಸುವ ಪ್ರಕರಣ ನಡೆಯುತ್ತಲೇ ಇರುತ್ತದೆ. ಅದರಲ್ಲೂ ನಗರ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳಿಗಂತೂ ನಾಯಿಗಳು ಶತ್ರುಗಳಂತೆ ಕಾಡುತ್ತವೆ.
ಇನ್ನು ನಾಯಿ ಕಚ್ಚಿದರೆ ರೇಬಿಸ್ ರೋಗ ಕಾಡುತ್ತದೆ. ಇದು ಸಾವು ಸಹ ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ರೆ ಇಲ್ಲೊಂದು ಪ್ರಕರಣ ಈಗ ಎಲ್ಲರು ಅಚ್ಚರಿಗೆ ಒಳಗಾಗುವಂತೆ ಮಾಡಿದೆ. ಮಧ್ಯ ಪ್ರದೇಶದ ವ್ಯಕ್ತಿಗೆ ನಾಯಿ ಕಚ್ಚಿದ ಬಳಿಕ ಈಗ ಆತ ನಾಯಿಯಂತೆ ವರ್ತಿಸಲು ಆರಂಭಿಸಿದ್ದಾನೆ.

ಮಧ್ಯಪ್ರದೇಶದ ಸಾಗರ್ ಪ್ರದೇಶದ ನಿವಾಸಿಯಾಗಿರುವ ಸೋನು ಎಂಬ ವ್ಯಕ್ತಿಗೆ ನಾಯಿ ಕಚ್ಚಿತ್ತು. ಆದರೆ ಈಗ ಆತ ನಾಯಿಯಂತೆ ವರ್ತಿಸಲು ಆರಂಭಿಸಿದ್ದಾನೆ ಎಂದು ತಿಳಿದುಬಂದಿದೆ. ಸೋನು ತರಕಾರಿ ತರಲೆಂದು ಮಾರುಕಟ್ಟೆಗೆ ತೆರಳಿದಾಗ ನಾಯಿಯೊಂದು ಅಟ್ಟಿಸಿಕೊಂಡು ಬಂದು ಕಚ್ಚಿತ್ತು. ಇದಾಗಿ ವಾರದ ಬಳಿಕ ಆತ ನಾಯಿಯಂತೆ ವರ್ತಿಸುತ್ತಿದ್ದ ಎಂದು ವರದಿಯಾಗಿದೆ.
ಸೋನುವಿನ ಈ ವರ್ತನೆ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೂ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಆತ ಜನರ ಮೇಲೆ ದಾಳಿ ಮಾಡಿ ಕಚ್ಚಲು ಮುಂದಾಗುವುದು, ಹಸಿ ಮಾಂಸ ತಿನ್ನುವುದು ಸೇರಿ ಹಲವು ವಿಚಿತ್ರ ವರ್ತನೆ ತೋರಿಸುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ನಾಯಿ ಕಚ್ಚಿದ ಬಳಿಕ ಮಾರುಕಟ್ಟೆಯ ಮಂದಿ ಸೇರಿ ರೇಬಿಸ್ ಇಂಜೆಕ್ಷನ್ ಹಾಕಿಸಿದ್ದರು. ಎಲ್ಲಾ ರೀತಿಯ ಚಿಕಿತ್ಸಯನ್ನೂ ಸಹ ಕೊಡಿಸಿದ್ದರು.
ಮಾರುಕಟ್ಟೆಯ ಮಂದಿ ಹಾಗೂ ನೆರ ಹೊರೆಯವರು ಈಗ ಸೋನುವನ್ನು ಕಂಡರೆ ಭಯಪಡುತ್ತಾರೆ. ನಾಯಿ ಕಚ್ಚಿದ ಬಳಿಕ ಆತ ಬಹಳ ಆಕ್ರಮಣಕಾರಿಯಾಗಿ ಕಾಣಿಸುತ್ತಿದ್ದಾನಂತೆ. ಕೆಲವು ಸಮಯದಲ್ಲಿ ಸೌಮ್ಯವಾಗಿದ್ದರೆ ಮತ್ತೆ ಕೆಲವು ಸಮಯದಲ್ಲಿ ಆಕ್ರಮಣ ಮಾಡುವಂತೆ ಆತನ ವರ್ತನೆ ಬದಲಾಗಿರುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.
ಸೋನುವಿಗೆ ಈಗ ಹೆಚ್ಚುವರಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಆದರೆ ರೇಬಿಸ್ ಚುಚ್ಚು ಮದ್ದು ಪಡೆದಿದ್ದರೂ ಈ ರೀತಿಯ ವರ್ತನೆ ಕಂಡುಬಂದಿರುವುದು ಎಲ್ಲರಲ್ಲೂ ಆತಂಕ ಹುಟ್ಟಿಸಿದೆ. ಈ ರೇಬಿಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಜೊತೆಗೆ ಈ ರೀತಿಯ ವರ್ತನೆಗೆ ನಾಯಿ ಕಚ್ಚುವಿಕೆಯೂ ಕಾರಣವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಾಯಿ ಕಚ್ಚಿದ ಬಳಿಕ ನಾಯಿಯಂತೆ ವರ್ತಿಸಲು ಸಾಧ್ಯವಿಲ್ಲ. ಇದು ಆತನ ಮಾನಸಿಕ ಸ್ಥಿತಿಯ ಕಾರಣವಾಗಿದೆ. ಆತ ಮದ್ಯಪಾನಿಯಾಗಿದ್ದು, ಈ ವರ್ತನೆ ಆತನಿಗೆ ಮದ್ಯ ವ್ಯಸನದ ಕಾರಣದಿಂದ ಬಂದಿದೆಯೇ ಹೊರತು ನಾಯಿ ಕಡಿತದಿಂದ ಅಲ್ಲ ಎಂದು ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನ ಡಾ ಸುಮಿತ್ ರಾವತ್ ತಿಳಿಸಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸುವಂತಿಲ್ಲ. ಆತನಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದು ಸಹ ಅವರು ಹೇಳಿದ್ದಾರೆ.
ನಮಗೆ ತಿಳಿಯದ ವಿಚಾರ ಏನೆಂದರೆ ಯಾವ ನಾಯಿಗೆ ರೇಬಿಸ್ ಇರುತ್ತೋ ಆ ನಾಯಿ ಕಚ್ಚಿದಾಗ ಮಾತ್ರ ನಮ್ಮ ಪ್ರಾಣಕ್ಕೆ ಹಾನಿಯಾಗಬಹುದು. ಆದರೆ ಉಳಿದಂತೆ ಯಾವುದೇ ನಾಯಿ ಕಚ್ಚಿದಾಗ ಸರಳ ಚಿಕಿತ್ಸೆಯಲ್ಲಿ ಗುಣಮುಖರಾಗುತ್ತೇವೆ. ಈ ರೇಬಿಸ್‌ನಿಂದ ಸಾವು ಸಹ ಸಂಭವಿಸುತ್ತದೆ. ನಾಯಿ ಕಚ್ಚಿದ ಬಳಿಕ ಹರಡುವ ವೈರಸ್ ಹಾಗೂ ಅಲರ್ಜಿಯಿಂದಾಗಿ ಹಲವು ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ ಸುಮಾರು 25 ಮಿಲಿಯನ್‌ಗೂ ಅಧಿಕ ನಾಯಿಗಳಿವೆ. ಪ್ರತಿ 2 ಸೆಕೆಂಡ್‌ಗೆ ಒಬ್ಬ ಮನುಷ್ಯ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾನೆ. ಪ್ರತಿ 30 ನಿಮಿಷಕ್ಕೆ ಒಬ್ಬ ನಾಯಿ ಕಡಿತದಿಂದ ರೇಬಿಸ್ ಬಂದು ಸಾವನ್ನಪ್ಪುತ್ತಿದ್ದಾನೆ 2021ರ ಸರ್ವೆಯೊಂದು ತಿಳಿಸಿತ್ತು.



Click it and Unblock the Notifications