Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೀಪಾವಳಿ ಶುಭ ಕೋರಲು ಗರಿ ಗರಿ ನೋಟುಗಳಿಗೆ ಬೆಂಕಿ ಹಚ್ಚಿದ: ವಿಡಿಯೋ ವೈರಲ್
ಭಾರತೀಯ ಸಂಸ್ಕೃತಿಯಲ್ಲಿ ಹಣಕ್ಕೆ ಒಂದು ಪ್ರಾಮುಖ್ಯತೆ ಇದೆ. ಹಣವನ್ನ ಲಕ್ಷ್ಮಿ ದೇವಿಗೆ ಹೋಲಿಸಲಾಗಿದೆ. ಹೀಗಾಗಿ ನಾವು ಹಣವನ್ನು ಎಲ್ಲೆಂದರಲ್ಲಿ ಇಡುವುದು, ಹೇಗೆಂದರೆ ಹಾಗೆ ಬಳಸಲು ಇಷ್ಟಪಡುವುದಿಲ್ಲ. ಹಣಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಲಕ್ಷ್ಮಿ ಪೂಜೆಯಲ್ಲಿ ಧನ ಲಾಭದ ನಿರೀಕ್ಷೆಯಲ್ಲಿ ಹಣಕ್ಕೆ ಪೂಜೆ ಮಾಡಲಾಗುತ್ತದೆ.
ಹಾಗೆ ನಾವು ನೋಟು, ನಾಣ್ಯಗಳು ಕೆಳಗೆ ಬಿದ್ದಾಗ ಇಲ್ಲವೆ ಕಾಲಿನಿಂದ ತುಳಿದಾಗ ಅದಕ್ಕೆ ನಮಸ್ಕಾರ ಮಾಡಿಕೊಳ್ಳುತ್ತೇವೆ. ಮನೆಯಲ್ಲೂ ಕೂಡ ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ. ಬಲಗೈ ಮೂಲಕ ಹಣದ ವ್ಯವಹಾರಗಳು ಮಾಡುವುದು ಕೂಡ ಒಂದು ರೂಢಿಯಾಗಿ ನಡೆದುಕೊಂಡು ಬಂದಿದೆ. ಆದ್ರೆ ಇಲ್ಲೊಬ್ಬ ನೋಟುಗಳಿಗೆ ಬೆಂಕಿ ಹಚ್ಚಿ ಸಂಭ್ರಮಿಸಿದ್ದಾನೆ.

ನಿಮಗೆ ಈ ಘಟನೆ ವಿಚಿತ್ರ ಎನಿಸಬಹುದು. ಆತ ನೋಟುಗಳನ್ನು ಒಂದು ಕಡೆ ಜೋಡಿಸಿ ಅದಕ್ಕೆ ಬೆಂಕಿ ಹಚ್ಚಿ ದೀಪಾವಳಿಯ ಶುಭಾಶಯ ಕೋರಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್, ಫಾಲೋವರ್ಸ್ ಪಡೆಯಲು ಹಾಗೂ ವೀವ್ಸ್‌ಗಾಗಿ ಎಂತಹ ಚಿತ್ರ ವಿಚಿತ್ರ ವಿಡಿಯೋಗಳ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೀವು ನೋಡಿರುತ್ತೀರಿ. ಆದ್ರೆ ಇಲ್ಲೊಬ್ಬನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆತ ನೂರು ರೂಪಾಯಿ ಹಾಗೂ 500 ರೂಪಾಯಿ ನೋಟನ್ನು ಒಂದು ಕಡೆ ಇಟ್ಟು ಅದಕ್ಕೆ ಬೆಂಕಿ ಹಚ್ಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದರಲ್ಲಿ ಗರಿಗರಿಯಾಗಿರುವ 100 ರೂಪಾಯಿ ಹಾಗೂ 500 ರೂಪಾಯಿ ನೋಟು ನೋಡಬಹುದು. ಆತ ಈ ನೋಟುಗಳಿಗೆ ಬೆಂಕಿ ಹಚ್ಚಿದ್ದಾನೆ. ಈ ವಿಡಿಯೋ ನೋಡಿದ ಮಂದಿ ಆತನ ವಿರುದ್ಧ ಕಿಡಿಕಾರಿದ್ದಾರೆ.
ದೀಪಾವಳಿಯಲ್ಲಿ ಈ ರೀತಿ ಹುಚ್ಚುತನ ತೋರಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಹೀಗೆ ನೋಟುಗಳನ್ನು ಸುಡುವುದರಿಂದ ಆತನಿಗೆ ಯಾವ ಖುಷಿ ಸಿಕ್ಕಿದೆ ತಿಳಿದುಕೊಳ್ಳಿ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದೊಂದು ಅತಿರೇಕದ ಮೂರ್ಖತನ, ಹೀಗೆ ಹಣದ ಮೇಲೆ ದರ್ಪ ತೋರಿಸುವುದು ಒಳ್ಳೆಯ ಗುಣವಲ್ಲ. ಆ ಹಣವನ್ನು ಯಾರಿಗಾದರು ದೀಪಾವಳಿಯ ಉಡುಗೊರೆ ರೂಪದಲ್ಲಿ ನೀಡಬಹುದಿತ್ತು. ಇದರಿಂದ ಆತನಿಗೂ ಒಂದಿಷ್ಟು ಪುಣ್ಯ ಬರುತ್ತಿತ್ತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕುಮಾರ್ ದಿನೇಶ್ ಬಾಯ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗೆ ವಿಡಿಯೋದಲ್ಲಿ ಫುಲ್ ಆಫ್ ಆನ್ ಎಂಬ ಬರಹ ಸಹ ಇದೆ. ಇದು ದೀಪಾವಳಿಯ ಕಾರಣಕ್ಕೆ ಆತ ನೋಟುಗಳಿಗೆ ಬೆಂಕಿ ಹಚ್ಚಿದ್ದಾನೆ ಎಂಬುದಂತು ತಿಳಿದುಬರುತ್ತಿದೆ. ಮತ್ತೆ ಕೆಲವರು ಈ ನೋಟುಗಳು ನಕಲಿ ಎಂದು ಶಂಕಿಸಿದ್ದಾರೆ.
ಆತ ಬೆಂಕಿ ಹಚ್ಚಿರುವ ನೋಟುಗಳು ನಕಲಿಯಾಗಿದೆ. ಇಲ್ಲದಿದ್ದರೆ ಇಂತಹ ಕೃತ್ಯ ಮಾಡಲು ಯಾರಿಗೂ ಮನಸ್ಸು ಬರುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಅಂದಾಜಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಹಾಗೆ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ಆತ ಉದ್ದೇಶ ಪೂರ್ವಕವಾಗಿಯೇ ಈ ರೀತಿಯ ವಿಡಿಯೋ ಮಾಡಿದ್ದಾನೆ. ಇದು ನಕಲಿ ನೋಟು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಕೆಲವರು ಹೇಳಿದ್ದಾರೆ.



Click it and Unblock the Notifications
