Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತನಗೆ ಕಚ್ಚಿದ ಹಾವು ಹಿಡಿದು ಮೂರು ಬಾರಿ ಕಚ್ಚಿದ ವ್ಯಕ್ತಿ: ಬದುಕಿ ಉಳಿದಿದ್ಯಾರು ಗೊತ್ತಾ?
ಮಳೆಗಾಲದಲ್ಲಿ ನಮಗೆ ಎಲ್ಲೆಂದರಲ್ಲಿ ಹಾವುಗಳು ನೋಡಲು ಸಿಗುತ್ತವೆ. ಹಾಗೆ ಅವುಗಳಿಂದ ಅಪಾಯವೂ ಹೆಚ್ಚಾಗುತ್ತದೆ. ಇನ್ನು ಹಾವು ಕಚ್ಚುವುದರಿಂದ ಭಾರತದಲ್ಲಿ ಲಕ್ಷ ಲಕ್ಷ ಮಂದಿ ಸಾವಿಗೀಡಾಗುತ್ತಾರೆ. ಅದರಲ್ಲೂ ಹಳ್ಳಿ ಪ್ರದೇಶದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಇನ್ನು ನಿಮಗೇನಾದರು ಹಾವು ಕಡಿದರೆ ನೀವು ಏನು ಮಾಡುತ್ತೀರಿ?
ಹಾವು ಕಚ್ಚಿದಾಗ ಮೊದಲು ಅದು ಯಾವ ಹಾವು ಎಂಬುದನ್ನು ಪತ್ತೆ ಮಾಡಲು ಮುಂದಾಗಿ ಪ್ರಥಮ ಚಿಕಿತ್ಸೆ ತಿಳಿದಿದ್ದರೆ ಅದನ್ನು ಮಾಡುತ್ತಾರೆ ಇಲ್ಲವೆ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರು ಮಾಡುವ ಪ್ರಕ್ರಿಯೆ. ಹೀಗೆ ಮಾಡಿದರೆ ಮಾತ್ರ ಜೀವು ಉಳಿಯುವ ಸಾಧ್ಯತೆ ಹೆಚ್ಚು. ಹಾವು ಕಚ್ಚಿದಾಗಿನಿಂದ ಪ್ರತಿ ಸೆಕೆಂಡ್ ಸಹ ಪ್ರಮುಖವಾಗಿರುತ್ತದೆ.

ಆದರೆ ಇಲ್ಲೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ್ದಾನೆ. ಬಿಹಾರದ ರಜೌಲಿಯ ಸಣ್ಣ ಹಳ್ಳಿಯಲ್ಲಿ ವಾಸವಿರುವ ಸಂತೋಷ್ ಎಂಬಾತನಿಗೆ ಹಾವು ಕಚ್ಚಿತ್ತು. ಆದರೆ ಆತ ಹಾವು ಕಚ್ಚಿದಾಗ ಆಸ್ಪತ್ರೆಗೆ ಓಡದೆ ತಿರುಗಿ ಹಾವಿಗೆ ಕಚ್ಚಿದ್ದಾನೆ. ಆತ ಚಿಕ್ಕವನಿರುವಾಗ ಆತನಿಗೆ ಯಾರೋ ಹೇಳಿದ್ದರಂತೆ ಹಾವು ಕಚ್ಚಿದರೆ ತಿರುಗಿಸಿ ನೀವು ಎರಡು ಬಾರಿ ಕಚ್ಚಬೇಕು ಎಂದಿದ್ದರಂತೆ.
ಹೀಗಾಗಿ ಹಾವು ಕಚ್ಚಿದಾಗ ಆತ ಹಿಂದೂ ಮುಂದು ನೋಡದೆ ಹಾವಿಗೆ ಎರಡು ಬಾರಿ ಕಚ್ಚಿದ್ದಾನೆ. ಇನ್ನೊಂದು ಅಚ್ಚರಿ ಎಂದರೆ ಹಾವಿನಿಂದ ಕಚ್ಚಿಸಿಕೊಂಡಿದ್ದ ಸಂತೋಷ್ ಬದುಕುಳಿದರೆ ಆತನ ಕಚ್ಚಿದ ಹಾವು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಜಾರ್ಖಂಡ್‌ನ ಸಂತೋಷ್ ಲೋಹರ್ ಎಂದು ಗುರುತಿಸಲಾದ ಕಾರ್ಮಿಕ, ರಾಜೌಲ್‌ನಲ್ಲಿ ರೈಲು ಮಾರ್ಗ ನಿರ್ಮಿಸುವ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ತಾನು ಮಲಗಿದ್ದ ಟೆಂಟ್ ಬಳಿ ವಿಷಕಾರಿ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿದಾಗ ಎದ್ದು ಬಿದ್ದು ಓಡುವ ಬದಲು ಆತ ಹಾವನ್ನು ಹಿಡಿದಿದ್ದಾನೆ. ಬಳಿಕ ಹಾವಿಗೆ ಮೂರು ಬಾರಿ ಕಚ್ಚಿದ್ದಾನೆ.
ಹಾವಿಗೆ ಕಚ್ಚಿದ ಬಳಿಕ ಆತನ ಕೋಪ ಇಳಿಯಲಿಲ್ಲ. ಬಳಿಕ ಹಾವಿಗೆ ಹೊಡೆದಿದ್ದಾನೆ ಎಂದು ಇಳಿದುಬಂದಿದೆ, ಕೆಲ ಹೊತ್ತಿನ ಬಳಿಕ ಹಾವು ಮೃತಪಟ್ಟಿದೆ. ಹಾವು ಕಚ್ಚಿದಾಗ ಅದರ ವಿಷ ಏರಬಾರದು ಎಂದರೆ ಹಾವಿಗೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ ಎಂದು ಆತ ಹೇಳಿಕೊಂಡಿದ್ದಾನೆ. ಇದೇ ಕಾರಣಕ್ಕೆ ಆತ ಹಾವಿಗೆ ತಿರುಗಿ ಕಚ್ಚಿದ್ದನಂತೆ.
ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸರಿಯಾದ ಸಮಯಕ್ಕೆ ಆತ ಆಸ್ಪತ್ರೆ ಸೇರಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಾವು ಕಚ್ಚಿದಾಗ ಏನು ಮಾಡಬೇಕು?
ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಪುಡಿಯನ್ನು ಗಾಯಕ್ಕೆ ಹಾಕಬೇಕು. ಆದರೆ ಗಾಯಕ್ಕೆ ಬಾಯಿ ಇಟ್ಟು ರಕ್ತ ಹೀರಿ ಹೊರಹಾಕುವ ಕಾರ್ಯ ಮಾಡಬಾರದು. ಅಲ್ಲದೆ ಪ್ರಥಮ ಚಿಕಿತ್ಸೆಗೆಂದು ಬಹಳ ಕಾಲ ಸಮಯ ವ್ಯರ್ಥ ಮಾಡಬಾರದು. ಮೊದಲ ಆಧ್ಯತೆ ಆಸ್ಪತ್ರೆಗೆ ತೆರಳುವುದೇ ಆಗಿರಬೇಕು. 50 ಗ್ರಾಂ ದೇಶೀಯ ತುಪ್ಪಕ್ಕೆ 2-3 ಗ್ರಾಂ ಫಿಟ್ಕರಿ ಹುಡಿಯನ್ನು ಬೆರೆಸಿ ಹಾವು ಕಡಿದ ಜಾಗಕ್ಕೆ ಹಚ್ಚಿಕೊಳ್ಳಬೇಕು, ಹೀಗೆ ಮಾಡುವುದರಿಂದ ವಿಷಕಾರಿ ರಕ್ತ ದೇಹ ಸೇರುವ ಪ್ರಕ್ರಿಯೆ ನಿಧಾನವಾಗಬಹುದು.
ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳಿಂದ ಚಿಕಿತ್ಸೆ ಮಾಡಬಹುದು. ಯಾವುದೇ ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಗಂಜಿಯಿಂದ ವಿಷವನ್ನು ತೆಗೆಯಬಹುದು ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ ನೀಡಬಹುದು.ಕೆಲವೊಂದು ಹಾವುಗಳ ವಿಷವು ಅಧಿಕವಾಗಿರುವ ಕಾರಣದಿಂದ ತಕ್ಷಣ ಸಾವು ಸಂಭವಿಸುತ್ತದೆ. ಒಂದು ವೇಳೆ ಯಾವ ಹಾವು ಕಚ್ಚಿದೆ ಎಂದು ಸರಿಯಾಗಿ ತಿಳಿದಿದ್ದರೆ ಈ ಮದ್ದನ್ನು ಬಳಸಬಹುದು.



Click it and Unblock the Notifications

