Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾಲೆಗಾಂವ್ ಸ್ಟೋಟ: 17 ವರ್ಷದ ಬಳಿಕ ಇಂದು ತೀರ್ಪು ಸಂಭವ! ಈ ಕೇಸ್ ನಿಮಗೆ ಗೊತ್ತಾ?
17 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯೊಂದರ ಸಂಬಂಧ ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಮಲೆಗಾಂವ್ ಸ್ಟೋಟ್ ಪ್ರಕರಣದಲ್ಲಿ ಇಂದು ಎನ್‌ಐಎ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಲಿದೆ. ಸೆಪ್ಟೆಂಬರ್ 29, 2008 ರಂದು ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಟ್ಟಣದ ಮಸೀದಿಯ ಬಳಿ ಸೈಕಲ್ ಬಾಂಬ್ ಸ್ಟೋಟಗೊಂಡಿತ್ತು.
ಈ ಘಟನೆಯಲ್ಲಿ 6 ಮಂದಿ ಜೀವ ಕಳದುಕೊಂಡರು. ಹಾಗೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಂತರ 2018ರಲ್ಲಿ ಇದರ ವಿಚಾರಣೆ ಆರಂಭಗೊಂಡು 2025ರ ಏಪ್ರಿಲ್‌ನಲ್ಲಿ ವಿಚಾರಣೆ ಅಂತ್ಯಗೊಂಡಿತ್ತು. ಈ ಸುದೀರ್ಘ ವಿಚಾರಣೆಯ ಬಳಿಕ ಕೋರ್ಟ್ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ಹೀಗಾಗಿ ಸುದೀರ್ಘ ತನಿಖೆ ಹಾಗೂ ವಿಚಾರಣೆಗೆ ಇಂದು ಅಂತ್ಯ ಬೀಳಬಹುದು.

ಏನಿದು ಘಟನೆ? ಆರೋಪಿಗಳು ಯಾರು?
ಬಿಜೆಪಿ ನಾಯಕಿ ಮತ್ತು ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಏಳು ಪ್ರಮುಖ ಆರೋಪಿಗಳಲ್ಲಿ ಸೇರಿದ್ದಾರೆ. ಇತರ ಆರೋಪಿಗಳಾದ ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಸಹ ಸೇರಿದ್ದಾರೆ.
ಘಟನೆ ಹಿಂದಿನ ಉದ್ದೇಶವೇನು?
ಮಹಾರಾಷ್ಟ್ರದ ಮಲೆಗಾಂವ್ ಪ್ರದೇಶ ಮುಸ್ಲಿಂ ಬಾಹುಳ್ಯವುಳ್ಳ ಒಂದು ಚಿಕ್ಕ ಪ್ರದೇಶವಾಗಿ ಎಸ್‌ಐಟಿ ಕೋರ್ಟ್‌ಗೆ ಸಲ್ಲಿಸಿದ್ದ ಚಾರ್ಜ್ ಶೀಟ್‌ನಲ್ಲಿ ಈ ಸೈಕಲ್ ಬಾಂಬ್ ಬ್ಲಾಸ್ಟ್ ನಡೆಯಲು ಕಾರಣವೇನು ಎಂಬುದನ್ನು ವಿವರಿಸಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಕಾಶ್ಮೀರದಿಂದ ಆರ್‌ಡಿಎಕ್ಸ್ ಅನ್ನು ತಂದು ಮಹಾರಾಷ್ಟ್ರದ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದರು ಎಂದು ವಾದಿಸಲಾಗಿತ್ತು. ರಂಜಾನ್ ಸಮಯದಲ್ಲಿ ಈ ಪ್ರದೇಶದಲ್ಲಿ ಅಶಾಂತಿ ಉಂಟು ಮಾಡುವುದು ಅವರ ಪ್ರಾಥಮಿಕ ಉದ್ದೇವಾಗಿತ್ತು ಎಂದು ಕೂಡ ವಾದಿಸಲಾಗಿತ್ತು.
ಡಿಯೋಲಾಲಿ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಸುಧಾಕರ್ ಚತುರ್ವೇದಿ ಮನೆಯಲ್ಲಿ ಬಾಂಬ್ ಅನ್ನು ಜೋಡಿಸುವ ಪ್ರಕ್ರಿಯೆ ನಡೆದಿತ್ತು. ಸೈಕಲ್ ಬಾಂಬ್ ಅನ್ನು ಪ್ರವೀಣ್ ಟಕ್ಕಲ್ಕಿ, ರಾಮ್‌ಜಿ ಕಲ್ಸಂಗ್ರ ಮತ್ತು ಸಂದೀಪ್ ಡಾಂಗೆ ಎಂಬುವವರು ನೋಡಿಕೊಂಡಿದ್ದರು ಎಂದು ಕೂಡ ವಿವರಿಸಲಾಗಿತ್ತು.
ನಿರ್ಣಾಯಕ ಎಲೆಕ್ಟ್ರಾನಿಕ್ ಪುರಾವೆಗಳಲ್ಲಿ ಸುಧಾಕರ್ ಧರ್ ದ್ವಿವೇದಿ ಅವರಿಗೆ ಸೇರಿದ ಲ್ಯಾಪ್‌ಟಾಪ್‌ನಿಂದ ರೆಕಾರ್ಡಿಂಗ್‌ಗಳು ಸೇರಿದ್ದವು, ಪುರೋಹಿತ್, ದ್ವಿವೇದಿ ಮತ್ತು ಉಪಾಧ್ಯಾಯ ಅವರ ಧ್ವನಿಯ ಮಾದರಿಗಳನ್ನು ಸಹ ಸಂಗ್ರಹಿಸಿ ಸಾಕ್ಷಿಯಾಗಿ ಸಲ್ಲಿಸಲಾಗಿತ್ತು. ಹಾಗೆ ಇವರೆಲ್ಲರು ಹಲವು ಪ್ರದೇಶದಲ್ಲಿ ಸಭೆ ಸೇರಿದ್ದರು. ತಮ್ಮದೇ ಸಂವಿಧಾನ ರಚನೆ, ಹಿಂದೂ ರಾಷ್ಟ್ರ, ತಮ್ಮದೇ ಧ್ವಜ, ಆರ್ಯವರ್ತ್ ಎಂಬ ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಈ ಘಟನೆ ನಡೆದಿತ್ತು ಎಂದು ಎಟಿಎಸ್ ಆರೋಪಿಸಿತ್ತು.
ಈ ಘಟನೆ ಸಂಬಂಧ ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ಪರೀಕ್ಷಿಸಿತು ಮತ್ತು ಕಾಲ್ ಡೇಟಾ ರೆಕಾರ್ಡ್ಸ್ ಮತ್ತು ಧ್ವನಿ ಮಾದರಿಗಳು ಸೇರಿದಂತೆ ತಾಂತ್ರಿಕ ಪುರಾವೆಗಳನ್ನು ಉಲ್ಲೇಖಿಸಿತು. ಹಾಗೆ ಈ ಸಾಕ್ಷಿಗಳಲ್ಲಿ 26 ಸಾಕ್ಷಿಗಳು ಮರಣ ಹೊಂದಿದ್ದವು, 39 ಸಾಕ್ಷಿಗಳು ಪ್ರತಿಕೂಲವಾಗಿ ಪ್ರಕರಣದಿಂದಲೇ ಹಿಂದೆ ಸರಿದರು. ಉಳಿದ 282 ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ನೀಡಿದ್ದರು. ಹಾಗೆ 41 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಕೂ ಬಿಟ್ಟಿತ್ತು.
ಸದ್ಯ ಈ ಪ್ರಕರಣದಲ್ಲೀಗ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಸಾಧ್ವಿ ಪ್ರಜ್ಞಾ ಸೇರಿದಂತೆ ಕೆಲವು ಆರೋಪಿಗಳು ತನಿಖೆಯ ಸಮಯದಲ್ಲಿ ಎಟಿಎಸ್ ನಿಂದ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿದರು.



Click it and Unblock the Notifications
