Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಮಕರ ಸಂಕ್ರಾಂತಿ: ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯರಶ್ಮಿ, ಅಶುಭದ ಸೂಚನೆಯೇ?
ಮಕರ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ಸಡಗರ-ಸಂಭ್ರಮದಿಂದ ಆಚರಿಸಲಾಗಿದೆ, ಶಬರಿಮಲೆಯಲ್ಲಿ ಭಕ್ತರು ಮಕರವಿಳಕ್ಕು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ, ಆದರೆ ಬೆಂಗಳೂರಿನ ಬಸವನಗುರಿಯಲ್ಲಿರುವ ಪ್ರಸಿದ್ಧ ಗವಿಗಂಗಾಧೇಶ್ವರ ದೇವಾಲಯಕ್ಕೆ ಬಂದ ಭಕ್ತರಿಗೆ ನಿರಾಸೆ ಉಂಟಾಗಿದೆ,ವಿಸ್ಮಯದ ಘಟನೆಯನ್ನು ಕಣ್ತುಂಬಿಕೊಳ್ಳಲು ಬಂದವರು ಆ ಅಪೂರ್ವ ಘಟನೆಯನ್ನು ನೋಡಲು ಸಾಧ್ಯವಾಗದೇ ಇರುವುದಕ್ಕೆ ಬೇಸರದಿಂದ ಮರಳಿದ್ದಾರೆ.

ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ಈ ದೇವಾಲಯದಲ್ಲಿ ನಡೆಯುವ ಪವಾಡ ಈ ವರ್ಷ ಕಂಡು ಬಂದಿಲ್ಲ
ಮಕರ ಸಂಕ್ರಾಂತಿ ಧಾರ್ಮಿಕ ಕಾರಣದಿಂದ ತುಂಬಾನೇ ಮಹತ್ವದ ದಿನ, ಈ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಂದು ಬೆಂಗಳೂರಿನ ಗವಿಗಂಗಾಧರ ದೇವಾಲಯದಲ್ಲಿ ಸಾಕಷ್ಟು ಭಕ್ತರು ಬಂದು ಪೂಜೆ ಸಲ್ಲಿಸಿ ಈ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಚಮತ್ಕಾರ ನೋಡಲು ಕಾಯುತ್ತಿದ್ದರು. ಈ ದೇವಾಲಯದ ವಿಶೇಷತೆಯೆಂದರೆ ಮಕರ ಸಂಕ್ರಾಂತಿ ದಿನ ದಕ್ಷಿಣ ಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯನ ಕಿರಣಗಳು ದೇವರ ವಿಗ್ರಹದ ಮೇಲೆ ಬೀಳುತ್ತದೆ. ಸಂಜೆ ಹೊತ್ತು 5. 14ರಿಂದ 5-17ರ ನಡುವೆ ಸೂರ್ಯುನ ರಶ್ಮಿ ಗರ್ಭಗುಡಿಯಲ್ಲಿರುವ ಗಂಗಾಧರನ ಸ್ಪರ್ಶಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲಿ ನೆರೆದ ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎಲ್ಇಡಿ ಸ್ಕ್ರೀನ್ ಕೂಡ ಅಳವಡಿಸಲಾಗಿತ್ತು, ಆದರೆ ಈ ವರ್ಷ ಅಂಥ ಅಪೂರ್ಣ ದೃಶ್ಯ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ವರ್ಷ ಸೂರ್ಯರಶ್ಮಿ ದೇವಾಲಯದ ಗರ್ಭಗುಡಿ ಪ್ರವೇಶಿಸದಿರಲು ಕಾರಣವೇನು?
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು, ಮೋಡವಿದ್ದ ಕಾರಣ ಸೂರ್ಯಕಿರಣ ಗಂಗಾಧೇಶ್ವರನ ಮೇಲೆ ಬೀಳಲು ಸಾಧ್ಯವಾಗಿಲ್ಲ, ಮಕರ ಸಂಕ್ರಾಂತಿಯಿದ ಉತ್ತರಾಯಣ ಶುರು, ಇದೇ ಸಮಯದಲ್ಲಿ ಸೂರ್ಯನ ಬೆಳಕು ಬೀಳುತ್ತೆ, ಆದರೆ ಅಕಾಲಿಕ ಮೋಡ ಮುಸುಕಿದ ವಾತಾವರಣ ಕಾರಣ ಈ ವರ್ಷ ಸೂರ್ಯ ಕಿರಣಗಳ ಪ್ರಭೆ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ರೀತಿಯಾಗಿರುವುದು ತುಂಬಾ ಅಪರೂಪ
ಇತಿಹಾಸದಲ್ಲಿ ಇದುವರೆಗೆ ಮೂರು ಬಾರಿ ಈ ರೀತಿ ಆಗಿದೆ ಎಂದು ಹೇಳಲಾಗುತ್ತದೆ. ಕೆಲವರು ಸೂರ್ಯ ರಶ್ಮಿ ಗೋಚರಿಸದೆ ಇರುವುದನ್ನು ಕೆಲವರು ನಂಬಿಕೆಯ ಪ್ರಕಾರ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದು ಶುಭ ಸೂಚನೆಯಲ್ಲ, ಸೂರ್ಯನ ರಶ್ಮಿ ಬೀಳದೆ ಇರುವುದು ಮುಂಬರುವ ಅನರ್ಥಗಳ ಸೂಚನೆ ಎಂದು ಕೂಡ ಹೇಳುತ್ತಿದ್ದಾರೆ.
ಪ್ರಕೃತಿಯ ವಿಸ್ಮಯಗಳಿಗೂ ಧಾರ್ಮಿಕ ನಂಬಿಕೆಗಳಿಗೂ ಸಂಬಂಧವಿರುವುದನ್ನು ನೋಡಿದ್ದೇವೆ
ಧಾರ್ಮಿಕ ನಂಬಿಕೆಯು ಯಾವ ದಿನ ಗ್ರಹಣ ಉಂಟಾಗುತ್ತದೆ ಎಂದು ನಿಖರವಾಗಿ ಹೇಳುತ್ತದೆ, ಆ ದಿನ ವಿಜ್ಞಾನದಲ್ಲಿ ಹೇಳಲಾದ ದಿನಕ್ಕಿಂತ ಭಿನ್ನವಾಗಿರಲ್ಲ. ಇನ್ನು ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಘಟನೆಗಳು ವಿಜ್ಞಾನದ ವಿಶ್ಲೇಷಣೆಗೆ ನಿಲುಕುವಂಥದ್ದಲ್ಲ. ಹಲವು ದೇವಾಲಯಗಳಲ್ಲಿ ಹಲವು ಪವಾಡಗಳು ನಡೆಯುತ್ತದೆ, ಅವುಗಳೆನ್ನೆಲ್ಲಾ ವೈಜ್ಞಾನಿಕವಾಗಿ ತರ್ಕಿಸಲು ಹೋದರೆ ಅಲ್ಲಿ ಉತ್ತರ ಸಿಗಲ್ಲ, ಕೆಲವೊಂದು ವಿಷಯಗಳಷ್ಟೇ ವಿಜ್ಞಾನದ ತರ್ಕಕ್ಕೆ ನಿಲುಕುವಂಥದ್ದು, ಸೂರ್ಯನ ರಶ್ಮಿ ಹೀಗೆ ಗರ್ಭಗುಡಿ ಪ್ರವೇಶ ಮಾಡುವುದು ದೇವರ ಪವಾಡವೇ ಸರಿ.



Click it and Unblock the Notifications