Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Makara Jyothi: ಶಬರಿಮಲೆಯಲ್ಲಿ ಜ್ಯೋತಿ ದರ್ಶನ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ..!
ಮಕರ ಸಂಕ್ರಾಂತಿ ಇಡೀ ದೇಶದಾದ್ಯಂತ ಆಚರಿಸಲ್ಪಡುವ ಹಬ್ಬ. ಹಾಗೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ಹಾಗೆ ಶಬರಿಮಲೆಯಲ್ಲಿ ಈ ದಿನ ಅತ್ಯಂತ ಮುಖ್ಯವಾಗುತ್ತದೆ. ಇದೇ ದಿನ ಮಕರ ಜ್ಯೋತಿ ದರ್ಶನವಾಗುವುದು. ಈ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾಯುತ್ತಿರುತ್ತಾರೆ. ಹಾಗೆ ವಿವಿಧ ಕಡೆಗಳಿಂದ ಶಬರಿಮಲೆಗೆ ತೆರಳುತ್ತಾರೆ.
ಮಂಡಲ ಪೂಜೆಯಿಂದ ಮಕರ ಜ್ಯೋತಿಯವರೆಗೆ ಲಕ್ಷಾಂತರ ಭಕ್ತರು ಶಬರಿ ಮಲೆಗೆ ಬಂದು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯತ್ತಾರೆ. ಹಾಗೆ ವರ್ಷದ ಎಲ್ಲಾ ದಿನವೂ ಈ ದೇವಾಲಯದ ಬಾಗಿಲು ತೆರೆಯದ ಕಾರಣ ಈ ಸಮಯದಲ್ಲಿಯೇ ಇರುಮುಡಿ ಹೊತ್ತು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಇಲ್ಲಿ ದೇವರ ದರ್ಶನ ಪಡೆಯುವುದೇ ದೊಡ್ಡ ಸವಾಲಾಗಿರುವಾಗ ಜ್ಯೋತಿ ದರ್ಶನಕ್ಕೆ ಮತ್ತಷ್ಟು ಶ್ರಮ, ಭಾಗ್ಯ ಬೇಕಾಗುತ್ತದೆ.

ಅಯ್ಯಪ್ಪನ ದರ್ಶನ ಪಡೆಯಲು 18 ಮೆಟ್ಟಲು ಏರಿ ತೆರಳಬೇಕಾಗುತ್ತದೆ. ಕೆಲವೊಮ್ಮೆ ಇಡೀ ದಿನ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಅದೇ ರೀತಿ ಎಲ್ಲರಿಗೂ ಜ್ಯೋತಿ ದರ್ಶನಕ್ಕೆ ಅವಕಾಶ ಸಿಗುವುದಿಲ್ಲ. ಸೀಮಿತ ಭಕ್ತರಿಗೆ ಮಾತ್ರವೆ ಅವಕಾಶ ಸಿಗುತ್ತದೆ. ಈ ಜ್ಯೋತಿ ನೋಡಲೆಂದೇ ಈ ದಿನ ಶಬರಿಮಲೆಗೆ ತೆರಳುವುದು ಸಾಮಾನ್ಯನಾಗಿ ನಾವು ನೋಡಬಹುದು.
ಹಾಗೆ ಪ್ರತಿ ವರ್ಷವೂ ಶಬರಿ ಮಲೆಯಲ್ಲಿ ಜ್ಯೋತಿ ದರ್ಶನ ಯಾವಾಗ ಎಂಬ ಗೊಂದಲ ಇದ್ದೇ ಇರುತ್ತದೆ. ಜನವರಿ 14ರಂದು ಅಥವಾ ಜನವರಿ 15ರಂದು ದರ್ಶನವಾಗಲಿದ್ಯಾ ಎಂಬ ಗೊಂದಲ ಉಂಟಾಗಿರುತ್ತದೆ. ಕಳೆದ ವರ್ಷ ಜನವರಿ 15ರಂದು ಜ್ಯೋತಿ ದರ್ಶನವಾಗಿತ್ತು. ಹಾಗಾದ್ರೆ ಈ ವರ್ಷ ಯಾವಾಗ ಮಕರ ಜ್ಯೋತಿಯ ದರ್ಶನವಾಗಲಿದೆ. ಯಾವ ಸಮಯಕ್ಕೆ ನಾವು ನೋಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಕರ ಜ್ಯೋತಿ ದರ್ಶನ ಯಾವಾಗ?
ಶಬರಿ ಮಲೆಯಲ್ಲಿ ಈ ವರ್ಷ ಜನವರಿ 14ರಂದು ಮಕರ ಜ್ಯೋತಿ ದರ್ಶನವಾಗುತ್ತಿದೆ. ಈ ವರ್ಷ ಡಿಸೆಂಬರ್ 30 ರಿಂದ ಜನವರಿ 20ರ ವರೆಗೆ ಮಕರ ಜ್ಯೋತಿ ಯಾತ್ರೆ ಆರಂಭಗೊಂಡಿತ್ತು. ಇನ್ನು ಜ್ಯೋತಿ ದರ್ಶನವು ಜನವರಿ 14ರಂದು ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿಯ ಸ್ವರೂಪವಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ ಎಂದು ನಂಬಲಾಗಿದೆ.
ಜನವರಿ 14ರ ಸಂಜೆ 6 ಗಂಟೆಯಿಂದ 7 ಗಂಟೆಯ ನಡುವೆ ಮೂರು ಬಾರಿ ಜ್ಯೋತಿ ದರ್ಶನವಾಗಲಿದೆ. ನೇರ ಪ್ರಸಾರದಲ್ಲೂ ಕೂಡ ನಾವು ಇದನ್ನು ವೀಕ್ಷಿಸಬಹುದು. ಮಕರ ಜ್ಯೋತಿ ಶಬರಿಮಲೆಯಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿರುವ ಬೆಟ್ಟದಲ್ಲಿ ಗೋಚರಿಸುತ್ತದೆ. ಸೂರ್ಯನು ಮಕರ ರಾಶಿಗೆ ಸಂಚರಿಸುವ ಸಮಯದಲ್ಲಿ ಜ್ಯೋತಿ ದರ್ಶನವಾಗುತ್ತದೆ. ಸೂರ್ಯಾಸ್ತವಾದ ಕೆಲವೇ ಸಮಯದಲ್ಲಿ ಈ ಜ್ಯೋತಿ ದರ್ಶನವಾಗುತ್ತದೆ. ಮೂರು ಬಾರಿ ಕಾಣಿಸಿಕೊಂಡು ಬಳಿಕ ಮರೆಯಾಗುತ್ತದೆ.
ಹಾಗೆ ರಾಜನಾಗಬೇಕಿದ್ದ ಅಯ್ಯಪ್ಪಸ್ವಾಮಿಯು ಅರಮನೆ ಬಿಟ್ಟು ಬಂದಾಗ ಇಡೀ ರಾಜ್ಯ ಕಣ್ಣೀರು ಹಾಕಿತ್ತಂತೆ. ಅಯ್ಯಪ್ಪನ ತಂದೆ ಮರುಗಿದ್ದರಂತೆ, ಆದ್ರೆ ಪಟ್ಟಾಭಿಷೇಕ ತೊರೆದ ಮಾತ್ರಕ್ಕೆ ಜನರ ಕಷ್ಟಗಳ ಕೇಳಲಾರೆ ಎಂದಲ್ಲ, ಶಬರಿಮಲೆಯ ಈ ಬೆಟ್ಟದಲ್ಲಿ ನನಗೆ ಗುಡಿ ಕಟ್ಟಿ ಸಂಕ್ರಾಂತಿಯ ದಿನದಂದು ನಾನು ಜನರಿಗೆ ಕಾಣಿಸಿಕೊಳ್ಳುತ್ತೇನೆ, ಅವರ ಕಷ್ಟಗಳ ನಿವಾರಿಸಲಿದ್ದೇನೆ ಎಂದು ಮಾತು ಕೊಟ್ಟಿದ್ದನಂತೆ ಎಂಬ ಕಥೆ ಇದೆ.



Click it and Unblock the Notifications