Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Mahashivratri 2026: ಎಐ ರಚಿಸಿರುವ ಶಿವನ ಅತ್ಯದ್ಭುತ ಫೋಟೋಗಳು ಇಲ್ಲಿವೆ!
ಶಿವನಿಗೆ ಅರ್ಪಿತವಾದ ಇಂದು ದಿನ ಮಹಾಶಿವರಾತ್ರಿಯನ್ನು ಫೆ.15ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಶಿವನ ಆರ್ಶೀವಾದ ಪಡೆಯಲು ಸಮರ್ಪಿಸಲಾಗಿದೆ. ಶಿವರಾತ್ರಿ ಎಂದರೆ ಪವಿತ್ರ ರಾತ್ರಿ, ಈ ದಿನ ಶಿವನಿಗೆ ವಿಶೇಷ ಪೂಜೆ, ಭಜನೆ, ಆರಾಧನೆ, ಉಪವಾಸ ಮಾಡುವುದು ನೋಡಬಹುದು. ಈ ದಿನ ಶಿವನ ನೆನೆರೆ ಅವರ ಕಷ್ಟಗಳು ನಿವಾರಣೆಯಾಗಿ ಪಾಪಗಳು ಕರಗಿ ಸುಖ ಜೀವನವನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.

ಭಕ್ತರು ಇಂದು ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ.

ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಂಬಿ ಬರುವ ಭಕ್ತರನ್ನು ಶಿವನು ಕಾಪಾಡುತ್ತಾನೆ. ಹಾಗೆ ಆತನ ಪಾರ್ಥನೆಯಿಂದ ನಿಮ್ಮ ನೋವು, ಕಷ್ಟಗಳು ನಿವಾರಣೆಯಾಗಲಿದೆ.

ಶಿವನ ಆಶೀರ್ವಾದವನ್ನು ಪಡೆಯಲು ಶಿವನ ಭಕ್ತರು ಈ ದಿನದಂದು ಉಪವಾಸ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ ಮತ್ತು ಶಿವನ ಮಂತ್ರಗಳು, ಶಿವ ಪುರಾಣ ಇತ್ಯಾದಿಗಳನ್ನು ಪಠಿಸುತ್ತಾರೆ.

ಮಹಾ ಶಿವರಾತ್ರಿಯ ದಿನದಂದು ಹಾಲನ್ನು ಖರೀದಿಸಿ ಶಿವಲಿಂಗಕ್ಕೆ ಅಭಿಷೇಕಕ್ಕಾಗಿ ನೀಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹೀಗಾಗಿ ಈ ದಿನದಂದು ಬಹುತೇಕ ಎಲ್ಲಾ ದೇವಾಲಯದಲ್ಲಿ ಹಾಲಿನ ಅಭಿಷೇಕ ಮಾಡುವುದು ನೋಡಬಹುದು.

ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದಾಗ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ ಬಲಿಷ್ಠನಾಗುತ್ತಾನೆ ಎಂದು ಹೇಳಲಾಗುತ್ತದೆ. ಸದ್ಯ ಶಿವನ ಆಶೀರ್ವಾದ ಪಡೆಯಲು ಈ ಪರಿಹರ ಮಾಡಲಾಗುತ್ತದೆ.
ಶಿವನ ಅಭಿಷೇಕಕ್ಕೆ ಸಕ್ಕರೆ, ಜೇನುತುಪ್ಪ, ಬಿಲ್ವ ಪತ್ರೆ, ಶ್ರೀಗಂಧ ಇತ್ಯಾದಿಗಳನ್ನು ನೀಡುವುದು ಶಿವನ ಕೃಪೆಗೆ ಪಾತ್ರರಾಗಬಹುದು. ಹಾಗೆ ಬಡವರಿಗೆ ಬಟ್ಟೆ, ಮೊಸರು, ಸಿರಿಧಾನ್ಯಗಳ ದಾನ ಮಾಡುವುದು ಕೂಡ ಶಿವನಿಗೆ ಸಂತಸ ಮೂಡಿಸಲಿದೆ.

ಮಹಾ ಶಿವರಾತ್ರಿಯ ಸಮಯದಲ್ಲಿ ನಂಬಿಕೆಗಳ ಪ್ರಕಾರ ಎಳ್ಳನ್ನು ಯಾರಿಗಾದರೂ ದಾನ ಮಾಡಿದರೆ ಕಷ್ಟದ ವಿಷಯಗಳು ಯಶಸ್ವಿಯಾಗಿ ಕೊನೆಗೊಳ್ಳುತ್ತವೆ.

ಶಿವನು ಎಂದಿಗೂ ತನ್ನ ಭಕ್ತರಲ್ಲಿ ಕಟ್ಟುನಿಟ್ಟಿನ ವ್ರತವನ್ನು ಕೈಗೊಳ್ಳುವಂತೆ ಬಯಸುವುದಿಲ್ಲ. ಅಂತೆಯೇ ಶ್ರದ್ಧೆ ಭಕ್ತಿಯಿಂದ ಶಿವನನ್ನು ಪೂಜಿಸುವುದು ಅತ್ಯವಶ್ಯಕವಾಗಿದೆ. ಹೀಗಾಗಿ ರಾತ್ರಿಯಿಂದ ಪೂಜೆ ಆರಂಭಿಸುವವರು ಶ್ರದ್ಧಾ ಭಕ್ತಿಯಿಂದ ಬೆಳಗ್ಗೆಯ ವರೆಗೂ ಉಪವಾಸ ಮಾಡುತ್ತಾರೆ.

ಒಂದು ದಿನ ಇಡೀ ಉಪವಾಸವಿದ್ದು ಮರುದಿನವೇ ವ್ರತವನ್ನು ಸಮಾಪ್ತಿ ಗೊಳಿಸಲಾಗುತ್ತದೆ. ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಪ್ರಸಾದ ಮಾಡಿ ಸವಿಯಲಾಗುತ್ತದೆ.



Click it and Unblock the Notifications

