Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶಿವರಾತ್ರಿಯಂದು ಲಿಂಗಕ್ಕೆ ಸುತ್ತು ಹೊಡೆಯಬಾರದು..! ಏನು ಮಾಡಬೇಕು? ಏನು ಮಾಡಬಾರದು?
ಹಿಂದೂಗಳಿಗೆ ಪವಿತ್ರ ಹಬ್ಬ ಎಂದೇ ಪರಿಗಣಿಸಲಾಗಿರುವ ಮಹಾಶಿವರಾತ್ರಿಯು ಶಿವನಿಗೆ ಅರ್ಪಿಸಲಾಗಿದೆ. ಅಂದು ಶಿವನಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವುದು, ಆತನ ಪೂಜಿಸುವುದರಿಂದ ಪಾಪ ಕರ್ಮಗಳು ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಆದರೆ ಈ ಶಿವರಾತ್ರಿಯಂತಹ ಪವಿತ್ರ ದಿನದಂದು ನಾವು ಏನು ಮಾಡಬೇಕು? ಏನೆಲ್ಲಾ ಮಾಡಬಾರದು?
ಹೌದು ಈ ದಿನದಂದು ಈ ರೀತಿಯ ಪೂಜೆ ಮಾಡಬೇಕು. ಒಂದು ವೇಳೆ ನೀವು ಪೂಜೆ ಸಲ್ಲಿಸಲು ಸಾಧ್ಯವಾಗದಿದ್ದರೂ ನೀವು ಕೆಲವು ತಪ್ಪುಗಳ ಮಾಡಬಾರದು ಎಂದು ಹೇಳಲಾಗಿದೆ. ಹಾಗಾದರೆ ಶಿವರಾತ್ರಿಯ ದಿನ ಏನು ಮಾಡಬಾರದು? ಏನು ಮಾಡಬೇಕು ಎಂಬುದನ್ನು ನೋಡಿ.

ಶಿವರಾತ್ರಿಯಂದು ಏನು ಮಾಡಬೇಕು?
ಶಿವನಿಗೆ ಪೂಜೆ
ಶಿವರಾತ್ರಿ ದಿನ ಶಿವನಿಗೆ ಪೂಜೆ ಮಾಡಬೇಕು. ಈಶ್ವರನಿಗೆ ಸಕಲ ಕಷ್ಟ ನಿವಾರಣೆಗಾಗಿ, ಸಕಲ ಸಮೃದ್ಧಿಗಾಗಿ ಪ್ರಾರ್ಥಿಸಿ ಪೂಜಿಸುವ ದಿನ. ಈ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಿ ಮೊದಲು ಶಿವನಿಗೆ ಪೂಜೆ ಮಾಡಬೇಕು.
ಶಿವಲಿಂಗ ಪೂಜೆ: ಸಾಮಾನ್ಯವಾಗಿ ಮನೆಗಳಲ್ಲಿ ಲಿಂಗ ಅಥವಾ ಸಾಲಿಗ್ರಾಮಗಳು ಇರುತ್ತವೆ. ಇದ್ದರೆ ಅದನ್ನು ನೀರಿನಿಂದ ಶುಚಿಗೊಳಿಸಿ, ಶಿವಲಿಂಗಕ್ಕೆ ಅಥವಾ ಶಿವನ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ಶಿವನಿಗೆ ವಿಶೇಷವಾಗಿ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಅಲ್ಲದೇ ಜೇನು, ಶ್ರೀಗಂಧಗಳಿಂದಲೂ ಅಭಿಷೇಕ ಮಾಡಿ ಭಕ್ತಿ ಮೆರೆಯಲಾಗುತ್ತದೆ.
ದೇವಾಲಯ ಭೇಟಿ ನೀಡಿ
ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡುವುದು ಉತ್ತಮ. ಶಿವನಿಗೆ ಬಿಳಿಯ ಬಣ್ಣದ ಹೂವು ಶ್ರೇಷ್ಠ ಎನ್ನಲಾಗುತ್ತದೆ. ಅದರ ಜೊತೆಗೆ ಕೇದಿಗೆ ಹೂವನ್ನೂ ಕೂಡ ಶಿವನ ಪೂಜೆಗೆ ಅರ್ಪಿಸಬಹುದು. ಮಹೇಶ್ವರನನ್ನು ಪೂಜಿಸಲು ಬಿಲ್ವಪತ್ರೆಯೊಂದಿದ್ದರೆ ಪೂಜೆ ಸಂಪನ್ನಗೊಳ್ಳುತ್ತದೆ. ಹಾಗಾಗಿ ಬಿಲ್ವಪತ್ರೆಯನ್ನು ಇಟ್ಟು ಪೂಜಿಸುವುದು ಸೂಕ್ತ.
ಸ್ತೋತ್ರ ಪಠಣ
ಈಶ್ವರನಿಗೆ ಹೆಚ್ಚಾಗಿ ಹಾಲು ಅಥವಾ ಅದರ ಮೂಲದಿಂದ ಮಾಡಿದ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಶಿವರಾತ್ರಿ ಶಿವನನ್ನು ಆರಾಧಿಸುವ ದಿನ ಈ ದಿನ 108 ಶಿವನ ನಾಮ ಪಠಣ ಮಾಡುವುದು ಒಳ್ಳೆಯದು. ಅಲ್ಲದೇ ಲಿಂಗಾಷ್ಟಕಂ ಹಾಗೂ ಮೊದಲಾದ ಶಿವ ಸ್ತೋತ್ರಗಳನ್ನು ಹೇಳುವುದು ಮತ್ತು ಇತರರಿಗೂ ಹೇಳಿಕೊಡುವುದು ಅತ್ಯಂತ ಶ್ರೇಷ್ಠವಾದ ಕೆಲಸ.
ಜಾಗರಣೆ
ಶಿವರಾತ್ರಿಯಂದು ಉಪವಾಸ ಮಾಡುವುದು ಒಂದು ಪದ್ಧತಿ. ಯಾವುದೇ ವಯಸ್ಸಿನವರೂ ತಮಗೆ ಸಾಧ್ಯವಾಗುವ ಹಾಗಿದ್ದಲ್ಲಿ ಉಪವಾಸ ಮಾಡಬಹುದು. ಈ ದಿನ ಕೇವಲ ಫಲಾಹಾರಗಳನ್ನು ಮಾತ್ರ ಸೇವಿಸಬೇಕು. ಶಿವ ರಾತ್ರಿಯೆಲ್ಲ ತಾಂಡವ ನೃತ್ಯ ಮಾಡುತ್ತಿರುತ್ತಾನೆ ಎಂಬ ನಂಬಿಕೆಯ ಮೇಲೆ ಜಾಗರಣೆ ಮಾಡಲಾಗುತ್ತದೆ. ಶಿವನ ಎಲ್ಲಾ ದೇವಾಲಯಗಳಲ್ಲೂ ಬೆಳಗಿನ ಜಾವದವರೆಗೂ ವಿವಿಧ ರೀತಿಯಲ್ಲಿ ಜಾಗರಣೆ ಮಾಡಲಾಗುತ್ತದೆ.
ಶಿವರಾತ್ರಿಯ ದಿನ ಯಾವ ಕೆಲಸ ಮಾಡಬಾರದು?
ಲಿಂಗಕ್ಕೆ ಸುತ್ತುಬರುವುದು ಬೇಡ
ಶಿವರಾತ್ರಿಯ ದಿನ ಸಾಕಷ್ಟು ಜನ ಉಪವಾಸವನ್ನು ಮಾಡುತ್ತಾರೆ. ಆದರೆ ನಿಮಗೆ ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಮಾಂಸಾಹಾರವನ್ನು ಸೇವಿಸುವುದುದನ್ನು ತಪ್ಪಿಸಿ. ಶಿವ ಸ್ಮಶಾನ ವಾಸಿ ಎಂದು ಮಾತಿದೆಯಾದರೂ ಈ ದಿನ ಶಿವನನ್ನು ಶುದ್ಧ ಮನಸ್ಸಿನಿಂದ ನೀವು ಶುದ್ಧರಾಗಿಯೇ ಆಚರಿಸುವುದು ಒಳ್ಳೆಯದು. ಜೊತೆಗೆ ಎಲ್ಲಾ ದೇವರಿಗೂ ಸಂಪೂರ್ಣ ಸುತ್ತುಬರುವುದು ವಾಡಿಕೆ. ಆದರೆ ಪುರಾಣಗಳ ಪ್ರಕಾರ, ಲಿಂಗಕ್ಕೆ ಮಾತ್ರ ಅರ್ಧ ಸುತ್ತು ಹಾಕಬೇಕು. ಅರ್ಧ ಸುತ್ತು ಹಾಕಿ ಪುನಃ ನೀವು ಎಲ್ಲಿಂದ ಆರಂಭಿಸಿದ್ದೀರೋ ಅಲ್ಲಿಗೇ ತಲುಪಬೇಕು.
ಸಿಂಧೂರ ಇಡಬಾರದು
ವಿಶೇಷವಾಗಿ ಶಿವ ವಿಗ್ರಹದ ತಲೆಯ ಮೇಲೆ ಅಥವಾ ಲಿಂಗದ ಮೇಲೆ ಮಹಿಳೆಯರು ಸಿಂಧೂರವನ್ನು ಇಡಬಾರದು. ಅದರ ಬದಲು ಶ್ರೀಗಂಧವನ್ನು ಬಳಸಬಹುದು. ಶಿವನಿಗೆ ಇತರ ಬಣ್ಣಗಳು ಅಷ್ಟು ಪ್ರಿಯವಲ್ಲದ್ದರಿಂದ ಕಪ್ಪು ಬಟ್ಟೆಯನ್ನು ಶಿವರಾತ್ರಿಯಂದು ತೊಡುವುದು ಉತ್ತಮ. ಇದನ್ನೇ ತೊಡಬೇಕೆಂಬ ನಿಯಮವಿಲ್ಲ. ಆದರೆ ತೊಡುವ ಬಟ್ಟೆ ಶುಭ್ರವಾಗಿರಲಿ.



Click it and Unblock the Notifications

