Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶಿವರಾತ್ರಿಯಂದು ಶಿವನಿಗೆ ಈ 5 ಹೂವುಗಳ ಅರ್ಪಿಸಿ..!
2024ರಲ್ಲಿ ಮಹಾಶಿವರಾತ್ರಿಯನ್ನು ಮಾರ್ಚ್ 8ರಂದು ಆಚರಿಸಲಾಗುವುದು. ಈ ವರ್ಷ ಮಹಾಶಿವರಾತ್ರಿಗೆ ಮೂರು ಪ್ರಮುಖ ಯೋಗಗಳು ಏರ್ಪಟ್ಟಿದೆ, ಸುಮಾರು 300 ವರ್ಷಗಳ ಬಳಿಕ ಇಂಥದ್ದೊಂದು ಯೋಗ ಏರ್ಪಟ್ಟಿದೆ, ಹಾಗಾಗಿ ಈ ಬಾರಿಯ ಶಿವರಾತ್ರಿ ಇನ್ನೂ ವಿಶೇಷವಾಗಿದೆ. ಮಹಾಶಿವರಾತ್ರಿ ಶಿವನನ್ನು ಒಲಿಸಿಕೊಳ್ಳಲು ಮತ್ತು ಅವನ ಆಶೀರ್ವಾದ ಪಡೆಯಲು ಇರುವ ಪವಿತ್ರ ದಿನವಾಗಿದೆ.
ಈ ದಿನದೊಂದಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅನುಸರಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ ಮತ್ತು ಮಂಗಳಕರವಾಗಿರುತ್ತದೆ. ಈ ಹಬ್ಬವು ಭಗವಾನ್ ಶಿವನನ್ನು ಬಹಳ ವೈಭವದಿಂದ ಪೂಜಿಸಲು ಸಮರ್ಪಿಸಲಾಗಿದೆ. ಹಾಗಾದರೆ ಶಿವನಿಗೆ ಆ ದಿನ ಯಾವ ಹೂವು ಅರ್ಪಿಸಬೇಕು? ಯಾವ ಹೂವಿನ ಹಿಂದೆ ಯಾವ ಕಥೆಯಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ನೋಡಿ.

ಜೂಹಿ ಮಲ್ಲಿಗೆ/ ಸೂಜಿ ಮಲ್ಲಿಗೆ: ಶಿವನಿಗೆ ಇಷ್ಟವಾದ ಹೂವುಗಳಲ್ಲಿ ಸೂಜಿ ಮಲ್ಲಿಗೆ ಪ್ರಮುಖ ಹೂವಾಗಿದೆ. ಸೂಜಿ ಮಲ್ಲಿಗೆಯ ಘಮಲು ಎಷ್ಟು ದೂರಕ್ಕೆ ಹರಡುತ್ತದೆ ಎಂಬುದು ತಿಳಿಸಿದೆ. ಈ ಹೂವನ್ನು ಶಿವನಿಗೆ ಶಿವರಾತ್ರಿಯಂದು ಅರ್ಪಿಸಬೇಕು ಎನ್ನಲಾಗಿದೆ. ಆಧ್ಯಾತ್ಮದಲ್ಲಿ ಮಾತೃತ್ವದಂತಹ ಪ್ರೀತಿ, ಪರಿಶುದ್ಧತೆ ಮತ್ತು ಸ್ತ್ರೀಲಿಂಗ ಶಕ್ತಿಗಳನ್ನು ಸಂಕೇತಿಸುತ್ತದೆ, ಜೂಹಿ ಹೂವನ್ನು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಶಿಫಾರಸು ಮಾಡಲಾಗುತ್ತದೆ. ಈ ಹೂವನ್ನು ಶಿವನಿಗೆ ಅರ್ಪಿಸುವುದರಿಂದ ಸಮೃದ್ಧಿಗೆ ಸಂಬಂಧಿಸಿದ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ, ನಿರಂತರ ಹಣದ ಹರಿವನ್ನು ಖಚಿತಪಡಿಸುತ್ತದೆ ಮತ್ತು ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತದೆ.
ಮಲ್ಲಿಗೆ ಹೂವು: ಹಿಂದೂ ಧರ್ಮದಲ್ಲಿ ಪ್ರೀತಿ ಮತ್ತು ಶುದ್ಧತೆಯನ್ನು ಸಂಕೇತಿಸುವ ಸುಗಂಧಕ್ಕೆ ಹೆಸರುವಾಸಿಯಾದ ಮಲ್ಲಿಗೆ ಹೂವು ಶಿವನಿಗೂ ಪ್ರಿಯವಾಗಿದೆ, ನೀವೇನಾದರು ಹೊಸ ವಾಹನ ಖರೀದಿಸಲು ಮುಂದಾಗುವುದಾದರೆ ಈ ಮಲ್ಲಿಗೆ ಹೂವನ್ನು ಶಿವನಿಗೆ ಅರ್ಪಿಸಿ ಪ್ರಾರ್ಥಿಸಿ. ಈ ಹೂವನ್ನು ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ಅದರ ಚಿಕಿತ್ಸಕ ಗುಣಗಳಿಂದಾಗಿ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.
ಅಗಸೆ ಹೂವು: ಅಗಸೆ ಹೂವು ಎಂದೂ ಕರೆಯಲ್ಪಡುವ ಅಲ್ಸಿ ಹೂವನ್ನು ಆಹಾರ ಅಥವಾ ನಾರಿನ ಬೆಳೆಯಾಗಿ ಬೆಳೆಸಲಾಗುತ್ತದೆ. ಮಹಾಶಿವರಾತ್ರಿಯಂದು ಭಗವಾನ್ ಶಿವನಿಗೆ ಈ ಹೂವನ್ನು ಅರ್ಪಿಸುವುದು ದೇವರ ಗಮನವನ್ನು ಸೆಳೆಯುತ್ತದೆ ಎಂದು ನಂಬಲಾಗಿದೆ, ಭಕ್ತನು ಅವನಿಗೆ ಅತ್ಯಂತ ಪ್ರಿಯನಾಗುತ್ತಾನೆ. ಅಲ್ಲದೆ ಇದು ವಿಷ್ಣುವಿನ ಆಶೀರ್ವಾದವನ್ನು ಸಹ ನೀಡಲಿದೆ. ನೋಡಲು ಕನಕಾಂಬರ ಹೂವಿನಂತೆಯೇ ಇರಲಿದ್ದು ಬಣ್ಣ ಮಾತ್ರ ನೀಲಿಯಾಗಿರುತ್ತದೆ.
ದಾಸವಾಳದ ಹೂವು: ಬೆಚ್ಚಗಿನ ಸಮಶೀತೋಷ್ಣ ಹವಾಮಾನದಲ್ಲಿ ಬೆಳೆಯುವ ದಾಸವಾಳದ ಹೂವನ್ನು ಮಹಾಶಿವರಾತ್ರಿಯಂದು ಶಿವನಿಗೆ ಅರ್ಪಿಸಬೇಕಂತೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುತ್ತದೆ ಜೊತೆಗೆ ಜೀವನದಲ್ಲಿ ಸಂತೋಷ ಲಭಿಸುತ್ತದೆ ಎಂದು ನಂಬಲಾಗಿದೆ.
ಮುಟ್ಟಿದರೆ ಮುನಿ/ನಾಚಿಕೆ ಮುಳ್ಳಿನ ಹೂವು: ನೀವು ಮುಟ್ಟಿದರೆ ಮುನಿ ಮುಳ್ಳಿನ ಗಿಡದಲ್ಲಿ ನೀಲಿ ಆಕಾರದ ಹೂವು ಬಿಡುವುದನ್ನು ಗಮನಿಸಿರುತ್ತೀರಿ. ಈ ಹೂವು ಶಿವನಿಗೆ ಅತ್ಯಂತ ಪ್ರಿಯವಂತೆ. ಭಗವಾನ್ ಶಿವ ಮತ್ತು ಗಣೇಶನಿಗೂ ಈ ಹೂವು ಇಷ್ಟವಂತೆ. ಹೀಗಾಗಿ ಶಿವರಾತ್ರಿಯಂದು ಈ ಹೂವಿನ ಹಾರವನ್ನು ಮಾಡಿ ಶಿವನಿಗೆ ಅರ್ಪಿಸಿದರೆ ಅನಾರೋಗ್ಯ ಸಮಸ್ಯೆಗಳು ದೂರಾಗುತ್ತದೆ ಜೊತೆಗೆ ಶಿವನ ಆರ್ಶೀವಾದ ಪಡೆಯಬಹುದು ಎಂದು ನಂಬಲಾಗಿದೆ.
ಮಹಾಶಿವರಾತ್ರಿಯ ದಿನಂದು ಏನು ಮಾಡಬೇಕು?
ಮಹಾಶಿವರಾತ್ರಿಯ ದಿನದಂದು ಉಪವಾಸವನ್ನು ಆಚರಿಸಲು ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ಧಿಗೆ ಶಿವನ ಆರಾಧಿಸಲಾಗುತ್ತದೆ. ಹೀಗಾಗಿ ಇಂದು ಶಿವನ ಆರಾಧನೆ ಚಾಚು ತಪ್ಪದೆ ಮಾಡಿ. ಅಲ್ಲದೆ, ಶಿವನ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ವ್ರತ ಕಥಾವನ್ನು ಆಲಿಸಿ ಅಥವಾ ಪಠಿಸಿ ಮತ್ತು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯನ್ನು ಧ್ಯಾನಿಸಿ.
ಶಿವನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಪಡೆಯಲು ನೀವು ಬೆಲ್ಪತ್ರೆ ಮತ್ತು ಹೂವುಗಳನ್ನು ಪೂಜಿಸುವಾಗ ಬಳಸಬೇಕು. ಮಹಾಶಿವರಾತ್ರಿಯಂದು ಅಗತ್ಯವಿರುವವರಿಗೆ ಸಿಹಿತಿಂಡಿಗಳು, ಆಹಾರ, ಬಟ್ಟೆಯನ್ನು ದಾನ ಮಾಡುವುದರಿಂದ ಶ್ರೇಯಾಭಿವೃದ್ಧಿಯಾಗಲಿದೆ. ಶಿವನ ಮೆಚ್ಚಿಸಲು ನೀವು ಈ ದಿನದಂದು ಭಜನೆ-ಕೀರ್ತನೆಯನ್ನು ಸಮರ್ಪಿತವಾಗಿ ಮಾಡಬೇಕು.
ಜೊತೆಗೆ ಶಿವನ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಶಿವನ ಮೂರ್ತಿ ಇಲ್ಲವೆ ಪೋಟೋಗೆ ಹಣತೆ ಹಚ್ಚಿ. ಶಿವನಿಗೆ ಪ್ರಿಯವಾದ ವಾಹನವಾದ ನಂದಿಗೆ ಸಾಧ್ಯವಾದಷ್ಟು ಆಹಾರ ನೀಡಿ, ಇಲ್ಲವೆ ನಂದಿಯ ಕಾಲು ತೊಳೆದು ಪೂಜೆ ಮಾಡಿದರೆ ಒಳಿತಾಗಲಿದೆ. ಈ ದಿನದಂದು ಶಿವನ ದೇವಾಲಯಕ್ಕೆ ತೆರಳಲು ಸಾಧ್ಯವಾಗದಿದ್ದರೆ ಗಣಪತಿ ದೇವಾಲಯದಲ್ಲೂ ಪೂಜೆ ನೆರವೇರಿಸಬಹುದು.



Click it and Unblock the Notifications
