Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Mahagauri Mantra In Kannada: ನವರಾತ್ರಿಯ 9ನೇ ದಿನ ಮಹಾಗೌರಿ ಪೂಜೆ, ಮಂತ್ರ ಇಲ್ಲಿದೆ
ನವರಾತ್ರಿಯ ಸಂಭ್ರಮದಲ್ಲಿ 8 ದಿನವನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗುತ್ತದೆ. 9 ದಿನಗಳ ಆಚರಣೆಯಲ್ಲಿ 8ನೇ ದಿನ ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ದಿನದಂದು ಮಾ ದುರ್ಗಾ ಮಾತೆಯ ಎಂಟನೇ ರೂಪವಾದ ಮಾ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಆಕೆಯ ಮೈಬಣ್ಣವು ಸಂಪೂರ್ಣವಾಗಿ ಸುಂದರವಾಗಿರುತ್ತದೆ. ಆಕೆಯನ್ನು ಶಂಖ, ಚಂದ್ರನೊಂದಿಗೆ ಹೋಲಿಸಲಾಗುತ್ತದೆ.
ದುರ್ಗೆ ಒಂದೊಂದು ದಿನ ಒಂದೊಂದು ಅವತಾರದಲ್ಲಿ ಭೂಮಿಗೆ ಬರುತ್ತಾಳೆ. ಹಾಗೆ ಭಕ್ತರ ಬೇಡಿಕೆಗಳನ್ನು ಆಕೆ ಇಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ 8ನೇ ದಿನದಂದು ದುರ್ಗೆ ಮಹಾಗೌರಿಗೆ ಸಮರ್ಪಿತವಾದ ದಿನವಾಗಿದೆ. ದುರ್ಗೆಯ ಮಹಾಗೌರಿಯ ಅವತಾರದಲ್ಲಿ 8ನೇ ದಿನ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ.

ಮಹಾಗೌರಿಯು 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುಗ ಹಿಡಿದಿರುತ್ತಾಳೆ. ಆಕೆ ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಿರುತ್ತದೆ.
ದುರ್ಗೆಯ ಈ 9 ಅವತಾರಗಳ ಪೈಕಿ ಮಹಾಗೌರಿ ಅವತಾರಕ್ಕೆ ತನ್ನದೇ ಮಹತ್ವವಿದೆ. ಆಕೆ ಬಿಳಿ ವಸ್ತ್ರದ ಹಾಲಿನಂತ ಮೈಬಣ್ಣ ಹೊಂದಿರುವ ಗೌರಿ. ಹಾಗೆ ಆಕೆ ದುಷ್ಟರನ್ನು ಸಂಹಾರ ಮಾಡುವ ಮುನ್ನ ಆಕೆ ಪ್ರಶಾಂತವಾಗಿ ಧ್ಯಾನಕ್ಕೆ ಕುಳಿತುಕೊಳ್ಳುವ ಅವತಾರ ಎಂಬ ವಾದವೂ ಇದೆ.
ಮಹಾಗೌರಿಯ ಕಥೆ ಏನು?
ದುರ್ಗೆ ಭೂಲೋಕದಲ್ಲಿ ಜನ್ಮ ಪಡೆದಳಂತೆ ಆದರೆ ಅದರಿಂದ ಮುಕ್ತಿ ಪಡೆಯಬೇಕಾದರೆ ಆಕೆ ಶಿವನನ್ನು ಮದುವೆಯಾಗಬೇಕಾಯಿತು. ಹೀಗಾಗಿ ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡಿದಳು. ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಆಕೆಯ ದೇಗದ ತುಂಬೆಲ್ಲಾ ಗಿಡ ಬಳಿ ಹಬ್ಬಿದವು, ಮಣ್ಣು ಆಕೆಯನ್ನು ತುಂಬಿಕೊಂಡಿತ್ತು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿತ್ತು. ಆಕೆಯ ತಪಸ್ಸಿನಿಂದ ಸಂತಸಗೊಂಡ ಶಿವನು ಪ್ರತ್ಯಕ್ಷನಾದನು. ಹಾಗೆ ಆಕೆಯ ಬೇಡಿಕೆ ಈಡೇರಿಸಿದನು.
ನಂತರ ಆಕೆಯ ದೇಹದ ಕೊಳೆಯನ್ನು ತೊಳೆಯಲು ಗಂಗೆಯಲ್ಲಿ ಕೇಳಿಕೊಂಡನಂತೆ, ನಂತರ ಮಹಾಗೌರಿಯು ಎಂದಿನಂತೆ ಬಿಳಿಯಾಗಿ ಹೊಳಪು ಬಂದಿತ್ತು. ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವಳು ಎಂಬ ನಂಬಿಕೆ ಇದೆ.
ಮಹಾಗೌರಿ ದೇವಿಯ ಮಂತ್ರಗಳು
ಓಂ ದೇವಿ ಮಹಾಗೌರೈ ನಮಃ
ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಶ್ವೇತೇ ವೃಷೇಷಾಮಾರೂಢ ಶ್ವೇತಾಂಬರಧರ ಶುಚಿಃ
ಮಹಾಗೌರಿ ಶುಭಂ ದದ್ಯನ್ ಮಹಾದೇವ್ ಪ್ರಮೋದದ



Click it and Unblock the Notifications
