Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಹಾಶಿವರಾತ್ರಿ: ಶಿವಪೂಜೆಗೆ ಬಿಲ್ವೆಪತ್ರೆ ಹೇಗೆ ಮತ್ತು ಎಷ್ಟು ಅರ್ಪಿಸಬೇಕು?
ಗಣಪತಿಯನ್ನು ಪೂಜಿಸುವಾಗ ಗರಿಕೆ ಅರ್ಪಿಸುವುದು ಶ್ರೇಷ್ಠ ಅದರಂತೆಯೇ ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು, ಎಲ್ಲಾ ಶಿವ ದೇವಾಲಯಗಳಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಬೆಳೆಸಲಾಗುವುದು. ಬಿಲ್ವಪತ್ರೆಯನ್ನು ಬಳಸುವುದಕ್ಕೂ ಕೆಲವೊಂದು ನಿಯಮವಿದೆ, ಶಿವ ಪೂಜೆಯಲ್ಲಿ ಅರ್ಪಿಸುವ ಬಿಲ್ವಪತ್ರೆ ಹೇಗಿರಬೇಕು? ಹೇಗೆ ಅರ್ಪಿಸಬೇಕು ಎಂದು ನೋಡೋಣ ಬನ್ನಿ:

ಶಿವ ಪೂಜೆಗೆ ಬಿಲ್ವೆ ಪತ್ರೆ ಎಲೆ ಹೇಗೆ ಆಯ್ಕೆ ಮಾಡಬೇಕು?
ನೀವು ಶಿವನ ಪೂಜೆಗೆ ಬಿಲ್ವೆಪತ್ರೆ ಎಲೆ ಕುಯ್ದು ತರುವಾಗ ಎಲ್ಲಾ ಎಲೆ ತರುವಂತಿಲ್ಲ, ಆ ಎಲೆಯ ಮೇಲೆ ಯಾವುದೇ ಬಿಳಿ ಚುಕ್ಕಿ ಇರಬಾರದು, ಇನ್ನು ಎಲೆ ಕೂತು ರಂಧ್ರ ಮಾಡಬಾರದು. ಅಲ್ಲದೆ ಒಂದೊಂದೇ ಎಲೆ ಕೀಳಬಾರದು, ನೀವು ಬಿಲ್ವೆಪತ್ರೆ ಎಲೆ ಆಯ್ಕೆ ಮಾಡುವಾಗ ಆ ದಂಟಿನಲ್ಲಿ ಮೂರು ಎಲೆ ಜೊತೆಯಾಗಿ ಇರಬೇಕು. ಎಲೆ ಹರಿದು ಹೋಗಿದ್ದರೆ ಅಂಥ ಎಲೆ ಬಳಸಬಾರದು.
ಏಕೆ ಮೂರು ಎಲೆ ಜೊತೆಗಿರುವಂತೆ ನಾವು ಎಲೆಗಳನ್ನು ಕೀಳಬೇಕು?
ಬಿಲ್ವೆಪತ್ರೆ ಮೂರು ಎಲೆ ಶಿವನ ಮೂರನೇ ಕಣ್ಣಿನ ಮಹತ್ವ ಹೇಳುತ್ತದೆ, ಶಿವ ಮೂರನೇ ಕಣ್ಣು ಬಿಟ್ಟರೆ ಈ ಜಗತ್ತು ಸುಟ್ಟು ಭಸ್ಮವಾಗುತ್ತದೆ ಎಂದು ಎಂದು ಹೇಳಲಾಗುವುದು, ಮೂರನೇ ಕಣ್ಣು ಜ್ಞಾನದ ಸಂಕೇತ ಕೂಡ ಹೌದು. ದೇವ-ಅಸುರರ ನಡುವೆ ಯುದ್ಧ ನಡೆದಾಗ ಶಿವನು ಮಾರಕ ಆಯುಧಗಳನ್ನು ತಮ್ಮ ದೇಹದೊಳಗೆ ಹೀರಿಕೊಳ್ಳುತ್ತಾನೆ, ಅದುವೇ ಮೂರನೇ ಕಣ್ಣು ಎಂದು ಹೇಳಲಾಗುವುದು.
ಮೂರು ಎಲೆಗಳನ್ನು ಈ ಅರ್ಥಗಳನ್ನೂ ಕೂಡ ಸೂಚಿಸುತ್ತದೆ
ಮೂರು ಎಲೆಗಳನ್ನು ಏಕೆ ಅರ್ಪಿಸಬೇಕು ಎಂಬುವುದನ್ನು ಹೀಗೆ ಕೂಡ ವಿಶ್ಲೇಷಲಾಗುವುದು
ಈ ಮೂರು ಎಲೆಗಳು ತಾಮಸ ಅಂದರೆ ದೇಹ
ರಜಸ ಅಂದರೆ ಭಾವನೆ
ಸಾತ್ವಿಕ ಅಂದರೆ ಬುದ್ಧಿ ಇದನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು.
ಈ ಮೂರು ಎಲೆ ಅರ್ಪಿಸುವ ಮೂಲಕ ನಾವು ಕಾಯ, ವಾಚ, ಮನಸ್ಸಾ ದೇವರಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ ಎಂಬುವುದನ್ನು ಸೂಚಿಸುತ್ತದೆ.
ಪೌರಾಣಿಕ ನಂಬಿಕ ಪ್ರಕಾರ
ಬಿಲ್ವೆಪತ್ರೆ ಎಲೆಯಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು, ಶಿವ ನೆಲೆಸಿದ್ದಾರೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಶಿವಲಿಂಗಕ್ಕೆ ಹೇಗೆ ಅರ್ಪಿಸಬೇಕು?
ನೀವು ಶಿವಲಿಂಗಕ್ಕೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸುವಾಗ ಹಾಗೆಯೇ ಅರ್ಪಿಸಬೇಡಿ, ಅದರ ತೊಟ್ಟು ನಮ್ಮ ಕಡೆ ಎಲೆಯ ತುದಿ ಶಿವಲಿಂಗದ ಕಡೆ ಇರುವಂತೆ ಅರ್ಪಿಸಬೇಕು, ಹೀಗೆ ಅರ್ಪಿಸುವುದರಿಂದ ಎಲೆತಟ್ಟುವಿನ ಮೂಲಕ ಶಿವತತ್ತ್ವ ಆ ಪರಿಸರದಲ್ಲಿ ಹರಡುವುದು ಎಂದು ಹೇಳಲಾಗುವುದು.
ಶಿವರಾತ್ರಿಯ ದಿನದಂದು ಬಿಲ್ವೆಪತ್ರೆ ಎಲೆ ಕೀಳಬೇಡಿ
ಸೋಮವಾರದ ದಿನ, ಶಿವರಾತ್ರಿಯ ದಿನ ಬಿಲ್ವೆಪತ್ರೆ ಎಲೆ ಕೀಳಬೇಡಿ, ಒಮ್ಮೆ ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವೆಪತ್ರೆ ಎಲೆಯನ್ನು ಮತ್ತೊಮ್ಮೆ ಬಳಸಬಾರದು. ಬಿಲ್ವೆಪತ್ರೆ ಎಲೆಯನ್ನು ಕೀಳುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ನಂತರ ಕೀಳಿ. ಸ್ಕಂದ ಪುರಾಣದಲ್ಲಿ ಬಿಲ್ವೆ ಪತ್ರೆ ಮರದಲ್ಲಿ ಪಾರ್ವತಿ ನೆಲೆಸಿದ್ದಾಳೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆ ಅರ್ಪಿಸದೆ ಪೂಜೆ ಶಿವ ಪೂಜೆ ಮಾಡಿದರೆ ಅದು ಸಂಪೂರ್ಣವಾಗ ಉವುದಿಲ್ಲ, ಹಾಗಾಗಿ ಶಿವಪೂಜೆಯಲ್ಲಿ ಬಿಲ್ವೆಪತ್ರೆ ಎಲೆ ಇರಲೇಬೇಕು.
ಮೂಲತೋಭವರೂಪಾಯ ಮಧ್ಯತೋ ಮೃದುರೂಪಿಣಿ
ಅಗ್ರತಃ ಶಿವರೂಪಾಯ ಪತ್ರ್ನೆವೇರ್ದಸ್ವರೂಪಿಣಿ
ಸ್ಕಂದೇ ವೇದಾಂತರೂಪೆಯ ತರುರಾಜಯಃ ತೆ ನಮಃ
ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್‌ರ್ಯ ಪ್ರಣಾಶನಂ ಬಿಲ್ವಾತ್ಪಾತ್ರಂ ನಾಸ್ಪಿ ಯೇನ ತುಷ್ಯತಿ ಶಂಕರ
ಈ ಮಂತ್ರ ಪಠಣೆ ಮೂಲಕ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪ ಬೆಳೆಯಲ್ಲ
ಈ ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪವಾಗಲಿ, ತೋಟದಲ್ಲಿ ಆಗ್ಲಿ ಬೆಳಯಲ್ಲ,ಈ ಮರದ ನೆರಳು ಮನೆಗೆ ಬೀಳಬಾರದು ಅಂತಾರೆ. ದೇವಾಲಯದಲ್ಲಿ ಬೆಳೆಯುತ್ತಾರೆ, ರಸ್ತೆಗಳಲ್ಲಿಯೂ ಕಾಣಬಹುದು.
ಬಿಲ್ವೆಪತ್ರೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಎಲೆಯಾಗಿದೆ.



Click it and Unblock the Notifications
