Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮಹಾ ಶಿವರಾತ್ರಿ 2025: ವಾಟ್ಸಾಪ್ ಡಿಪಿ, ಸ್ಟೇಟಸ್‌ಗಾಗಿ ಎಐ ರಚಿತ ಅದ್ಭುತ ಚಿತ್ರಗಳು ಇಲ್ಲಿವೆ...!!
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿಯನ್ನು ದೇಶದಾದ್ಯಂತ ಆಚರಿಸುತ್ತಾರೆ. ಶಿವನ ದೇವಾಲಯದಲ್ಲಿ ಈ ದಿನವು ಬಹಳ ಅದ್ದೂರಿಯಾಗಿ ನೆರವೇರಲಿದೆ. ಹಾಗೆ ಎಲ್ಲಾ ಕಡೆಗಳಲ್ಲಿ ಶಿವನಾಮಸ್ಮರಣೆ, ಜಪ, ಭಜನೆ, ಜಾಗರಣೆ ನಡೆಯುವುದು ನಾವು ನೋಡಬಹುದು, ಈ ದಿನ ಶಿವ ಹಾಗೂ ಪಾರ್ವತಿ ವಿವಾಹವಾದ ದಿನ ಎಂದು ಪರಿಗಣಿಸಲಾಗಿದೆ. ಹೀಗಾಗಿ ರಾತ್ರಿಯ ಜಾಗರಣೆಯಿಂದ ಬಹಳದ್ಟು ಲಾಭ ನೀವು ಪಡೆಯಬದುದಂತೆ.

ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಚಳಿಗಾಲ ಕೊನೆಗೊಂಡು ವಸಂತ ಮತ್ತು ಬೇಸಿಗೆ ಪ್ರಾರಂಭವಾಗುವ ದಿನ ಕೂಡ ಇದಾಗಿರಲಿದೆ.
ಶಿವರಾತ್ರಿಯಲ್ಲಿ ಜಾಗರಣೆ ಹಾಗೂ ಉಪವಾಸ ವ್ರತಕ್ಕೆ ಬಹಳ ಮಹತ್ವವಿದೆ. ಶಿವರಾತ್ರಿಯ ಉಪವಾಸ ಹಾಗೂ ಜಾಗರಣೆ ಮಾಡುವುದು ಅಶ್ಚಮೇಧ ಯಾಗ ಮಾಡಿದಂತೆ ಎಂಬ ನಂಬಿಕೆಯೂ ಇದೆ. ನಿಮ್ಮ ಸಂಕಷ್ಟಗಳ ನಿವಾರಣೆಗೆ ಈ ದಿನ ಮೀಸಲಿಡಬಹುದು ಎಂದು ಹೇಳಲಾಗಿದೆ.
ಈ ದಿನದಂದು ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ, ಬಿಲ್ವಪತ್ರೆ, ಹೂವು ಅರ್ಪಿಸಿ ಶಿವನ ಮಂತ್ರ ಪಠಿಸಲಾಗುತ್ತದೆ. ಹಾಗೆ ಶಿವನ ಹಲವು ನಾಮಸ್ಮರಣೆಯು ಈ ದಿನದ ವಿಶೇವಾಗಿದ್ದು, ಈ ಮೂಲಕ ಶಿವನ ಕೃಪೆಗೆ ಪಾತ್ರರಾಗಬಹುದು.
ಈ ದಿನ ಮಹಾಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ನೆರವೇರಲಿದೆ ಎಂದು ಹೇಳಲಾಗಿದೆ. ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿನ ಬಹಳಷ್ಟು ಕಷ್ಟಗಳನ್ನು ನಿವಾರಣೆ ಮಾಡಬಹುದು.
ನೀವು ಉಪವಾಸ ಮಾಡದರೆ ಅದರ ಸಂಪೂರ್ಣ ಫಲ ಪಡೆಯಲು ಆ ರಾತ್ರಿ ಜಾಗರಣೆ ಮಾಡಬೇಕು ಎಂದು ಹೇಳಲಾಗಿದೆ. ಈ ಉಪವಾಸದ ಸಮಯದಲ್ಲಿ ನೀರು ಕೂಡ ಸೇವಿಸಬಾರದು.
ಇನ್ನು ಕೆಲವರಿಗೆ ಅನಾರೋಗ್ಯ ಸಮಸ್ಯೆಯಿಂದ ಪೂರ್ಣ ಪ್ರಮಾಣದ ಉಪವಾಸ ಮಾಡಲು ಸಾಧ್ಯವಿಲ್ಲವೋ ಅಂತವರು ಹಾಲು, ಹಣ್ಣು, ನೀರು ಸೇವಿಸಬಹುದಾಗಿದೆ.
ಈ ದಿನದಂದು ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಬಹುದು. ಅಲ್ಲದೆ ಉಪವಾಸ ಮಾಡುವ ಮೂಲಕ ತಾಮಸ ಗುಣ ನಿಯಂತ್ರಿಸಬಹುದು.
ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಸಮುದ್ರ ಮಂಥನದ ವೇಳೆ ಉದ್ಭವಿಸಿದ ವಿಷವನ್ನು ಆತ ಕುಡಿದ ದಿನವಾಗಿಯೂ ಇದನ್ನು ಕರೆಯಲಾಗಿದೆ.



Click it and Unblock the Notifications









