Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಹಾಕುಂಭಮೇಳ: ಕೋಟಿ ಸಂಬಳದ ಕೆಲಸ ಬಿಟ್ಟು ಆಧ್ಯಾತ್ಮದ ಕಡೆ ಒಲವು ತೋರಿದ ಯೋಗಿಯ ಹಳೆಯ ಫೋಟೋಗಳು ವೈರಲ್
ಮಹಾಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ, ಈ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಜನರು ಬರ್ತಾ ಇದ್ದಾರೆ, ನಾಗಾ ಸಾಧುಗಳು, ಅಘೋರಿಗಳು, ಸಂನ್ಯಾಸಿಗಳು ಕುಂಭಮೇಳದ ಪ್ರಮುಖ ಆಕರ್ಷಣೆಯಾಗಿದೆ. ಆಧ್ಯಾತ್ಮಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇಲ್ಲಿಗೆ ಆಗಮಿಸುತ್ತಾರೆ, ಇವರಲ್ಲಿ ಕೆಲವರು ಮಾಧ್ಯಮದವರ ಜೊತೆ ಮಾತನಾಡುತ್ತಾರೆ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಹೀಗೆ ಪತ್ರಕರ್ತರೊಬ್ಬರ ಜೊತೆ ಮಾತನಾಡಿದ ಸಾಧುವೊಬ್ಬರು ವೈರಲ್ ಆಗಿದ್ದಾರೆ, ಅದಕ್ಕೆ ಕಾರಣ ಅವರ ಬ್ಯಾಕ್‌ಗ್ರೌಂಡ್.

ಆಧ್ಯಾತ್ಮದಲ್ಲಿ ತೊಡಗಿಸಿಕೊಂಡವರಿಗೆ ಅದರ ಬಗ್ಗೆ ಆತ್ರ ಗೊತ್ತಿರುತ್ತದೆ, ಅವರಿಗೆ ಈ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ ಎಂಬ ಕಲ್ಪನೆ ಹಲವರಲ್ಲಿದೆ, ಆದರೆ ಅಂಥ ಕಲ್ಪನೆ ಸುಳ್ಳು ಮಾಡಿದವರು ಈ ಬಾಬಾ, ಇವರೀಗ ಐಐಟಿ ಬಾಬಾ ಎಂದೇ ಫೇಮಸ್ ಆಗಿದ್ದಾರೆ. ಐಐಟಿಯಲ್ಲಿ ಓದುವುದು ಎಂದರೆ ಅದು ಸಾಮಾನ್ಯವಲ್ಲ, ಅಷ್ಟೊಂದು ಬುದ್ಧಿವಂತರಾಗಿದ್ದರೆ ಮಾತ್ರ ಐಐಟಿಯಲ್ಲಿ ಸೀಟ್ ಸಿಗಲು ಸಾಧ್ಯ.ಇವರ ಹೆಸರು ಅಭಯ್‌ಸಿಂಗ್, ಐಟಿಟಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದುತ್ತಾರೆ, ನಂತರ ವೈಲ್ಡ್ ಲೈಫ್ ಫೋಟೋಗ್ರಫಿ ಮೇಲೆ ಆಸಕ್ತಿ ಮೂಡುತ್ತದೆ, ವಿಶ್ಯೂಯಲ್ ಕಮ್ಯೂನಿಕೇಷನ್, ಎನಿಮೇಷನ್ ಎಲ್ಲಾ ಕಲಿಯುತ್ತಾರೆ, ಆದರೆ ಅವರಿಗೆ ನಾನು ಸಾಧನೆ ಮಾಡಬೇಕಾಗಿರುವುದು ಇದಲ್ಲ, ಇದಕ್ಕೂ ಮೀರಿದ ಜ್ಞಾನ, ಸಂತೋಷ ಬೇರೆ ಕಡೆ ಇದೆ ಎಂದು ಅನಿಸರಲಾರಂಭಿಸುತ್ತದೆ, ಅದರತ್ತ ಮುಖ ಮಾಡುತ್ತಾರೆ, ಈಗ ಬಾಬಾ ಆಗಿ ಕುಂಭಮೇಳಕ್ಕೆ ಬಂದಿದ್ದಾರೆ.
ಕೋಟಿ ಸಂಬಳದ ಕೆಲಸ ಬಿಟ್ಟು ಅಧ್ಯಾತ್ಮದ ಕಡೆಗೆ ಒಲವು ತೋರಿದರು
ಕೆಲ ಮೂಲಗಳು ಅವರಿಗೆ 1.6 ಕೋಟಿಯ ಸಂಬಳದ ಕೆಲಸ ಸಿಕ್ಕಿತ್ತು ಎಂದು ಹೇಳಿವೆ, ದೊಡ್ಡ ಕಂಪನಿಯಲ್ಲಿ ಸಿಕ್ಕಿದ ದೊಡ್ಡ ಹುದ್ದೆ ಬಿಟ್ಟು ಪೋಟೋಗ್ರಫಿ ಅಂತ ಹೋಗುತ್ತಾರೆ, ನಂತರ ಅದೆಲ್ಲಾ ಬಿಟ್ಟು ನೆಮ್ಮದಿ ಅರಿಸಿ ಆಧ್ಯಾತ್ಮ ಸ್ವೀಕರಿಸುತ್ತಾರೆ. ಅವರನ್ನು ಮಾತನಾಡಿಸಿದ ಪತ್ರಕರ್ತರು ನೀವು ಐಐಟಿ ಮುಂಬೈಯಲ್ಲಿ ಓದಿ ಈ ಅವಸ್ಥೆಗೆ ಕಾರಣವೇನು ಎಂದು ಕೇಳಿದೆ, ಈ ಬಾಬಾ ಈ ಅವಸ್ಥೆ ತುಂಬಾ ಚೆನ್ನಾಗಿದೆ, ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯ ಆ ಪತ್ರಕರ್ತ ಅವರನ್ನು ಮಾತನಾಡಿಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಹುತೇಕ ಮಾಧ್ಯಮದವರು ಅವರ ಸಂದರ್ಶನ ಮಾಡುತ್ತಿದ್ದಾರೆ. ಅವರ ಮಾತಿನ ಶೈಲಿಯೇ ಅವರ ಜ್ಞಾನದ ಬಗ್ಗೆ ಹೇಳುತ್ತದೆ, ಇದೀಗ ಅವರ ಹಳೆಯ ಫೋಟೋಗಳು ತುಂಬಾನೇ ವೈರಲ್ ಆಗುತ್ತಿವೆ.
ಐಐಟಿಯಲ್ಲಿದ್ದಾಗ ಅಭಯ್ ಸಿಂಗ್ ತೆಗಿಸಿದ ಫೋಟೋಗಳು ವೈರಲ್
ಆ ಫೋಟೋಗಳನ್ನು ನೋಡಬಹುದು ಅವರ ಮಾಡರ್ನ್ ಆಗಿದ್ದರು, ನೋಡಲು ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ತುಂಬಾನೇ ಹ್ಯಾಂಡ್ಸಮ್ ಆಗಿದ್ದರು. ಅವರು ಟ್ರಿಪ್ ಹೋಗಿದ್ದಾಗ ತೆಗೆದ ಫೋಟೋಗಳು, ಫ್ರೆಂಡ್ಸ್ ಜೊತೆ ಇದ್ದ ಫೋಟೋಗಳು ವೈರಲ್ ಆಗುತ್ತಿವೆ. ಇವರು ಎಲ್ಲರಂತೆಯೇ ಕಾಲೇಜು ದಿನಗಳಲ್ಲಿ ಇದ್ದರು, ನಂತರ ಅವರಿಗೆ ಈ ಧರ್ಮ, ಆಧ್ಯಾತ್ಮಿಕ ಲೋಕ ಇವುಗಳತ್ತ ಆಕರ್ಷಣೆ ಮೂಡಿದೆ.
ಅವರು ಅವರ ಬಾಲ್ಯದ ದಿನಗಳು, ಕುಟುಂಬ ಎಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಕುಟುಂಬದಲ್ಲಿ ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯ ಅವರ ಬಾಲ್ಯದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು, ಅವರನ್ನು ಎಲ್ಲದಕ್ಕೂ ಟೀಕಿಸುತ್ತಿದ್ದರು, ಅವರು ಫೋಟೋಗ್ರಫಿ ಕಲಿಯಲು ಹೋದಾಗ ತುಂಬಾ ಜನರು ಗೇಲಿ ಮಾಡಿದ್ದಾರೆ, ಅವರು ಖಿನ್ನತೆಯಲ್ಲಿದ್ದರಂತೆ, ಅವರಿಗೆ ನಿದ್ದೆ ಬರ್ತಾ ಇರಲಿಲ್ಲ, ಒಂದೇ ವಿಷಯದ ಬಗ್ಗೆ ಆಲೋಚನೆ ಮಾಡ್ತಾ ಇದ್ದರಂತೆ, ಏನಾಗಿದೆ ನನ್ನ ಮೆದುಳಿಗೆ? ನನಗ್ಯಾಕೆ ನಿದ್ದೆ ಬರ್ತಾ ಇಲ್ಲ ಎಂದೆಲ್ಲಾ ಆಲೋಚಿಸುತ್ತಿದ್ದರಂತೆ, ನಂತರ ಮನಃಶಾಸ್ತ್ರ ಕಲಿಯುತ್ತಾರೆ ಬಳಿಕ ಅವರಿಗೆ ಈ ಆಧ್ಯಾತ್ಮಿಕ ಜ್ಞಾನ ಆಕರ್ಷಿಸುತ್ತದೆ, ಈಗ ಖುಷಿಯಾಗಿದ್ದೇನೆ ಅಂತಾರೆ.



Click it and Unblock the Notifications
