Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಈ ಹೆಣ್ಣಿನ ಕುಡಿ ನೋಟಕ್ಕೆ ನೆಟ್ಟಿಗರು ಫುಲ್ ಫಿದಾ: ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವ ಸುಂದರಿ ಈಗ ನ್ಯಾಷನಲ್ ಕ್ರಷ್
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ, ಅಲ್ಲಿಯ ಸಾಕಷ್ಟು ವಿಷಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ, ಅಘೋರಿಗಳು, ಅವರ ವೇಷಗಳು, ಪ್ರಯಾಗ್ ರಾಜ್‌ನಲ್ಲಿರುವ ಲಕ್ಷುರಿ ಟೆಂಟ್‌ಗಳು, ಕುಂಭ ಮೇಳಕ್ಕೆ ಆಗಮಿಸಿರುವ ವಿದೇಶಿಗರು, ಅಲ್ಲಿಯ ವ್ಯವಸ್ಥೆ ಎಲ್ಲವೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಪ್ರಯಾಗ್‌ರಾಜ್‌ನ ಒಂದೊಂದು ದೃಶ್ಯವೂ ಸತಾತನ ಧರ್ಮದ ಮಹತ್ವ ಸಾರುತ್ತಿದೆ. ಲಕ್ಷಾಂತರ ಸಾಧು-ಸಂನ್ಯಾಸಿಗಳಿಂದ ಪುಣ್ಯ ಭೂಮಿಯಾಗಿರುವ ಪ್ರಯಾಗ್‌ರಾಜ್‌ನಲ್ಲಿ ಒಬ್ಬ ಸಾಮಾನ್ಯ ಹೆಣ್ಮಗಳು ಇಂದು ಇಡೀ ದೇಶದ ಗಮನ ಸೆಳೆದಿದೆ.

ದಿನ ಬೆಳಗಾಗುವುದರಲ್ಲಿ ನ್ಯಾಷನಲ್ ಕ್ರಷ್
ಅವಳು ಈಗ ಇಂಟರ್‌ನೆಟ್ ಸೆನ್ಸೇಷನ್, ಈ ಹೆಣ್ಮಗಳು ತನ್ನ ಸೌಂದರ್ಯದಿಂದಾಗಿ ಈಗ ದಿನ ಬೆಳಗಾಗುವುದರಲ್ಲಿ ಸೆಲೆಬ್ರಿಟಿಗಳಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿದ್ದಾಳೆ. ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿಯ ಫೋಟೋಗಳೇ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ, ಈ ಹುಡುಗಿ ಫೇಮಸ್ ಆಗುತ್ತಿದ್ದಂತೆ ಈಗ ಸಾಕಷ್ಟು ಕ್ಯಾಮರಾಗಳು ಆಕೆಯನ್ನು ಹಿಂಬಾಲಿಸುತ್ತಿದೆ, ಈಗ ಈಕೆಗಿರುವ ಕ್ರೇಝ್ ನೋಡಿದರೆ ಬಾಲಿವುಡ್ ನಿರ್ದೇಶಕರು ಬಂದು ನಮ್ಮ ಸಿನಿಮಾದಲ್ಲಿ ನಟಿಸುತ್ತೀಯಾ ಎಂದು ಕೇಳಿದರೂ ಅಚ್ಚರಿಯಿಲ್ಲ, ಅಷ್ಟೊಂದು ರೂಪವತಿ. ಈಕೆಯನ್ನು ನೋಡಿದವರು ಹೆಣ್ಣೆಂದರೆ ಹೀಗಿರಬೇಕು ಎನ್ನುವಂತಿದೆ ಆಕೆಯ ರೂಪ, ಅಲ್ಲಲ್ಲ ಆಕೆಯ ಕಣ್ಣುಗಳು...
ಐಶ್ವರ್ಯ ರೈ ಕಣ್ಣಿಗಿಂತಲೂ ಆಕರ್ಷಕವಾಗಿದೆ ಈಕೆಯ ಕಣ್ಣು
ಐಶ್ವರ್ಯ ರೈ ಅತಿ ಸುಂದರಿ ಎಂದು ಕರೆಸಿಕೊಂಡಿದ್ದು ಅವರ ಆ ನೀಲಿ ಕಣ್ಣುಗಳಿಂದ, ಆ ಕಣ್ಣುಗಳೇ ಅವರನ್ನು ವಿಶ್ವ ಸುಂದರಿಯನ್ನಾಗಿಸಿತು, ಸಿನಿ ಕ್ಷೇತ್ರದಲ್ಲಿ ಅಷ್ಟೊಂದು ಜನಪ್ರಿಯತೆ ತಂದು ಕೊಡ್ತು ಅಂದರೆ ತಪ್ಪಲ್ಲ, ಐಶ್ವರ್ಯ ರೈ ಬಳಿಕ ಭಾರತೀಯರು ಅತಿ ಹೆಚ್ಚು ಇಷ್ಟಪಟ್ಟದ್ದು ಈ ಸಾಮನ್ಯ ಹೆಣ್ಮಗಳ ಕಣ್ಣನ್ನೇ ಅನಿಸುತ್ತೆ. ಎಂಥ ಆಕರ್ಷಕ ಕಣ್ಣುಗಳು... ಕಮಲದಂಥ ಆಕರ್ಷಕ ಕಣ್ಣುಗಳ ಒಡತಿ.
ಗೋಧಿಬಣ್ಣದ ಮೈ ಕಟ್ಟು, ಅತ್ಯಾಕರ್ಷಕ ಕಣ್ಣು, ತುಟಿಯಲ್ಲಿ ಕಿರು ನಗೆ, ಮೈ ಮೇಲೆ ಕೆಲ ಮಾಲೆಗಳು, ಹಣೆಯಲ್ಲಿ ಚಿಕ್ಕ ಬೊಟ್ಟು, ತುಂಬಾನೇ ಸರಳ ಅಲಂಕಾರದಲ್ಲಿರುವ ಈ ಹೆಣ್ಮಗಳು ನ್ಯಾಷನಲ್ ಕ್ರಷ್ ಆಗಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ರುದ್ರಾಕ್ಷಿ ಮಾಲೆ, ಮಣಿಮಾಲೆ ಮಾರಲು ಬಂದಿರುವ ಯುವತಿ
ಈಕೆಯೇ ಹೇಳುವಂತೆ ಹೆಚ್ಚು ಓದಿಲ್ಲ, ಈ ರೀತಿ ಕಾರ್ಯಕ್ರಮ ನಡೆಯುವಾಗ ಅಲ್ಲಿಗೆ ಹೋಗಿ ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿರುವವರು. ಕುಂಭಮೇಳ ನಡೆಯುತ್ತಿರುವಾಗ ವ್ಯಾಪಾರಕ್ಕೆ ಈಕೆ ತನ್ನ ಬಳಗದ ಜೊತೆ ಇಂದೋರ್‌ನಿಂದ ಬಂದಿದ್ದಾಳೆ, ಮಣಿಮಾಲೆ ಮಾರುತ್ತಿರುವ ಈಕೆಯ ಕಣ್ಣುಗಳು ಅಲ್ಲಿಗೆ ಹೋದಂಥ ಕ್ಯಾಮರಾಮ್ಯಾನ್ ಗಮನ ಸೆಳೆಯುತ್ತೆ, ತುಂಬಾ ವಿಶೇಷವಾದದ್ದನ್ನು ಗಮನಿಸುವುದರಲ್ಲಿ ಕ್ಯಾಮರಾಮ್ಯಾನ್‌ಗಳು ಎತ್ತಿದ ಕೈ, ಅವರು ಇವಳನ್ನು ಮಾತನಾಡಿಸಿ ಕೆಲ ಫೋಟೋ ತೆಗೆದು ಸಾಮಾಜಿಕ ತಾಣದಲ್ಲಿ ಹಾಕಿದ್ದೇ ತಡ 24 ಗಂಟೆಯೊಳಗೆ ನ್ಯಾಷನಲ್ ಕ್ರಷ್ ಆಗಿದ್ದಾಳೆ. ಈಕೆಯ ಫೋಟೋಗು ವೈರಲ್ ಆಗಿದ್ದೇ ತಡ, ಈಕೆ ಕಣ್ಣಿಗೆ ಬಿದ್ದ ತಕ್ಷಣ ಆಕೆಯ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ.
ಈ ಸಾಮಾಜಿಕ ತಾಣ ಯಾರನ್ನು ಬೇಕಾದರೂ ಸೆಲೆಬ್ರಿಟಿ ಮಾಡುತ್ತೆ, ಆದರೆ ಜಾಗ್ರತೆವಹಿಸದಿದ್ದರೆ ಬದುಕೇ ಹಾಳಾಗುತ್ತೆ
ಆಕೆ ಪಾಪ ತನ್ನ ಪಾಡಿಗೆ ತಾನು ಸರ ಮಾರುತ್ತಾ ಖುಷಿಯ ಜೀವನ ನಡೆಸುತ್ತಿದ್ದಳು, ಈಗ ಸಡನ್ ಬಂದ ಜನಪ್ರಿಯತೆ ಖಂಡಿತ ಆಕೆಗೆ ಖುಷಿಯ ಜೊತೆಗೆ ಕಿರಿಕಿರಿ ಉಂಟು ಮಾಡಿರಬಹುದು, ಮಣಿಮಾಲೆ ಮಾರುವುದಕ್ಕಿಂತ ಈಗ ಆಕೆಯನ್ನು ಮಾತನಾಡಿಸುವವರಿಗೆ ಉತ್ತರಿಸುವುದೇ ದೊಡ್ಡ ಕೆಲಸವಾಗಿದೆ, ಅದು ಈಕೆಯ ಹಲವು ವೀಡಿಯೋಗಳನ್ನು ನೋಡಿದಾಗ ಅನಿಸುತ್ತೆ. ಈ ತಳಕು ಬಳಕು ಜಗತ್ತಿನಿಂದ ದೂರವಿದ್ದಷ್ಟೂ ಆಕೆಗೂ ನೆಮ್ಮದಿ ಏನಂತೀರಿ?



Click it and Unblock the Notifications
