Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಜನವರಿ 13ರಿಂದ ಮಹಾ ಕುಂಭಮೇಳ: ಕುಂಭಮೇಳಕ್ಕ ಹೋದವರು ಶುಭ ಎಂದು ಮನೆಗೆ ತರುವ ವಸ್ತುಗಳಿವು
12 ವರ್ಷಗಳ ಬಳಿಕ ಮಹಾ ಕುಂಭಮೇಳ ಪ್ರಯಾಗ್ರಾಜ್ ನಗರದಲ್ಲಿ ನಡೆಯಲಿದೆ. ಮಹಾ ಕುಂಭ ಮೇಳಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಕುಂಭಮೇಳದಲ್ಲಿ ಲಕ್ಷಾಂತರ ಹಿಂದೂಗಳು ಭಾಗಿಯಾಗುತ್ತಾರೆ. ಧಾರ್ಮಿಕ ಕಾರ್ಯ ಮಾಡುವವರು, ಸಂನ್ಯಾಸಿಗಳು, ಅಘೋರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಕುಂಭಮೇಳದಲ್ಲಿ ಭಾಗವಹಿಸುವುದು ಹಿಂದೂಗಳ ಬಹುದೊಡ್ಡ ಕನಸಾಗಿರುತ್ತದೆ. ಕುಂಭಮೇಳದಲ್ಲಿ ಭಾಗವಹಿಸಿದರೆ ಇಲ್ಲಿಂದ ಕೆಲ ಪವಿತ್ರ ವಸ್ತುಗಳನ್ನು ಕೊಂಡೊಯ್ಯಲಾಗುವುದು.

ಕುಂಭಮೇಳದಲ್ಲಿ ಭಾಗವಹಿಸಿದವರು ಈ ಪವಿತ್ರ ವಸ್ತುಗಳನ್ನು ಮನೆಗೆ ಕೊಂಡೊಯ್ಯಲಾಗುವುದು
ಗಂಗಾಜಲ: ಗಂಗಾಜಲ ಅತ್ಯಂತ ಪವಿತ್ರವಾದ ನೀರು, ಇಲ್ಲಿಗೆ ಬಂದವರು ಗಂಗಾಜಲವನ್ನು ಮನೆಗೆ ಕೊಂಡೊಯ್ಯುತ್ತಾರೆ.ಗಂಗಾಜಲವನ್ನು ಮನೆಗೆ ಕೊಂಡೊಯ್ಯುದ್ದು ಮನೆಶುದ್ಧ ಮಾಡುತ್ತಾರೆ. ಗಂಗಾಜಲ ಮನೆಯೊಳಗಡೆ ಚಿಮುಕಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ ಎಂಬುವುದು ನಂಬಿಕೆ.
ಸಂಗಮದ ಮಣ್ಣು
ಇನ್ನು ಇಲ್ಲಿಗೆ ಬಂದವರು ತೆಗೆದುಕೊಂಡು ಹೋಗುವ ಮತ್ತೊಂದು ವಸ್ತುವೆಂದರೆ ತ್ರಿವೇಣಿ ಸಂಗಮದ ಮಣ್ಣು. ಈ ಸ್ಥಳದಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮವಾಗುತ್ತದೆ. ಹಾಗಾಗಿ ಇಲ್ಲಿಯ ಮಣ್ಣು ದೈವಿಕ ಶಕ್ತಿಯನ್ನು ಹೊಂದಿರುವ ಮಣ್ಣಾಗಿದೆ.
ಶಿವ ಲಿಂಗ
ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರು ಇಲ್ಲಿಂದ ಹೋಗುವಾಗ ಶಿವ ಲಿಂಗವನ್ನು ಕೊಂಡೊಯ್ದು ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಶಿವಲಿಂಗವನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುವುದರಿಂದ ಮನೆಗೆ ಒಳಿತಾಗಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಕಷ್ಟಗಳಿದ್ದರೆ ದೂರಾಗಲಿದೆ.
ತುಳಸಿ: ತುಳಸಿಯನ್ನು ಕೂಡ ಕುಂಭಮೇಳದಿಂದ ತಂದು ನೆಟ್ಟರೆ ಒಳ್ಳೆಯದು ಎಂದು ಚಿಕ್ಕ ಗಿಡಗಳನ್ನು ತರುತ್ತಾರೆ. ತುಳಸಿಯನ್ನು ತಂದು ಆ ತುಳಸಿಯನ್ನು ದಿನಾ ಆರೈಕೆ ಮಾಡುವುದರಿಂದ ಮನೆಗೆ ಒಳಿತಾಗಲಿದೆ ಎಂಬುವುದು ನಂಬಿಕೆ.
ಪ್ರಸಾದ: ಎಲ್ಲಾ ಧಾರ್ಮಿಕ ಕ್ಷೇತ್ರಗಳಂತೆ ಇಲ್ಲಿಯೂ ಪ್ರಸಾದ ಸಿಗುವುದು. ಪ್ರಸಾದವನ್ನು ಮನೆಗೆ ತಂದು ಹಂಚಲಾಗುವುದು. ಪ್ರಸಾದ ತಂದು ಮನೆಯವರಿಗೆನೀಡಿದರೆ ಮನೆಗೆ ಶುಭವಾಗುವುದು ಎಂಬ ನಂಬಿಕೆ.
ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭ ಮೇಳ ನಡೆಯಲಿದೆ. ಈಗಾಗಲೇ ಅನೇಕ ಸಾಧುಗಳು ಈ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಬಾರಿ ಕುಂಭ ಮೇಳಕ್ಕೆ ಗಂಗಾಪುರಿ ಮಹಾರಾಜರು ಬರಲಿದ್ದಾರೆ. ಇವರನ್ನು ಚೋಟಾ ಬಾಬಾ ಎಂದು ಕರೆಯಲಾಗುವುದು. ಇವರು ಮಹತ್ವದ ಸಾಧನೆಗೆ ಕಳೆದ 32 ವರ್ಷದಿಂದ ಧ್ಯಾನ, ಪೂಜೆ ಮಾಡುತ್ತಿದ್ದಾರೆ. ಈ ಪವಾಡ ಪುರುಷನನ್ನು ಭಕ್ತರು ಚೋಟಾ ಬಾಬಾ ಎಂದು ಕರೆಯುತ್ತಾರೆ. ಇನ್ನು ಕುಂಭಮೇಳದಲ್ಲಿ ಬರುವ ನೂರಾರು ಸಂಖ್ಯೆಯ ಅಘೋರಿಗಳನ್ನು ನೋಡಲೆಂದೇ ಪ್ರವಾಸಿಗರು ಕೂಡ ಬರುತ್ತಾರೆ.
ಕುಂಭ ಮೇಳದಲ್ಲಿ ಭಾಗವಹಿಸುವ ಚಳಿಯಿಂದ ರಕ್ಷಣೆಗೆ ವ್ಯವಸ್ಥೆ ಮಾಡಿ ಹೋಗಬೇಕು
ಕುಂಭಮೇಳದ ಸಮಯದಲ್ಲಿ ತಾಪಮಾನ ಕಡಿಮೆಯಾಗಲಿದೆ, ಇಲ್ಲಿಗೆ ಬರುವವರು ಚಳಿಯಿಂದ ರಕ್ಷಣೆಗೆ ಉಡುಪುಗಳನ್ನು ತರುವುದು ಒಳ್ಳೆಯದು. ಕುಂಭಮೇಳದಲ್ಲಿ ಬಂದು ಇಲ್ಲಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ ರುಜಿನಗಳು ದೂರಾಗುವುದು. ಕುಂಭಮೇಳ 3 ವರ್ಷಕ್ಕೊಮ್ಮ ನಡೆಯುವುದು, ಆದರೆ ಅರ್ಧ ಕುಂಭ ಮೇಳ 6 ವರ್ಷಕ್ಕೊಮ್ಮೆ, 12 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ. ಈ ವರ್ಷ ಮಹಾಕುಂಭಮೇಳ ನಡೆಯುತ್ತಿದೆ.



Click it and Unblock the Notifications
