Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಮ್ಮ ದೇಶದ ಈ ಹಳ್ಳಿಯಲ್ಲಿ ಮಕ್ಕಳು ದೊಡ್ಡ ಕಳ್ಳರಾಗಲೆಂದೇ ಲಕ್ಷಗಟ್ಟಲೆ ಖರ್ಚು ಮಾಡಿ ಟ್ರೈನಿಂಗ್ ಕೊಡಿಸುತ್ತಾರೆ!
ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಓದಿಸಬೇಕು, ಮಕ್ಕಳು ಓದಿ ದೊಡ್ಡವರಾದ ಮೇಲೆ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಪೋಷಕರು ಬಯಸುತ್ತಾರೆ, ಗೊತ್ತಿದ್ದೂ ಗೊತ್ತಿದ್ದೂ ನಮ್ಮ ಮಕ್ಕಳು ಡಕಾಯಿತರಾಗಲಿ ಕೊಳ್ಳೆ ಹೊಡೆದು ಜೀವನ ಮಾಡಲಿ ಎಂದು ಯಾವ ಪೋಷಕರೂ ಬಯಸುವುದಿಲ್ಲ, ಅಂಥ ಯಾವ ಶಾಲೆಯೂ ಇಲ್ಲ ಎಂದು ನೀವು ಅಂದುಕೊಂಡಿದ್ದರೆ ನಿಮಗೊಂದು ಶಾಕಿಂಗ್ ಸುದ್ದಿ, ಏಕೆಂದರೆ ಇಂಥ ಶಾಲೆ ಇದೆ, ಮಕ್ಕಳು ದೊಡ್ಡ ಕಳ್ಳರಾಗಲಿ ಎಂದು ಕಳುಹಿಸುವ ಪೋಷಕರೂ ಇದ್ದಾರೆ.

ಇಂಥ ಶಾಲೆ ಇರುವುದು ಬೇರೆ ಯಾವುದೋ ದೇಶದಲ್ಲಿ ಅಲ್ಲ, ನಮ್ಮ ಭಾರತದಲ್ಲಿ, ಮಧ್ಯಪ್ರದೇಶದಲ್ಲಿ ಮಕ್ಕಳನ್ನು ಪರಿಣಿತ ಕಳ್ಳರನ್ನಾಗಿ ಮಾಡಲೆಂದೇ ಟ್ರೈನಿಂಗ್ ನೀಡುತ್ತಿದ್ದಾರೆ. ಇಂಥ ಅಚ್ಚರಿಯ ಸಂಗತಿಯನ್ನು NDTV ವರದಿ ಮಾಡಿದೆ.
ಮಧ್ಯಪ್ರದೇಶದ ಕಡಿಯಾ, ಗುಲ್ಖೆಡಿ, ಹುಲ್ಖೆಡಿಈ ಬಗೆಯ ಹಳ್ಳಿಗಳಲ್ಲಿ ಈ ರೀತಿ ಮಕ್ಕಳಿಗೆ ಟ್ರೀನಿಂಗ್ ನೀಡಲಾಗುತ್ತಿತ್ತಂತೆ. ಸುಮಾರು 12-13 ವರ್ಷಕ್ಕೆ ಈ ರೀತಿ ಟ್ರೈನಿಂಗ್ ನೀಡಲಾಗುತ್ತಿದೆ. ಪಿಕ್‌ಪಾಕೆಟ್‌ನಿಂದ ಹಿಡಿದು ದೊಡ್ಡ-ದೊಡ್ಡ ಕಳ್ಳತನ ಮಾಡುವುದು ಹೇಗೆ ಎಂದು ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಆ ವರದಿಯಲ್ಲಿ ಹೇಳಿದೆ.
ಗ್ಯಾಂಗ್ ಲೀಡರ್ ಬಳಿ ಪೊಲೀಸರೇ ಮಕ್ಕಳನ್ನು ಟ್ರೈನಿಂಗ್‌ಗಾಗಿ ಕಳುಹಿಸುತ್ತಿದ್ದಾರೆ
ಮಕ್ಕಳಿಗೆ ಕಳ್ಳತನ, ದರೋಡೆ ಬಗ್ಗೆ ತರಬೇತಿ ನೀಡಲೆಂದೇ ಯಾವ ಗ್ಯಾಂಗ್ ಲೀಡರ್ ಬೆಸ್ಟ್ ಎಂದು ಅಯ್ಕೆ ಮಾಡಿ ನಟೋರಿಯಸ್ ಲೀಡರ್ ಬಳಿ ಕಳುಹಿಸುತ್ತಾರಂತೆ. ಎಂಥ ವಿಚಿತ್ರವಲ್ಲ, ಆದರೂ ಅದು ಸತ್ಯ ಹಾಗೂ ನಂಬಲೇಬೇಕಾದ ವಿಷಯವದು. ಹೀಗೆ ಆ ಹಳ್ಳಿಯಲ್ಲಿ 20 ಸಾವಿರಕ್ಕೂ ಅಧಿಕ ದರೊಡೆಕೋರರು ಇದ್ದಾರಂತೆ.
ಭೂಪಾಲ್‌ನಿಂದ 117 ಕಿ.ಮೀ ದೂರದಲ್ಲಿ ರಾಜಾಘರ್ ಎಂಬ ಜಿಲ್ಲೆಯಿದೆ. ಇಲ್ಲಿ ಪೊಲೀಸರಿಗೆ ದರೋಡೆಕೋರರನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ, ಅಲ್ಲದೆ ಕೆಲ ಪೊಲೀಸರು ಇಂಥ ದರೋಡೆಯಲ್ಲಿ ಭಾಗಿಯಾಗಿದ್ದಾರಂತೆ. ಏಕೆಂದರೆ ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಆ ರೀತಿ ಮಾಡಲಾಗುವುದು ಎಂದು ಹೇಳಲಾಗಿದೆ.
ಹೊರಗಿನವರನ್ನು ಕಂಡ ತಕ್ಷನ ಜಾಗ್ರತರಾಗುತ್ತಾರೆ
ಇಲ್ಲಿ ಹೊರಗಿನವರನ್ನು ಕಂಡ ತಕ್ಷಣ ಜಾಗ್ರತರಾಗುತ್ತಾರೆ. ಕೂಡಲೇ ಇತರರಿಗೆ ಸೂಚನೆ ನೀಡಲಾಗುವುದು. ಅಲ್ಲಿಂದ ಎಲ್ಲರೂ ಕಣ್ಮೆರೆಯಾಗುತ್ತಾರೆ, ಹೀಗಾಗಿ ಪೊಲೀಸರಿಗೆ ಹಿಡಿಯುವುದು ಕಷ್ಟವಾಗಿದೆ.
17 ವರ್ಷಕ್ಕಲ್ಲಾ ಬ್ಯಾಂಕ್ ದರೋಡೆ ಮಾಡುತ್ತಾರೆ
ಇಲ್ಲಿಯ ಮಕ್ಕಳಿಗೆ 12-13 ವರ್ಷಕ್ಕಲ್ಲಾ ಕಳ್ಳತನದ ಟ್ರೈನಿಂಗ್ ನೀಡುವುದರಿಂದ 17 ವರ್ಷಕ್ಕಲ್ಲಾ ಬ್ಯಾಂಕ್ ದರೋಡೆಯಂಥ ಕಾರ್ಯಕ್ಕೆ ಮುಂದಾಗುತ್ತಾರೆ. ಇಲ್ಲಿ ತುಂಬಾನೇ ಪೊಲೀಸ್ ಸ್ಟೇಷನ್ ಹಾಕಿದರೂ ಇವರು ಮಾಡುವ ಕಾನೂನು ಬಾಹಿರ ಕೆಲಸವನ್ನು ಹತ್ತಿಕ್ಕಲು ಕಷ್ಟವಾಗುವುದು ಎಂದು ಪೊಲೀಸರೇ ಹೇಳುತ್ತಾರೆ.
2-3 ಲಕ್ಷ ಖರ್ಚು ಮಾಡಿ ಮಕ್ಕಳನ್ನು ಕಲ್ಲನಾಗಿ ಮಾಡಲು ಪೋಷಕರೇ ಕಳುಹಿಸುತ್ತಾರೆ
ಲಕ್ಷಗಟ್ಟಲೆ ಖರ್ಚು ಮಾಡಿ ಎಂಜಿನಿಯರ್ ಕಾಲೇಜಿಗೆ, ಮೆಡಿಕಲ್ ಕಾಲೇಜಿಗೆ ಅಂತ ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಕಳುಹಿಸುವುದನ್ನು ನೋಡಿದ್ದೇವೆ, ಆದರೆ ಕಳ್ಳತನ ಮಾಡಲು ಕಳುಹಿಸುವ ಪೋಷಕರು ಇದ್ದಾರೆ ಎಂದರೆ ನಿಜಕ್ಕೂ ಅಚ್ಚರಿ ಪಡುವ ವಿಷಯವೇ.
ದೇಶದ ಉದ್ದಗಲಕ್ಕೂ ಈ ಕಳ್ಳರಿದ್ದಾರೆ
ಇಲ್ಲಿಂದ ಟ್ರೈನಿಂಗ್ ಪಡೆದ ಕಳ್ಳರು ದೇಶದ ಎಲ್ಲಾ ಕಡೆ ಹೋಗಿ ಕಳ್ಳತನ, ದರೋಡೆ ಅಂತ ಮಾಡುತ್ತಿದ್ದಾರೆ, ಹೆಚ್ಚಿನವರರು ಜೈಲಿನಲ್ಲಿದ್ದಾರೆಎ. ಇಂತವರನ್ನು ಹತ್ತಿಕ್ಕಿದಿದ್ದರೆ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications
