Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮಂದಿರದೊಳಗೆ ಆಗಮಿಸಲಿದೆ ರಾಮನ ಮೂರ್ತಿ..! ಇಂದು ಮಧ್ಯಾಹ್ನವೇ ವಿಶೇಷ ಪೂಜೆ..!
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗ ಬೆರಳೆಣಿಗೆ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ರಾಮನ ಭೂಮಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿನ್ನೆಯಿಂದ ಆರಂಭಗೊಂಡಿವೆ. ಜನವರಿ 22 ರಂದು ರಾಮ ಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಕೋಟಿ ಕೋಟಿ ರಾಮ ಭಕ್ತರು ಈ ಗಳಿಗೆಗಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಯ ಮೊದಲ ಹೆಜ್ಜೆ ಇಂದು ನೆರವೇರುತ್ತಿದೆ.
ಭವ್ಯವಾದ ಅಯೋಧ್ಯೆಯ ದೇವಾಲಯದಲ್ಲಿ ಒಂದು ವಾರದ ಪ್ರಾಣ ಪ್ರತಿಷ್ಠಾ ಸಮಾರಂಭದ ಎರಡನೇ ದಿನವಾದ ಇಂದು ಭಗವಾನ್ ರಾಮ ಲಲ್ಲಾನ ವಿಗ್ರಹವನ್ನು ಮೊದಲ ಬಾರಿಗೆ ರಾಮಮಂದಿರದೊಳಗೆ ತರಲಾಗುತ್ತದೆ.
ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಅಥವಾ ಬಾಲ ರಾಮನ ವಿಗ್ರಹವನ್ನು ಹೊತ್ತ ಮೆರವಣಿಗೆ ಇಂದು ಅಯೋಧ್ಯೆಯ ಮಂದಿರದ ಆವರಣ ಪ್ರವೇಶಿಸಲಿದೆ. ಭಕ್ತರು ಪವಿತ್ರ ಸರಯೂ ನದಿಯಿಂದ ನೀರನ್ನು ಮಡಕೆಗಳಲ್ಲಿ ಅಥವಾ "ಕಲಶ" ದಲ್ಲಿ ದೇವಸ್ಥಾನಕ್ಕೆ ಒಯ್ಯುತ್ತಾರೆ.

ಹೊಸ ರಾಮಮಂದಿರದ ಸಂಕೀರ್ಣಕ್ಕೆ ವಿಗ್ರಹವನ್ನು ಕೊಂಡೊಯ್ಯಲು ನಿನ್ನೆ ರಾತ್ರಿಯಿಂದಲೇ ಸಿದ್ಧತೆ ನಡೆದಿದೆ. "150-200 ಕೆ.ಜಿ ನಡುವಿನ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಮೆರವಣಿಗೆಗಾಗಿ ತಡರಾತ್ರಿ ಹೂವಿನಿಂದ ಅಲಂಕರಿಸಿದ ಟ್ರಕ್ ಮೇಲೆ ಇರಿಸಲಾಗಿತ್ತು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಮಧ್ಯಾಹ್ನ 1:20 ರ ಸುಮಾರಿಗೆ, ವಿಗ್ರಹವು ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಹಲವಾರು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಜಲ ಯಾತ್ರೆ, ತೀರ್ಥ ಪೂಜೆ, ಬ್ರಾಹ್ಮಣ-ಬಟುಕ್- ಕುಮಾರಿ-ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಲಾಯಾತ್ರೆಯನ್ನು ರಾಮ್ ಲಲ್ಲಾ ವಿಗ್ರಹದ ಮುಂದೆ ನಡೆಸಲಾಗುತ್ತದೆ.
ವಿಗ್ರಹವು ಮೆರವಣಿಗೆಯ ಮೂಲಕ ದೇವಾಲಯವನ್ನು ಪ್ರದಕ್ಷಿಣೆ ಹಾಕಲಿದೆ, ನಂತರ ವಿಗ್ರಹವನ್ನು ಒಳಗೆ ಇಡಲಾಗುತ್ತದೆ. ನಾಳೆ ಅಧಿಕೃತವಾಗಿ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. 6 ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿವಿಧಾನಗಳು ಜನವರಿ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸುವ ಮಹಾ ಸಮರ್ಪಣೆ ಅಥವಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮುಕ್ತಾಯಗೊಳ್ಳಲಿವೆ.
ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ಜನವರಿ 16ರಿಂದಲೇ ಪ್ರಾರಂಭವಾಗಲಿದೆ:
ಜನವರಿ 16, 2024: ಅಮೃತ ಮಹೋತ್ಸವ ಜನವರಿ 16ರಿಂದ ಪ್ರಾರಂಭವಾಗಲಿದೆ. ಈ ದಿನ ಶ್ರೀರಾಮನ ಮೂರ್ತಿಯನ್ನು ನಗರದೊಳಗೆ ಮೆರವಣಿಗೆ ಕರೆದುಕೊಂಡು ಹೋಗಲಾಗುವುದು.
ಜನವರಿ17, 2024: ಗಣೇಶನನ್ನು ಪೂಜಿಸಿದ ಬಳಿಕ ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ನಡೆಯಲಿದೆ.
ಜನವರಿ 18, 2024: ಮಂಟಪ ಪೂಜೆ, ವಾಸ್ತು ಪೂಜೆ, ವರುಣ ಪೂಜೆ ಇವುಗಳನ್ನು ಈ ಶುಭದಿನದಂದು ಮಾಡಲಾಗುವುದು.
ಜನವರಿ 19, 2024: ಜನವರಿ 19ರಂದು ರಾಮ ಮಂದಿರದಲ್ಲಿ ಯಜ್ಞವನ್ನು ಮಾಡಲಾಗುವುದು, ವೇದ ಮಂತ್ರಗಳನ್ನು ಹೇಳುತ್ತಾ ಯಜ್ಞ ಕಾರ್ಯ ಮಾಡಲಾಗುವುದು.
ಜನವರಿ 20, 2024: ಜನವರಿ 20ರಂದು ಮಂದಿರ ಗರ್ಭಗುಡಿಯಲ್ಲಿ 81 ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ದೇಶದ ವಿವಿಧ ಪವಿತ್ರಗಳ ನದಿಗಳ ನೀರನ್ನು ತುಂಬಲಾಗುವುದು. ಈ ದಿನ ವಾಸ್ತು ಶಾಂತಿ ಪೂಜಾ ವಿಧಾನ ಮಾಡಲಾಗುವುದು.
ಜನವರಿ 21, 2024: ಈ ದಿನ ರಾಮ ಲಲ್ಲಾಗೆ ಅಭಿಷೇಕ ಮಾಡಿ, ಯಜ್ಞವನ್ನು ಮಾಡಲಾಗುವುದು.
ಜನವರಿ 22, 2024: ಈ ದಿನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಈ ದಿನದಿಂದ ರಾಮ ಮಂದಿರ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವ ಕ್ಷೇತ್ರವಾಗಲಿದೆ.



Click it and Unblock the Notifications