Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯದಲ್ಲಿ ರಾತ್ರಿ ವೇಳೆ ಕೇಳುತ್ತೆ ಶ್ರೀಕೃಷ್ಣನ ಕೊಳಲ ನಾದ.! ಎಲ್ಲಿದೆ ಗೊತ್ತಾ ಈ ದೇವಾಲಯ
ಶ್ರೀ ಕೃಷ್ಣ ತನ್ನ ಕೊಳಲ ನಾದಕ್ಕೆ ಹೆಸರಾದವನು. ಗೋವುಗಳ ಆತನ ಕೊಳಲಿನ ಸದ್ದಿಗೆ ಓಡಿ ಬಂದು ಆತನ ಸೇರುತ್ತಿದ್ದವು ಎಂಬುದನ್ನು ನಾವು ಕೇಳಿದ್ದೇವೆ. ಆತ ಕೊಳಲನ್ನು ಅಷ್ಟು ಶುಶ್ರಾವ್ಯವಾಗಿ ನುಡಿಸುತ್ತಿದ್ದನಂತೆ. ಹೀಗಾಗಿ ಆತ ಕೊಳಲು ಹಿಡಿದು ನಿಂತಿರುವ ಮೂರ್ತಿಗಳೇ ನಮಗೆ ಹೆಚ್ಚಾಗಿ ನೋಡಲು ಸಿಗುತ್ತವೆ.
ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ಇಂದಿಗೂ ಆತನ ಕೊಳಲಿನ ನಾದ ಕೇಳುತ್ತಿದೆಯಂತೆ, ಹೌದು ರಾತ್ರಿಯ ವೇಳೆ ಈ ದೇವಾಲಯದಲ್ಲಿ ಕೃಷ್ಣ ಕೊಳಲಿನ ನಾದ ಹಾಗೂ ಕಾಲ್ಗೆಜ್ಜೆಯ ಸದ್ದು ಕೇಳಿಸುತ್ತಿದೆ ಎಂದು ಸ್ಥಳೀಯರು ಸಹ ಹೇಳುತ್ತಾರೆ. ಈ ಸದ್ದು ಕೇಳಿಸಿಕೊಳ್ಳಬೇಕು ಎಂದು ದೂರದ ಊರಿನಿಂದ ಅಷ್ಟೇ ಅಲ್ಲ ವಿದೇಶದಿಂದಲೂ ಕೃಷ್ಣನ ಭಕ್ತರು ಆಗಮಿಸುತ್ತಾರೆ.

ಹಾಗಾದ್ರೆ ಈ ದೇವಾಲಯ ಇರುವುದು ಎಲ್ಲಿ? ನಿಮಗೆ ಬಿಹಾರದ ರಾಜಧಾನಿ ಪಾಟ್ನಾ ನಗರ ತಿಳಿದಿರಬಹುದು. ಪಾಟ್ನಾ ಭಾರತದ ಶ್ರೀಮಂತ ಸಂಸ್ಕೃತಿ ಮೆರೆಸುವ ಹತ್ತಾರು ದೇವಾಲಯ, ವಾಸ್ತುಶಿಲ್ಪಕ್ಕೆ ಹೆಸರಾಗಿರುವ ದೇವಾಲಯಗಳ ಹೊಂದಿರುವ ನಗರವಾಗಿದೆ. ಇದೇ ಪಾಟ್ನಾದ ಛೌಧರಿ ತೋಲಾ ಘಾಟ್‌ನಲ್ಲಿ ಈ ರಾಧಾ ಗೋಪಾಲ ದೇವಾಲಯವಿದೆ.
ಪಾಟ್ನಾದಲ್ಲಿರುವ ಹಲವು ದೇವಾಲಯಗಳಲ್ಲಿ ಈ ದೇವಾಲಯ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಲ್ಲಿ ರಾಧಾ ಕೃಷ್ಣರು ನೆಲೆಸಿದ್ದಾರೆ ಎಂದೇ ಭಕ್ತರು ನಂಬಿಕೊಂಡಿದ್ದಾರೆ. ಪಾಟ್ನಾದ ಚೌಧರಿ ತೋಲಾ ಘಾಟ್‌ನಲ್ಲಿರುವ ಶ್ರೀ ರಾಧಾ ಗೋಪಾಲ್ ದೇವಾಲಯವನ್ನು 1830 ರಲ್ಲಿ ಟಿಕಾರಿ ರಾಜ್‌ನ ರಾಜಾ ಹಿಟ್ ನಾರಾಯಣ್ ನಿರ್ಮಿಸಿದರು. ನಂತರ ಈ ದೇವಾಲಯವನ್ನು ರಾಣಿ ವಶಪಡಿಸಿಕೊಂಡರು. ನಂತರ, ಅಕೆಗೆ ವಯಸ್ಸಾದಾಗ ರಾಣಿ ಅದನ್ನು ದೇವ್ರಹಾ ಬಾಬಾಗೆ ದಾನ ಮಾಡಿದಳು.
ಅಂದಿನಿಂದ ಈ ದೇವಾಲಯದ ವ್ಯವಸ್ಥೆಗಳನ್ನು ಸಂತರು ನಿರ್ವಹಿಸುತ್ತಿದ್ದಾರೆ. ಪ್ರತಿ ಭಾನುವಾರ ಇಲ್ಲಿ ಭಜನೆ ಕೀರ್ತನೆ ನಡೆಯುತ್ತದೆ. ಇದಲ್ಲದೆ, ಈ ದೇವಾಲಯದ ಸಂಕೀರ್ಣದಲ್ಲಿ ಭಕ್ತಾಧಿಗಳ ಆಶ್ರಯವೂ ಇದೆ.
ಈ ದೇವಾಲಯದ ಅರ್ಚಕ ಮಾಧೇಶ್ವರ ಮಿಶ್ರಾ ಅವರು ಈ ಬೃಹತ್ ದೇವಾಲಯವು 32 ಕಟ್ಟೆಗಳಲ್ಲಿ ಹರಡಿದೆ ಎಂದು ಹೇಳುತ್ತಾರೆ. ಅನೇಕ ಬಾರಿ, ರಾತ್ರಿಯಲ್ಲಿ ಕೊಳಲು ಮತ್ತು ಕಾಲಿನ ಗಜ್ಜೆ ನಾದವು ಇಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ದೇವರನ್ನು ನಂಬುವ ಜನರು ಈ ದೇವಾಲಯದಲ್ಲಿ ಶ್ರೀ ಕೃಷ್ಣನ ಇರುವಿಕೆಯನ್ನು ಅನುಭವಿಸಬಹುದು ಎಂದು ಅವರು ಹೇಳುತ್ತಾರೆ.
ಹೀಗಾಗಿ ರಾತ್ರಿ ವೇಳೆ ನಾವು ಭಕ್ತರು ಹೆಚ್ಚಾಗಿ ದೇವಾಲಯಕ್ಕೆ ಆಗಮಿಸುವುದನ್ನು ನೋಡಬಹುದಂತೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಈ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಈ ವೇಳೆ ವಿಶೇಷ ಪೂಜೆ ನೆರವೇರುತ್ತದೆ.
ಈ ಅದ್ಭುತ ದೇವಾಲಯವು ಹಲವಾರು ಕಥೆಗಳನ್ನು ಒಳಗೊಂಡಿದೆ. ರಾಧಾ ಗೋಪಾಲ ದೇವಾಲಯದಲ್ಲಿ ಕೃಷ್ಣ ಮತ್ತು ರಾಧಾ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಇಲ್ಲಿಯ ರಮಣೀಯ ಪರಿಸರದಲ್ಲಿ ಪ್ರತಿದಿನ ಸಂಜೆ ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಬರುತ್ತಾರೆ ಮತ್ತು ಗಂಗೆಯ ಸುಂದರ ನೋಟ ಮತ್ತು ದೇವಾಲಯದ ಶಾಂತಿಯನ್ನು ಅಧ್ಯಯನ ಮಾಡುತ್ತಾರಂತೆ.
ದೇವಾಲಯದ ಬೃಹತ್ ಆವರಣದಲ್ಲಿ 22ಕ್ಕೂ ಹೆಚ್ಚು ಗೋವುಗಳಿವೆ. ಇಲ್ಲಿ ಹಸುಗಳಿಗಿಂತ ಕರುಗಳೇ ಹೆಚ್ಚು ಎನ್ನುತ್ತಾರೆ ಗೋಸೇವಕ ನಾಗೇಂದ್ರ. ಇವರೆಲ್ಲರೂ ಸ್ಥಳೀಯ ತಳಿಯವರೇ ಆಗಿರುವುದರಿಂದ ಜನ ಸಾಮಾನ್ಯರಿಂದ ಹಿಡಿದು ಪ್ರಸಿದ್ಧ ವ್ಯಕ್ತಿಗಳವರೆಗೆ ಗೋಮೂತ್ರ ಸಂಗ್ರಹಿಸಲು ಇಲ್ಲಿಗೆ ಬರುತ್ತಾರೆ.
ಪಾಟ್ನಾದ ಚೌಧರಿ ತೋಲಾ ಘಾಟ್‌ನಲ್ಲಿರುವ ಶ್ರೀ ರಾಧಾ ಗೋಪಾಲ್ ದೇವಾಲಯವನ್ನು 1915 ರಲ್ಲಿ ಟಿಕಾರಿಯ ರಾಜಾ ನಾರಾಯಣ್ ನಿರ್ಮಿಸಿದರು ಎಂದು ನಂಬಲಾಗಿದೆ. ಅಂದಿನಿಂದ ಇಂದಿನವರೆಗೂ ದೇವಾಲಯದಲ್ಲಿ ನಿರಂತರ ಪೂಜೆ ನಡೆಯುತ್ತಲೇ ಬಂದಿದೆಯಂತೆ.



Click it and Unblock the Notifications