Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಲೋಕಸಭಾ ಚುನಾವಣೆಯಲ್ಲಿ ಯಾರು ಜಯಭೇರಿ ಭಾರಿಸುತ್ತಾರೆ? ಜ್ಯೋತಿಷ್ಯಿ ನುಡಿದ ಭವಿಷ್ಯವೇನು?
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದತ್ತ ವಿಶ್ವದ ಗಮನವಿದೆ, ಜೂನ್ ನಾಲ್ಕು ತುಂಬಾ ಮಹತ್ವವಾದ ದಿನ, ಸಾಮಾನ್ಯ ಪ್ರಜೆಗಳು ತಮ್ಮ ನಾಯಕ ಯಾರಾಗಿರಬೇಕೆಂದು ಯಾರನ್ನ ಆಯ್ಕೆ ಮಾಡಿದ್ದಾರೆ ಎಂದು ತಿಳಿಯುವ ದಿನ.

ಚುನಾವಣೆಯಲ್ಲಿ ಯಾವ ಪಕ್ಷಗಳು ಎಷ್ಟು ಸೀಟುಗಳನ್ನು ಗಳಿಸುತ್ತದೆ ಎಂಬುವುದರ ಬಗ್ಗೆ ಹಲವಾರು ಎಕ್ಸಿಟ್ ಪೋಲ್‌ಗಳು ಬಂದಿವೆ. ಹಲವಾರು ಚುನಾವಣೆ ಭವಿಷ್ಯ ಈಗಾಗಲೇ ಬಂದಿದೆ. ಅದರಲ್ಲೂ ಖ್ಯಾತ ಕುಂಡಲಿ ಜ್ಯೋತಿಷಿ ಕೆಎಂ ಸಿನ್ಹಾ ಅವರು ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷಿ ನುಡಿದ ಭವಿಷ್ಯದಲ್ಲಿ ಯಾರಿಗೆ ಹೆಚ್ಚು ಸೀಟುಗಳು ಸಿಗಲಿದೆ?
ಕುಂಡಲಿ ನೋಡಿ ಜ್ಯೋತಿಷ್ಯ ಹೇಳುವುದರಲ್ಲಿ ಪ್ರಸಿದ್ಧವಾಗಿರುವ ಕೆಎಂ ಸಿನ್ಹಾರವರು ಎನ್‌ಡಿಎ 400ರ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದ್ದಾರೆ, ಅದರಲ್ಲೂ ಬಿಜೆಪಿ 315 ಸ್ಥಾನ ಗೆಲ್ಲುವುದು ಪಕ್ಕಾ ಎಂಬ ಭವಿಷ್ಯವಾಣಿ ನುಡಿದಿದ್ದಾರೆ, ಇದರ ಜೊತೆಗೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿರುಗಾಳಿಯೇ ಬೀಸಲಿದೆ ಎಂದು ಭವಿಷ್ಯ ನುಡಿದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅವರು ನುಡಿದ ಭವಿಷ್ಯ ಮಿತ್ರ ಪಕ್ಷಗಳಿಗೆ ದುಃಸ್ವಪ್ನವಾಗಿದೆ
ಸಿನ್ಹ ಅವರು ಪಶ್ಚಿಮ ಬಂಗಾಳದಲ್ಲಿ 25 ರಿಂದ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಮಮತಾ ಬ್ಯಾನರ್ಜಿ ಕಟ್ಟಿಕೊಂಡಿರುವ ಭದ್ರಕೋಟೆಯಲ್ಲಿ ಬಿಜೆಪಿ ಅಷ್ಟೊಂದು ಸೀಟುಗನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರೂ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಇದಲ್ಲದೆ ಅವರು ಹಿಮಾಚಲದಲ್ಲಿ 4, ಉತ್ತರಖಂಡದ 5 ಸ್ಥಾನಗಳು ಬಿಜೆಪಿ ಪಾಲಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಹು-ಕೇತು ಸ್ಥಾನ ನೋಡಿ ಭವಿಷ್ಯ ನುಡಿದಿದ್ದಾರೆ
ಸಿನ್ಹಾರವರು ರಾಹು-ಕೇತು ಸ್ಥಾನ ಎನ್‌ಡಿಎ ಸರ್ಕಾರಕ್ಕೆ ಅನುಕೂಲಕರವಾಗಿದೆ. ಎನ್‌ಡಿಎ 400 ಗಡಿ ದಾಟಲಿದೆ, ಬಿಜೆಪಿ 315 ಸ್ಥಾನ ಗೆಲ್ಲಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಇವರ ಭವಿಷ್ಯವನ್ನು ಕಾಂಗ್ರೆಸ್‌ನವರು ಮೋದಿ ಭಕ್ತರ ಭವಿಷ್ಯ ಎಂದು ಟೀಕೆ ಮಾಡಿದರೆ ಇವರು ಮಾತ್ರ ನನ್ನ ಭವಿಷ್ಯ ಮಾತ್ರ ಇದುವರೆಗೆ ಸುಳ್ಳಾಗಿಲ್ಲ ಎಂಬ ಹೇಳುತ್ತಿದ್ದಾರೆ.
ಜಯ ಯಾರಿಗೆ ಒಲಿದಿದೆ ಎಂದು ಜೂನ್ 4ಕ್ಕೆ ಗೊತ್ತಾಗಲಿದೆ
ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ, ಎನ್‌ಡಿಎ ಸರಕಾರಕ್ಕೆ ಅಷ್ಟೇ ಸವಾಲುಗಳನ್ನು ಇಂಡಿಯಾ ಮೈತ್ರಿಕೂಟ ನೀಡಿತ್ತು, ಜನರ ಒಲವು ಯಾರ ಕಡೆಗೆ ಇದೆ ಎಂಬ ಕುತೂಹಲ ಕ್ಷಣ ಕ್ಷಣ ಹೆಚ್ಚಾಗುತ್ತಿದೆ...



Click it and Unblock the Notifications
