Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಶಿವನ ಗುಣಗಳಿರುವ ಪತಿಯನ್ನೇ ಮಹಿಳೆಯರು ಬಯಸೋದ್ಯಾಕೆ?
ಕನ್ಯೆಯರು ಹೆಚ್ಚಾಗಿ ಶಿವನನ್ನು ಆರಾಧನೆ ಮಾಡುತ್ತಾರೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಸೋಮವಾರ ಬೆಳ್ಳ ಬೆಳಗ್ಗೆ ಎದ್ದು ಭಕ್ತಿಯಿಂದ ಶಿವನನ್ನು ಭಜಿಸಿದರೆ ಶಿವನಂತಹ ಪತಿ ಲಭಿಸುತ್ತಾನೆ ಎಂಬ ನಂಬಿಕೆ ಇದೆ.

ಅಷ್ಟಕ್ಕು ಕನ್ಯೆಯರು ಶಿವನಂತಹ ಪತಿ ಬೇಕು ಅಂತ ಬಯಸೋದ್ಯಾಕೆ? ಶಿವನಲ್ಲಿ ಆದರ್ಶ ಪತಿಯ ಗುಣಗಳನ್ನು ನೋಡಲು ಕಾರಣವೇನು? ಶಿವ ಹಾಗೂ ಪಾರ್ವತಿಯ ಸಂಬಂಧ ಹೇಗಿತ್ತು? ಮಹಾದೇವನ ಗುಣಗಳನ್ನು ಹೊಂದಿರುವ ಪತಿಯನ್ನು ಪಡೆದರೆ ದಾಂಪತ್ಯ ಚೆನ್ನಾಗಿರುತ್ತಾ? ಎಲ್ಲವನ್ನೂ ಹೇಳ್ತೀವಿ.

ಸತಿಯನ್ನು ತನ್ನ ಹೃದಯದಲ್ಲಿ ಜೋಪಾನವಾಗಿಟ್ಟಿದ್ದ ಶಿವ
ಸತಿಯು ತನ್ನ ಪತಿಗಾದ ಅವಮಾನವನ್ನು ತಾಳಲಾರದೆ ತನ್ನ ತಂದೆ ನಡೆಯುಸಿದ್ದ ಯಜ್ಞದ ಅಗ್ನಿ ಕುಂಡದೊಳಗಡೆ ಹಾರಿ ಪ್ರಾಣ ಬಿಡುತ್ತಾಳೆ. ಆಗ ಮಹಾದೇವನು ಪಟ್ಟ ದುಃಖ ಹಾಗೂ ಕೋಪವನ್ನು ಯಾರಿಂದಲೂ ನೋಡೋದಕ್ಕೆ ಸಾಧ್ಯವೇ ಇಲ್ಲ. ಶಿವ ಆಕೆಯ ದೇಹದ ಮುಂದೆ ಅಳುತ್ತಾ ಕೂರುತ್ತಾನೆ. ಆಕೆಯನ್ನು ಕಳೆದುಕೊಂಡ ನೋವನ್ನು ತಡೆದುಕೊಳ್ಳುವ ಶಕ್ತಿಯು ಶಿವನಲ್ಲಿ ಇರಲಿಲ್ಲ. ಆತನಿಗೆ ದೇಹ ಶಾಶ್ವತವಲ್ಲ ಎಂಬ ಸತ್ಯ ಗೊತ್ತಿತ್ತು. ಈ ಘಟನೆಯ ನಂತರ ಶಿವನು ದುಃಖದಲ್ಲಿ ಮುಳುಗಿ ಹೋಗುತ್ತಾನೆ. ಮತ್ತು ಸತಿಯನ್ನು ಬಿಟ್ಟು ಬೇರೆ ಯಾವ ಮಹಿಳೆಗೂ ಆತನ ಜೀವನದಲ್ಲಿ ಪ್ರವೇಶವಿರಲಿಲ್ಲ. ಹೌದು ಇಂತಹ ಗುಣವಿರುವ ಪತಿಗಾಗಿ ಮಹಿಳೆಯರು ಹುಡುಕಾಡೋದು.
ಪಾರ್ವತಿಯ ಬಗ್ಗೆ ಶಿವನಿಗೆ ಅತೀವ ಗೌರವವಿತ್ತು
ಶಿವ ತನ್ನ ಪತ್ನಿ ಪಾರ್ವತಿಯನ್ನು ತುಂಬಾನೇ ಪ್ರೀತಿಸುತ್ತಿದ್ದನು. ಮಾತೆ ಪಾರ್ವತಿ ಮಾಡಲಿಚ್ಚಿಸಿದ ಯಾವ ಕಾರ್ಯಕ್ಕೂ ಶಿವ ಅಡ್ಡಿಯಾಗಿರಲಿಲ್ಲ. ಬದಲಾಗಿ ಆಕೆಯ ಅಭಿಪ್ರಾಯಗಳನ್ನು ಆತ ಗೌರವಿಸುತ್ತಿದ್ದನು. ತನ್ನ ಪತ್ನಿಯನ್ನು ಶಿವ ಪ್ರೀತಿಯಿಂದ ಕಾಣುತ್ತಿದ್ದನು ಹಾಗೂ ಎಂದಿಗೂ ಆಕೆಯ ಮೇಲೆ ಕೋಪಗೊಂಡವನೇ ಅಲ್ಲ. ಹೆಣ್ಣು ಮಕ್ಕಳು ಕೂಡ ಇಂತಹ ಗುಣವುಳ್ಳ ಹುಡುಗನನ್ನೇ ಪತಿಯನ್ನಾಗಿ ಬಯಸುತ್ತಾರೆ.

ಏಳೇಳು ಜನ್ಮದಲ್ಲೂ ಸತಿಯನ್ನೇ ಬಯಸಿದ್ದ ಶಿವ
ಶಿವನಿಗೆ ಸತಿಯ ಹೊರತಾಗಿ ಜೀವನದಲ್ಲಿ ಬೇರೇನೂ ಬೇಕಿರಲಿಲ್ಲ. ಸತಿಯು ಕೂಡ ಎಷ್ಟು ಜನ್ಮ ಎತ್ತಿ ಬಂದರೂ ಶಿವನೇ ತನ್ನ ಗಂಡನಾಗಬೇಕೆಂದು ಬಯಸಿದ್ದಳು. ಹೀಗಾಗಿ ಮತ್ತೆ ಸತಿ ದೇವಿಯು ಮಾತೆ ಪಾರ್ವತಿಯಾಗಿ ಜನ್ಮ ತಾಳುತ್ತಾಳೆ. ಇದು ಆಕೆಗೆ ಎರಡನೇ ಜನ್ಮವಾಗಿತ್ತು. ಶಿವನನ್ನು ಪಡೆಯಲು ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕಠಿಣ ತಪ್ಪಸ್ಸನ್ನು ಮಾಡಿ ಕೊನೆಗೂ ಶಿವನನ್ನು ವರಿಸುತ್ತಾಳೆ. ಹೌದು, ಶಿವನಿಗೂ ಅಷ್ಟೇ ಎಷ್ಟು ಜನ್ಮವೆತ್ತಿ ಬಂದರೂ ಸತಿಯೇ ತನ್ನ ಮಡದಿಯಾಗಬೇಕು ಎಂದು ಬಯಸಿದ್ದನು. ಪ್ರತಿಯೊಬ್ಬ ಹೆಣ್ಣಿಗೂ ತಾನು ಮದುವೆಯಾಗುವ ಹುಡುಗ ಇದೇ ರೀತಿ ಇರಬೇಕೆಂದು ಇಚ್ಚಿಸುತ್ತಾಳೆ.
ಶಿವನು ತನ್ನ ಪತ್ನಿಗೆ ಸ್ನೇಹಿತ ಹಾಗೂ ಗುರುವಾಗಿದ್ದನು
ಶಿವನು ತನ್ನ ಪತ್ನಿಯ ಜೊತೆಗೆ ಗಂಡನಂತಿರಲಿಲ್ಲ ಬದಲಾಗಿ ಒಳ್ಳೆಯ ಸ್ನೇಹಿತ ಹಾಗೂ ಗುರುವಾಗಿದ್ದನು. ಮಾತೆ ಪಾರ್ವತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದ ಹಾಗೂ ಆಕೆಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದನು. ಅಮರನಾಥ ಗುಹೆಯಲ್ಲಿ ಶಿವನು ಪಾರ್ವತಿಗೆ ಹುಟ್ಟು ಮತ್ತು ಸಾವಿನ ಬಗೆಗಿನ ಸತ್ಯವನ್ನು ತಿಳಿಸಿದ್ದನು. ಸ್ನೇಹಿತರಂತಿದ್ದ ಶಿವ-ಪಾರ್ವತಿಯು ಒಟ್ಟಾಗಿ ಆಟವಾಡುತ್ತಿದ್ದರು, ಭಕ್ತರಿಗೆ ಜೊತೆಯಾಗಿ ವರ ನೀಡುತ್ತಿದ್ದರು. ಹಾಗೂ ಶಿವನು ಪಾರ್ವತಿಗೆ ಅನೇಕ ಕಥೆಗಳನ್ನು ಹೇಳುತ್ತಿದ್ದನು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪ್ರತಿ ಮಹಿಳೆಯು ಸ್ನೇಹಿತನಂತಿರುವ ಪತಿಯನ್ನೇ ಇಷ್ಟಪಡುತ್ತಾರೆ.
ಪತ್ನಿಗೂ ಸಮಾನತೆ ನೀಡಿದ್ದ ಶಿವ
ಪತ್ನಿಯು ಯಾವತ್ತಿಗೂ ತನ್ನಗಿಂತ ಕೀಳು ಎಂಬ ಭಾವನೆಯಿಂದ ಆಕೆಯನ್ನು ಕಂಡಿರಲಿಲ್ಲ. ಆಕೆ ನನಗೆ ಸಮಾನಳು ಎಂದೇ ಭಾವಿಸಿದ್ದನು. ಹೀಗಾಗಿ ಜಗತ್ತಿನಲ್ಲಿ ಇಂದು ಶಿವನಿಗೆ ನೀಡುವಷ್ಟೇ ಪ್ರಾಶಸ್ತ್ಯವನ್ನು ಆತನ ಪತ್ನಿ ಪಾರ್ವತಿಗೂ ನೀಡುತ್ತಾರೆ. ರುಕ್ಮಿಣಿ, ಸೀತಾ, ಸತ್ಯಭಾಮೆಗೆ ಪಾರ್ವತಿಗೆ ಇರುವಷ್ಟು ಪ್ರಾಮುಖ್ಯತೆ ಇಲ್ಲ. ಶಿವರಾತ್ರಿಯಲ್ಲಿ ಹೇಗೆ ಶಿವ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆಯೋ ಅದೇ ರೀತಿ ನವರಾತ್ರಿ ಪೂಜೆಯಲ್ಲಿ ಪಾರ್ವತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹೀಗಾಗಿ ಶಿವನ ಪತ್ನಿಯಷ್ಟೇ ಆತನಿಗೆ ಸಮನಾಗಿದ್ದಾಳೆ. ಶಿವ ಎಂದರೆ ಶಕ್ತಿ. ಶಕ್ತಿಎಂದರೆ ಶಿವ. ಶಿವನನ್ನು ನಾವು ಅರ್ಧನಾರೀಶ್ವರ ಎಂದು ಸಂಭೋದಿಸುತ್ತೇವೆ. ಕಾರಣ ಶಿವನ ದೇಹದ ಅರ್ಧಭಾಗದಲ್ಲಿ ಮಾತೆ ಪಾರ್ವತಿ ಇದ್ದಾಳೆ. ಹೀಗಾಗಿ ಪತ್ನಿಗೆ ಪ್ರಾಮುಖ್ಯತೆ ನೀಡುವ ಶಿವನಂತ ಪತಿಯನ್ನು ಹೆಂಗಳೆಯರು ಬಯಸುತ್ತಾರೆ.

ಶಿವನಂತಹ ಪತಿ ಇರಬೇಕು
ಅದೊಂದು ಮಾತಿದೆಯಲ್ಲ ರಾಮನಂತಹ ಮಗಬೇಕು, ಶ್ರೀ ಕೃಷ್ಣನಂತಹ ಪ್ರೇಮಿಬೇಕು ಹಾಗೂ ಶಿವನಂತಹ ಪತ್ನಿಬೇಕು ಅಂತ. ಯಾವುದೇ ಮದುವೆ ಸಮಾರಂಭಕ್ಕೆ ಬಂದ ಸಂಬಂಧಿಕರು ಶಿವ-ಪಾರ್ವತಿಯಂತೆ ಬಾಳಿ ಎಂದು ಆಶಿರ್ವದಿಸೋದು ಇದೇ ಕಾರಣಕ್ಕೆ. ಪಾರ್ವತಿಯು ದೀರ್ಘ ತಪಸ್ಸು ಮಾಡಿ ಶಿವನನ್ನು ಪಡೆದಿದ್ದಳು. ಶಿವರಾತ್ರಿಯ ದಿನ ನಾವು ಶಿವ ಹಾಗೂ ಪಾರ್ವತಿಯ ಮದುವೆಯ ದಿನವನ್ನು ಆಚರಣೆ ಮಾಡುತ್ತೇವೆ. ಸುಂದರ ದಾಂಪತ್ಯಕ್ಕೆ ಇವರಿಬ್ಬರು ಮಾದರಿಯಾಗಿದ್ದಾರೆ.
ಸಾಮಾನ್ಯ ಸನ್ಯಾಸಿಯಂತೆ ಬದುಕಿದ್ದ ಶಿವ
ಶಿವ ಧರ್ಮ ಹಾಗೂ ತಪಸ್ಸಿನಲ್ಲಿ ನಂಬಿಕೆಯುಳ್ಳವನಾಗಿದ್ದನು. ಆತ ನೈತಿಕವಾಗಿ ವರ್ತಿಸುತ್ತಿದ್ದನು ಹಾಗೂ ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನು ಪ್ರತ್ಯೇಕಿಸುವ ಗುಣ ಅವನಲ್ಲಿತ್ತು. ಶಿವ ರಾಜನಂತೆ ಬದುಕಲಿಲ್ಲ ಆತ ಸನ್ಯಾಸಿಯಂತಿದ್ದ. ಸರಳ ಸ್ವಭಾವದವನಾಗಿದ್ದನು. ಪ್ರತಿಯೊಬ್ಬ ಹೆಣ್ಣು ಒಳ್ಳೆಯ ಗುಣವಿರುವ ಪತಿಯನ್ನೇ ಬಯಸುತ್ತಾಳೆ. ಒಂದು ವೇಳೆ ನಮ್ಮ ಗುಣಗಳಿಗೆ ಹೊಂದದ ವ್ಯಕ್ತಿಯನ್ನು ಮದುವೆಯಾದರೆ ಜೀವನ ಉತ್ತಮವಾಗಿ ಇರುವುದಿಲ್ಲ.
ಮಹಿಳೆಯರಿಗೆ ಶಿವನಂತಹ ಪತಿಯೇ ಯಾಕೆ ಬೇಕು?
ಒರ್ವ ಮಹಿಳೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ ಅವನನ್ನೇ ಪಡೆಯಬೇಕು ಎಂದು ಬಯಸುತ್ತಾಳೆ. ತನ್ನ ದೇಹ, ಆತ್ಮ, ಪ್ರೀತಿ ಎಲ್ಲವನ್ನೂ ಆತನಿಗಾಗಿ ಧಾರೆ ಎರೆಯುತ್ತಾಳೆ. ಹೀಗಿರುವಾಗ ತನ್ನ ಭಾವನೆಗಳನ್ನು ಅಥೈಸಿಕೊಂಡು, ತನ್ನನ್ನೇ ಪ್ರೀತಿಸುವ ತಿದ್ದಿ ಬುದ್ಧಿ ಹೇಳುವ ಪತಿಯನ್ನು ಆಕೆ ಬಯಸುವುದು ತಪ್ಪಾ? ಶಿವನಲ್ಲಿ ಈ ಎಲ್ಲಾ ಗುಣಗಳು ಇರುವುದರಿಂದ ತನ್ನ ಪತಿಯು ಶಿವನಂತಿದ್ದರೆ ಉತ್ತಮ ಎಂದು ಅವರು ಭಾವಿಸುತ್ತಾರೆ.
ಇತ್ತೀಚಿನ ಮಾರ್ಡನ್ ಜಗತ್ತಿನಲ್ಲಿ ಶಿವನಂತಹ ಪತಿ ಸಿಗುವುದು ತುಂಬಾನೇ ವಿರಳ. ಹೀಗಾಗಿ ಪತಿಯಾಗುವವನು ಶಿವನಂತೆ ಇರಬೇಕು. ಹಾಗೂ ಏಳೇಳು ಜನ್ಮಕ್ಕೂ ಆತನ ಜೊತೆಯಲ್ಲೇ ಕಳೆಯಬೇಕು ಎಂದು ಬಯಸುತ್ತಾರೆ.



Click it and Unblock the Notifications