Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ದಿಂಬಿನ ಕೆಳಗೆ ಈ ವಸ್ತುಗಳನ್ನು ಇಡುವುದರಿಂದ, ಜಾತಕದಲ್ಲಿರುವ ಸರ್ವ ಗ್ರಹದೋಷಗಳು ನಿವಾರಣೆಯಾಗುವುದು!
ಜೀವನದಲ್ಲಿ ಗ್ರಹಗತಿಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಸರಿಯಾಗಿದ್ದರೂ, ಏನೂ ಕೈಗೂಡೂತ್ತಿಲ್ಲ ಎಂದಾದಾಗ ಮೊದಲು ನೆನಪಾಗುವುದೇ ಇದು. ನಮ್ಮ ಜೀವನದ ಏರುಪೇರುಗಳಿಗೆ ಗ್ರಹಗತಿಗಳಲ್ಲಿನ ದೋಷವೂ ಒಂದು ಕಾರಣೀಭೂತವಾಗಿರುತ್ತವೆ. ಇದನ್ನು ಸರಿಪಡಿಸಲು, ಗ್ರಹಗಳ ಶುಭ ಫಲಿತಾಂಶಗಳನ್ನ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಅದರ ಪ್ರಕಾರ, ಗ್ರಹಗಳ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಈ ವಸ್ತುಗಳನ್ನು ದಿಂಬಿನ ಕೆಳಗೆ ಇಡಬಹುದು.
ಜಾತಕದಲ್ಲಿ ಗ್ರಹಗತಿಗಳ ದೋಷ ನಿವಾರಣೆಗೆ ಪರಿಹಾರ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಜಾತಕದಲ್ಲಿ ಸೂರ್ಯ ದೋಷವಿದ್ದರೆ:
ನಿಮ್ಮ ಜಾತಕದಲ್ಲಿ ಗ್ರಹಗಳ ರಾಜನಾದ ಸೂರ್ಯನ ಸ್ಥಿತಿ ಸರಿ ಇಲ್ಲದೇ ಇದ್ದರೆ ಅಥವಾ ಸೂರ್ಯನ ದುಷ್ಪರಿಣಾಮ ಜೀವನದಲ್ಲಿ ಬೀರಿದ್ದರೆ ರಾತ್ರಿ ಮಲಗುವ ಮುನ್ನ ಹಾಸಿಗೆಯ ಕೆಳಗೆ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟುಕೊಳ್ಳಿ, ಜೊತೆಗೆ ದಿಂಬಿನ ಕೆಳಗೆ ಶ್ರೀಗಂಧದ ತುಂಡನ್ನು ಇಡಿ. ಬೆಳಿಗ್ಗೆ ಎದ್ದು ಆ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ಸೂರ್ಯನ ಶುಭ ದೆಸೆ ನಿಮ್ಮ ಜೀವನದ ಮೇಲೆ ಬೀಳುತ್ತದೆ ಮತ್ತು ಕ್ಷೇತ್ರದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ.

ಜಾತಕದಲ್ಲಿ ಶುಕ್ರದೋಷವಿದ್ದರೆ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರನನ್ನು ಜಾತಕದಲ್ಲಿ ಸೌಮ್ಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಭೌತಿಕ ಸೌಕರ್ಯಗಳು, ಆಭರಣಗಳು, ಐಶ್ವರ್ಯ, ಸೌಂದರ್ಯ, ಪ್ರೀತಿ ಇತ್ಯಾದಿಗಳಿಗೆ ಕಾರಣವಾದ ಗ್ರಹವಾಗಿದೆ. ನಿಮ್ಮ ಜಾತಕದಲ್ಲಿ ಶುಕ್ರನ ದೆಸೆ ಸರಿಯಾಗಿ ನಡೆಯದಿದ್ದರೆ ಮತ್ತು ಶುಕ್ರನು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಈ ಎಲ್ಲಾ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕಾಗಿ ಬೆಳ್ಳಿಯ ಮೀನನ್ನು ದಿಂಬಿನ ಕೆಳಗೆ ಇರಿಸಿ ಮತ್ತು ಬೆಳ್ಳಿಯ ಪಾತ್ರೆಯನ್ನು ಹಾಸಿಗೆಯ ಕೆಳಗೆ ನೀರು ತುಂಬಿಸಿಡಿ. ಹೀಗೆ ಮಾಡುವುದರಿಂದ ಶುಕ್ರನ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು.

ಜಾತಕದಲ್ಲಿ ಚಂದ್ರ ದೋಷವಿದ್ದರೆ:
ಜ್ಯೋತಿಷ್ಯ ಶಾಸ್ತ್ರದಲ್ಲಿ, ಚಂದ್ರನನ್ನು ಐಶ್ವರ್ಯ, ಸಂತೋಷ, ವ್ಯಾಪಾರ, ಮಾನಸಿಕ ಶಾಂತಿ ಇತ್ಯಾದಿಗಳ ಕಾರಣ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಎಲ್ಲಾ ವಿಷಯಗಳು ಅದರ ಅಶುಭ ಪರಿಣಾಮದಿಂದ ಪ್ರಭಾವಿತವಾಗಿರುತ್ತದೆ. ನಿಮ್ಮ ಜಾತಕದಲ್ಲಿ ಚಂದ್ರದೇವನ ಸ್ಥಿತಿ ಸರಿಯಿಲ್ಲದಿದ್ದರೆ ಅಥವಾ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ, ಹಾಸಿಗೆಯ ಕೆಳಗೆ ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಇರಿಸಿ ಮತ್ತು ಬೆಳ್ಳಿಯ ಉಂಗುರ ಅಥವಾ ಇತರ ಆಭರಣಗಳನ್ನು ದಿಂಬಿನ ಕೆಳಗೆ ಇರಿಸಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ಕ್ರಮೇಣ ನಿಮ್ಮ ಜೀವನದಲ್ಲಿನ ಸಮಸ್ಯೆಗಳು ಸಹ ಕೊನೆಗೊಳ್ಳಲು ಪ್ರಾರಂಭಿಸುತ್ತವೆ.

ಜಾತಕದಲ್ಲಿ ಮಂಗಳದೋಷವಿದ್ದರೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಧಿಪತಿಯಾದ ಮಂಗಳನು ಶಕ್ತಿ, ಯೋಧ, ಧೈರ್ಯ, ನಿರ್ಭಯ ಇತ್ಯಾದಿಗಳಿಗೆ ಕಾರಣನಾದ ಗ್ರಹ. ಜಾತಕದಲ್ಲಿ ಮಂಗಳನ ಸ್ಥಿತಿ ಸರಿಯಿಲ್ಲದಿದ್ದರೆ ಶತ್ರುಗಳ ಭಯ ಹೆಚ್ಚಾಗಿ, ಅವರು ಮಾಡಿದ ಕೆಲಸ ಸಹ ಹಾಳಾಗುತ್ತದೆ. ಆದ್ದರಿಂದ ಮಂಗಳ ದೋಷವನ್ನು ತೆಗೆದುಹಾಕಲು, ಹಾಸಿಗೆಯ ಕೆಳಗೆ ಕಂಚಿನ ಪಾತ್ರೆಯಲ್ಲಿ ನೀರನ್ನು ಇರಿಸಿ ಮತ್ತು ದಿಂಬಿನ ಕೆಳಗೆ ಕೆಲವು ಆಭರಣಗಳನ್ನು ಇಡಿ. ಹೀಗೆ ಮಾಡುವುದರಿಂದ ಮಂಗಳನ ಅಶುಭ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಮಂಗಳದೋಷವೂ ಅಂತ್ಯವಾಗುತ್ತದೆ.

ಜಾತಕದಲ್ಲಿ ಬುಧದೋಷವಿದ್ದರೆ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಬುಧನನ್ನು ವಿಜ್ಞಾನ, ವ್ಯವಹಾರ, ಸಂವಹನ, ಸಂಶೋಧನೆ ಇತ್ಯಾದಿಗಳಿಗೆ ಕಾರಣ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಬುಧನ ಸ್ಥಾನವು ಸರಿಯಾಗಿಲ್ಲದಿದ್ದರೆ ಈ ಎಲ್ಲಾ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕಾಗಿ ದಿಂಬಿನ ಕೆಳಗೆ ಉಂಗುರ, ಕಿವಿಯೋಲೆ, ಬಳೆ ಮುಂತಾದ ಯಾವುದೇ ಬಂಗಾರದ ಆಭರಣಗಳನ್ನು ಇಟ್ಟರೆ ಅವುಗಳಿಂದ ಲಾಭವನ್ನು ಪಡೆಯಬಹುದು ಮತ್ತು ಬುಧಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಜಾತಕದಲ್ಲಿ ಗುರು ದೋಷವಿದ್ದರೆ:
ದೇವತೆಗಳ ಗುರುವಾದ ಗುರು ಗ್ರಹವನ್ನು ಅದೃಷ್ಟ ಮತ್ತು ಸಮೃದ್ಧಿಯ ಕಾರಕ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಗುರುವು ಮಂಗಳಕರ ಸ್ಥಾನದಲ್ಲಿದ್ದರೆ, ಅದೃಷ್ಟವು ಯಾವಾಗಲೂ ಅವನ ಜೊತೆಯಿರುತ್ತದೆ, ಆತ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಆದರೆ ಗುರುವು ಶುಭ ಫಲಿತಾಂಶಗಳನ್ನು ನೀಡದಿದ್ದರೆ, ಅನೇಕ ವಿಷಯಗಳಲ್ಲಿ ತೊಂದರೆ ಉಂಟಾಗುತ್ತದೆ. ಇದಕ್ಕಾಗಿ, ದಿಂಬಿನ ಕೆಳಗೆ ಅರಿಶಿನದ ಉಂಡೆಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಇಡಿ. ಈ ರೀತಿ ಮಾಡುವುದರಿಂದ ಗುರುವು ಶುಭ ಫಲಿತಾಂಶಗಳನ್ನು ನೀಡುತ್ತಾನೆ ಮತ್ತು ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.

ಜಾತಕದಲ್ಲಿ ಶನಿ ದೇವದೋಷವಿದ್ದರೆ:
ಜಾತಕದಲ್ಲಿ ನ್ಯಾಯಾಧಿಪತಿಯಾದ ಶನಿಯು ಅಶುಭ ಸ್ಥಾನದಲ್ಲಿದ್ದರೆ ಧೈಯ ಅಥವಾ ಸಾಡೆ ಸತಿಯ ಅಶುಭ ಪರಿಣಾಮವು ವ್ಯಕ್ತಿಯ ಮೇಲೆ ಬೀಳುತ್ತದೆ ಮತ್ತು ಅದು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆಯಿಲ್ಲ. ನೀವು ಶನಿ ಗ್ರಹದ ಅಶುಭ ಪ್ರಭಾವದಿಂದ ಬಳಲುತ್ತಿದ್ದರೆ ಮತ್ತು ಶನಿ ದೋಷವನ್ನು ತೊಡೆದುಹಾಕಲು ಬಯಸಿದರೆ, ಹಾಸಿಗೆಯ ಕೆಳಗೆ ಕಬ್ಬಿಣದ ಪಾತ್ರೆಯಲ್ಲಿ ತುಂಬಿದ ನೀರನ್ನು ಇರಿಸಿ ಮತ್ತು ಬೆಳಿಗ್ಗೆ ಅದನ್ನು ಕುಡಿಯಿರಿ ಜೊತೆಗೆ ಕಬ್ಬಿಣದ ಉಂಗುರ ಅಥವಾ ನೀಲಮಣಿಯನ್ನು ದಿಂಬಿನ ಕೆಳಗೆ ಇರಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿಯ ಸ್ಥಾನವು ಮಂಗಳಕರವಾಗಿರುತ್ತದೆ ಮತ್ತು ಧೈಯ ಮತ್ತು ಸಾಡೆ ಸತಿಯ ಅಶುಭ ಪರಿಣಾಮವೂ ಕಡಿಮೆಯಾಗುತ್ತದೆ.



Click it and Unblock the Notifications











