Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸತ್ತರೂ ಮನುಷ್ಯನ ಬಿಡೋದಿಲ್ಲ ಈ 5 ಸಂಗತಿಗಳು
ಮನುಷ್ಯ ಜೀವನ ನಶ್ವರ ಎಂಬ ಸತ್ಯ ಗೊತ್ತಿದ್ದರೂ ಕೂಡ ಜನ ತಮ್ಮ ಸ್ವಾರ್ಥ, ದುರಾಸೆಯನ್ನು ಬಿಡೋದಿಲ್ಲ. ನಾವೊಂದು ಗಾದೆ ಮಾತು ಕೇಳಿರ್ತೀವಿ. ಬೆತ್ತಲೆಯಾಗಿ ಈ ಜಗತ್ತಿಗೆ ಕಾಲಿಟ್ಟು ಸಾಯುವಾಗಲು ಅದೇ ಸ್ಥಿತಿಯಲ್ಲಿ ಖಾಲಿ ಕೈಯಲ್ಲಿ ಮರುಳುತ್ತಾರೆ ಎಂದು. ಆದರೆ ಆ ಮಾತು ಸುಳ್ಳು.

ನಿಮಗೊತ್ತಾ? ನಾವು ಸತ್ತಾಗ ನಮ್ಮ ಜೊತೆ ಆ ವಸ್ತುಗಳು ಬರುತ್ತಂತೆ. ಈ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳ ಫಲವಾಗಿ ಸತ್ತಾಗ ಅವುಗಳು ನಮ್ಮ ಹಿಂದೆಯೇ ಬರುತ್ತಂತೆ. ಅಷ್ಟೇ ಅಲ್ಲ ಮುಂದಿನ ಜನ್ಮದಲ್ಲೂ ನಮ್ಮ ಜೊತೆಗಿರುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ನಾವು ಸತ್ತಾಗ ನಮ್ಮೊಂದಿಗೆ ಬರುವ ಸಆ ಐದು ವಸ್ತುಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಸಾಲ
ನೀವೇನಾದರೂ ಸಾಲಗಾರರಾಗಿ ಸತ್ತರೆ ಆ ಸಾಲದ ಹೊರೆ ನಿಮ್ಮನ್ನು ಏಳೇಳು ಜನ್ಮಕ್ಕೂ ಬಿಡುವುದಿಲ್ಲ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಜನ್ಮದಲ್ಲಿ ನೀವು ಯಾರ ಬಳಿಯಾದರೂ ಸಾಲ ಮಾಡಿದ್ದರೆ ಅದನ್ನೂ ಸಾಯುವ ಮೊದಲು ತೀರಿಸಲು ಪ್ರಯತ್ನಿಸಿ. ಇಲ್ಲವಾದರೆ ಆ ಸಾಲದ ಹೊರೆ ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಯಾಗುತ್ತದೆ. ಬೇರೆ ಯಾವ ರೂಪದಲ್ಲಾದರೂ ನೀವು ಆ ಸಾಲವನ್ನು ತೀರಿಸಲೇಬೇಕಾಗುತ್ತಂತೆ. ಅಥವಾ ನೀವು ಯಾವ ವ್ಯಕ್ತಿಗಾದರೂ ಸಾಲ ಕೊಟ್ಟಿದ್ದು ಆತ ನಿಮ್ಮ ಸಾಲ ತೀರಿಸುವ ಮೊದಲೇ ಸಾವನ್ನಪ್ಪಿದರೆ ಮುಂದಿನ ಜನ್ಮದಲ್ಲಿ ಆತ ನಿಮ್ಮ ಸಾಲ ತೀರಿಸಬೇಕಾಗುತ್ತಂತೆ. ಇದಕ್ಕಾದರೂ ನೀವು ಮತ್ತೆ ಹುಟ್ಟಿ ಬರುತ್ತೀರಾ ಎಂಬ ಉಲ್ಲೇಖವಿದೆ.

2. ಕಾಮ ಮತ್ತು ಆಸೆ
ಶಾಸ್ತ್ರಗಳ ಪ್ರಕಾರ ಒಬ್ಬ ವ್ಯಕ್ತಿಗೆ ಯಾವುದಾರೊಂದರ ಮೇಲೆ ಅತಿಯಾದ ಆಸೆ ಇರುತ್ತದೆ. ಆದರೆ ಅದನ್ನು ಪಡೆದುಕೊಳ್ಳುವ ಮೊದಲೇ ಆ ವ್ಯಕ್ತಿ ಸತ್ತರೆ ಆತನ ಆಸೆ ಪೂರೈಸೋದಿಲ್ಲ. ಅದು ಆತನೊಂದಿಗೆ ಮುಂದಿನ ಜನ್ಮದಲ್ಲಿ ಜೊತೆಯಾಗುತ್ತಂತೆ. ಕಾಮವು ಕೂಡ ಅದೇ ರೀತಿ. ಉದಾಹರಣೆಗೆ ರಾಜ ಭರತನು ಜಿಂಕೆಯೊಂದನ್ನು ತುಂಬಾನೇ ಇಷ್ಟ ಪಟ್ಟಿರುತ್ತಾನೆ. ಕೊನೆಗೆ ಆತ ಅದೇ ನೆನಪಿನಲ್ಲೇ ಸಾವನ್ನಪ್ಪುತ್ತಾನೆ. ಇದರ ಪರಿಣಾಮವಾಗಿ ಆತ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಮರುಹುಟ್ಟು ಪಡೆದುಕೊಳ್ಳುತ್ತಾನೆ. ಯಾವತ್ತು ಕಾಮ ಅಥವಾ ಆಸೆ ನಿಮ್ಮ ಜೀವನದಲ್ಲಿ ಪ್ರಾಬಲ್ಯವಾಗಿರಬಾರದು. ಅಷ್ಟೇ ಅಲ್ಲ ಯಾವುದೇ ವಿಷಯದೊಂದಿಗೆ ಅತಿಯಾದ ಅಟ್ಯಾಚ್‌ಮೆಂಟ್ ಒಳ್ಳೆಯದಲ್ಲ.

3. ಕರ್ಮ
ಕರ್ಮ ಎಂದರೆ ನಮ್ಮ ಪಾಪ ಹಾಗೂ ಪುಣ್ಯಗಳ ಫಲವೇ ಕರ್ಮ. ನಾವು ಈ ಜನ್ಮದಲ್ಲಿ ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಫಲವು ನಮ್ಮನ್ನು ಮುಂದಿನ ಏಳು ಜನ್ಮದವರೆಗೂ ಬಿಡೋದಿಲ್ಲ ಎಂಬ ನಂಬಿಕೆ ಇದೆ. ಇದಕ್ಕೆ ಉದಾಹರಣೆ ಭೀಷ್ಮ. ಮಹಾಭಾರತದ ಯುದ್ಧದ ಸಮಯದಲ್ಲಿ ಭೀಷ್ಮರ ಸಾವಿಗೆ ಸಾವಿರ ಬಾಣಗಳೇ ಹಾಸಿಗೆಯಾಗಿತ್ತು. ಈ ವೇಳೆ ಭೀಷ್ಮರು ಕೃಷ್ಣನನ್ನು ಪ್ರಶ್ನಿಸುತ್ತಾರೆ ನನಗ್ಯಾಕೆ ಇಂತಹ ಕಠಿಣ ಸಾವು ಬಂದೊದಗಿದೆ ಎಂದು. ಆಗ ಕೃಷ್ಣ ಹೇಳುತ್ತಾನೆ ಏಳು ಜನ್ಮದ ಹಿಂದೆ ನೀವು ಸತ್ತ ಹಾವೊಂದನ್ನು ಮುಳ್ಳಿನ ರಾಶಿ ಎಸೆದಿದ್ರಿ ಇದೇ ಕಾರಣಕ್ಕೆ ಈ ಜನ್ಮದಲ್ಲಿ ಈ ರೀತಿ ಶಿಕ್ಷೆಯನ್ನು ಅನುಭವಿಸುತ್ತಿದ್ದೀರಿ ಎಂದು. ಹೌದು, ಸತ್ತರೂ ಕೂಡ ನಾವು ಮಾಡಿದ ಕರ್ಮ ನಮ್ಮ ಬೆನ್ನು ಬಿಡದು.

4. ಸಧ್ಗುಣ
ಹಿರಿಯರು ಮಾತನ್ನು ಕೇಳಿರ್ತೀವಿ ದಾನ ಹಾಗೂ ಸಧ್ಗುಣಗಳು ಎಂದಿಗೂ ನಮ್ಮನ್ನು ಬಿಟ್ಟು ಹೋಗೋದಿಲ್ಲ ಎಂದು. ಈ ವಿಚಾರ ಪುರಾಣಗಳಲ್ಲೂ ಉಲ್ಲೇಖವಾಗಿದೆ. ನೀವು ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ನಿಮಗೆ ಯಾರಾದರೂ ಪರಿಚಯವಿಲ್ಲದ ವ್ಯಕ್ತಿ ಸಹಾಯ ಮಾಡಿದರೆ ಅದು ಅವರು ನಿಮಗೆ ಮಾಡುತ್ತಿರುವ ಸಹಾಯವಲ್ಲ. ಬದಲಾಗಿ ಹಿಂದಿನ ಜನ್ಮದಲ್ಲಿ ನೀವು ಅವರಿಗೆ ಮಾಡಿದ್ದ ಸಹಾಯಕ್ಕೆ ಅವರು ನಿಮಗೆ ಮರು ಸಹಾಯ ಮಾಡುತ್ತಿದ್ದಾರೆ ಎಂದರ್ಥ. ಯಾವ ವ್ಯಕ್ತಿ ನಿರಂತರ ದಾನ, ಧರ್ಮದಲ್ಲಿ ತೊಡಗಿರುತ್ತಾನೋ ಆತ ಮಾಡಿದ ಪುಣ್ಯಕಾರ್ಯಗಳು ಆತ ಸಾಯುವಾಗ ಆತನ ಜೊತೆಗೆ ಹೋಗುತ್ತದೆ.

5. ಮನುಷ್ಯನ ಜ್ಞಾನ
ಜ್ಞಾನವು ಮನುಷ್ಯನನ್ನು ಋಣಾತ್ಮಕ ಚಿಂತನೆಗಳಿಂದ ದೂರ ಇಡುತ್ತದೆ. ನೀವು ಅಗಾಧ ಜ್ಞಾನವನ್ನು ಹೊಂದಿದ್ದರೆ ಎಂತಹ ಮಹಾ ಸಾಧನೆ ಕೂಡ ಮಾಡಬಹುದು. ಮತ್ತು ಇತರರಿಗೂ ನಿಮ್ಮ ಜ್ಞಾನವನ್ನು ಹಂಚಬಹುದು. ಹೀಗಾಗಿ ನಿಮ್ಮ ಸಾವಿಗೂ ಮೊದಲು ಎಷ್ಟಾಗುತ್ತೋ ಅಷ್ಟು ಜ್ಞಾನವನ್ನು ಗಳಿಸಿದರೆ ಉತ್ತಮ. ಉದಾಹರಣೆ ಒಬ್ಬ ವ್ಯಕ್ತಿ ಯಾವ ಗುಣಗಳನ್ನು ಕಲಿತಿರುತ್ತಾನೋ ಸಾಯುವವರೆಗೂ ಅದನ್ನೇ ಆತ ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾನೆ. ಎಷ್ಟು ಸಮಯ ಭೂಮಿಯಲ್ಲಿ ಬದುಕಿರುತ್ತೇವೋ ಗೊತ್ತಿಲ್ಲ ಆದರೆ ಬದುಕಿರುವವರೆಗೂ ಆದಷ್ಟು ಜ್ಞಾನ ಸಂಪಾದಿಸಿ ಮತ್ತು ಸಧ್ಗುಣಗಳನ್ನು ಬೆಳೆಸಿಕೊಳ್ಳಿ. ಭಗವಧ್ಗಿತೆಯಲ್ಲಿ ಉಲ್ಲೇಖವಾಗಿರುವಂತೆ ನಾವು ಮಾಡಿದ ದಾನ ಎಂದಿಗೂ ವ್ಯರ್ಥವಾಗುವುದಿಲ್ಲ.
ಸಾವಿನ ನಂತರ ಯಾವ ಆಸ್ತಿ-ಪಾಸ್ತಿ ನಮ್ಮ ಜೊತೆಗೆ ಬರದಿದ್ದರೂ ಈ ಐದು ವಿಚಾರಗಳನ್ನು ಖಂಡಿತ ನಮ್ಮನ್ನು ಬಿಟ್ಟು ಹೋಗೋದೇ ಇಲ್ಲ. ಬದುಕಿರುವವರೆಗೂ ಆದಷ್ಟು ಒಳ್ಳೆಯ ಕೆಲಸಗಳನ್ನೇ ಮಾಡಿ.



Click it and Unblock the Notifications
