Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೈಸೂರಿಗೆ ಹೋದ್ರೆ ಈ ಈ ವಸ್ತುಗಳನ್ನು ಖರೀದಿಸಲು ಮರೆಯಬೇಡಿ
ಕರ್ನಾಟಕದ ಪ್ರವಾಸೋದ್ಯಮ ಧ್ಯೇಯವಾಕ್ಯ ''ಒಂದು ರಾಜ್ಯ ಹಲವು ಜಗತ್ತು''. ನಮ್ಮ ನಾಡಿನಲ್ಲೇ ಅನೇಕ ಸುಂದರ ಹಾಗೂ ಪುರಾಣಪ್ರಸಿದ್ಧ ಸ್ಥಳಗಳಿದೆ ಆ ಸಾಲಿನಲ್ಲಿ ಮೊದಲಿಗೆ ನಿಲ್ಲೋದೆ ಮೈಸೂರು. ಹೌದು, ಮೈಸೂರು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ. ರಾಜ-ಮಹಾರಾಜರ ಕಾಲದಿಂದಲೂ ವಿಶ್ವ ವಿಖ್ಯಾತಿ ಪಡೆದಿರೋ ನಗರವೇ ಮೈಸೂರು.
ಮೈಸೂರು ಪ್ರವಾಸೋದ್ಯಮಕ್ಕೆ ವಿಶ್ವ ವಿಖ್ಯಾತಿ ಪಡೆದಿರುವ ನಗರ. ನೀವೇನಾದರೂ ಮೈಸೂರಿಗೆ ಭೇಟಿ ಕೊಟ್ಟರೆ ಮೈಸೂರಿನಲ್ಲಿ ಮಾತ್ರ ಲಭ್ಯವಾಗುವ ಹಾಗೂ ಆ ನೆಲೆದಲ್ಲೇ ತಯಾರಾಗೋ ಕೆಲ ವಸ್ತುಗಳನ್ನು ತೆಗೆದುಕೊಳ್ಳಲೇಬೇಕು. ಆ ಅಸಲಿ ವಸ್ತುಗಳು ಮೈಸೂರಿನಲ್ಲಿ ಮಾತ್ರ ಸಿಗೋದು. ಹಾಗಾದ್ರೆ ಮೈಸೂರಿಗೆ ಭೇಟಿ ಕೊಟ್ಟಾಗ ಖರೀದಿಸಲೇಬೇಕಾದ ಆ ವಸ್ತುಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಮೈಸೂರು ಚಿತ್ರಕಲೆ
ಮೈಸೂರು ನಗರವು ಕರಕುಶಲ ಹಾಗೂ ಚಿತ್ರಕಲೆಗೆ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದೆ. ನೀವು ಇಲ್ಲಿಗೆ ಭೇಟಿ ಕೊಟ್ಟಾಗ ಸುಂದರ ಕಲಾಕೃತಿಗಳನ್ನು ಪದರ್ಶಿಸಿರೋದನ್ನ ಕಂಡಿರ್ತಿರಾ. ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯು ಅಜಂತಾ ಯುಗಕ್ಕೆ ಸರಿಸಮಾನ ಅಂತ ಹೇಳಲಾಗುತ್ತದೆ. ನೀವೇನಾದರೂ ಮೈಸೂರಿನಲ್ಲಿ ಶಾಪಿಂಗ್ ಮಾಡಿದ್ರೆ ಪೌರಾಣಿಕ ಪಾತ್ರಗಳನ್ನು ಅದರ ಘಟನೆಯೊಂದಿಗೆ ವಿವರಿಸುವ ಚಿತ್ರಕಲೆಯನ್ನು ಖರೀದಿಸೋದನ್ನ ಮರೀಬೇಡಿ.

2. ಅಗರಬತ್ತಿ
ಮೈಸೂರಿನಲ್ಲಿ ತಯಾರಾಗುವ ಅಗರಬತ್ತಿ ವಿಶ್ವ ವಿಖ್ಯಾತಿ ಪಡೆದಿದೆ. ಇಲ್ಲಿ ತಯಾರಾಗೋ ವಿಶ್ವ ದರ್ಜೆಯ ಅಗರಬತ್ತಿ ಬೇರೆಲ್ಲೂ ಸಿಗೋದಿಲ್ಲ ಅನ್ನಿಸುತ್ತೆ. ನಿಮಗಿಷ್ಟದ ಫ್ಲೇವರ್‌ನ ಅಗರಬತ್ತಿಗಳನ್ನು ಖರೀದಿ ಮಾಡಬಹುದು. ಮಲ್ಲಿಗೆ, ಗುಲಾಬಿ, ಶ್ರೀಗಂಧ, ಲಿಲ್ಲಿ ಹಾಗೂ ಇನ್ನೂ ಹಲವಾರು ವೆರೈಟಿ ಅಗರಬತ್ತಿ ಇಲ್ಲಿ ಲಭ್ಯವಿದೆ.

3. ಮೈಸೂರ್ ಪಾಕ್
ನೀವೇನಾದರೂ ನಿಜವಾದ ಮೈಸೂರ್ ಪಾಕ್‌ನ ಸ್ವಾದ ಸವಿಯಬೇಕಾದರೆ ಮೈಸೂರಿಗೆ ಭೇಟಿ ಕೊಡಬೇಕು. ಆ ಜಾಗದಲ್ಲಿ ಮಾತ್ರ ರಿಯಲ್ ಮೈಸೂರ್ ಪಾಕ್ ಸಿಗೋದು. ಈ ಸ್ವೀಟ್‌ನ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಸುಮಾರು 70 ವರ್ಷಗಳ ಹಿಂದೆ ಮೈಸೂರು ರಾಜರು ಅಡುಗೆಭಟ್ಟರಲ್ಲಿ ವಿಶೇಷವಾದ ತಿಂಡಿಯನ್ನು ತಯಾರಿಸೋದಕ್ಕೆ ಹೇಳ್ತಾರೆ. ಆಗ ಅಡುಗೆ ಭಟ್ಟರು ಹಿಟ್ಟು, ಸಕ್ಕರೆ ಮತ್ತು ಬೆಣ್ಣೆಯಿಂದ ಒಂದು ರುಚಿಕರವಾದ ಸ್ವೀಟ್ ತಯಾರಿಸುತ್ತಾರೆ. ಹಾಗೂ ಅದಕ್ಕೆ ಮೈಸೂರ್ ಪಾಕ್ ಎಂದು ಹೆಸರಿಡಲಾಯಿತು.

4. ಶ್ರೀಗಂಧದ ಉತ್ಪನ್ನಗಳು
ಶ್ರೀಗಂಧದ ಸುವಾಸನೆಯನ್ನು ಬೇರೆ ಯಾವ ವಸ್ತುವು ನೀಡಲಾರದು. ನಮ್ಮ ರಾಜ್ಯ ಶ್ರೀಗಂಧದ ವಿಚಾರಕ್ಕೂ ಪ್ರಖ್ಯಾತಿಯನ್ನು ಪಡೆದಿದೆ. ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು 1916 ರಲ್ಲಿ ಮೈಸೂರು ರಾಜ ಕೃಷ್ಣರಾಜ ಒಡೆಯರ್ ಅವರು ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರೊಂದಿಗೆ ಸೇರಿ ಸ್ಥಾಪಿಸಿದರು. ಸದ್ಯ ಶ್ರೀಗಂಧದಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಸಾಬೂನುಗಳು, ಅಗರಬತ್ತಿಗಳು, ಪುಡಿ ಮತ್ತು ಎಣ್ಣೆಯನ್ನು ಮಾರಾಟ ಮಾಡಲಾಗುತ್ತದೆ.

5. ಕಾಫಿ
ರಾಷ್ಟ್ರದಲ್ಲೇ ಅತ್ಯುತ್ತಮ ಕಾಫಿಯನ್ನು ಉತ್ಪಾದಿಸುವ ಕೂರ್ಗ್ ಮೈಸೂರಿಗೆ ಸಮೀಪ ಇರೋದ್ರಿಂದ ಮೈಸೂರಿನಲ್ಲಿ ನಮಗೆ ಅತ್ಯುತ್ತಮ ಗುಣ ಮಟ್ಟದ ಕಾಫಿ ಲಭ್ಯವಾಗುತ್ತದೆ. ಮೈಸೂರಿನಲ್ಲಿ ಕಾಫಿ ಬೆಳೆಯದಿದ್ದರೂ ಇಲ್ಲಿ ಕಾಫಿ ಮಾರಾಟ ಜೋರಾಗಿದೆ.

6. ಖಾದಿ ಬಟ್ಟೆ
ಕೈಯಿಂದ ನೇಯ್ದ ಖಾದಿ ಹತ್ತಿ ಬಟ್ಟೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಆದರೆ ಮೈಸೂರು ಇದೇ ವಿಚಾರಕ್ಕೆ ಪ್ರಸಿದ್ಧಿ ಪಡೆದಿರೋದು. ಮೈಸೂರಿನಲ್ಲಿ ಕೈಯಿಂದ ಮಾಡಿದ ಖಾದಿ ಬಟ್ಟೆ, ರೆಡಿಮೇಡ್ ಹೊಲಿದ ಖಾದಿ ಬಟ್ಟೆ ಲಭ್ಯವಿದೆ. ಈ ಕ್ಲಾಸಿಕ್ ಫ್ಯಾಬ್ರಿಕ್ ಅನ್ನು ವಿಶೇಷ ಸಾವಯವ ಬಣ್ಣಗಳಿಂದ ಮಾಡಲಾಗಿದೆ.
7. ಕಲ್ಲಿನ ಶಿಲ್ಪಕಲೆಗಳು
ಮೈಸೂರು ಶಿಲ್ಪಕಲೆಗಳಿಗೆ ರಾಜ-ಮಹಾರಾಜರ ಕಾಲದಿಂದ ಪ್ರಸಿದ್ಧಿ. ಕೆ.ವೆಂಕಟಪ್ಪ ಎಂಬುವವರು ಪ್ರತಿಭಾನ್ವಿತ ಶಿಲ್ಪಿಯಾಗಿದ್ದು, ಸೋಪ್‌ಸ್ಟೋನ್‌ನಿಂದ ಅದ್ಭುತವಾದ ಆಕೃತಿಗಳನ್ನು ಕೆತ್ತಲು ಪ್ರಾರಂಭಿಸಿದರು. ಸೋಪ್‌ಸ್ಟೋನ್‌ನಲ್ಲಿ ಕೆತ್ತನೆ ಮಾಡುವುದು ಒಂದು ಕೌಶಲ್ಯವಾಗಿದ್ದು, ಇದಕ್ಕೆ ತುಂಬಾನೇ ಸಮಯ ಹಿಡಿಯುತ್ತದೆ. ಸಾಮಾನ್ಯವಾಗಿ ಕೃಷ್ಣ ಶಿಲಾ ಎಂದು ಕರೆಯಲ್ಪಡುವ ಸೋಪ್‌ಸ್ಟೋನ್ ಬಹು ಬಣ್ಣಗಳಲ್ಲಿ ಲಭ್ಯವಿದೆ. ಮನೆಯ ಅಲಂಕಾರಕ್ಕೂ ಇದನ್ನು ಬಳಸುತ್ತಾರೆ. ನೀವು ಮೈಸೂರಿಗೆ ಭೇಟಿ ಕೊಟ್ಟಾಗ ಖರೀಸಿದಿ.
8. ಮೈಸೂರು ಸಿಲ್ಕ್ ಸೀರೆ
ಮೈಸೂರು ಸಿಲ್ಕ್ ಸೇರೆಗಳ ಬಗ್ಗೆ ಗೊತ್ತಿರದೇ ಇರುವವರು ತುಂಬಾನೇ ಕಡಿಮೆ ಅನ್ನಿಸುತ್ತೆ. ರೇಷ್ಮೇ ಉತ್ಪಾದನೆಯಲ್ಲೂ ಮೊದಲ ಸ್ಥಾನದಲ್ಲಿರುವ ಕರ್ನಾಟಕ ಈ ಪ್ರದೇಶದಲ್ಲಿ ರೇಷ್ಮೆ ಉತ್ಪಾದಿಸುವ ಕಲೆಯ ಬಗ್ಗೆ ಹೇಳುತ್ತದೆ. ಆಕರ್ಷಕವಾದ ರೇಷ್ಮೆ ಸೀರೆಗಳನ್ನು ಅಲಂಕರಿಸುವ ಗೋಲ್ಡನ್ ಝರಿ ಬಾರ್ಡರ್ ನಿಮ್ಮ ವಾರ್ಡ್‌ರೋಬ್‌ಗೆ ಕಡ್ಡಾಯವಾದ ಸೇರಲೇಬೇಕು.
9. ಮೈಸೂರು ಪೇಟ
ಇತ್ತೀಚಿನ ದಿನಗಳಲ್ಲಿ ಪೇಟ ತೊಡುವವರ ಸಂಖ್ಯೆ ತುಂಬಾನೇ ವಿರಳ. ಆದರೆ ಮೈಸೂರು ಪೇಟಕ್ಕೆ ದೊಡ್ಡ ಇತಿಹಾಸವೇ ಇದೆ. ಮೈಸೂರು ಪೇಟವು ರಾಜಮನೆತನದವರು ತೊಡುತ್ತಿದ್ದ ಭಾರತೀಯ ಉಡುಗೆ-ತೊಡುಗೆಗಳಲ್ಲಿ ಒಂದಾಗಿತ್ತು. ರಾಜರ ಉಡುಪಿಗೆ ಸರಿಹೊಂದುವಂಥ ರೇಷ್ಮೆನೂಲಿನಿಂದ ನೇಯ್ದ ಬಂಗಾರದ ಜರಿಯುಳ್ಳ ರತ್ನಖಚಿತ ಪೇಟವನ್ನೇ ಮೈಸೂರು ಒಡೆಯರು ತೊಡುತ್ತಿದ್ದರು.
ಈ ವಸ್ತುಗಳನ್ನು ಮೈಸೂರು ಬಿಟ್ಟು ಬೇರೆ ಕಡೆ ಖರೀದಿಸಿದರೆ ಅಸಲಿ ಮಜ ಸಿಗೋದಿಲ್ಲ. ಹೀಗಾಗಿ ಮೈಸೂರಿಗೆ ಹೋದಾಗ ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸದೇ ವಾಪಾಸ್ ಆಗಬೇಡಿ.



Click it and Unblock the Notifications
