Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೊಮ್ಯಾಂಟಿಕ್ ಟ್ರಿಪ್ ಸಂಬಂಧದಲ್ಲಿ ಅವಶ್ಯಕ, ಏಕೆ? ಕರ್ನಾಟಕದಲ್ಲಿರುವ ರೊಮ್ಯಾಂಟಿಕ್ ಸ್ಥಳಗಳಿವು
ಒಂದು ರೊಮ್ಯಾಂಟಿಕ್ ಟ್ರಿಪ್ ದಂಪತಿ ನಡುವೆ ಮತ್ತಷ್ಟು ಆಪ್ತತೆ ಬೆಳೆಸುವುದರಲ್ಲಿ ನೋ ಡೌಟ್. ವಾರಕ್ಕೊಮ್ಮೆಯಾದರೂ ಜೋಡಿಯಾಗಿ ಕೆಲವೊಂದು ಸುಂದರ ತಾಣಗಳಿಗೆ ಹೋಗಿ ಬರಬೇಕು, ತುಂಬಾನೇ ರಿಫ್ರೆಶ್ ಆದಂತೆ ಅನಿಸುವುದು. ನವ ಜೋಡಿಗಳಾದರೆ ರೊಮ್ಯಾಂಟಿಕ್ ಸ್ಥಳಗಳಿಗೆ ಹೋಗಬಹುದು, ನಾವು ಮದುವೆಯಾಗಿ ವರ್ಷಗಳೇ ಕಳೆದಿದೆ ಇನ್ನೆಂಥ ರೊಮ್ಯಾಂಟಿಕ್ ಟ್ರಿಪ್ ಎಂದು ನೀವು ಹೇಳುವುದಾದರೆ ನಿಮ್ಮ ಆಲೋಚನೆ ಬದಲಾಯಿಸಿ ಒಮ್ಮೆ ರೊಮ್ಯಾಂಟಿಕ್ ತಾಣಕ್ಕೆ ಹೋಗಿ ಬನ್ನಿ, ನಿಮ್ಮ ಮನಸ್ಸು ಹಾಗೂ ದೇಹದಲ್ಲಿ ಹೊಸ ಚೈತನ್ಯ ಬರದಿದ್ದರೆ ಮತ್ತೆ ಕೇಳಿ.

ಜೋಡಿಯಾಗಿ ಭೇಟಿ ನೀಡಲು ನಮ್ಮ ಕರ್ನಾಟಕದಲ್ಲಿಯೇ ಹಲವಾರು ಸುಂದರ ತಾಣಗಳಿವೆ, ನೀವು ಈ ತಾಣಗಳಿಗೆ ಭೇಟಿ ನೀಡಿದರೆ ನಿಮ್ಮ ದಾಂಪತ್ಯ ಮಾಧುರ್ಯ ಮತ್ತಷ್ಟು ಹೆಚ್ಚಾಗುವುದು:
ಕೊಡಗು
ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿಗೆ ಭೇಟಿ ನೀಡಿದರೆ ಅಲ್ಲಿಯ ಪ್ರಕೃತಿ ನಿಮ್ಮ ಕಣ್ಣು ಹಾಗೂ ಮನ ತಣಿಸುವಷ್ಟು ಸುಂದರವಾಗಿದೆ. ಕರ್ನಾಟಕದ ಪ್ರಸಿದ್ಧ ಹನಿಮೂನ್ ಸ್ಥಳಗಳಲ್ಲಿ ಕೊಡಗು ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಿಂದ 4 ತಾಸಿನಲ್ಲಿ ನೀವು ಕೊಡಗಿಗೆ ತಲುಪಬಹುದು. ಒಂದು ವೀಕೆಂಡ್‌ನಲ್ಲಿ ಹೋಗಿ ಬರಲು ಸೂಕ್ತವಾದ ತಾಣ ಇದಾಗಿದೆ. ಹೋಂ ಸ್ಟೇ, ರೆಸಾರ್ಟ್ ಸ್ಟೇಗಳಿದ್ದು ಜೋಡಿಯಾಗಿ ಪ್ರಯಾಣಿಸಲು ಅತ್ಯುತ್ತಮವಾದ ಸ್ಥಳವಾಗಿದೆ,
ನಂದಿ ಬೆಟ್ಟ
ನೀವ, ನಿಮ್ಮ ಸಂಗಾತಿ ಸಾಹಸ ಪ್ರಿಯರಾಗಿದ್ದರೆ ನಂದಿ ಬೆಟ್ಟಕ್ಕೆ ಹೋಗಿ ಬರಬಹುದು. ಬೆಂಗಳೂರಿನಿಂದ 61 ಕಿ. ಮೀ ದೂರದಲ್ಲಿರುವ ನಂದಿ ಬೆಟ್ಟ ಟ್ರಕ್ಕಿಂಗ್ ಮಾಡಲು, ಸೈಕ್ಲಿಂಗ್‌ಗೆ ಸೂಕ್ತವಾಗಿದೆ. ಅಲ್ಲದೆ ಇಲ್ಲಿಯ ಸೂರ್ಯೋದಯ ಹಾಗೂ ಸೂರ್ಯಾಸ್ತ ಕೂಡ ತುಂಬಾನೇ ಸುಂದರವಾಗಿರುತ್ತದೆ. ನಿಮಗೆ ಸೂರ್ಯೋದಯ ನೋಡಲು ಸಾಧ್ಯವಾಗದಿದ್ದರೆ ಸಂಗಾತಿ ಜೊತೆ ಕುಳಿದು ಆ ಸುಂದರ ಸೂರ್ಯಾಸ್ತವನ್ನು ನೋಡುತ್ತಿದ್ದರೆ ನಿಮ್ಮೆಲ್ಲಾ ಚಿಂತೆ ಮರೆತು ಆ ಕ್ಷಣ ನಿಮ್ಮವರ ಜೊತೆ ತುಂಬಾ ಸುಂದರವಾಗಿ ಕಳೆದ ನೆನಪುಗಳೊಂದಿಗೆ ಮರಳುತ್ತೀರಿ.
ನೀವು ಸೂರ್ಯೋದಯ ಕೂಡ ನೋಡ ಬಯಸುವುದಾದರೆ ಬೆಳಗ್ಗೆ 5:30ಕ್ಕೆ ಅಲ್ಲಿರಬೇಕಾಗುತ್ತದೆ.
ಚಿಕ್ಕಮಂಗಳೂರು
ರೊಮ್ಯಾಂಟಿಕ್ ಕಪಲ್‌ಗಳನ್ನು ಕೈ ಬೀಸಿ ಕರೆಯುತ್ತಿರುವ ಮತ್ತೊಂದು ತಾಣವೆಂದರೆ ಚಿಕ್ಕ ಮಂಗಳೂರು. ಬೆಟ್ಟ-ಗುಡ್ಡಗಳಿಂದ ಆವೃತವಾಗಿರುವ ಹಸಿರನ್ನು ಸುತ್ತಿ ನಿಂತಿರುವ ಭೂದೇವಿಯ ಸೌಂದರ್ಯ ನೋಡುವುದೇ ರಮಣೀಯ. ಮುಲ್ಲಯ್ಯನಗಿರಿ ಬೆಟ್ಟ, ಭದ್ರಾ ನದಿಯಲ್ಲಿ ರಿವರ್ ರ‍್ಯಾಫ್ಟಿಂಗ್ ಇವೆಲ್ಲಾ ನಿಮಗೆ ಸಕತ್ ರೊಮ್ಯಾಂಟಿಕ್ ಅನುಭವ ನೀಡುವುದರಲ್ಲಿ ನೋ ಡೌಟ್.
ಕಬಿನಿ
ಕಬಿನಿ ನದಿಯ ದಡದಲ್ಲಿ ರೆಸಾರ್ಟ್‌ಗಳು, ಜಂಗಲ್ ಲಾಡ್ಜ್‌ಗಳು, ಹೋಂ ಸ್ಟೇಗಳಿದ್ದು ಜೀಪ್ ಸಫಾರಿ, ದೋಣಿ ಸಫಾರಿ ಇವುಗಳನ್ನು ಆನಂದಿಸಬಹುದು. ಮೈಸೂರಿನಿಂದ 80 ಕಿ. ಮೀ ದೂರದಲ್ಲಿ ಕಬಿನಿಯಿದೆ.
ಗೋಕರ್ಣ
ಪ್ರೇಮಿಗಳನ್ನು, ನವ ಜೋಡಿಗಳನ್ನು ಆಕರ್ಷಿಸುತ್ತಿರುವವ ಮತ್ತೊಂದು ಸ್ಥಳವೆಂದರೆ ಗೋಕರ್ಣ. ಇಲ್ಲಿಯ ದೇವಾಲಯ, ಬೀಚ್ ಇವೆಲ್ಲಾ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿವೆ.
ಕೆಮ್ಮನಗುಂಡಿ
ನೀವಿಬ್ಬರು ಟ್ರಕ್ಕಿಂಗ್ ಪ್ರಿಯರಾಗಿದ್ದರೆ ಕೆಮ್ಮನಗುಂಡಿಗೆ ಮಿಸ್ ಮಾಡದೇ ಹೋಗಿ ಬನ್ನಿ.
ನೀವು ರೊಮ್ಯಾಂಟಿಕ್ ಟ್ರಿಪ್ ಹೋಗುವುದರಿಂದ ಸಂಬಂಧದಲ್ಲಿ ಈ ಗುಣಗಳಿವೆ
1.ಸಂಬಂಧ ಮತ್ತಷ್ಟು ಬಿಗಿಯಾಗುವುದು
ಅಪರೂಪಕ್ಕೆ ಒಮ್ಮೆ ಟ್ರಿಪ್ ಹೋಗುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುವುದು, ಇಬ್ಬರ ನಡುವೆ ಅನುಬಂಧ ಹೆಚ್ಚುವುದು. ಜೊತೆಯಾಗಿ ಸುತ್ತಾಡುವ ಕ್ಷಣಗಳು ಇಬ್ಬರ ನಡುವೆ ಉತ್ತಮ ಅನುಬಂಧ ಮೂಡಿಸುತ್ತದೆ.
2. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಕುಟುಂಬದ ಜವಾಬ್ದಾರಿ, ಕೆಲಸದ ಒತ್ತಡ ಇವುಗಳಿಂದ ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಕೆಲಸದ ಒತ್ತಡದ ನಡುವೆ ನಾವು ನಮ್ಮ ಪರ್ಸನಲ್ ಬದುಕನ್ನೇ ಮರೆತು ಬಿಡುತ್ತೇವೆ, ನಾವು ದುಡಿಯುತ್ತಿರುವುದು ನಮಗಾಗಿಯೇ ಎಂಬುವುದನ್ನು ಮರೆತು ಬಿಡುತ್ತೇವೆ, ಈ ರೀತಿಯ ಟ್ರಿಪ್ ಕೆಲಸದ ನಡುವೆ ಅವಶ್ಯಕವಾಗಿದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುವುದು.
* ಹೊಸ ತಾಜಾತನ ಮೂಡುತ್ತದೆ
ಕೆಲಸ , ಮನೆ ಅಂತ ಬದುಕು ಇದ್ದರೆ ತುಂಬಾನೇ ಬೋರ್ ಅನಿಸಲಾರಂಭಿಸುತ್ತದೆ, ಅಪರೂಪಕ್ಕೆ ಸಂಗಾತಿ ಜೊತೆ ಟ್ರಿಪ್ ಹೋಗಿ ಬಂದರೆ ಅದರಿಂದ ಇಬ್ಬರಿಗೂ ಖುಷಿಯಾಗುವುದು.
* ಸುಂದರ ನೆನಪುಗಳನ್ನು ಸೃಷ್ಟಿಸುತ್ತದೆ
ಈ ರೀತಿ ರೊಮ್ಯಾಂಟಿಕ್ ಸ್ಥಳಗಳಿಗೆ ಭೇಟಿ ನೀಡಿದರೆ ಸುಂದರ ನೆನಪು ಸೃಷ್ಟಿಸುತ್ತದೆ. ಇಬ್ಬರ ನಡುವೆ ಇರುವ ಅಸಮಧಾನಗಳು ದೂರಾಗುವುದು. ಇಬ್ಬರ ಬಂಧ ಮತ್ತಷ್ಟು ಗಟ್ಟಿಯಾಗುವುದು.



Click it and Unblock the Notifications

