Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
'56 ಇಂಚಿನ ಮೋದಿಜೀ' ತಾಲಿ ತಿಂದು ಗೆದ್ದವರಿಗೆ 8.5 ಲಕ್ಷ ಬಹುಮಾನ ಘೋಷಿಸಿರುವ ರೆಸ್ಟೋರೆಂಟ್!
ಸೆಪ್ಟೆಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ದೇಶದ ಪ್ರಧಾನಿಯ ಹುಟ್ಟುಹಬ್ಬ ಆಚರಿಸಲು ದೇಶದ ಜನತೆ ಸಂಭ್ರಮದಿಂದ ಸಜ್ಜಾಗಿದ್ದಾರೆ. ಮೋದಿಜೀಯವರ ಹುಟ್ಟುಹಬ್ಬದ ವಿಶೇಷವಾಗಿ ಹಲವಾರ ಕಡೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಇವೆಲ್ಲದರ ನಡುವೆ ದೆಹಲಿಯ ಹೋಟೆಲ್ ತುಂಬಾ ವಿನೂತನವಾದ ಐಡಿಯಾ ಮೂಲಕ ಮೋದಿಜೀಯವರ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದು, ಇದೀಗ ಹೋಟೆಲ್‌ನವರ ಆ ಐಡಿಯಾ ತುಂಬಾನೇ ವೈರಲ್ ಆಗಿದೆ.

ದೆಹಲಿಯಲ್ಲಿರುವ ಆರ್ಡರ್ 2.0 ಹೋಟೆಲ್ 56ಇಂಚು ಮೋದಿಜೀ ತಾಲಿ ಸಿದ್ಧಪಡಿಸಲಿದೆ.

ಮೋದಿಜೀ 56 ಇಂಚಿನ ಎದೆ ಇರುವ ವ್ಯಕ್ತಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೋದಿಜೀ 56 ಇಂಚಿನ ಎದೆ ಇರುವ ವ್ಯಕ್ತಿ ಎಂದು ಹೆಮ್ಮೆಯಿಂದ ಹೇಳಿದ್ದರು. ಆ ಹೇಳಿಕೆಯ ಬಳಿಕ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಲೇ ಇವೆ. ವಿರೋಧ ಪಕ್ಷದವರು ಕೂಡ ಮೋದಿಜೀಯವರನ್ನು ಈ ವಿಷಯ ಹೇಳಿ ಟೀಕೆ ಮಾಡಿದ್ದರು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೋದಿಗೆ 56 ಇಂಚಿನ ಎದೆಯಿದೆ ಆದರೆ ಬಡವರ ಕಣ್ಣೀರು ಒರೆಸುವ ಹೃದಯ ಇಲ್ಲ ಎಂದು ಟೀಕಿಸಿದ್ದರು.

56 ಇಂಚಿನ ಮೋದಿಜೀ ತಾಲಿ
ಭಾರತದಲ್ಲಿ ಭಯೋತ್ಪದಕರ ಹುಟ್ಟಗಿಸುತ್ತಿರುವ ಮೋದಿಯನ್ನು ಬಿಜೆಪಿಯವರು 56 ಇಂಚಿನ ಎದೆ ಇರುವ ವ್ಯಕ್ತಿಯಿಂದ ಮಾತ್ರ ಭಯೋತ್ಪಾದಕರಿಗೆ ಈ ರೀತಿ ದಿಟ್ಟತನದ ಉತ್ತರ ನೀಡಲು ಸಾಧ್ಯ ಎಂಬುವುದಾಗಿ ಆಗಾಗ ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ 56 ಇಂಚಿನ ಎದೆ ಬಗ್ಗೆ ಬಿಜೆಪಿಯವರು-ವಿರೋಧ ಪಕ್ಷದವರೂ ಆಗಾಗ ಹೇಳುತ್ತಲೇ ಇರುತ್ತಾರೆ.
ಅದೇ ವಿಷಯವನ್ನು ಇಟ್ಟುಕೊಂಡು ದೆಹಲಿಯ ಆರ್ಡರ್ 2.0 ರೆಸ್ಟೋರೆಂಟ್ ಮೋದಿ ಹುಟ್ಟುಹಬ್ಬಕ್ಕೆ 56 ಇಂಚಿನ ಮೋದಿಜೀ ತಾಲಿ ರೆಡಿ ಮಾಡಿದ್ದು ಗ್ರಾಹಕರು ಈ ತಾಲಿಯಲ್ಲಿ 56 ಬಗೆಯ ತಿನಿಸುಗಳನ್ನು ಸವಿಯಬಹುದಾಗಿದೆ.

ತಾಲಿ ಸವಿಯುವುದು ಮಾತ್ರವಲ್ಲ ಸ್ಪರ್ಧೆಯು ಇದೆ
ಈ ಹೋಟೆಲ್‌ನವರು ಮೋದಿ ಅಭಿಮಾನಗಳು ಈ 56 ಇಂಚಿನ ಮೋದಿಜೀ ತಾಲಿ ಸವಿಯಲು ಆಫರ್ ನೀಡಿದ್ದು ಸ್ಪರ್ಧೆಯನ್ನೂ ಇಟ್ಟಿದೆ. ಯಾವ ಜೋಡಿ 40 ನಿಮಿಷದೊಳಗೆ ತಿಂದು ಮುಗಿಸುತ್ತಾರೋ ಅವರಿಗೆ 8.5 ಲಕ್ಷ ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಲಕ್ಕಿ ವಿನ್ನರ್ಸ್‌ಗೆ ಕೇದರ್‌ನಾಥ್ ಟ್ರಿಪ್ ಕೂಡ. ಮೋದಿಯವರಿಗೆ ಕೇದರ್‌ನಾಥ್ ತುಂಬಾ ಇಷ್ಟದ ತಾಣ, ಹಾಗಾಗಿ ಅಲ್ಲಿಗೆ ಟ್ರಿಪ್ ಅರೇಂಜ್ ಮಾಡಲಾಗಿದೆ. ಈ ಸ್ಪರ್ಧೆ ಸೆಪ್ಟೆಂಬರ್ 17-26ರವರೆಗೆ ಇದೆ.
ದೆಹಲಿಯಲ್ಲಿರುವ ಕರ್ನಾಟಕದ ಮೋದಿ ಅಭಿಮಾನಿಗಳೇ ಈ ಸ್ಪರ್ಧೆ ಬಿಟ್ಟುಕೊಡಬೇಡಿ, ಬಹುಮಾನ ಕನ್ನಡಿಗರ ಪಾಲಾಗಲಿ ಏನಂತೀರಿ....



Click it and Unblock the Notifications
