Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಈ ರಾಶಿಯವರಿಗೆ ಪ್ರೇಮ ವಿವಾಹದ ಯೋಗವಂತೆ
ಇಂದಿನ ಪೀಳಿಗೆಯ ಜನರು ಅತ್ಯಂತ ಸಮರ್ಥ ಮತ್ತು ಬುದ್ಧಿವಂತರಾಗಿದ್ದು, ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ತಮ್ಮ ಬಗ್ಗೆ ಚೆನ್ನಾಗಿ ಅರಿತಿರುವ ವ್ಯಕ್ತಿಯೊಂದಿಗೆ ಜೀವನ ಹಂಚಿಕೊಳ್ಳುವುದು ಉತ್ತಮವೆಂಬುದು ಈಗಿನ ಕಾಲದ ಗಂಡು-ಹೆಣ್ಣಿನ ನಿರ್ಧಾರವಾಗಿದೆ. ಅದೇ ಕಾರಣಕ್ಕಾಗಿಯೇ, ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹ ಅಥವಾ ಲವ್ ಮ್ಯಾರೇಜ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದು.
ಆದರೆ, ಕೆಲವೊಂದು ಪ್ರೇಮ ವಿವಾಹಗಳು ಅವಸರವಾಗಿ ಆಗಿ, ಬೇಗನೇ ಮುರಿದುಹೋಗುತ್ತವೆ. ಆದರೆ ಜ್ಯೋತಿಷ್ಯದ ಪ್ರಕಾರ, ಪ್ರೇಮ ವಿವಾಹ ಆಗುವ ಕೆಲವೊಂದು ರಾಶಿಗಳಿವೆ. ಈ ರಾಶಿಯವರು ಪ್ರೇಮ ವಿವಾಹವಾದರೆ, ಅವರ ಅದೃಷ್ಟ ಬದಲಾಗುವುದು ಜೊತೆಗೆ ನೂರುಕಾಲ ಸುಖವಾಗಿ ಬಾಳುತ್ತಾರೆ ಎಂದು ಜ್ಯೋತಿಷ್ಯ ವರ್ಗ ಹೇಳುತ್ತದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬದನ್ನು ನೋಡೋಣ.
ಪ್ರೇಮವಿವಾಹವಾಗುವ ರಾಶಿಚಕ್ರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ ರಾಶಿ:
ಈ ರಾಶಿಯವರು ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಮೇಷ ರಾಶಿಯ ಅಧಿಪತಿ ಮಂಗಳ ಆಗಿರುವುದರಿಂದ ಇವರು ಬಹಳ ಸ್ನೇಹಪರ ಸ್ವಭಾವವನ್ನು ಹೊಂದಿರುತ್ತಾರೆ. ಜೊತೆಗೆ ಎಲ್ಲೆಡೆ ಜನರೊಂದಿಗೆ ಬೇಗನೆ ಬೆರೆಯುತ್ತಾರೆ. ಎಲ್ಲರ ಜೊತೆ ಕೂಡಿ ಬಾಳುವ ಮನೋಭಾವ ಹೊಂದಿದ್ದಾರೆ. ಮೇಷ ರಾಶಿಯ ಜನರು ಆಕರ್ಷಕ ವ್ಯಕ್ತಿತ್ವದವರಾಗಿದ್ದು, ಪ್ರತಿಯೊಬ್ಬರೂ ಅವರಿಂದ ಬೇಗನೆ ಪ್ರಭಾವಿತರಾಗುತ್ತಾರೆ. ಈ ಜನರು ತಮ್ಮ ಸಂಬಂಧದಲ್ಲಿ ಗೌರವವನ್ನು ಕಾಪಾಡಿಕೊಳ್ಳುತ್ತಾರೆ ಜೊತೆಗೆ ಸಮಸ್ಯೆಗಳಿಗೆ ಬುದ್ಧಿವಂತಿಕೆಯಿಂದ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ಮುಕ್ತ ಆಲೋಚನೆಗಳಿಂದಾಗಿ, ಮದುವೆಯ ಆರಂಭಿಕ ದಿನಗಳಲ್ಲಿ ಅವರ ಸ್ವಂತ ಜೀವನದಲ್ಲಿ ಕೆಲವು ಬಿರುಕುಗಳು ಉಂಟಾಗುತ್ತವೆ. ಆದಾಗ್ಯೂ, ಕ್ರಮೇಣ ಅವರು ಆ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಾರೆ.

ಮಕರ ರಾಶಿ:
ಈ ರಾಶಿಯನ್ನು ಆಳುವ ಗ್ರಹ ಶನಿ. ಈ ರಾಶಿಚಕ್ರದ ಜನರು ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಅಷ್ಟೇ ಅಲ್ಲ, ತಮ್ಮ ಸಂಗಾತಿಯಿಂದ ಅದೇ ರೀತಿಯ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತಾರೆ. ಯಾವಾಗಲೂ ತಮ್ಮ ಕುಟುಂಬ ಸದಸ್ಯರನ್ನು ಸಂತೋಷವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ರಾಶಿಚಕ್ರದ ಜನರ ಪ್ರೇಮ ವಿವಾಹವು ಯಾವಾಗಲೂ ಯಶಸ್ವಿಯಾಗುತ್ತದೆ ಏಕೆಂದರೆ, ಇವರುಭವಿಷ್ಯದಲ್ಲಿ ಜೀವನ ಸಂಗಾತಿಯಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಅವರ ಅದೃಷ್ಟವೇ ಬದಲಾಗಬಹುದು..

ಕುಂಭ ರಾಶಿ:
ಕುಂಭ ರಾಶಿಯ ಜನರು ಬಹಳ ಬುದ್ಧಿವಂತರು. ಈ ರಾಶಿಚಕ್ರದ ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ. ಕುಂಭ ರಾಶಿಯ ಅಧಿಪತಿ ಶನಿ ದೇವ. ಈ ರಾಶಿಚಕ್ರದ ಜನರು ಹೆಚ್ಚಾಗಿ ಪ್ರೇಮ ವಿವಾಹಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ, ಅದನ್ನೇ ಆಗುತ್ತಾರೆ. ಇದರಿಂದ ಅವರ ಮನೆಯ ಜೀವನವೂ ತುಂಬಾ ಸಂತೋಷವಾಗಿರುತ್ತದೆ. ಈ ರಾಶಿಚಕ್ರದ ಜನರು ತಮ್ಮ ಜೀವನ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡುತ್ತಾರೆ ಮತ್ತು ಕುಟುಂಬದ ಸದಸ್ಯರ ಬಗ್ಗೆ ಹೆಮ್ಮೆ ಪಡುತ್ತಾರೆ. ಕುಂಭ ರಾಶಿಯ ಜನರು ತಮ್ಮ ಸಂಗಾತಿಯೊಂದಿಗೆ ಆಳವಾದ ಮತ್ತು ಅಮೂಲ್ಯವಾದ ಸಂಬಂಧವನ್ನು ಹೊಂದಿದ್ದರೂ, ಕೆಲವೊಮ್ಮೆ ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ, ಸಂಬಂಧದಲ್ಲಿ ಅಂತರವು ಸೃಷ್ಟಿಯಾಗಬಹುದು. ಆದ್ದರಿಂದ ಇವರು ಅನಗತ್ಯ ಜಗಳ ಮತ್ತು ವಾದಗಳನ್ನು ನಿರ್ಲಕ್ಷಿಸುವುದು ಉತ್ತಮ ಆಯ್ಕೆಯಾಗಿದೆ.



Click it and Unblock the Notifications











