Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಹಿಳೆಯರು ಈ ಕಾರಣಕ್ಕೆ ವಿಚ್ಛೇದನ ಪಡೆಯಲು ಬಯಸುತ್ತಾರೆ!
ಮದುವೆ ಅನ್ನೋದು ಒಂದು ಸುಂದರ ಬಂಧ. ಆದರೆ ಎಲ್ಲರ ಬಾಳಲ್ಲಿ ದಾಂಪತ್ಯ ಸಿಹಿ ನೆನೆಪುಗಳನ್ನೇ ಕೊಡುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅನೇಕರು ದಾಂಪತ್ಯ ಜೀವನದಲ್ಲಿ ಸುಖ ಕಾಣದೆ ಅರ್ಧದಲ್ಲೇ ತಮ್ಮ ಸಂಗಾತಿಯನ್ನು ಬಿಟ್ಟು ಹೋಗುತ್ತಾರೆ.

ಇತ್ತೀಚಿಗೆ ವಿಚ್ಚೇದನ ಪ್ರಕರಣಗಳು ಹೆಚ್ಚಾಗ್ತಿದೆ. ಅದ್ರಲ್ಲೂ ಮಹಿಳೆಯರು ತಮ್ಮ ಸಂಗಾತಿಯ ಜೊತೆಗೆ ಬದುಕಲಾರದೇ ವಿಚ್ಚೇದನ ಪಡೆಯುತ್ತಿದ್ದಾರೆ. ಆದರೆ ವಿಚ್ಚೇದನ ಪಡೆದ ನಂತರ ಅವರು ತುಂಬಾನೇ ಖುಷಿಯಾಗಿರುತ್ತಾರೆ. ಅಷ್ಟಕ್ಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪತಿಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಡಿವೋರ್ಸ್ ಪಡೆಯೋದಕ್ಕೆ ಕಾರಣವೇನು? ವಿಚ್ಚೇದನದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣ ಏನು ಅನ್ನೋದನ್ನ ಹೇಳ್ತೀವಿ.
ಮಹಿಳೆಯರು ಪತಿಯಿಂದ ಡಿವರ್ಸ್ ಪಡೆಯಲು ಕಾರಣಗಳು :

1. ಆರ್ಥಿಕ ಭದ್ರತೆ
ಶ್ರೀಮಂತನನ್ನೇ ಮದುವೆಯಾಗಿದ್ರು ಕೂಡ ಅವರಿಗೆ ಜೀವನದಲ್ಲಿ ಖುಷಿ ಅನ್ನೋದು ಇರೋದಿಲ್ಲ. ಗಂಡ ತನ್ನ ಸುಖ-ದುಃಖಗಳಿಗೆ ಸ್ಪಂದಿಸುತ್ತಿಲ್ಲ ಅನ್ನುವಾಗ ಅಂತಹ ಬದುಕು ಬಾಳೋದಕ್ಕೆ ಮಹಿಳೆಯರಿಗೆ ಇಷ್ಟವಾಗೋದಿಲ್ಲ. ಜೊತೆಗೆ ತನ್ನ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಭಯ ಕಾಡುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ವಿಚ್ಚೇದನಕ್ಕೆ ಬೇಡಿಕೆ ಇಡ್ತಾಳೆ. ವಿಚ್ಚೇದನ ಸಿಕ್ಕರೆ ಕನಿಷ್ಠ ಪಕ್ಷ ಆರ್ಥಿಕ ಭದ್ರತೆಯಾದ್ರು ಇರುತ್ತಲ್ಲ ಎಂಬ ದೃಷ್ಟಿಕೋನ ಆಕೆಯಲ್ಲಿ ಇರುತ್ತದೆ.

2. ದೈಹಿಕ ಕಿರುಕುಳ
ಕೆಲವೊಂದು ಪುರುಷರು ತಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳೋದಿಲ್ಲ. ಆಕೆಗೆ ಚಿತ್ರಹಿಂಸೆ ಮಾಡುತ್ತಿರುತ್ತಾರೆ. ದೈಹಿಕವಾಗಿ ಆಕೆಗೆ ದಂಡಿಸೋದು, ಮಕ್ಕಳಿಗೆ ತೊಂದರೆ ಕೊಡೋದು. ಇಂತಹ ದಾಂಪತ್ಯವೆಂಬ ಜೈಲಿನಿಂದ ಹೊರಬರಲು ಮಹಿಳೆಯರು ವಿಚ್ಚೇದನ ಪಡೆಯುತ್ತಾರೆ.

3. ಪತಿಗೆ ಅನೈತಿಕ ಸಂಬಂಧವಿದ್ದಾಗ
ಕೆಲವೊಂದು ಪುರುಷರು ಮದುವೆಯಾಗಿದ್ರು ಕೂಡ ಬೇರೊಂದು ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುತ್ತಾನೆ. ಪತ್ನಿಯಾದವಳು ಇಂತಹ ವಿಚಾರವನ್ನು ಖಂಡಿತ ಸಹಿಸೋದಿಲ್ಲ. ಇಂತಹ ಸಂದರ್ಭದಲ್ಲಿ ಆಕೆಗೆ ವಿಚ್ಚೇದನ ಪಡೆಯೋದನ್ನ ಬಿಟ್ಟು ಬೇರೆ ಮಾರ್ಗವಿಲ್ಲ.

4. ಪತಿಯೊಂದಿಗೆ ಕಲಹ
ಪತಿ-ಪತ್ನಿಯಲ್ಲಿ ಹೊಂದಾಣಿಕೆ ಅನ್ನೋದೇ ಇರೋದಿಲ್ಲ. ಯಾವಾಗ ನೋಡಿದ್ರು ಮನೆಯಲ್ಲಿ ಜಗಳ. ಪತಿಯ ನಿರ್ಧಾರಗಳು ಪತ್ನಿಗೆ, ಪತ್ನಿಯ ನಿರ್ಧಾರಗಳು ಪತಿಗೆ ಹಿಡಿಸೋದಿಲ್ಲ. ಸಣ್ಣ-ಪುಟ್ಟ ವಿಚಾರಕ್ಕೂ ಮನೆಯಲ್ಲಿ ಗೊಂದಲ, ಮನಸ್ತಾಪ ಏರ್ಪಡುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆ ವಿಚ್ಚೇದನ ಪಡೆಯಲು ಇಚ್ಚಿಸುತ್ತಾಳೆ.
ವಿಚ್ಚೇದನ ಪಡೆದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣವೇನು?
1. ಮಹಿಳೆಯರು ಪುರುಷರಂತಲ್ಲ ತಮಗೆ ನೋವಾದಾಗ ಆ ನೋವನ್ನು ತಮ್ಮ ಸ್ನೇಹಿತರು, ಸಂಬಂಧಿಕರು, ಆಪ್ತರ ಜೊತೆಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.
2. ಮಹಿಳೆಯರಲ್ಲಿ ಎಲ್ಲರೊಂದಿಗೆ ಬೆರೆಯುವ ಗುಣ ಹೆಚ್ಚಾಗಿರುತ್ತದೆ. ನೋವಾದಾಗ ತಮ್ಮವರೊಂದಿಗೆ ಬೆರೆತು ಆ ನೋವನ್ನು ಮರೆಯುತ್ತಾರೆ.
3. ಡಿವರ್ಸ್ ಪಡೆದ ನಂತರ ಮಹಿಳೆಯರು ತಮಗಾಗಿ ಕೆಲಸ ಮಾಡೋದಕ್ಕೆ ಶುರು ಮಾಡುತ್ತಾರೆ. ತಮ್ಮ ಕೆಲಸ ಹಾಗೂ ಮಕ್ಕಳೊಂದಿಗೆ ಬ್ಯುಸಿಯಾಗುತ್ತಾರೆ. ವಿಚ್ಚೇದನದಿಂದಾದ ನೋವು ಮರೆಯುತ್ತಾರೆ.
4. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಮಧ್ಯಪಾನ, ದೂಮಪಾನ, ಡ್ರಗ್ಸ್‌ನಂತಹ ಮದಕ ವಸ್ತುಗಳಿಂದ ದೂರ ಇರುತ್ತಾರೆ. ಹೀಗಾಗಿ ವಿಚ್ಚೇದನದ ನೋವು ಅವರನ್ನು ಅಷ್ಟಾಗಿ ಕಾಡೋದಿಲ್ಲ.
5. ಮಹಿಳೆಯರು ವಿಚ್ಚೇದನದ ನಂತರ ಹೊಸ ಬದುಕು ಕಟ್ಟಿಕೊಳ್ಳಲು ಇಚ್ಚಿಸುತ್ತಾರೆ. ಹೊಸತನ್ನೇನಾದರೂ ಕಲಿಯಬೇಕೆಂದು ಅವರ ಮನಸ್ಸು ತುಡಿಯುತ್ತಿರುತ್ತದೆ.
6. ವಿಚ್ಚೇದನದ ನಂತರ ಮಹಿಳೆಯರು ತಮ್ಮ ಬದುಕಿಗೆ ಪ್ರಾಮುಖ್ಯತೆ ನೀಡುತ್ತಾರೆ. ಖಿನ್ನತೆಗೆ ಒಳಗಾಗೋದು, ಊಟ-ತಿಂಡಿ ಬಿಡುವುದು ಇದ್ಯಾವುದನ್ನು ಅವರು ಮಾಡೋದಿಲ್ಲ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇಂತಹ ವಿಚಾರದಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿರ್ತಾರೆ. ವಿಚ್ಚೇದನದ ನಂತರ ಅವರ ಅಂದುಕೊಂಡಂತೆ ಬದುಕನ್ನು ಅವರು ಬದುಕುವುದರಿಂದ ಯಾವುದೇ ರೀತಿ ಸಮಸ್ಯೆಗಳು ಎದುರಾಗೋದಿಲ್ಲ.



Click it and Unblock the Notifications