For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಮೂಲಕ ನಿಮ್ಮ ಪ್ರೀತಿಯನ್ನು ಹುಡುಕುವುದು ಹೇಗೆ ಗೊತ್ತಾ?

|

ಒನ್-ವೇ ಫ್ಲರ್ಟಿಂಗ್ ನಿಮಗೆ ಮುಜುಗರವನ್ನುಂಟು ಮಾಡಬಹುದು. ಕೇವಲ ನೀವಷ್ಟೇ ಅವರ ಹಿಂದೆ ಹಿಂದೆ ಹೋದರೂ, ಅವರು ತಿರುಗಿ ನೋಡದೇ ಇದ್ದರೆ ಏನು ಚಂದ ಅಲ್ವಾ?. ಆದರೆ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ರಾಶಿಚಕ್ರ ಚಿಹ್ನೆಯ ಬಗ್ಗೆ ನಿಮಗೆ ಸ್ವಲ್ಪ ಜ್ಞಾನವಿದ್ದರೆ, ಅದು ಯಾವುದೇ ಸಂಭಾವ್ಯ ಕ್ಷಣಗಳಿಂದ ನಿಮ್ಮನ್ನು ಉಳಿಸುತ್ತದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಅವರು ಯಾರನ್ನಾದರೂ ಇಷ್ಟಪಡುವ ಕೆಲವು ಸೂಚನೆಗಳನ್ನು ಹೊಂದಿದೆ. ಈ ರಾಶಿಚಕ್ರದ ಚಿಹ್ನೆಗಳು ನಿಮ್ಮೊಳ ನೀವು ಪ್ರೀತಿಸುತ್ತಿರುವ ವ್ಯಕ್ತಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ನೀವು ಹೇಗೆ ಹೇಳಬಹುದು ಎಂದು ತಿಳಿಯಲು ಈ ಕೆಳಗೆ ನೋಡಿ.

ಮೇಷ:

ಮೇಷ:

ಈ ರಾಶಿಚಕ್ರ ಚಿಹ್ನೆಯು ಯಾವುದೇ ಮೋಸ ಅಥವಾ ರಹಸ್ಯಗಳನ್ನು ಹೊಂದಿರುವುದಿಲ್ಲ. ಅವರು ನಿಮ್ಮನ್ನು ಇಷ್ಟಪಟ್ಟರೆ, ಅದನ್ನು ಸ್ಪಷ್ಟಪಡಿಸುತ್ತಾರೆ. ಅವರ ಎಲ್ಲಾ ಗಮನ ಮತ್ತು ಕಾಳಜಿಯನ್ನು ನೀವು ಪಡೆಯುತ್ತೀರಿ. ನೀವು ಸುಮ್ಮನೆ ಅವರ ಮುಂದೆ ನಿಂತರೆ ಸಾಕು, ಅವರು ನಿಮ್ಮನ್ನು ಇಷ್ಟಪಡುತ್ತಾರೋ ಇಲ್ಲವೋ ಎಂಬುದನ್ನು ಆಶ್ಚರ್ಯಕರ ರೀತಿಯಲ್ಲಿ ಜೋರಾಗಿ ಮತ್ತು ಸ್ಪಷ್ಟವಾಗಿ ತೋರಿಸುತ್ತಾರೆ.

ವೃಷಭ:

ವೃಷಭ:

ಈ ರಾಶಿಯವರು ಪ್ಲರ್ಟಿಂಗ್ ನ್ನು ಮೆಚ್ಚದ ಗುಂಪಾಗಿದೆ. ಆದ್ದರಿಂದ, ನೀವು ಅವರಿಂದ ಪ್ರೀತಿಯ ವೈಬ್ ಪಡೆಯದಿದ್ದರೆ, ಅವರನ್ನು ಫೋರ್ಸ್ ಮಾಡುವುದನ್ನು ನಿಲ್ಲಿಸಿ. ಅವರು ನಿಮ್ಮನ್ನು ಇಷ್ಟಪಟ್ಟರೆ, ಬಹಳ ಎಚ್ಚರಿಕೆಯಿಂದ ನಿಮ್ಮ ಬಳಿ ಅದನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ಜೋಕ್ ಅಥವಾ ಐಸ್ ಬ್ರೇಕರ್, ನಾಚಿಕೆ ನಗು ಅಥವಾ ನಿಮ್ಮ ತೋಳಿನ ಮೇಲೆ ಸುಪ್ತಾವಸ್ಥೆಯ ಕೈ ಹಾಕುವುದು ಹೀಗೆ. ಇದು ತುಂಬಾ ಸೂಕ್ಷ್ಮವಾಗಿರುತ್ತದೆ, ಆದರೆ ನೀವು ಗಮನಿಸಿ ಅರ್ಥೈಸಿಕೊಳ್ಳಬೇಕು.

ಮಿಥುನ:

ಮಿಥುನ:

ಓಹ್, ಮಿಥುನ ರಾಶಿಯವರು ನಿಮ್ಮನ್ನು ಇಷ್ಟಪಡಲು ನಿಮಗೆ ಖಂಡಿತವಾಗಿಯೂ ಸ್ವಲ್ಪ ಅದೃಷ್ಟ ಬೇಕಾಗುತ್ತದೆ. ತಮ್ಮ ನೈಜ ಆಸೆಗಳಿಗೆ ಸಂಪೂರ್ಣವಾಗಿ ವಿರುದ್ಧ ಎಂದು ಭಾವಿಸುವ ರೀತಿಯಲ್ಲಿ ವರ್ತಿಸಲು ಅವರು ಒತ್ತಾಯಿಸುತ್ತಾರೆ. ನೀವು ಪ್ರಾಥಮಿಕ ಶಾಲೆಯಲ್ಲಿದ್ದ ಸಮಯದಂತೆಯೇ ಇದು ನಡೆಯಲಿದೆ, ಅಲ್ಲಿ ನಿಮ್ಮ ಕೂದಲನ್ನು ಎಳೆದು ಮಣ್ಣನ್ನು ಹಾರಿಸಿದ ವ್ಯಕ್ತಿಯು ನಿಮ್ಮ ಮೇಲೆ ರಹಸ್ಯವಾಗಿ ಕ್ರಷ್ ಹೊಂದಿರುತ್ತಾರೆ.

ಕರ್ಕಾಟಕ:

ಕರ್ಕಾಟಕ:

ಅವರು ತುಂಬಾ ನಾಚಿಕೆ, ಸೂಕ್ಷ್ಮ ಮತ್ತು ರಹಸ್ಯಹೊಂದಿರುವವರು. ನೀವು ಅವರನ್ನು ದೂರದಿಂದಲೇ ನಿಂತು ಅವರ ಗಮನ ಸೆಳೆಯುವುದು, ಅವರೊಂದಿಗೆ ಮಾತನಾಡುವಾಗ ನಾಚಿಕೆ ಪಡಿಸುವುದು ಮಾಡಿದರೆ ಸಾಕು ಅವರನ್ನು ಸೆಳೆಯಬಹುದು. ನೀವು ಅವರನ್ನು ಸೆಳೆಯಲು ಬಯಸಿದರೆ, ಅವರೊಂದಿಗೆ ಸಾಕಷ್ಟು ಮಾತನಾಡಲು ಪ್ರಾರಂಭಿಸಿ. ಅವರು ಅಂತಿಮವಾಗಿ ನಿಮ್ಮ ಜೊತೆಗೆ ಆರಾಮವಾಗಿರಲು ಪ್ರಾರಂಭಿಸುತ್ತಾರೆ ಮತ್ತು ಎಲ್ಲಾ ಮಾತುಕತೆಗಳನ್ನು ಹಂಚಿಕೊಳ್ಳುತ್ತಾರೆ.

ಸಿಂಹ:

ಸಿಂಹ:

ಈ ರಾಶಿಯವರು ಗಮನದ ಕೇಂದ್ರವಾಗಿರಲು ಇಷ್ಟಪಡುತ್ತಾರೆ ಮತ್ತು ಪ್ರೀತಿಯ ಆಸಕ್ತಿಯು ಇದ್ದಾಗ, ಅವರ ಸಾಮಾನ್ಯ ವರ್ತನೆಗಳು ಹೆಚ್ಚಾಗುತ್ತವೆ. ಅವರು ಜೋಕ್ ಮಾಡಲು ಪ್ರಾರಂಭಿಸುತ್ತಾರೆ, ದುಬಾರಿ ಹೊಸ ಬಟ್ಟೆಗಳನ್ನು ಧರಿಸಿ, ತಮ್ಮ ಸಾಧನೆಗಳನ್ನು ಎಲ್ಲರ ಮುಂದೆ ಪ್ರದರ್ಶಿಸುತ್ತಾರೆ. ಇದು ಒಂದು ರೀತಿ ಮುದ್ದಾಗಿರುತ್ತದೆ. ಆದ್ದರಿಂದ, ಸಿಂಹ ರಾಶಿಯವರು ನಿಮ್ಮನ್ನು ಇಷ್ಟಪಡುತ್ತಾನೋ ಇಲ್ಲವೋ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂಬುದರ ಬಗ್ಗೆ ಖಂಡಿತವಾಗಿಯೂ ಚಿಂತೆ ಬೇಡ. ಅವರೇ ಬಂದು ಹೇಳುತ್ತಾರೆ.

ಕನ್ಯಾ:

ಕನ್ಯಾ:

ಈ ರಾಶಿಯವರು ಪ್ರೀತಿಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದರೆ ಅವರು ಸಹಾಯ ಮಾಡುವುದನ್ನು ಇಷ್ಟಪಡುತ್ತಾರೆ. ಆದ್ದರಿಂದ, ಕನ್ಯಾ ರಾಶಿಯೊಂದಿಗೆ ಕೆಲವು ಸಮಸ್ಯೆಗಳನ್ನು ಹಂಚಿಕೊಂಡರೆ ಅವರು ಅದನ್ನು ನಿಮಗಾಗಿ ಪರಿಹರಿಸುತ್ತಾರೆ, ವಿಷಯಗಳನ್ನು ಸರಿಪಡಿಸುತ್ತಾರೆ. ಅವರು ನಿಮಗೆ ಅತ್ಯುತ್ತಮವಾದ ಸಲಹೆಯನ್ನು ನೀಡಲು ವಿಸ್ತಾರವಾಗಿ ಯೋಚಿಸುತ್ತಾರೆ.

ತುಲಾ:

ತುಲಾ:

ಅವರು ನಿಮ್ಮೊಂದಿಗೆ ಫ್ಲರ್ಟ್ ಮಾಡಲು ಪ್ರಾರಂಭಿಸಿದಾಗ ನಿಮಗೆ ಅರಿವಾಗುತ್ತದೆ ಅವರು ನಿಮ್ಮನ್ನು ಇಷ್ಟ ಪಡುತ್ತಿದ್ದಾರೆ ಎಂದು. ಅವರು ಪ್ರೀತಿಯ ಗ್ರಹವಾದ ಶುಕ್ರನಿಂದ ಆಳಲ್ಪಡುತ್ತಾರೆ ಮತ್ತು ಫ್ಲರ್ಟಿಂಗ್ನಲ್ಲಿ ಪರಿಣತರಾಗಿದ್ದಾರೆ. ಈ ರಾಶಿಯವರು ನಿಮ್ಮ ಬಗ್ಗೆ ಜನರಲ್ಲಿ ಹೇಳಲು ಪ್ರಾರಂಭಿಸಿದಾಗ ಅದೇ ನಿಮ್ಮನ್ನು ಇಷ್ಟಪಡುವ ದೊಡ್ಡ ಸಂಕೇತವಾಗಿದೆ.

ವೃಶ್ಚಿಕ:

ವೃಶ್ಚಿಕ:

ಇದು ಒಂದು ಟ್ರಿಕ್ಕಿ ಪಾತ್ರ. ತಮ್ಮ ನೈಜ ಭಾವನೆಗಳನ್ನು ಮರೆಮಾಚಲು ಅವರು ಆಗಾಗ್ಗೆ ಅದರ ವಿರುದ್ಧವಾಗಿ ವರ್ತಿಸಬಹುದು. ಆದರೆ ಅವರು ಯಾವುದಾದರೂ ವಿಷಯವನ್ನು ದಿಟ್ಟಿಸಿ ನೊಡಿದರೆ, ಅದು ನಿಜವಾಗಿಯೂ ತೀವ್ರವಾಗಿರುತ್ತದೆ.

ಧನು ರಾಶಿ:

ಧನು ರಾಶಿ:

ಪ್ರಣಯದ ವಿಷಯಕ್ಕೆ ಬಂದಾಗ ಈ ರಾಶಿಯವರು ಶೂನ್ಯವಾಗಿರುತ್ತಾರೆ. ಅವರು ನಿಮ್ಮ ಮೇಲೆ ಮನಸ್ಸು ಹೊಂದಿದ್ದರೆ, ಅವರ ವರ್ತನೆ ನಿಮ್ಮ ಸುತ್ತಲೂ ಬದಲಾಗುತ್ತದೆ. ಆದ್ದರಿಂದ, ಧನು ರಾಶಿ ನಿಮ್ಮನ್ನು ಇಷ್ಟಪಡುತ್ತಾರೋ ಇಲ್ಲವೋ ಎಂದು ಕಂಡುಹಿಡಿಯಲು ನೀವು ಬಯಸಿದರೆ ನಿಮ್ಮ ಸುತ್ತಲಿರುವಾಗ ಅವರ ಬಾಡಿ ಲ್ಯಾಂಗ್ವೇಜ್ ನ್ನು ಗಮನಿಸಲು ಪ್ರಾರಂಭಿಸಿ. ಅವರು ನಿಮ್ಮ ಸುತ್ತಲೂ ವಿಕಾರವಾಗಿರಲು ಪ್ರಾರಂಭಿಸಿದರೆ, ಅವರು ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೆ.

ಮಕರ:

ಮಕರ:

ಮಕರ ರಾಶಿಯವರ ಸ್ವಯಂ ನಿಯಂತ್ರಣ ಮತ್ತು ಸಮತೋಲನವು ಭಾವನೆಯನ್ನು ತೋರಿಸುತ್ತದೆ ಎಂದು ನಿರೀಕ್ಷಿಸಬೇಡಿ. ಬದಲಾಗಿ, ಹಿಂದಿನ ಯುಗದಲ್ಲಿ ಕಂಡಂತಹ ಕನಸು ಈ ಜನ್ಮದಲ್ಲಿ ಲಭ್ಯವಾಗಿದೆ ಎಂದು ಅನಿಸುತ್ತದೆ. ಅವರು ನಿಮ್ಮೊಂದಿಗೆ ತುಂಬಾ ಸಭ್ಯರಾಗುತ್ತಾರೆ ಮತ್ತು ನೀವು ಅವರ ಪ್ರಪಂಚದ ಕೇಂದ್ರ ಎಂದು ಭಾವಿಸಲು ಅವರ ಎಲ್ಲ ಗಮನವನ್ನು ನಿಮಗೆ ನೀಡುತ್ತಾರೆ.

ಕುಂಭ:

ಕುಂಭ:

ಪ್ರೀತಿಯನ್ನು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಪದಗಳಲ್ಲಿ ನಿರ್ವಹಿಸುವುದರಿಂದ ಕುಂಭ ರಾಶಿಯವರು ಸ್ವಲ್ಪ ಚಳಿ ವ್ಯಕ್ತಿಗಳೆಂದು ಕೆಲವರು ಭಾವಿಸುತ್ತಾರೆ. ಆದ್ದರಿಂದ, ಅವರು ಸ್ವಲ್ಪ ಹೆಚ್ಚು ಭಾವನಾತ್ಮಕ, ಅಸ್ಥಿರವಾಗಿ ನಟಿಸಲು ಪ್ರಾರಂಭಿಸಿದಾಗ, ನೀವು ಅವರ ಪ್ರೀತಿಯನ್ನು ಪಡೆದುಕೊಂಡಿದ್ದೀರಿ ಎಂದರ್ಥ.

ಮೀನು:

ಮೀನು:

ಈ ರಾಶಿಚಕ್ರ ಚಿಹ್ನೆಯ ಜನರು ತುಂಬಾ ರೋಮ್ಯಾಂಟಿಕ್. ಅವರು ಸ್ವಪ್ನಶೀಲ ಅಭಿವ್ಯಕ್ತಿಗಳನ್ನು ಮಾಡುತ್ತಾರೆ, ನಿಮ್ಮನ್ನು ದಿಟ್ಟಿಸಿ ನೋಡುತ್ತಾರೆ, ನಾಚಿಕೆಪಡುತ್ತಾರೆ, ಸಾರ್ವಕಾಲಿಕವಾಗಿ ನಿಮ್ಮ ಸುತ್ತಲೂ ಇರುತ್ತಾರೆ ಮತ್ತು ನಿಮ್ಮನ್ನು ಅಭಿನಂದಿಸುತ್ತಾರೆ. ಅವರು ನಿಮ್ಮನ್ನು ಇಷ್ಟಪಡಲು ಪ್ರಾರಂಭಿಸಿದಾಗ ನಿಮಗೆ ಉತ್ತಮವಾಗುವಂತೆ ಮಾಡುತ್ತದೆ. ಆದ್ದರಿಂದ ಅವರು ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದಾರೋ ಇಲ್ಲವೋ ಎಂದು ತಿಳಿಯಲು ನೀವು ಎಂದಿಗೂ ಗೊಂದಲಕ್ಕೀಡಾಗುವುದಿಲ್ಲ.

English summary

How You'll Know If Someone Likes You, Based On Zodiac Signs

here we told about How you'll know if someone likes you, based on zodiac signs, read on
Story first published: Monday, February 22, 2021, 18:12 [IST]
X