Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ವಾಲ್ಮೀಕಿ ಜಯಂತಿ 2025: ಮಹಾನ್ ಋಷಿ ವಾಲ್ಮೀಕಿ ಅವರ ಕೋಟ್ಸ್, ಶುಭಾಶಯಗಳು
ಆದಿಕವಿ ಮಹರ್ಷಿ ವಾಲ್ಮೀಕಿ ಹಿಂದೂಗಳ ಧರ್ಮಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಇದು ಭಾರತದ ಮೊಟ್ಟ ಮೊದಲ ಮಹಾಕಾವ್ಯ ಎಂಬ ಹಿರಿಮೆಗೆ ಸಹ ಪಾತ್ರವಾದ ಕೃತಿ ಹಾಗೂ ಕರ್ತೃ ಮಹರ್ಷಿ ವಾಲ್ಮೀಕಿ.

ಅಕ್ಟೋಬರ್ 07ರಂದು ಮಹರ್ಷಿ ವಾಲ್ಮೀಕಿ ಅವರು ಜನಿಸಿದ ದಿನ, ಇಂದು ದೇಶಾದ್ಯಂತ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ವಿಶೇಷ ಗೌರವ ನೀಡಲಾಗಿದೆ. ಈ ಹಿನ್ನೆಲೆ ಮಹಾನ್ ಋಷಿ ವಾಲ್ಮೀಕಿ ಅವರು ಹೇಳಿರುವ ಜೀವನಸಾರವುಳ್ಳ ಹೇಳಿಕೆಗಳನ್ನು ನಾವಿಲ್ಲಿ ದಾಖಲಿಸಿದ್ದೇವೆ:
1. ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನೆ ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸು ಗೆದ್ದೇ ಗೆಲ್ಲುವೆ. -ಮಹರ್ಷಿ ವಾಲ್ಮೀಕಿ
2. ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ. - ಮಹರ್ಷಿ ವಾಲ್ಮೀಕಿ
3. ಪ್ರಶ್ನಿಸಿದರು ಎಂದು ಕುಗ್ಗಬೇಡ, ಪ್ರಶ್ನೆ ಯಾರಾದರೂ ಕೇಳುವರು, ಸಮಯ ನೋಡಿ ಉತ್ತರ ಕೊಡುವವನೇ ಚಾಣಾಕ್ಯ. - ಮಹರ್ಷಿ ವಾಲ್ಮೀಕಿ
4. ಬೇರೆಯವರ ಬಗ್ಗೆ ಕೆಟ್ಟ್ ಭಾವನೆ, ಆಲೋಚನೆಗಳನ್ನು ನಮ್ಮ ಮನಸ್ಸಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸೆ ಮಲಿನವಾಗುತ್ತದೆ. - ಮಹರ್ಷಿ ವಾಲ್ಮೀಕಿ
5. ವ್ಯಕ್ತಿಯು ಆನೆಯನ್ನೇ ಉಡುಗೊರೆಯಾಗಿ ನೀಡುವಾಗ, ಆನೆಯನ್ನು ಕಟ್ಟುವ ಹಗ್ಗದ ಮೇಲೆ ಮನಸ್ಸಿದ್ದರೆ ಏನು ಪ್ರಯೋಜನ. ಆನೆಯನ್ನೇ ಕಳೆದುಕೊಂಡಾಗ ಹಗ್ಗದ ಮೇಲಿನ ಬಾಂಧವ್ಯದಿಂದ ಏನು ಉಪಯೋಗ. - ಮಹರ್ಷಿ ವಾಲ್ಮೀಕಿ
6. ವೈರಿಯನ್ನು ಇಲ್ಲವಾಗಿಸಲು ಅವನ ತಲೆ ತೆಗೆಯಬೇಕಾಗಿಲ್ಲ, ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು. - ಮಹರ್ಷಿ ವಾಲ್ಮೀಕಿ
7. ಬಂಗಾರವೇ ಬದುಕಲ್ಲ, ಬದುಕು ಬಂಗಾರವಾಗಲಿ. - ಮಹರ್ಷಿ ವಾಲ್ಮೀಕಿ
8. ಯಾವಾಗಲೂ ಸಂತೋಷವಾಗಿರಲು ಹೇಗೆ ತಾನೇ ಸಾಧ್ಯ. ಜೀವನ ಎಂದ ಮೇಲೆ ಸುಖ ಮತ್ತು ದುಃಖಗಳ ಮಿಳಿತವಾಗಿರುತ್ತದೆ, ನಿರಂತರವಾದ ಸಂತೋಷ ಮಾತ್ರ ಇರಲು ಸಾಧ್ಯವೇ ಇಲ್ಲ. - ಮಹರ್ಷಿ ವಾಲ್ಮೀಕಿ
9. ಸಮಯಕ್ಕಿಂತ ಶಕ್ತಿಶಾಲಿ ದೇವತೆ ಮತ್ತೊಂದಿಲ್ಲ. - ಮಹರ್ಷಿ ವಾಲ್ಮೀಕಿ
10. ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಬರುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತಾನೆ. ಧರ್ಮವೆ ಈ ಪ್ರಪಂಚದ ಸಾರವಾಗಿದೆ. - ಮಹರ್ಷಿ ವಾಲ್ಮೀಕಿ



Click it and Unblock the Notifications









