Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
Ganesh Chaturthi 2022 : ಗಣೇಶ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವಾಗ? ಹೆಚ್ಚಿನ ಫಲಕ್ಕೆ ಈ ಮಂತ್ರಗಳನ್ನು ಪಠಿಸಿ
ಹಿಂದೂಗಳಿಗೆ ಸಡಗರದ ಹಬ್ಬ ವಿನಾಯಕ ಚತುರ್ಥಿ. ಆ ದಿನ ವಿಘ್ನ ನಿವಾರಕನಾದ ಗಣೇಶನನ್ನು ಕೂರಿಸಿ ಅದ್ಧೂರಿಯಾಗಿ ಆಚರಿಸಲಾಗುವುದು. ವಿನಾಯಕ ಚತುರ್ಥಿಯಂದು ಮೋದಕ, ಕರ್ಜಿಕಾಯಿ, ಲಡ್ಡು ಸೇವಿಸುತ್ತಾ ಶೋಡಶೋಪಚಾರ ಸೇವೆ ಪಡೆಯಲು ಮನೆ-ಮನೆಗೆ ಬರುತ್ತಾನೆ, ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಗಣೇಶ ಬರುತ್ತಾನೆ ಎಂಬುವುದು ನಂಬಿಕೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ಗಣೇಶ ಹಬ್ಬವನ್ನು ದೇಶದೆಲ್ಲೆಡೆ ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ವರ್ಷ ವಿನಾಯಕ ಚತುರ್ಥಿ ಯಾವಾಗ, ಪೂಜೆಗೆ ಶುಭ ಮುಹೂರ್ತ, ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳೇನು ಎಂಬುವುದರ ಬಗ್ಗೆ ತಿಳಿಯೋಣ:

ಗಣೇಶ ಚತುರ್ಥಿ ದಿನಾಂಕ ಮತ್ತು ಸಮಯ
2022ರಲ್ಲಿ ಗಣೇಶ ಚತುರ್ಥಿಯನ್ನು ಆಗಸ್ಟ್ 31ರಂದು ಆಚರಿಸಲಾಗುವುದು.
* ಶುಕ್ಲ ಪಕ್ಷ ವಿನಾಯಕ ಚತುರ್ಥಿ/ ಗಣೇಶ ಚತುರ್ಥಿ
ಆಗಸ್ಟ್ 31, 2022
ಚತುರ್ಥಿ ತಿಥಿ ಪ್ರಾರಂಭ: ಆಗಸ್ಟ್ 30, 2022 ಸಂಜೆ 3:33ಕ್ಕೆ ಪ್ರಾರಂಭ
ಚತುರ್ಥಿ ತಿಥಿ ಮುಕ್ತಾಯ: ಆಗಸ್ಟ್ 31, 2022 ಸಂಜೆ 3:22ರವರೆಗೆ

ಗಣೇಶ ಚತುರ್ಥಿಯ ಮಹತ್ವ
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಹಬ್ಬವನ್ನು ಮಾಡಲಾಗುವುದು. ದಿನ ವಿನಾಯಕನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ನಾವು ಬೇಡಿದ್ದೆಲ್ಲಾ ಕೊಟ್ಟು ಅನುಗ್ರಹಿಸುತ್ತಾನೆ. ಗಣೇಶನನ್ನು ಅತ್ಯಂತ ಬುದ್ಧಿವಂತ, ಜ್ಞಾನವಂತ, ಸಂಪತ್ತು ಹಾಗೂ ಜ್ಞಾನದ ದೇವರು ಮತ್ತು ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದು ಪರಿಗಣಿಸಲಾಗಿದೆ.
ಇನ್ನು ಯಾವುದೇ ದೇವರಿಗೆ ಮಾಡುವ ಪೂಜೆಯಾಗಲಿ ಮೊದಲಿಗೆ ಗಣಪತಿಗೆ ಪೂಜೆ ಮಾಡಿದ ಬಳಿಕವಷ್ಟೇ ಉಳಿದ ದೇವರುಗಳಿಗೆ ಪೂಜೆ ಮಾಡಲಾಗುವುದು. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಯಾವುದೇ ವಿಘ್ನಗಳು ಬಾರದಂತೆ ಗಣಪತಿ ರಕ್ಷಣೆ ನೀಡಲಿ ಎಂದು ಬಯಸಿ ಗಣಪತಿಗೆ ಪೂಜೆಯನ್ನು ಸಲ್ಲಿಸಲಾಗುವುದು.
ಗಣೇಶ ಪುರಾಣ ಮತ್ತು ಸ್ಕಂದ ಪುರಾಣದ ಪ್ರಕಾರ, ಗಣೇಶನು ಶುಕ್ಲ ಚತುರ್ಥಿಯಂದು ಭಾದ್ರಪದ ಮಾಸದಲ್ಲಿ ಜನಿಸಿದನು. ಆದ್ದರಿಂದ ಭಾದ್ರಪದ ಮಾಸದಲ್ಲಿ ವಿನಾಯಕ ಚತುರ್ಥಿಯನ್ನು ಆಚರಿಸಲಾಗುವುದು. ವಿನಾಯಕನನ್ನು ನಂಬಿದವರನ್ನು ಎಂದಿಗೂ ಕೈ ಬಿಡಲ್ಲ, ಆದ್ದರಿಂದ ಜನರು ವಿನಾಯಕನನ್ನು ತುಂಬಾ ನಂಬುತ್ತಾರೆ.

ಪೂಜೆ ಮಾಡುವ ಪದ್ಧತಿ
ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಗಣಪತಿ ಹಬ್ಬವನ್ನು ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸಲಾಗುವುದು. ಭಾದ್ರಪದ ಚತುರ್ಥಿಯಂದು ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಗಣೇಶನನ್ನು ಕೂರಿಸಿರುವ ಸ್ಥಳವನ್ನು ಹೂವಿನಿಂದ ಅಲಂಕರಿಸಿ, ತಳಿರು ತೋರಣಗಳಿಂದ ಸಿಂಗರಿಸಬೇಕು. ಗಣೇಶನಿಗೆ ಪ್ರಿಯವಾದ ಹೂಗಳು, ಎಕ್ಕದ ಹೂ, ದಾಸವಾಳ, ಗರಿಕೆಯನ್ನು ತಪ್ಪದೆ ಅರ್ಪಿಸಬೇಕು. ಗಣೇಶನಿಗೆ ಪ್ರಿಯವಾದ ತಿಂಡಿಗಳು, ಮೋದಕ, ಕರ್ಜಿಕಾಯಿ, ಲಡ್ಡು ಇವುಗಳನ್ನು ಅರ್ಪಿಸಲಾಗುವುದು. ಹಸುವಿನ ಸಗಣಿಯಲ್ಲಿ ಗರಿಕೆಯನ್ನು ಇಟ್ಟರೆ ಗಣಪನಿಗೆ ಶ್ರೇಷ್ಟ ಎಂದು ಹೇಳಲಾಗುತ್ತದೆ.
ಈ ದಿನ ಬೇಗನೆ ಎದ್ದು ಇಡೀ ದಿನ ಉಪವಾಸ ಮಾಡುವ ಪದ್ಧತಿ ಸಹ ಇದೆ. ಸಂಜೆಯ ವೇಳೆಗೆ ಗಣಪನಿಗೆ ಧಾನ್ಯಗಳಿಂದ ಮಾಡಿದ ಪ್ರಸಾದ ಅಥವ ಮೊಸರನ್ನ ಅರ್ಪಿಸಿ ಮಂಗಳಾರತಿ ಮಾಡಬೇಕು. ಕೆಲವರುಒಂದೇ ದಿನ ಇಟ್ಟು ಗಣಪನನ್ನು ವಿಸರ್ಜಿಸುತ್ತಾರೆ. ಆಗ ಸಂಜೆ ಪ್ರಸಾದ ಅರ್ಪಿಸಿ ಮಹಾ ಮಂಗಳಾರತಿ ಮಾಡಿ ಗಣೇಶನನ್ನು ಬೀಳ್ಕೊಡಬೇಕು. ಬಹುತೇಕರು ಅನಂತ ಚತುರ್ದಶಿಯಂದು ಗಣೇನನ್ನು ವಿಸರ್ಜಿಸುತ್ತಾರೆ. ಗಣೇಶನನ್ನು ವಿಸರ್ಜಿಸುವ ದಿನದವರೆಗೂ ಪ್ರತಿ ದಿನ ಸಂಜೆ ಪ್ರಸಾದ ಅರ್ಪಿಸಿ ಮಂಗಳಾರತಿ ಮಾಡಬೇಕು.

ಗಣಪತಿ ಮಂತ್ರಗಳು
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications











