Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಾಣಕ್ಯರು ಜ್ಞಾನವನ್ನು ಕಾಮಧೇನುವಿಗೆ ಹೋಲಿಸಿದ್ದು ಇದೇ ಕಾರಣಕ್ಕೆ!
ಚಾಣಕ್ಯನ ಪ್ರಕಾರ ನಾವು ಬದುಕಿದ್ದಾಗ, ಆರೋಗ್ಯವಾಗಿದ್ದಾಗ ನಮ್ಮ ದೇಹ ನಮ್ಮ ನಿಯಂತ್ರಣದಲ್ಲಿರುತ್ತದೆ. ಆದರೆ ಸತ್ತ ಮೇಲೆ ಆ ದೇಹವು ನಮ್ಮ ನಿಯಂತ್ರಣದಲ್ಲಿರುವುದಿಲ್ಲ ಹಾಗೂ ಅದರ ಮೇಲಿನ ವ್ಯಾಮೋಹವನ್ನು ಬಿಟ್ಟು ಬಿಡಬೇಕು ಎನ್ನುತ್ತಾರೆ ಚಾಣಕ್ಯ.

ಹುಟ್ಟು-ಸಾವಿನ ಮಧ್ಯೆ ಬರೀ ನಾಲ್ಕು ದಿನ ಮಾತ್ರ. ಆ ನಾಲ್ಕು ದಿನ ನಾವು ಎಷ್ಟೇ ಸಂಪಾದಿಸಿದರೂ ಸತ್ತಾಗ ಅದು ನಮ್ಮ ಜೊತೆಗೆ ಬರುವುದಿಲ್ಲ. ಆದರೆ ವಿದ್ಯೆ ಎಂಬ ಸಂಪತ್ತನ್ನು ನಮ್ಮದಾಗಿಸಿಕೊಳ್ಳಿ ಎಂದು ಚಾಣಕ್ಯ ಹೇಳಿದ್ದಾರೆ. ಹಾಗಾದರೆ ಆಚಾರ್ಯರು ಆ ರೀತಿ ಹೇಳಿದ್ಯಾಕೆ? ಅದರ ಹಿಂದಿನ ಕಾರಣವೇನು ಅನ್ನೋದನ್ನ ಹೇಳ್ತೀವಿ.
ಆಚಾರ್ಯರ ಮಾತುಗಳು ಇಂದಿಗೂ ಜನರ ಸಂಕಷ್ಟದ ಪರಿಸ್ಥಿಯಲ್ಲಿ ಅವರನ್ನು ಸರಿದಾರಿಯಲ್ಲಿ ನಡೆಸೋದಕ್ಕೆ ಸಹಾಯ ಮಾಡುತ್ತಿದೆ. ಹಾಗೂ ನಮಂತಹ ಸಾಮಾನ್ಯ ಜನರಿಗೆ ಪ್ರೇರಣೆ ಅಂದರೂ ತಪ್ಪಾಗೋದಿಲ್ಲ. ಬದುಕಿನಲ್ಲಿ ಖಷಿಯಾಗಿರಲು ಹಾಗೂ ಶಾಂತಿಯಿಂದ ಜೀವನ ನಡೆಸಲು ಆಚಾರ್ಯರು ಅದೆಷ್ಟೋ ನೀತಿಗಳನ್ನು ಭೋದಿಸಿದ್ದಾರೆ. ಈ ನೀತಿಗಳನ್ನು ಪಾಲಿಸಿದರೆ ಬದುಕು ನಿಜವಾಗಿಯೂ ಸುಲಭ ಎಂದೆನಿಸುತ್ತದೆ.
ಕಾಮಧೇನುವಿನಂತೆ ಜ್ಞಾನ ಗಳಿಸಿ
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ನಮ್ಮ ಜ್ಞಾನದ ಹಸಿವು ಹೆಚ್ಚಾಗಿರಬೇಕು. ಕಾಮಧೇನುವಿನಂತೆ ನಾವು ಜ್ಞಾನವನ್ನು ಗಳಿಸಬೇಕು. ಯಾಕೆಂದರೆ ಕಾಮಧೇನು ನಮಗೆ ಯಾವಾಗಲೂ ಅಮೃತವನ್ನೇ ನೀಡುತ್ತದೆ. ನಾವು ಅಗಾಧವಾದ ಜ್ಞಾನಗಳಿಸಿದಷ್ಟು ನಮಗೆ ಒಳ್ಳೆಯದು ಯಾಕೆಂದರೆ ಆ ಜ್ಞಾನ ನಮ್ಮ ಪಾಲಿಗೆ ಅಮೃತವೇ ಆಗುತ್ತದೆ. ಜ್ಞಾನವು ಒಂದು ರೀತಿಯಲ್ಲಿ ಪವಿತ್ರ ಸಂಪತ್ತು ಇದ್ದ ಹಾಗೆ ಎಂದು ಚಾಣಕ್ಯರು ವಿವರಿಸಿದ್ದಾರೆ.
ಸಂತನಂತೆ ಹೊಂದಾಣಿಕೆ ಇರಲಿ
ಚಾಣಕ್ಯ ಹೇಳುವ ಪ್ರಕಾರ ನಮ್ಮ ನಡವಳಿಕೆ ಯಾವತ್ತಿಗೂ ಸಂತನ ಹಾಗೆಯೇ ಇರಬೇಕು. ನಮ್ಮೊಳಗೆ ಸಂತ ಇದ್ದಾಗ ಸುಖಾ ಸುಮ್ಮನೆ ಕೋಪ, ಆವೇಶ, ಆಕ್ರೋಶ ಯಾವುದು ನಮ್ಮ ಹತ್ತಿರ ಸುಳಿಯೋದಿಲ್ಲ. ಆಗ ನಮ್ಮ ಜೀವನದಲ್ಲಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಬಹುದು ಅಂತಾರೆ ಚಾಣಕ್ಯ. ಸತ್ತ ಮೇಲೆ ನಮ್ಮಿಂದ ಏನನ್ನೂ ಸಾಧಿಸೋದಕ್ಕಾಗಲಿ, ಗಳಿಸೋದಕ್ಕಾಗಲಿ ಆಗೋದಿಲ್ಲ. ಜೀವನದಲ್ಲಿ ಜ್ಞಾನವನ್ನು ಗಳಿಸೋದು ತುಂಬಾನೇ ಮುಖ್ಯ.
ಮೂರ್ಖರಿಗಿಂತ ಇವರೇ ಮೇಲೂ
ವಿದ್ಯೆ ಎಂಬ ಇಲ್ಲದೇ ಇರುವ ವ್ಯಕ್ತಿ ಬದುಕಿದ್ದು ಸತ್ತಂತೆ. ಉದಾಹಣೆಗೆ ಒಂದು ಮಗು ಹುಟ್ಟುತ್ತಿದಂತೆ ಸತ್ತರೆ ಆ ಮಗುವಿನ ಹೆತ್ತವರು ಆ ಕ್ಷಣಕ್ಕೆ ಕಣ್ಣೀರಿಡುತ್ತಾರೆ. ಸ್ವಲ್ಪ ದಿನ ಅದರ ಬಗ್ಗೆ ಯೋಚಿಸುತ್ತಾ ಇರುತ್ತಾರೆ. ನಂತರ ಆ ನೋವನ್ನು ಮರೆಯುತ್ತಾರೆ. ಆದರೆ ಒಬ್ಬ ಮೂರ್ಖನಿಗೆ ಜನ್ಮ ನೀಡಿದರೆ ಜೀವನ ಪರ್ಯಂತ ಅದೇ ನೆನಪಿನಲ್ಲಿ ಅವರು ಕೊರಗುತ್ತಿರಬೇಕಾಗುತ್ತದೆ.
ವಿದ್ಯೆ ಎಂಬುದು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಪುರಾಣಗಳ ಪ್ರಕಾರ ನಮಗೆ ಮುಂದಿನ ಜನ್ಮ ಅಂತಿದ್ದರೆ ನಾವು ಈ ಜನ್ಮದಲ್ಲಿ ಗಳಿಸಿದ ಜ್ಞಾನವು ಮುಂದಿನ ಜನ್ಮದಲ್ಲಿ ನಮ್ಮ ಜೊತೆಯಾಗುತ್ತದೆ ಅಂತೆ. ಅದೇ ಕಾರಣಕ್ಕೆ ಸತ್ತಾಗ ಕೋಟಿ ಕೋಟಿ ಆಸ್ತಿ ಗಳಿಸದಿದ್ದರೂ ಪರವಾಗಿಲ್ಲ. ಆದರೆ ಅಘಾದ ಜ್ಞಾನವನ್ನು ಗಳಿಸಿ ಎನ್ನುತ್ತರೆ ಚಾಣಕ್ಯ.



Click it and Unblock the Notifications



