Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಾಣಕ್ಯ ಪ್ರಕಾರ ಈ 6 ವಿಷಯಗಳು ನಮ್ಮೊಂದಿಗಿದ್ದರೆ ಸರ್ವನಾಶವಾಗುತ್ತೇವೆ
ಬೆಂಕಿ ಕಂಡರೆ ಎಲ್ಲರಿಗೂ ಸಾಮಾನ್ಯವಾಗಿ ಭಯ ಇದ್ದೇ ಇರುತ್ತದೆ. ಯಾಕಂದ್ರೆ ಕೊಂಚ ಬೆಂಕಿ ತಗುಲಿದ್ರು ಅಪಾಯ ಕಟ್ಟಿಟ್ಟ ಬುತ್ತಿ. ಅಷ್ಟೇ ಯಾಕೆ ಸಾವು ಕೂಡ ಸಂಭವಿಸಬಹುದು. ನಿಮಗೊತ್ತಾ ಮಾನವನನ್ನ ಬೆಂಕಿಯಿಲ್ಲದೇನೆ ಸುಡುವ ಅಪಾಯಕಾರಿ ವಿಷಯಗಳಿದೆ. ಕೊಂಚ ಎಚ್ಚರ ತಪ್ಪಿದ್ರು ಮಹಾ ಅನಾಹುತವೇ ಸಂಭವಿಸಹುದು.

ಖಂಡಿತ ಈ 6 ವಿಚಾರಗಳು ನಿಮ್ಮ ಜೀವನವನ್ನೇ ಸುಟ್ಟು ಬಿಡಬಹದು. ನಾವು ಇವತ್ತು ಅಂತಹದ್ದೇ 6 ವಿಚಾರಗಳ ಬಗ್ಗೆ ತಿಳಿಸಿ ಕೊಡ್ತೀವಿ.

1. ಬಡತನ
ಬಡವರಾಗಿ ಹುಟ್ಟುವುದು ನಮ್ಮ ಕರ್ಮ ಅಂತ ನಾವು ಯಾವಾಗಲೂ ನೊಂದುಕೊಳ್ಳುತ್ತಿರುತ್ತೇವೆ. ಚಾಣಕ್ಯನ ಪ್ರಕಾರ ಬಡತನವು ನಮ್ಮನ್ನು ಬೆಂಕಿ ಇಲ್ಲದೇ ಸುಡುವ ಮೊಟ್ಟ ಮೊದಲ ವಿಚಾರ. ಕೈಯಲ್ಲಿ ದುಡ್ಡಿಲ್ಲ, ತಿನ್ನೋದಿಕ್ಕೆ ಅನ್ನವಿಲ್ಲ, ಉಡೋದಕ್ಕೆ ಚೆನ್ನಾಗಿರೋ ಬಟ್ಟೆನೂ ಇಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಅದೆಂತವರನ್ನು ದುರ್ಬಲರನ್ನಾಗಿಸಬಹುದು. ಜೀವನ ಪೂರ್ತಿ ಕಣ್ಣೀರಿನಿಂದ ಗದ್ಗದಿತರಾಗಿ ಹೃದಯಭಾರವಾಗಿ ಬಿಡಬಹುದು. ಬದುಕೇ ಸಾಕು ಅನ್ನುವ ಹಂತಕ್ಕೆ ತಲುಪಿ ಬಿಡುತ್ತೇವೆ. ಬಡತನ ನಿಧಾನವಾಗಿ ನಮ್ಮ ಅಸ್ತಿತ್ವವನ್ನೇ ಸುಟ್ಟು ಬಿಡುತ್ತದೆ.

2. ಸ್ವಾರ್ಥಿಗಳ ಜೊತೆಯಲ್ಲಿ ಇರುವುದು
ಚಾಣಕ್ಯನ ಪ್ರಕಾರ ಬೆಂಕಿಯಿಲ್ಲದೇ ಮನುಷ್ಯನನ್ನು ಸುಡುವ ಮೂರನೇ ವಿಚಾರ ಸ್ವಾರ್ಥಿಗಳ ಜೊತೆಯಲ್ಲಿ ಇರುವುದು. ಸ್ವಾರ್ಥ ಎಂಬುವುದು ಎಂತವರನ್ನು ಕೆಟ್ಟವರನ್ನಾಗಿಸಬಹುದು. ಮನುಷ್ಯರಿಗೆ ನಾನು, ನನ್ನದು ಅನ್ನುವ ಸ್ವಾರ್ಥ ಇರುತ್ತದೆ. ಅಂತಹ ಜನರು ಅವರ ಹಿತವನ್ನು ಬಿಟ್ಟು ಬೇರೆಯಾರ ಹಿತವನ್ನು ಬಯಸುವುದಿಲ್ಲ. ನೀವೇನಾದರೂ ಸ್ವಾರ್ಥಿಗಳ ಮಧ್ಯದಲ್ಲಿ ಇದ್ದರೆ ನಿಮ್ಮ ಏಳಿಗೆ ಖಂಡಿತ ಆಗುವುದಿಲ್ಲ. ಬದಲಾಗಿ ಅದು ನಿಧಾನವಾಗಿ ನಿಮ್ಮನ್ನು ಸುಡುತ್ತಾ ಹೋಗುತ್ತದೆ.

3. ಕೆಟ್ಟವರ ಸಂಘ
ಕೆಟ್ಟ ಜನರ ಸಂಘವು ಚಾಣಕ್ಯನ ಪ್ರಕಾರ ಬೆಂಕಿಯಿಲ್ಲದೇ ಮನುಷ್ಯನನ್ನು ಸುಡುವ ಮೂರನೇ ವಿಚಾರ. ಒಬ್ಬ ಮನುಷ್ಯ ಕೆಟ್ಟವನೆಂದು ತಿಳಿದಿದ್ರು ಕೂಡ ಪದೇ ಪದೇ ಆತನ ಸಂಘವನ್ನು ಬಯಸೋದು ತಪ್ಪು. ದುಷ್ಟರಿಂದ ದೂರವಿರಿ ಅನ್ನೋ ಗಾದೆ ಮಾತಿನಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ. ಸುಡುವ ಆಗ್ನಿ ಜ್ವಾಲೆಯಿಂದ ನಿಮ್ಮನ್ನೇ ನೀವು ಸುಟ್ಟುಕೊಂಡಂತೆ.

4. ಸಾಲ
ಸಾಲ ಎಂದರೆ ಒಂದು ರೀತಿಯ ಹೊಣೆಗಾರಿಕೆ. ಮನುಷ್ಯನನ್ನು ಬೆಂಕಿಯಿಲ್ಲದೆ ಸುಡುವ ವಿಚಾರಗಳಲ್ಲಿ ಹೊಣೆಗಾರಿಕೆಯು ಒಂದಾಗುತ್ತದೆ. ಸಾಲ ಪಡೆದುಕೊಂಡವನು ಒಂದು ವೇಳೆ ಸಾಲ ತೀರಿಸಲು ಆಗದೇ ಹೋದರೆ ಅದೊಂದು ರೀತಿಯ ಹೊರೆಯಾಗುತ್ತದೆ. ಸಾಲ ಕೊಟ್ಟವನು ಪದೇ ಪದೇ ಮನೆಮುಂದೆ ಬಂದು ಹೀಯಾಳಿಸುತ್ತಿರುತ್ತಾನೆ. ಇದರಿಂದ ನಿಮಗಷ್ಟೇ ಅಲ್ಲ ನಿಮ್ಮ ಮನೆಯವರಿಗೂ ಅವಮಾನ ಉಂಟಾಗುತ್ತದೆ. ಒಂದಲ್ಲ ಒಂದು ದಿನ ಇದ್ದದ್ದನ್ನೆಲ್ಲಾ ಕಳೆದುಕೊಂಡು ಅವಮಾನ, ನಷ್ಟ, ದುಃಖ ಅನುಭವಿಸಬೇಕಾಗುತ್ತದೆ. ಸಾಲದ ಶೂಲಕ್ಕೆ ಸಿಲುಕಿದವರು ಉದ್ಧಾರವಾದ ಉದಾಹಣೆಯೇ ಇಲ್ಲ.

5. ಒಡಹುಟ್ಟಿದವರಿಂದ ಅವಮಾನ
ಚಾಣಕ್ಯನ ಪ್ರಕಾರ ನಮ್ಮ ತಂದೆ-ತಾಯಿ, ಪತ್ನಿ, ಮಕ್ಕಳು ಬಿಟ್ಟರೆ ನಂತರ ಬರುವವರೆ ನಮ್ಮ ಒಡಹುಟ್ಟಿದವರು. ಬಾಲ್ಯದಿಂದ ಜೊತೆಯಾಗಿ ಬೆಳೆದವರು ಮುಂದೊಂದು ದಿನ ನಿಮ್ಮನ್ನೇ ಅವಮಾನಿಸುತ್ತಾರೆ ಅಂದರೆ ಖಂಡಿತ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಬಾಲ್ಯದಲ್ಲಿ ಇದ್ದ ಆ ಮಮತೆ, ಅಕ್ಕರೆ ಎಲ್ಲವನ್ನೂ ಮರೆತು ವೈರಿಗಳಂತೆ ವರ್ತಿಸುತ್ತಾರೆ. ಮೂರನೇ ವ್ಯಕ್ತಿಯ ಮುಂದೆ ನಿಮ್ಮನ್ನು ಅವಮಾನಿಸುತ್ತಾರೆ. ಈ ವಿಚಾರ ಕೂಡ ಬೆಂಕಿಯಿಲ್ಲದೆ ಮನುಷ್ಯನನ್ನು ಸುಡುತ್ತದೆ.

6. ಮಡದಿಯಿಲ್ಲದ ಜೀವನ
ಗಂಡ-ಹೆಂಡತಿ ಸಂಬಂಧ ಬೈಸಿಕಲ್‌ನಲ್ಲಿರುವ ಎರಡು ಚಕ್ರಗಳಂತೆ. ಎರಡು ಜೊತೆ ಸಾಗಿದಾಗ ಮಾತ್ರ ಮುನ್ನಡೆಯೋದಕ್ಕೆ ಸಾಧ್ಯ. ಅದರಲ್ಲಿ ಒಂದು ಚಕ್ರ ಮುರಿದುಬಿದ್ದರೆ ಬೈಸಿಕಲ್ ಮುಂದೆ ಹೋಗೋದಕ್ಕೆ ಆಗೋದಿಲ್ಲ. ಅದೇ ರೀತಿ ಗಂಡ-ಹೆಂಡತಿ ಸೇರಿದರೆನೇ ಸುಂದರ ಸಂಸಾರ ನಡೆಸಲು ಸಾಧ್ಯ. ಪತ್ನಿ ಎಂಬಾಕೆ ಮನೆಯಲ್ಲಿದ್ದಾಗ ಮಾತ್ರ ಸಂಸಾರದ ಬಂಡಿ ಸಾಗೋದು. ಇಲ್ಲವಾದರೆ ಮನುಷ್ಯನ ಜೀವನ ಡೋಲಾಯಮಾನವಾಗಿ ಬಿಡುತ್ತದೆ.
"ಜೀವನದಲ್ಲಿ ಕೆಲವೊಂದು ಘಟನೆಗಳು ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ನಡೆದು ಹೋಗುತ್ತದೆ. ಬಡತನದ ಜೊತೆಗೆ ನಮ್ಮನ್ನ ಸುಡುವ ವಿಚಾರಗಳು ಯಾವುದು ನಮ್ಮೊಂದಿಗೆ ಶಾಶ್ವತವಾಗಿ ಇರೋದಿಲ್ಲ. ಗೆಲುವಿನೆಡೆಗೆ ನಮ್ಮ ಸತತ ಪ್ರಯತ್ನವಿದ್ದಾಗ ಮಾತ್ರ ಎಂತಹ ಸಂಕಷ್ಟದಿಂದ ಬೇಕಾದರೂ ನಾವು ಪಾರಾಗಬಹುದು. "



Click it and Unblock the Notifications
