Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಾಧನೆ, ಸೇಡು, ಪ್ರೀತಿ, ಶತ್ರುನಾಶದ ಬಗ್ಗೆ ಚಾಣಾಕ್ಯ ಎಂಥಾ ಹೇಳಿದ್ದಾರೆ ಗೊತ್ತಾ?
ಜೀವನದಲ್ಲಿ ಕಲಿಯುವುದಕ್ಕೆ ಸಾಕಷ್ಟಿದೆ. ಹುಟ್ಟಿದ ಕ್ಷಣದಿಂದ ಸಾಯುವ ಕಡೆಯವರೆಗೆ ನಾವು ಒಂದಿಲ್ಲೊಂದು ಜೀವನ ಪಾಠವನ್ನು ಕಲಿಯುತ್ತಲೇ ಇರುತ್ತೇವೆ. ಎಲ್ಲರಿಗೂ ನೋವಾದಾಗ, ತುಂಬಾ ಬೇಸರವಾದಾಗ, ಅಹಿತಕರ ಘಟನೆಗಳು ಸಂಭವಿಸಿದಾಗ ಸಂದರ್ಭಕ್ಕೆ ಅನುಗುಣವಾಗುವ ಮಾತು, ನುಡಿಮುತ್ತು, ನುಡಿಗಟ್ಟುಗಳು ನೆನಪಾಗುತ್ತದೆ.
ಕನ್ನಡಕ್ಕೆ ಎಲ್ಲಾ ಸಂದರ್ಭಕ್ಕು ಅನ್ವಯವಾಗುವಂತೆ ಸಾವಿರಾರು ಜೀವನ ತಂತ್ರಗಳನ್ನು ಹೇಳಿಕೊಟ್ಟವನು ಚಾಣಾಕ್ಯ. "ಚಾಣಾಕ್ಯ ನೀತಿ" ಎಂದೇ ಪ್ರಸಿದ್ಧ. ಪಂಚತಂತ್ರಗಳು ಕೈಕೊಟ್ಟಾಗ ರಣತಂತ್ರಗಳನ್ನು ಪ್ರಯೋಗಿಸಬೇಕು, ರಣತಂತ್ರಗಳು ಕೈ ಕೊಟ್ಟಾಗ ಚಾಣಾಕ್ಯ ತಂತ್ರಗಳನ್ನು ಅನುಸರಿಸಬೇಕು. ಸಾಧನೆ, ಸೇಡು, ಪ್ರೀತಿ, ಯೌವ್ವನ, ಯಶಸ್ಸು, ಸುಖ, ಶತ್ರುನಾಶ, ಮನಃಶಾಂತಿಗೆ ಚಾಣಕ್ಯನ ಪವರ್‌ಫುಲ್ ತಂತ್ರಗಳಿಗೆ, ಕೆಲವು ಚಾಣಾಕ್ಯ ನೀತಿ ಪಾಠ ಇಲ್ಲಿದೆ ನೋಡಿ:

1. ತಪ್ಪುಗಳಿಂದಲೇ ಕಲಿಯಿರಿ
"ಇತರರ ತಪ್ಪುಗಳಿಂದಲೇ ಆದಷ್ಟು ಕಲಿಯಿರಿ, ಎಲ್ಲ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗೆ ಇಲ್ಲ". - ಚಾಣಕ್ಯ

2. ಅರ್ಧದಲ್ಲಿ ಕೈ ಬಿಡಬೇಡಿ
"ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ. ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೊ ಅದನ್ನು ಅರ್ಧದಲ್ಲಿ ಕೈ ಬಿಡಬೇಡಿ". - ಚಾಣಕ್ಯ

3. ಮೋಹ ತ್ಯಾಗ
"ಶಿಕ್ಷಣವನ್ನು ಪಡೆಯುವುದು ಒಂದು ತಪಸ್ಸಿದ್ದಂತೆ. ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗ ಮಾಡಬೇಕು". - ಚಾಣಕ್ಯ

4. ಪ್ರಾಮಾಣಿಕತೆ
"ಅವಶ್ಯಕತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇಲ್ಲ. ಅತಿಯಾಗಿ ಪ್ರಾಮಾಣಿಕರಾಗಿರುವುದು ಆರೋಗ್ಯಕರವಲ್ಲ, ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ". - ಚಾಣಕ್ಯ

5. ಅತಿಯಾಗಿ ಯಾವುದನ್ನು ಮಾಡಬಾರದು
"ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು, ಅತಿಯಾದ ದಾನ ಬಲಿಯನ್ನು ನಾಶ ಮಾಡಿತು. ಆದ್ದರಿಂದ ಅತಿಯಾಗಿ ಯಾವುದನ್ನು ಮಾಡಬಾರದು". - ಚಾಣಕ್ಯ.

6. ಶಕ್ತಿ
"ಪ್ರಪಂಚದ ದೊಡ್ಡ ಶಕ್ತಿ ಯುವಜನತೆ ಮತ್ತು ಹೆಣ್ಣಿನ ಸೌಂದರ್ಯವಾಗಿದೆ". - ಚಾಣಕ್ಯ

7. ಸ್ವಾರ್ಥ
"ಕುಡುಕನಿಗೆ ಹೇಗೆ ಒಳ್ಳೆಯದು ಕೆಟ್ಟದ್ದು ಗೊತ್ತಾಗುವುದಿಲ್ಲವೋ, ಅದೇ ರೀತಿ ಒಬ್ಬ ಸ್ವಾರ್ಥ ಆಸೆಗಳ ಸಾಧಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದೇ ಇಲ್ಲ". - ಚಾಣಕ್ಯ

8. ಸ್ವಹಿತಾಸಕ್ತಿ
"ಪ್ರತಿಯೊಂದು ಸ್ನೇಹದ ಹಿಂದೆ ಕೆಲವು ಸ್ವಹಿತಾಸಕ್ತಿ ಇರುತ್ತದೆ. ಸ್ವಹಿತಾಸಕ್ತಿಗಳಿಲ್ಲದೆ ಸ್ನೇಹವಿಲ್ಲ ಇದು ಕಹಿ ಸತ್ಯ". - ಚಾಣಕ್ಯ

9. ಆಕ್ರಮಣ
"ಬದುಕಿನಲ್ಲಿ ಭಯವು ಸಮೀಪಿಸಿದ ತಕ್ಷಣ, ಅದನ್ನು ಆಕ್ರಮಣ ಮಾಡಿ ಮತ್ತು ನಾಶಮಾಡಿ". - ಚಾಣಕ್ಯ

10. ರಹಸ್ಯ
"ಅತಿದೊಡ್ಡ ಗುರು-ಮಂತ್ರವೆಂದರೆ: ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಅದೇ ನಿಮ್ಮನ್ನು ನಾಶಪಡಿಸುತ್ತದೆ". - ಚಾಣಕ್ಯ

11. ದುಷ್ಟ ಮಗ
"ಒಂದು ಒಣಗಿದ ಮರವು ಬೆಂಕಿಯಾದರೆ ಇಡೀ ಅರಣ್ಯವನ್ನು ಸುಟ್ಟುಹಾಕುವಂತೆ, ದುಷ್ಟ ಮಗ ಇಡೀ ಕುಟುಂಬವನ್ನು ನಾಶಮಾಡುತ್ತಾನೆ". - ಚಾಣಕ್ಯ

12. ಪ್ರಸ್ತುತ ಕ್ಷಣ
"ನಾವು ಹಿಂದಿನದಕ್ಕಾಗಿ ಚಿಂತಿಸಬಾರದು ಅಥವಾ ಭವಿಷ್ಯದ ಬಗ್ಗೆ ಚಿಂತಿಸಬಾರದು, ವಿವೇಚನೆಯುಳ್ಳ ಮನುಷ್ಯ ಪ್ರಸ್ತುತ ಕ್ಷಣದೊಂದಿಗೆ ಮಾತ್ರ ವ್ಯವಹರಿಸುತ್ತಾರೆ". - ಚಾಣಕ್ಯ

13. ಜ್ಞಾನ ಅಥವಾ ಸಂಪತ್ತು
"ಯಾರ ಜ್ಞಾನವು ಪುಸ್ತಕಗಳಿಗೆ ಸೀಮಿತವಾಗಿದೆ ಮತ್ತು ಅವರ ಸಂಪತ್ತು ಇತರರ ಸ್ವಾಧೀನದಲ್ಲಿದೆ, ಅವರು ತಮ್ಮ ಜ್ಞಾನ ಅಥವಾ ಸಂಪತ್ತನ್ನು ಅಗತ್ಯವಿದ್ದಾಗ ಬಳಸಲಾರರು" - ಚಾಣಕ್ಯ

14. ಸ್ನೇಹಿತ
"ಮೊದಲ ಐದು ವರ್ಷಗಳ ಕಾಲ ನಿಮ್ಮ ಮಗುವನ್ನು ಪ್ರಿಯತಮೆಯಂತೆ ನೋಡಿಕೊಳ್ಳಿ. ಮುಂದಿನ ಐದು ವರ್ಷಗಳ ಕಾಲ ಅವರನ್ನು ಗದರಿಸಿ. ಹದಿನಾರನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಿ. ನಿಮ್ಮ ಬೆಳೆದ ಮಕ್ಕಳು ನಿಮ್ಮ ಉತ್ತಮ ಸ್ನೇಹಿತರು". - ಚಾಣಕ್ಯ

15. ಶ್ರೇಷ್ಠ
"ಮನುಷ್ಯನು ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ, ಹುಟ್ಟಿನಿಂದಲ್ಲ". - ಚಾಣಕ್ಯ

17. ವಿಷ
"ತನ್ನ ಹಲ್ಲಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸುಗುಡಲೇಬೇಕು". - ಚಾಣಕ್ಯ

18. ಒಳ್ಳೆಯತನ
"ಹೂವಿನ ಪರಿಮಳ ಗಾಳಿಯ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಿಗೂ ಹರಡುತ್ತದೆ" - ಚಾಣಕ್ಯಸ



Click it and Unblock the Notifications
