Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ಐದೂ ಜನರು ಸತ್ತು ಸ್ವರ್ಗಕ್ಕೆ ಹೋಗಿ ಮತ್ತೆ ಮರಳಿದವರು, ಅವರ ಹೇಳಿದ ಅನುಭವ ರೋಮಾಂಚನಕಾರಿ
ಸತ್ತ ಮೇಲೆ ಸ್ವರ್ಗ ಹಾಗಿರುತ್ತೆ-ಹೀಗಿರುತ್ತೆ ಎಂಬ ಅನೇಕ ಕಲ್ಪನೆಗಳಿವೆ, ಆದರೆ ಕೆಲವರು ಸತ್ತು ಆ ಅನುಭವ ಪಡೆದು ಬದುಕಿ ಬಂದವರು ಇದ್ದಾರೆ, ಆ ಅನುಭವಗಳ ಬಗ್ಗೆ ಬುಕ್ ಕೂಡ ಬರೆದಿದ್ದಾರೆ, ಸತ್ತು ಮತ್ತೆ ಬದುಕಿದ ವ್ಯಕ್ತಿಗಳ ಜೀವನ ಅನುಭವ ಕೇಳುವಾಗ ಮೈ ರೋಮಾಂಚನ ಅನಿಸುವುದು:

ನನಗೆ ನೆನಪಾದಾಗ ನಾನು ಸ್ವರ್ಗದಲ್ಲಿದ್ದೆ
ಮಿನಿಸ್ಟರ್ ಡೋನ್ ಪೈಪರ್ ಡ್ರೈವ್ ಮಾಡಿಕೊಂಡು ಹೋಗುವಾಗ ಅವರಿಗೆ ಅಪಘಾತವಾಗುತ್ತೆ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪಲ್ಸ್ ಸಿಗುತ್ತಿರಲಿಲ್ಲ, ಅವರು ಸತ್ತು ಹೋಗಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಅವರು ಬದುಕುತ್ತಾರೆ, ಆದರೆ ಅವರು ಬದುಕಿ ಬಂದ ಮೇಲೆ ನಾನು ಸ್ವರ್ಗದ ಬಾಗಿಲವರೆಗೆ ಹೋಗಿದ್ದೆ, ಅಲ್ಲಿ ತುಂಬಾ ಜನರಿದ್ದರು, ಎಲ್ಲರ ಮುಖದಲ್ಲಿ ನಗುವಿತ್ತು, ದೇವರನ್ನು ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ತಮ್ಮ ಸ್ವರ್ಗದ ಅನುಭವದ ಬಗ್ಗೆ 90 Minutes in Heaven ಎಂಬ ಬುಕ್ ಕೂಡ ಬರೆದಿದ್ದಾರೆ.
ಪಬ್ಲಿಕ್ ಸ್ಪೀಕರ್ ಅನಿತಾ ಮೂರ್ಜಾನಿ
ಅವರು ಕೂಡ ತಮಗೆ ಉಂಟಾದ ಸಾವಿನ ಅನುಭದ ಬಗ್ಗೆ ಹೇಳಿಕೊಂಡಿದ್ದಾರೆ. ಅವರಿಗೆ ಲಿಂಪೋಮಾ ಇತ್ತು, 2002ರಿಂದ ಆ ಕಾಯಿಲೆ ವಿರುದ್ಧ ಹೋರಾಡುತ್ತಿದ್ದರು, 2006ರಲ್ಲಿ ಕೋಮಾಗೆ ಜಾರುತ್ತಾರೆ, ಆದರೆ ಆ ಸಮಯದಲ್ಲಿನ ಅನುಭವವನ್ನು ಅನಿತಾ ಅವರು ಹೀಗೆ ಹೇಳುತ್ತಾರೆ. ಅವರಿಗೆ ಅವರು ಅವರ ಶರೀರ ಬಿಟ್ಟು ತುಂಬಾ ಮೇಲೆ ಇದ್ದೀನಿ ಎಂದು ಅನಿಸುತ್ತದೆಯಂತೆ, ಅವರು ಮಲಗಿದ್ದ ಕೋಣೆಯ ಹೊರಗಿನ ಪ್ರಪಂಚ ಕೂಡ ಕಾಣುತ್ತಿತ್ತಂತೆ, ಅವರಿಗೆ ಹೀಗೆ ಮೇಲಕ್ಕೆ ಹೋಗುವಾಗ ಅವರ ತಂದೆ ಸಿಗುತ್ತಾರೆ, ಇವರಿಗೆ ನೀನು ಮೇಲಕ್ಕೆ ಬಂದರೆ ಜೀವನಕ್ಕೆ ಮರಳಲು ಸಾಧ್ಯವಾಗಲ್ಲ, ಹಿಂತಿರುಗು ಅಂತಾರೆ, ಆದರೆ ಅವರಿಗೆ ಅದುವರೆಗೆ ಅನುಭವಿಸಿದ ಯಾವುದೇ ನೋವುಗಳಿರಲ್ಲ, ಇನ್ನು ಮೇಲಕ್ಕೆ ಹೋಗಬೇಕೆಂದು ಬಯಸುತ್ತಾರೆ, ಕೆಲವು ದಿನಗಳಾದ ಮೇಲೆ ಕೋಮಾದಿಂದ ಎಚ್ಚರವಾಗುತ್ತಾರೆ, ಆದರೆ ವೈದ್ಯಲೋಕ ಅಚ್ಚರಿಗೊಳ್ಳುವಂತೆ ಅವರು ಕಾಯಿಲೆಯಿಂದ ಶೇ. 70ರಷ್ಟು ಗುಣಮುಖರಾಗಿರುತ್ತಾರೆ. ಇದರ ಬಗ್ಗೆ Dying To Be Me ಎಂಬ ಬುಕ್‌ನಲ್ಲಿ ಬರೆಯಲಾಗಿದೆ.
ದೇಹದಿಂದ ಆತ್ಮ ಹೊರಬಂದ ಅನುಭವ
ಇವರೊಬ್ಬರು ಪ್ರಸಿದ್ಧ ಬರಹಗಾರರು ಅವರ ಹೆಸರು ಎರ್ನಸ್ಟ್ ಹೆಮ್ಮಿಂಗ್‌ವೇ. ಅವರು 1953ರಲ್ಲಿ ಉಂಟಾದ ವಿಮಾನ ದುರ್ಘಟನೆಯಲ್ಲಿ ಗಾಯಗೊಂಡಿದ್ದರು, ಮೊದಲ ವಿಶ್ವ ಯುದ್ಧದಲ್ಲಿ ಮೋಟಾರ್ ಬಾಂಬ್‌ನಿಂದಾಗಿ ಗಾಯಗೊಂಡಿದ್ದರು. ಆವಾಗ ಅವರಿಗೆ ಅವರ ಆತ್ಮ ದೇಹದಿಂದ ಹೊರಬಂದು ಮತ್ತೆ ಮರಳಿದ ಅನುಭವವಾಗಿತ್ತು ಎಂದು told a friend ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ದೇಹ ಬಿಟ್ಟು ಹೋದ ಆತ್ಮಕ್ಕೆ ಮುಂದಿನ ಭವಿಷ್ಯ ತೋರಿಸಿದ ದೇವತೆಗಳು
ಲೌರಿ ಲ್ಯಾಂಬರ್ಟ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು, ಒಂದು ಟೀಂ ಬಿಲ್ಡಿಂಗ್ ಎಕ್ಸಸೈಜ್ ಮಾಡುತ್ತಿದ್ದಾಗ ನೀರಿಗೆ ಬಿದ್ದು ಮುಳುಗುತ್ತಾರೆ, ಆಗ ಅವರಿಗೆ ದೇಹದಿಂದ ಆತ್ಮ ಹೊರಬಂದಂತೆ ಅನಿಸುತ್ತದೆಯಂತೆ, ಅಲ್ಲಿ ಅವರಿಗೆ ಹೊಳೆಯುವ ಬಟ್ಟೆಗಳನ್ನು ಧರಿಸಿರುವ ನೋಡಲು ಸುಂದರವಾಗಿರುವ ವ್ಯಕ್ತಿಗಳನ್ನು ಕಾಣುತ್ತಾರೆ. ಅವರು ಅವರ ಬಳಿಯಿದ್ದ ಹೊಳೆಯುವ ಪುಸ್ತಕ ತೆಗೆಯುತ್ತಾರೆ, ಅದರಲ್ಲಿ ಅವರ ಬಾಲ್ಯದಿಂದ ಇಲ್ಲಿಯವರೆಗೆ ಕಾಣಿಸುತ್ತಂತೆ ಅಲ್ಲದೆ ಭವಿಷ್ಯದಲ್ಲಿ ಮದುವೆ ಹಾಗೂ ಮಕ್ಕಳ ಬಗ್ಗೆ ಕೂಡ ಪುಸ್ತಕದಲ್ಲಿತ್ತು, ಆ ದೇವತೆಗಳು ಇವರನ್ನು ನೂಕಿದಂತೆ ಅನಿಸುವುದು ಆತ್ಮ ದೇಹವನ್ನು ಸೇರುವುದು, ಅಷ್ಟೊತ್ತಿಗೆ ಹಡಗಿನಲ್ಲಿದ್ದ ಇತರರು ಅವರನ್ನು ರಕ್ಷಣೆ ಮಾಡಿದ್ದರು. ಈ ಕುರಿತು , she pleaded with god for help ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
ವೈದ್ಯನಿಗೂ ಆಗಿತ್ತು ಸಾವಿನ ಅನುಭವ
ಅವರ ಹೆಸರು ಟೋನಿ ಸಿಕೋರಿಯಾ, ಮೂಳೆ ತಜ್ಞರು, ಅವರಿಗೆ ಗುಡುಗು ಬಡಿಯುತ್ತೆ, ನಂತರ ಘಟನೆಯನ್ನು ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ, ಅವರ ದೇಹ ನೆಲಕ್ಕೆ ಬೀಳುತ್ತೆ, ಅವರನ್ನು ಪರೀಕ್ಷೆ ಮಾಡಿದವರು ಸತ್ತು ಹೋಗಿದ್ದಾರೆ ಎಂದು ಹೇಳುತ್ತಾರೆ. ಒಬ್ಬ ಮಹಿಳೆ CPR ಮಾಡುತ್ತಿರುತ್ತಾಳೆ, ಅವರ ಸುತ್ತ ಬೆಳಕಿನ ಪ್ರಭೆ ಕಾಣಿಸುತ್ತದೆ, ನಂತರ ಅವರು ಬದುಕಿಳಿಯುತ್ತಾರೆ, ತಮಗಾದ ಅನುಭವದ ಬಗ್ಗೆ New Yorkerನಲ್ಲಿ ಹೇಳಿದ್ದಾರೆ. ಈ ಪ್ರಯಾಣ ತುಂಬಾ ಸುಂದರವಾಗಿತ್ತು ಹೇಳಿದ್ದಾರೆ.



Click it and Unblock the Notifications











