Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
'ವಿಧವೆ ತಾಯಿಯ ಕ್ಯಾನ್ಸರ್ ವಿರುದ್ಧದ ಹೋರಾಟವೇ ಕುಸ್ತಿ ಗೆಲ್ಲಿಸಿತು': ವಿನೇಶ್ ಫೋಗಟ್ ಮನದಾಳದ ಮಾತು!!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತ ಮೂರು ಪದಕಗಳ ಗೆದ್ದಿದೆ. ಮೂರು ಕಂಚಿನ ಪದಕಳಾಗಿದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಕೆಲವರು ಕೆಲವೇ ಇಂಚಿನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆದ್ರೆ ಭಾರತಕ್ಕೆ ಮೊದಲ ಚಿನ್ನ ಯಾರು ತರುತ್ತಾರೆ ಎಂಬ ಕುತೂಹಲ ಹಾಗೆಯೇ ಉಳಿದಿದೆ. ಆದ್ರೆ ಈಗ ಮಹಿಳಾ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಬರುವ ನಿರೀಕ್ಷೆ ಇತ್ತು, ಆದರೆ ಭಾರತದ ಚಿನ್ನದ ಕನಸು ವಿನೇಶ್ ಫೋಗಟ್ ನನಸಾಗಿಸುತ್ತಾರೆ ಎನ್ನಲಾಗಿತ್ತು. ಆದರೆ ದುರಾದೃಷ್ಟವಶಾತ್ ಆಕೆಯ ಪದಕ ಗೆಲ್ಲುವ ಕನಸು ಕನಸಾಗಿ ಉಳಿದಿದೆ.
ಮಹಿಳಾ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ಫೋಗಟ್ ಗೆದ್ದು ಈಗ ಫೈನಲ್‌ಗೆ ಏರಿದ್ದರು. ಟೋಕಿಯೋ ಒಲಿಂಪಿಕ್‌ನಲ್ಲಿ ಚಿನ್ನ ಗೆದಿದ್ದ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರ ವಿರುದ್ಧ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದಿದ್ದರು. ಒಲಿಂಪಿಕ್‌ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಅವರು ಸಾಕ್ಷಿಯಾಗಿದ್ದರು. ಆದ್ರೆ 50 ಕೆಜಿ ಗಿಂತ 100 ಗ್ರಾಮ್ ತೂಕ ಹೆಚ್ಚಿಸಿಕೊಂಡ ಕಾರಣ ಒಲಿಂಪಿಕ್‌ನಿಂದ ಅವರು ಅನರ್ಹಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ಮೊದಲು ಸೆಮಿಫೈನಲ್ ಪಂದ್ಯ ಗೆದ್ದ ಬಳಿಕ ಮಾತನಾಡಿದ್ದ ಫೋಗಟ್ ಆಕೆಯ ಸಾಧನೆಗೆ ಕಾರಣರಾದವರ ನೆನೆದಿದ್ದಾರೆ. ವಿನೇಶ್ ಮತ್ತು ಆಕೆಯ ತಾಯಿ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. 'ಇದು ಸಾಧ್ಯವಾಗಿದ್ದು, ನನ್ನ ತಾಯಿಯಿಂದ, ಸ್ನೇಹಿತರ ನಡುವಿನ ಬಾಂಧವ್ಯಕ್ಕಿಂತ ನಮ್ಮ ಸಂಬಂಧ ಗಟ್ಟಿಯಾಗಿದೆ. ನಾವು ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತೇವೆ. ಅವಳು ವಿಧವೆಯಾದಾಗ ಅವಳಿಗೆ ಸುಮಾರು 32 ವರ್ಷ. ಅದರ ಬಗ್ಗೆ ಯೋಚಿಸುವಾಗ ನನಗೆ ಬೇಸರವಾಗುತ್ತದೆ. ಅವಳು ನಮಗಾಗಿ ಹೋರಾಡಿದಳು. ಆಕೆ ಒಂಟಿ ಮಹಿಳೆ, ಒಂಟಿ ಮಹಿಳೆ ಎಂಬ ಕಾರಣಕ್ಕೆ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ' ಎಂದಿದ್ದಾರೆ.
ಮನೆಯಲ್ಲಿ ತಂದೆಯೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು ಆದ್ರೆ ತಂದೆ ಮರಣದ ನಂತರ ತಾಯಿ ಮನೆಯಿಂದ ಹೊರಬರಬೇಕಾಯಿತು. ತಂದೆಯ ಸಾಯುವವರೆಗೂ ಅಮ್ಮನಿಗೆ ಟೊಮೆಟೋ ಬೆಲೆಯೂ ತಿಳಿದಿರಲಿಲ್ಲ. ಆಕೆ ಎಂದು ಹೊರಗಡೆ ಹೋದವಳಲ್ಲ ಎಂದು ಫೋಗಟ್ ಹೇಳಿಕೊಂಡಿದ್ದಾರೆ.
ಇದಿಷ್ಟೇ ಅಲ್ಲ ಫೋಗತ್ ತಾಯಿ ಕ್ಯಾನ್ಸರ್‌ಗೆ ಒಳಗಾಗಿದ್ದರು. ಕ್ಯಾನ್ಸರ್ ಜೊತೆಗೂ ಆಕೆಯ ತಾಯಿ ಹೋರಾಡಿರುವುದಾಗಿ ವಿನೇಶ್ ಹೇಳಿಕೊಂಡರು. 'ಅವಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ, ಕೀಮೋಥೆರಪಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದಳು. ಸಂಪೂರ್ಣ ಅನಕ್ಷರಸ್ಥೆಯಾಗಿದ್ದ ಆಕೆಗೆ ಎಲ್ಲಿ ಕುಳಿತುಕೊಳ್ಳಬೇಕು, ಎಲ್ಲಿ ಇಳಿಯಬೇಕು ಎಂಬುದೂ ತಿಳಿದಿರಲಿಲ್ಲ. ಆಕೆ ಹೋರಾಟ ನಿಲ್ಲಿಸಲಿಲ್ಲ, ಈ ಹೋರಾಟ ನೋಡುತ್ತಾ ನಾವು ಬೆಳೆದಿದ್ದೇವೆ. ಇಡೀ ಸಮಾಜದ ವಿರುದ್ಧ ನಿಂತು ಆಕೆ ನಮ್ಮನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದರು. ಜೀವನದಲ್ಲಿ ಹೋರಾಟಕ್ಕೆ ಕುಸ್ತಿ ಕಲಿಸಿದಳು' ಎಂದಿದ್ದಾರೆ.
ತಾಯಿಯ ಈ ಧೈರ್ಯ ನಮಗೆ ಮಾತನಾಡುವ ಬಲ ನೀಡಿದೆ. ಕೆಲವರು ನಾನು ಬಹಿರಂಗವಾಗಿ ಮುಖದ ಮೇಲೆ ಹೊಡೆದಂತೆ ಮಾತನಾಡುವುದಾಗಿ ಹೇಳುತ್ತಾರೆ. ನಾನು ನನ್ನ ಮನಸ್ಸಿನಿಂದ ಮಾತನಾಡುತ್ತೇನೆ. ಮನದಲ್ಲಿ ಇರುವುದು ಹೊರಬರುತ್ತದೆ. ಬೇಕಾದರೆ ತೆಗೆದುಕೊಳ್ಳಲಿ ಇಲ್ಲವೆ ಬಿಟ್ಟು ಬಿಡಲಿ ಎಂದು ಆಕೆ ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ಬಿಜೆಪಿ ನಾಯಕ ಹಾಗೂ ಭಾರತೀಯ ಕುಸ್ತಿ ಫಡೆರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈದಾದ ಬಳಿಕ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸಿದಾಗ ಕುಸ್ತಿ ಪಟುಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ಇದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಆಕೆ ನ್ಯಾಯಕ್ಕಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದಳು, ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಳು. ಈ ವೇಳೆ ಇಡೀ ದೇಶ ಆಕೆಯ ಬೆಂಬಲಕ್ಕೆ ನಿಂತಿತ್ತು. ಆದ್ರೆ ಕೆಲವರು ಆಕೆಯ ವಿರುದ್ಧವೂ ನಿಂತಿದ್ದರು. ಈ ಆರೋಪದ ಬಳಿಕ ಬ್ರಿಜ್ ಭೂಷಣ್ ಅನ್ನು ಹುದ್ದೆಯಿಂದ ವಜಾಗೊಳಿಸಿದ್ದರು.



Click it and Unblock the Notifications
