Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲಾಯರ್ ಜಗದೀಶ್-ರಂಜಿತ್ ಬಿಗ್‌ಬಾಸ್‌ನಿಂದ ಔಟ್..!?: ಯಾರು ಈ ರಂಜಿತ್ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕಾರ್ಯಕ್ರಮ ನೀವೆಲ್ಲಾ ನೋಡಿರುತ್ತೀರಿ. ಈ ಬಾರಿಯ ಸೀಸನ್ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಆದರೆ ಹೆಚ್ಚಿನದಾಗಿ ಗಲಾಟೆ ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಮನೆಯೊಳಗೆ ಒಬ್ಬರಿಗೊಬ್ಬರು ಗುದ್ದಾಡಿಕೊಳ್ಳುವ ಹಂತವೂ ತಲುಪಿದೆ.
ಅದರಲ್ಲೂ ವಕೀಲ ಜಗದೀಶ್ ಅವರ ಜೊತೆ ಮನೆ ಮಂದಿಯಲ್ಲ ಗಲಾಟೆ ಮಾಡುತ್ತಿರುವುದು ಎಲ್ಲಾ ದಿನದಲ್ಲು ನಡೆದುಕೊಂಡೇ ಬಂದಿದೆ. ಉಗ್ರಂ ಮಂಜು, ಚೈತ್ರಾ ಕುಂದಾಪುರ, ಗಿಚ್ಚಿ ಗಿಲಿಗಿಲಿ ಮಾನಸ ಸೇರಿದಂತೆ ಎಲ್ಲರ ಜೊತೆಗೂ ಅವರು ಜಗಳ ಆಡುತ್ತಿದ್ದ ಎಪಿಸೋಡ್‌ಗಲು ಈ ಹಿಂದೆ ಪ್ರಸಾರವಾಗಿದೆ.

ಆದ್ರೆ ಈಗ ಈ ಜಗಳ ತಾರಕಕ್ಕೇರಿ ರಂಜಿತ್ ಹಾಗೂ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ. ನಿನ್ನೆ ಮನೆಯೊಳಗೆ ದೊಡ್ಡ ಗಲಾಟೆ ನಡೆದಿದ್ದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು ಈ ವೇಳೆ ರಂಜಿತ್ ಹಾಗೂ ಜಗದೀಶ್ ನಡುವೆ ಭಾರೀ ಗಲಾಟೆ ನಡೆದಿದ್ದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಾಗೆ ಅಂದೇ ಇಬ್ಬರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ವರ್ತನೆ ಮಿತಿ ಮೀರಿದೆ ಎನ್ನಲಾಗುತ್ತಿದ್ದು, ಅಶ್ಲೀಲ ಪದಗಳನ್ನು ಬಳಸುವುದು, ಜಗಳವಾಡುವುದು ಮಾಡಿ ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ ಎನ್ನುವ ಆರೋಪವು ಇದೆ. ನಿನ್ನೆಯ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಉಗ್ರಂ ಮಂಜು ನಡುವೆ ಗಲಾಟೆಯಾಗಿತ್ತು.
ನಾಮಿನೇಷನ್ ಹಾಗೂ ಬಿಗ್‌ಬಾಸ್ ಮನೆಯಲ್ಲಿ ಊಟ ನೀಡಲಿಲ್ಲ ಎಂಬ ವಿಚಾರವಾಗಿ ಜಗದೀಶ್ ರೊಚ್ಚಿಗೆದ್ದಿದ್ದರು. ಬಿಗ್ ಬಾಸ್ ಮನೆ ಬಿಟ್ಟು ತೆರಳುವ ಮಾತನಾಡಿದ್ದರು, ಊಟದ ವಿಚಾರಕ್ಕೆ ಬಿಗ್ ಮಾಡಿರುವ ನಿಯಮ ಸರಿಯಲ್ಲ ಎಂದು ಜಗದೀಶ್ ಬಿಗ್ ಬಾಸ್ ವಿರುದ್ಧವೇ ಕೂಗಾಡಿದ್ದರು. ಇದಾಗಿ ಮಾರನೆ ದಿನ ರಂಜಿತ್ ಹಾಗೂ ಇತರೆ ಸ್ಪರ್ಧಿಗಳ ನಡುವೆ ಜಗದೀಶ್ ಗಲಾಟೆಗಳು ತಾರಕಕ್ಕೇರಿವೆ ಎಂದು ವರದಿಗಳಾಗಿವೆ. ಆದರೆ ಈ ಕುರಿತು ಇಂದು ರಾತ್ರಿಯ ಸಂಚಿಕೆಯಿಂದಷ್ಟೇ ದೃಢಪಡಬೇಕಿದೆ.
ಇನ್ನು ಈ ರೀತಿ ಪ್ರಕರಣ ನಡೆದಿರುವುದು ಬಿಗ್ ಬಾಸ್ ಇತಿಹಾಸದಲ್ಲಿ ಎರಡನೇ ಬಾರಿಯಾಗಿದೆ. ಮೊದಲು ಹುಚ್ಚ ಬೆಂಕಟ್ ಕೂಡ ನಿಯಮ ಮುರಿದು ನಟ ಪ್ರಥಮ್ ಮೇಲೆ ಕೈ ಮಾಡಿದ್ದರು.
ನಟ ರಂಜಿತ್ ಯಾರು?
ಈ ಬಿಗ್ ಬಾಸ್ ಸೀಸನ್‌ನ ಕೊನೆಯ ಅಂದರೆ 17ನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿಕೊಟ್ಟಿದ್ದು ಈ ರಂಜಿತ್. ಜನ ಮೊದಲು ಈತನ ದೇಹ ಕಂಡು ಕಳೆದ ಸೀಸನ್‌ನ ವಿನಯ್‌ಗೆ ಹೋಲಿಸಿದ್ದರು. ನೋಡಲು ಅದೇ ರೀತಿ ಕಾಣುತ್ತಿದ್ದರು. ಮೊದಲು ಏರ್‌ಲೈನ್ಸ್ ಕಂಪನಿಯೊಂದರಲ್ಲಿ ರಂಜಿತ್ ಕೆಲಸ ಮಾಡುತ್ತಿದ್ದರಂತೆ ನಂತರ ಅದಕ್ಕೆ ಗುಡ್ ಬೈ ಹೇಳಿ ನಟನೆ ಕಡೆ ಮುಖ ಮಾಡಿದ್ದರು.
ನಂತರ ಅವರು ಹಲವು ಧಾರವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಾಗ ಸಣ್ಣ ಪುಟ್ಟ ಪಾತ್ರಗಳಿಂದ ಹಿಡಿದು ಮುಖ್ಯ ಪಾತ್ರದಾರಿಯಾಗಿ ಕಾಣಿಸಿಕೊಂಡರು. ಮೀರಾ ಮಾಧವ, ಅಮೃತವರ್ಷಿಣಿ, ಅವನು ಮತ್ತೆ ಶ್ರಾವಣಿ, ಚಿಟ್ಟೆ ಹೆಜ್ಜೆಯಲ್ಲಿ ನಟಿಸಿದ್ದರು. ಆದ್ರೆ ಶನಿ ಧಾರಾವಾಹೊ ಅವರ ನಟನಾ ವೃತ್ತಿಯಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿತು.
ಶನಿ ಧಾರಾವಾಹಿಯಲ್ಲಿ ಅವರು ಸೂರ್ಯ ದೇವನಾಗಿ ಕಾಣಿಸಿಕೊಂಡರು, ಆ ಪಾತ್ರಕ್ಕೆ ಸರಿಯಾದ ದೇಹ, ಧ್ವನಿ ನೀಡಿದ್ದರಿಂದ ಸೂರ್ಯ ದೇವನೆಂದರೆ ಹೀಗೆಯೇ ಇರಬೇಕು ಎಂಬ ಚಿತ್ರಣ ನೀಡಿದ್ದರು. ಅಷ್ಟೇ ಅಲ್ಲ ಅವರು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೀತಾ ರಾಮ ಕಲ್ಯಾಣ, ಭರಾಟೆ, ಶಿವಾರ್ಜುನ, ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ನಲ್ಲೂ ಒಂದು ಚಿಕ್ಕ ಪಾತ್ರ ಮಾಡಿದ್ದಾರೆ.



Click it and Unblock the Notifications
