Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವರ್ಷದ ಶ್ರಾವಣ ಕೊನೆಯ ಶನಿವಾರ: ಶನಿ ಸಾಡೇಸಾತಿ, ಶನಿಧೈಯ್ಯ ಇರುವ 5 ರಾಶಿಯವರು ಈ ಪರಿಹಾರ ಮಾಡಿ
ಶ್ರಾವಣ ಮಾಸ ತುಂಬಾ ಶುಭವಾದ ತಿಂಗಳು, ಈ ವರ್ಷ ಅಂತೂ ಎರಡು ತಿಂಗಳು ಶ್ರಾವಣ ಬಂದಿದ್ದ ಕಾರಣ ಶಿವಭಕ್ತರಿಗೆ ಈ ವರ್ಷ ತುಂಬಾನೇ ವಿಶೇಷವಾಗಿತ್ತು. ಶ್ರಾವಣ ಮಾಸ ಮುಗೀತಾ ಬಂದಿದೆ, ಸೆಪ್ಟೆಂಬರ್ 15ಕ್ಕೆ ಶ್ರಾವಣ ಮುಗಿಯಲಿದೆ, ನಂತರ ಭಾದ್ರಪದ ಮಾಸ ಪ್ರಾರಂಭವಾಗಲಿದೆ. ಸೆಪ್ಟೆಂರ್ 9ಕ್ಕೆ ವರ್ಷದ ಕೊನೆಯ ಶ್ರಾವಣ ಶನಿವಾರ.
ಶನಿವಾರವೆಂದರೆ ಶನಿದೇವನಿಗೆ ಮೀಸಲಾದ ದಿನ, ಈ ದಿನ ಶನಿಯ ಪೂಜೆ ಮಾಡುವುದರಿಂದ ಶನಿದೋಷ ಕಡಿಮೆಯಾಗುವುದು. ಶ್ರಾವಣ ಶನಿವಾರದಲ್ಲಿ ಕೆಲವು ಪರಿಹಾರ ಮಾಡಿದರೆ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯದಿಂದ ಬಳಲುತ್ತಿರುವವರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಹೇಳಲಾಗುವುದು.

ಈವಾಗ ಮಕರ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿಯವರಿಗೆ ಮೊದಲನೇ ಹಂತದಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ. ಇನ್ನು ಕರ್ಕ ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯ ಇದೆ. ಶನಿ ಸಾಡೇಸಾತಿ ಹಾಗೂ ಶನಿಧೈಯ್ಯ ಇದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ಈ ಸಮಸ್ಯೆ ಕಡಿಮೆ ಮಾಡಲು ಪರಿಹಾರ ಮಾಡಲು ಶ್ರಾವಣ ಶನಿವಾರ ತುಂಬಾನೇ ಪ್ರಮುಖವಾಗಿದೆ. ಆದ್ದರಿಂದ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯ ಇರುವವರು ಶನಿ ಈ ಪರಿಹಾರ ಮಾಡಿದರೆ ಒಳ್ಳೆಯದು
* ಈ ದಿನ ಕಡು ನೀಲಿ ಬಣ್ಣದ ವಸ್ತ್ರದ ಧರಿಸಿ ಶಿವನ ಆರಾಧನೆ ಮಾಡಿ, ಶನಿ ದೇವರಿಗೂ ಪೂಜೆಯನ್ನು ಸಲ್ಲಿಸಿ.
* ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಜಪ ಮಾಡುತ್ತಾ ಶನಿ ಮಂತ್ರ ಪಠಿಸಿ
* ಶ್ರಾವಣ ಶನಿವಾರ ಆಲದ ಮರದ ಕೆಳಗಡೆ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
* ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ ಅದರಲ್ಲಿ ಎಳ್ಳನ್ನು ಹಾಕಿ ಅಭಿಷೇಕ ಮಾಡಿಸಿ.
ಈ ಪರಿಹಾರ ಮಾಡುವುದರಿಂದ ಶನಿ ಕೊಡುವ ಕಷ್ಟ ಸ್ವಲ್ಪ ಕಡಿಮೆಯಾಗುವುದು.
ಶನಿಯ ಮಂತ್ರಗಳನ್ನು ಪಠಿಸಿ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
ಈ ಪರಿಹಾರ ಮಾಡಿ
* ಧರ್ಮಗ್ರಂಥಗಳಲ್ಲಿ, ಶನಿ ದೇವನನ್ನು ಪೂಜಿಸಲು ಉತ್ತಮ ಸಮಯವೆಂದರೆ ಸೂರ್ಯಾಸ್ತದ ನಂತರ ಎಂದು ಹೇಳಲಾಗುವುದು, ಆದ್ದರಿಮದ ಸೂರ್ಯಾಸ್ತನ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪವನ್ನು ಹಚ್ಚಿ.
* ಈ ದಿನ ನಿರ್ಗತಿಕರಿಗೆ ಸಹಾಯ ಮಾಡಿ
* ಈ ದಿನ ಎಣ್ಣೆಯಲ್ಲಿ ನಿಮ್ಮ ಮುಖ ನೋಡಿ ಆ ಎಣ್ಣೆಯನ್ನು ದಾನ ಮಾಡಿ.



Click it and Unblock the Notifications
