Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯನಾಡ್ ದುರಂತ ಬಳಿಕ ಕೊಡಗಿಗೆ ಕಾದಿದೆ ಭೀತಿ: ಪ್ರವಾಸಿಗರೇ ಈ ಸಮಯದಲ್ಲಿ ಪ್ರಯಾಣ ಸುರಕ್ಷಿತವಲ್ಲ
ವಯನಾಡ್‌ನಂಥ ಭೂಪ್ರದೇಶ ಕೊಡಗು, ಪ್ರಕೃತಿ ರಮಣೀಯವಾದ ತಾಣ, ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಈ ಜಾಗಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ನಾಡು, ವೀಕೆಂಡ್‌ಗಳಲ್ಲಿ ಟೂರಿಸ್ಟ್‌ಗಳಿಂದ ತುಂಬಿ ತುಳುಕುತ್ತಿರುತ್ತದೆ, ಕೊಡಗಿನ ಮಧು ಮಗಳಂತೆ ಕಾಣಿಸುವುದು ಮಳೆಗಾಲದಿಂದ -ಡಿಸೆಂಬರ್‌ವರೆಗೆ... ಈ ಸಮಯದಲ್ಲಿ ಇಲ್ಲಿಯ ವಾತಾವರಣ ತುಂಬಾನೇ ಅದ್ಭುತವಾಗಿರಲಿದೆ.

ಇಂಥ ಕೊಡಗಿಗೆ ಗುಡ್ಡ ಕುಸಿತದ ಆತಂಕ ಎದುರಾಗಿದೆ
ಬರೆ ಕುಸಿತ ಕೊಡಗಿಗೆ ಹೊಸತೇನಲ್ಲ, ಹಲವು ಕಡೆ ಬರೆ ಕುಸಿತ ಉಂಟಾಗಿ ಕೆಲ ಸಾವು-ನೋವುಗಳು ಸಂಭವಿಸಿದೆ, ಆದರೆ ವಯನಾಡ್‌ನ ಪರಿಸ್ಥಿತಿ ನೋಡಿದ ಮೇಲೆ ಅತಂಕ ಹೆಚ್ಚಾಗಿದೆ. ಏಕೆಂದರೆ ವಯನಾಡ್‌ನಂಥ ಭೌಗೋಳಿಕ ಪ್ರದೇಶವನ್ನು ಹೊಂದಿರುವ ನಾಡು ಕೊಡಗು.
ಕೊಡಗು ಜಿಲ್ಲಾಡಿತ 104 ಪ್ರದೇಶಗಳಲ್ಲಿ ಭೂ ಕುಸಿತದ ಅಪಾಯವಿದೆ ಎಂದು ಎಚ್ಚರಿಸಿದೆ
ಭಾರತೀಯ ಭೂಗರ್ಭ ಇಲಾಖೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಈ ಸೂಕ್ಷ್ಮ ಪ್ರದೇಶವನ್ನು ಗುರುತಿಸಲಾಗಿದೆ, ಹಾಗಾಗಿ ಈ ಪ್ರದೇಶದಲ್ಲಿನ 2995 ಕುಟುಂಬಗಳ ಸ್ಥಳಾಂತರಕ್ಕೆ ಜಿಲ್ಲಾಡಿತ ನೋಟಿಸ್ ನೀಡಿದೆ. ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಒಂದು ವೇಳೆ ವಿಪತ್ತು ಸಂಭವಿಸಿದರೆ ಅದರಿಂದ ಜನರ ಪ್ರಾಣಕ್ಕೆ ಅಪಾಯ ಉಂಟಾಗದಿರಲು ಮುನ್ನೆಚ್ಚರಿಕೆಯನ್ನು ವಹಿಸಿ.
ಕೊಡಗು ಮಾತ್ರವಲ್ಲ ಕರ್ನಾಟಕದ 1, 351 ಸ್ಥಳಗಳನ್ನು ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ
ಉತ್ತರ ಕನ್ನಡ, ಮಂಗಳೂರು ಹೀಗೆ ಹಲವು ಕಡೆಗಳಲ್ಲಿ ಭೂ ಕುಸಿತದ ಅಪಾಯವಿದೆ. ಈ ಬಾರಿ ಪ್ರಕೃತಿ ತುಂಬಾನೇ ಮುನಿಸಿಕೊಂಡಿದೆ, ಅತಿಯಾದ ಮಳೆಯಿಂದಾಗಿ ಗುಡ್ಡ ಕುಸಿಯುವ ಆತಂಕ ಎಲ್ಲಾ ಕಡೆಯೂ ಕಾಡುತ್ತಿದೆ.
ಅಪಾಯದ ಪ್ರದೇಶದಿಂದ ಸ್ಥಳಾಂತರವಾದರೆ ಸುರಕ್ಷಿತ
ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮಳೆ ತುಂಬಾನೇ ಸುರಿಯುತ್ತಿದ್ದರೆ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಒಳ್ಳೆಯದು. ನಿಮ್ಮ ಅಮೂಲ್ಯ ವಸ್ತುಗಳನ್ನು ಕೂಡ ಹೋಗುವಾಗ ಜೊತೆಗೆ ಕೊಂಡೊಯ್ಯಿರಿ.
ಈ ಗುಡ್ಡ ಕುಸಿತ ಹೇಗೆ ಉಂಟಾಗುತ್ತಿದೆ?
24 ಗಂಟೆ ನಿರಂತರ ಮಳೆ ಸುರಿಯುತ್ತಿದ್ದರೆ ಬೆಟ್ಟಗಳಲ್ಲಿ ನೀರು ಇಂಗುವುದು, ಇದರಿಂದ ಮಣ್ಣಿನೊಳಗಡೆ ನಿರಿನ ಒತ್ತಡ ಹೆಚ್ಚಾಗಿ ಗುಡ್ಡ ಕುಸಿಯುವುದು.
ಪ್ರಕೃತಿ ನಾಶವಾದ ಕಾರಣ ಈ ರೀತಿ ಗುಡ್ಡ ಕುಸಿಯುತ್ತಿದೆ
ಬೆಟ್ಟಗಳನ್ನು ಕಡೆದು ರೋಡ್‌ಗಳನ್ನು ಮಾಡುವುದು, ಅಲ್ಲಿ ರೆಸಾರ್ಟ್‌ಗಳನ್ನು ಸ್ಥಾಪಿಸುವುದರಿಂದ ಅವುಗಳ ಮೇಲೆ ಒತ್ತಡ ಬಿದ್ದು ಈ ರೀತಿ ಕುಸಿಯುತ್ತಿದೆ.
2018ರ ಭೀಕರ ಬರೆಕುಸಿತ
2018ರಲ್ಲಿ ಆಗಸ್ಟ್ 10-17ರ ನಡುವೆ ಕೊಡಗಿನಲ್ಲಿ ಉಂಟಾದಾಗ ಬರೆಕುಸಿತಕ್ಕೆ 20 ಜನರು ಸಾವನ್ನಪ್ಪಿದ್ದಾರೆ. ಸುಮಾರು 4,056 ಮನೆಗಳಿಗೆ ಹಾನಿಯುಂಟಾಗಿತ್ತು, ಸುಮಾರು 18000 ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಈ ಸಮಯದಲ್ಲಿ ಮನೆ-ಮಠ ಕಳೆದುಕೊಂಡ ಜನರು ಇಂದಿಗೂ ಕಷ್ಟಪಡುತ್ತಿದ್ದಾರೆ. ಅವರ ಅಸ್ತಿಗಳು ನಷ್ಟವಾಗಿ, ಮನೆ ಮಠ ನಷ್ಟವಾಗಿದೆ, ಅದರೆ ಆ ಸಮಯದಲ್ಲಿ ಬೇಗನೆ ಎಚ್ಚೆತ್ತಕೊಂಡಿದ್ದರಿಂದ ಜನರ ಪ್ರಾಣ ಉಳಿಸಲು ಸಾಧ್ಯವಾಗಿತ್ತು.
ಹೊಳೆಯ ಸಮೀಪ ಇರುವವರಿಗೂ ಅಪಾಯ ತಪ್ಪಿದ್ದಲ್ಲ
ಈ ವರ್ಷ ನಿರಂತರ ಮಳೆಯಿಂದ ಸೇತುವೆಗಳು ಮುಳುಗಿ ಹಲವು ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿತ್ತು, ಒಂದು ವಾರದಿಂದ ತಗ್ಗಿದ ಮಳೆ ಆರ್ಭಟ ಮತ್ತೆ ಶುರುವಾಗಿದೆ.
50 ವರ್ಷದ ಬಳಿಕ ಬರಗಾಲ ಬಂದಿದ್ದ ಕೊಡಗಿನಲ್ಲಿ ಈಗ ಪ್ರವಾಹ, ಬರೆಕುಸಿತದ ಅತಂಕ
ಈ ವರ್ಷ ಕೊಡಗು ಎಂದೂ ಕಂಡರಿಯದ ಬೇಸಿಗೆಯನ್ನು ಅನುಭವಿಸಿತ್ತು, ಮಳೆಯ ಅಭಾವದಿಂದ ಬರಗಾಲ ಉಂಟಾಗಿತ್ತು, ಬೆಳೆಗಳು ನಷ್ಟವಾಗಿದ್ದೆವು, ಆವಾಗ ಮಳೆಗಾಗಿ ಜನರು ಪ್ರಾರ್ಥಿಸಿದ್ದರು, ಮುಂಗಾರು ಉತ್ತಮವಾಗಿ ಶುರುವಾದಾಗ ಸಂಭ್ರಮಿಸಿದ ಜನರು ಈಗ ಮಳೆ ಎಂದರೆ ಬೆಚ್ಚಿ ಬೀಳುವಂತಾಗಿದೆ, ಅಲ್ಲದೆ ಅತಿಯಾದ ಮಳೆಯಿಂದಾಗಿ ಬೆಳೆಗಳೂ ನಾಶವಾಗುತ್ತಿದೆ.



Click it and Unblock the Notifications