Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕುಂಭಮೇಳದ ಮೊನಾಲಿಸಾ 10 ದಿನದಲ್ಲಿ ₹10 ಕೋಟಿ ಗಳಿಸಿದ್ಲಾ..? ಆಕೆ ಹೇಳಿದ್ದೇನು?
ವಿಶ್ವ ವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿರುವ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಜೇನು ಕಣ್ಣಿನ ಬೆಡಗಿ ಮೊನಾಲಿಸಾ ಕುರಿತು ನಿಮಗೆಲ್ಲಾ ತಿಳಿದಿರಬಹುದು. ಆಕೆ ಮಹಾ ಕುಂಭಮೇಳದ ಸೆನ್ಸೇಷನ್ ಆಗಿಬಿಟ್ಟಿದ್ದಳು. ಒಂದೇ ಒಂದು ಫೋಟೋದ ಮೂಲಕ ಮನೆ ಮಾತಾದಳು, ಎಲ್ಲಾ ಕಡೆಗೂ ಅವಳದ್ದೇ ಮಾತುಗಳು ಹರಿದಾಡುತ್ತಿವೆ. ಆದ್ರೆ ಈಗ ಅವಳು ತನ್ನ ಹುಟ್ಟೂರಿಗೆ ವಾಪಾಸಾಗಿದ್ದಾಳೆ ಎನ್ನಲಾಗಿದೆ.
ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಿಗೆ ರುದ್ರಾಕ್ಷಿ ಹೂವುಗಳ ಮಾರಾಟ ಮಾಡಲೆಂದು ಆಕೆ ಆಗಮಿಸಿದ್ದಳು. ಆದ್ರೆ ಕ್ಯಾಮರಾ ಕಣ್ಣಿಗೆ ಬಿದ್ದಾಕೆ ಇಡೀ ದೇಶದಲ್ಲಿ ಸುದ್ದಿಯಾದಳು, ಹಾಗೆ ವ್ಯಾಪಾರ ಮಾಡಲಾಗದೆ ಪರಿತಪಿಸಿದ್ದೂ ಕೂಡ ನಾವು ನೋಡಬಹುದು. ಆಕೆಯ ಹತ್ತಾರು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಹಾಗೆ ಆಕೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿಯೂ ತನ್ನ ಖಾತೆ ಆರಂಭಿಸಿದಳು, ನೋಡ ನೋಡುತ್ತಲೇ ಅದರಲ್ಲಿ ಫಾಲೋವರ್ಸ್ ಹುಟ್ಟಿಕೊಂಡಳು ಆಕೆ ಆನ್‌ಲೈನ್ ಸೆನ್ಸೇಷನ್ ಆಗಿಬಿಟ್ಟಳು, ರಾತ್ರಿ ಬೆಳಗಾಗುವುದರೊಳಗೆ ಆಕೆ ಬಾಲಿವುಡ್‌ನಲ್ಲಿ ಸುದ್ದಿಯಾದಳು. ಹಾಗೆ ಸಿನಿಮಾದಲ್ಲೂ ನಟಿಸುವ ಅವಕಾಶ ಗಿಟ್ಟಿಸಿದಳು ಎಂಬ ವರದಿಗಳಿವೆ.
ಆದ್ರೆ ಇತ್ತೀಚಿಗೆ ಆಕೆಯ ಬಗ್ಗೆ ಹರಿದಾಡುತ್ತಿರುವ ಮತ್ತೊಂದು ವಿಚಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆಕೆ ಕೇವಲ 10 ದಿನಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಗಳಿಸಿದ್ದಾಳೆ ಎಂದು ಹೇಳಲಾಗಿದೆ. ಆಕೆ ಈವೆಂಟ್ ಮೂಲಕ 10 ಕೋಟಿ ರೂಪಾಯಿ ಗಳಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಅವರ ಕುಟುಂಬದವರು ಈ ಹಣ ಪಡೆದಿದ್ದಾರೆ ಎಂದು ಹೇಳುವ ಒಂದಿಷ್ಟು ಸುದ್ದಿ ಹರಿದಾಡಿವೆ.
ಆದ್ರೆ ಮೊನಾಲಿಸಾ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾಳೆ. 10 ಕೋಟಿ ರೂಪಾಯಿ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿರುವ ಆಕೆ, 'ನನಗೆ ಅಷ್ಟೊಂದು ದೊಡ್ಡ ಮೊತ್ತ ಸಿಕ್ಕಿದ್ದರೆ ನಾನ್ಯಾಕೆ ಇಲ್ಲಿ ಇನ್ನೂ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದೆ. ಮನೆಯವರ ಜೊತೆಗೆ ಊರಿನಲ್ಲಿ ಇರುತ್ತಿದ್ದೆ. ನಮಗೆ ಯಾವ ಹಣವೂ ಸಿಕ್ಕಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಇಂದೋರ್‌ನಿಂದ ಮಹಾ ಕುಂಭಮೇಳದಲ್ಲಿ ಭಾಗಿಯಾಗಲೆಂದು ಆಕೆ ಆಗಮಿಸಿದ್ದಳು. ಆದ್ರೆ ಕ್ಯಾಮರಾ ಕಣ್ಣಿಗೆ ಬಿದ್ದು, ಈ ಸಾಮಾಜಿಕ ಜಾಲತಾಣದಿಂದಾಗಿ ಫೇಮಸ್ ಆದಳು, ಎಲ್ಲರು ಯಾರು ಈಕೆ ಎಂಬ ಕುತುಹಲಕ್ಕೆ ಬಿದ್ದರು, ಹಾಗೆ ಆಕೆಯೊಂದಿಗೆ ಸಂದರ್ಶನ, ಸೆಲ್ಫಿಗಾಗಿ ಜನರು ಮುಗಿಬಿದ್ದಿರುವುದು, ಗಲಾಟೆ ಮಾಡಿರುವುದು, ವ್ಯಾಪಾರಕ್ಕೆ ಅಡ್ಡಿಪಡಿಸಿರುವುದು ಸೇರು ಹಲವು ಘಟನೆಗಳು ನಡೆದವು. ಇದರ ಜೊತೆಗೆ ಈಗ ಆಕೆ ಈವೆಂಟ್ ಒಂದರಿಂದ 10 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಕೂಡ ವರದಿಯಾಗಿದೆ. ಆದ್ರೆ ಇದನ್ನು ಖುದ್ದು ಮೊನಾಲಿಸಾ ತಳ್ಳಿ ಹಾಕಿದ್ದು, ಇದು ಸುಳ್ಳು ಎಂದು ಹೇಳಿದ್ದಾರೆ.
ಇದೆಲ್ಲದರ ನಡುವೆ ಆಕೆ ತನ್ನ ಹುಟ್ಟೂರು ಇಂದೋರ್‌ಗೆ ವಾಪಸಾಗಿದ್ದಾಳೆ ಎಂದು ಹೇಳಲಾಗಿದೆ. ಆಕೆ ಇದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಗಾಗಿ ನಾನು ಇಂದೋರ್‌ಗೆ ಹಿಂತಿರುಗಬೇಕಾಗಿದೆ. ಸಾಧ್ಯವಾದರೆ ಮುಂದಿನ ಮಹಾ ಕುಂಭಕ್ಕೆ ಹಿಂತಿರುಗುತ್ತೇನೆ ಎಂದು ಬರೆದುಕೊಂಡಿದ್ದಾಳೆ. ಒಂದು ಕಾಲದಲ್ಲಿ ಆಕೆಯಿಂದ ರುದ್ರಾಕ್ಷಿಗಳು, ಮಾಲೆಗಳ ಖರೀದಿಗೆ ಬರುತ್ತಿದ್ದ ಮಂದಿ ಈಗ ಕೇವಲ ಸೆಲ್ಫಿಗಾಗಿ ಬರುತ್ತಿದ್ದಾರೆ, ಇದರಿಂದ ಆಕೆಯ ವ್ಯಾಪಾರ ನಷ್ಟವಾಗಿತ್ತಲ್ಲದೆ ರಕ್ಷಣೆ ಇಲ್ಲದಂತಾಗಿತ್ತು. ಸದ್ಯ ಈಗ ಕುಂಭ ಮೇಳದ ಸೆನ್ಸೇಷನ್ ಆಗಿದ್ದ ಈ ಯುವತಿ ಇಡೀ ದೇಶದಲ್ಲಿ ಸುದ್ದಿಯಾಗಿದ್ದಳು. ಜನರು ಕೂಡ ಇಕೆಯ ಕುರಿತು ತಿಳಿಯಲು ಉತ್ಸುಕರಾಗಿದ್ದರು.



Click it and Unblock the Notifications
