Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಕುಂಭಮೇಳ 2025: ಅಘೋರಿಗಳ ಕುರಿತ ಈ ಅಚ್ಚರಿ ಮಾಹಿತಿ ಗೊತ್ತಾ? ಅವರ ಕುಲ ಯಾವುದು?
ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನದಲ್ಲಿ ಕುಂಭಮೇಳ ಕೂಡ ಒಂದಾಗಿದೆ. ನೀವು ಉಪಗ್ರಹದಿಂದ ತೆಗೆದ ಚಿತ್ರದಲ್ಲೂ ಕೂಡ ಕುಂಭಮೇಳದಲ್ಲಿ ಸೇರುವ ಜನರ ಸೆರೆಹಿಡಿಯಬಹುದು. ಕೋಟ್ಯಂತರ ಮಂದಿ ಈ ಕುಂಭಮೇಳದಲ್ಲಿ ಭಾಗಿಯಾಗುತ್ತಾರೆ. ಈಗಾಗಲೇ ಉತ್ತರ ಪ್ರದೇಶದ ತ್ರಿವೇಣಿ ಸಂಗಮದಲ್ಲಿ ಎಲ್ಲಿ ನೋಡಿದರು ಸಾಧು ಸಂತರು ನೆರೆಯುತ್ತಾರೆ. ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಕಾರ್ಯಕ್ರಮ ವಿಶ್ವದ ಗಮನ ಸೆಳೆಯುತ್ತದೆ.
ಹಾಗೆ ಈ ಕುಂಭಮೇಳ ಹಲವು ಕಾರಣಗಳಿಗೆ ಸುದ್ದಿಯಾಗುತ್ತದೆ. ಒಂದು ತ್ರಿವೇಣಿ ಸಂಗಮದಲ್ಲಿ ಸೇರುವಂತಹ ಜನರು ಮತ್ತು ದೂರ ದೂರದಿಂದ ಬರುವ ಅಘೋರಿಗಳು. ವರ್ಷದ ಬಹುತೇಕ ಎಲ್ಲಾ ದಿನದಲ್ಲೂ ಜನರ ಸಂಪರ್ಕದಿಂದ ದೂರವೇ ಉಳಿದಿರುವ ಈ ಅಘೋರಿಗಳು ಈ ಕುಂಭಮೇಳದ ಸಮಯದಲ್ಲಿ ಉತ್ತರ ಪ್ರದೇಶದ ಬೀದಿ ಬೀದಯಲ್ಲಿ ನೋಡಲು ಸಿಗುತ್ತಾರೆ.

ಆದ್ರೆ ಉಳಿದ ದಿನದಲ್ಲಿ ಇವರೆಲ್ಲ ಎಲ್ಲಿರುತ್ತಾರೆ? ಇವರ ನಿಜ ಸ್ವರೂಪವೇನು? ಅವರ ಜೀವನ ಶೈಲಿ ಹೇಗಿರುತ್ತೆ ಅನ್ನೋದನ್ನ ಪತ್ತೆ ಮಾಡೋದು ಕಷ್ಟವಾಗುತ್ತೆ. ಹಾಗಾದ್ರೆ ನಾದಿಂದು ಈ ಅಘೋರಿಗಳ ಕುರಿತಾದ ಅಚ್ಚರಿಯ ಮಾಹಿತಿಗಳ ತಿಳಿದುಕೊಳ್ಳೋಣ.
ಸನಾತನ ನಂಬಿಕೆಯಲ್ಲಿ ಅಖಾರಾ ಎಂಬ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟು ಅದನ್ನು ಪಾಲಿಸುವ ಮಂದಿಯಲ್ಲಿ ಹಲವು ಪ್ರಕಾರಗಳಿವೆ ಅದರಲ್ಲಿ ಈ ಅಘೋರಿಗಳು ಕೂಡ ಒಬ್ಬರು. ಅಖಾರಗಳನ್ನು ವಿಶಾಲವಾಗಿ ಶೈವ (ಭಗವಾನ್ ಶಿವನ ಅನುಯಾಯಿಗಳು), ವೈಷ್ಣವ (ಭಗವಾನ್ ವಿಷ್ಣುವಿನ ಭಕ್ತರು), ಮತ್ತು ಉದಾಸೀನ್ (ಲೌಕಿಕ ಸಂಬಂಧಗಳಿಂದ ಬೇರ್ಪಟ್ಟ ತಪಸ್ವಿಗಳು) ಎಂದು ವರ್ಗೀಕರಿಸಲಾಗಿದೆ.
ಒಂದೊಂದು ಪ್ರಕಾರಗಳಲ್ಲೂ ಅವರದ್ದೆ ಆದ ನಿಯಮಗಳು, ಆಚರಣೆಗಳು, ಸಂಪ್ರದಾಯಗಳಿವೆ. ಮಹಾ ಕುಂಭಮೇಳದಲ್ಲಿ ಭಾಗವಹಿಸುವ 13 ಪ್ರಮುಖ ಅಖಾರಗಳು ಇವೆ ಮತ್ತು ಎರಡು ಪ್ರಮುಖ ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಶೈವ ಹಾಗೂ ವೈಷ್ಣವ. ಈ ಅಖಾರಾಗಳು ಕುಂಭಮೇಳದ ಸಮಯದಲ್ಲಿ ವಿವಿಧ ಆಚರಣೆಗಳು, ಮೆರವಣಿಗೆ ನಡೆಯುತ್ತದೆ. ಇವರು ಕುಂಭಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತಾರೆ, ಅದರಲ್ಲೂ ಮುಖ್ಯವಾಗಿ ಜುನಾ ಅಖಾರಾವು ಪ್ರಸಿದ್ಧವಾಗಿದೆ.
ಅಘೋರಿಗಳ ಜೀವನ ಕುರಿತಂತೆ ಇಂದಿಗೂ ಕೆಲವು ತಪ್ಪು ಕಲ್ಪನೆಗಳು ಹಾಗೆ ಹಲವು ಅಚ್ಚರಿಯ ವಿಚಾರಗಳು ಹೊರಬರುತ್ತಲೇ ಇರುತ್ತದೆ. ಅವರೆಲ್ಲ ಸ್ಮಶಾನದಲ್ಲಿ, ಹಿಮಾಲಯ ತಪ್ಪಲಲ್ಲಿ, ಗುಹೆಗಳಲ್ಲಿ, ಕಾಡಿನಲ್ಲಿ ವಾಸವಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗೆ ಊಟ, ತಿಂಡಿಯ ಅರಿವಿಲ್ಲದೆ ಸದಾ ಕಾಲ ಧ್ಯಾನದಲ್ಲಿರುವ ಮಂದಿ ಎಂಬ ನಂಬಿಕೆ ಇದೆ.
ಅಘೋರಿಗಳು ಶೈವ ಸಂಪ್ರದಾಯದ ಒಂದು ಪಂಗಡವಾಗಿದೆ. ಅವರು ಶಿವನನ್ನು ಆರಾಧಿಸುವ ಮಂದಿ. ಅವರ ಮೂಲವು 17ನೇ ಶತಮಾನದ ಕಿನಾರಾಮ್ ಎಂಬ ಮಹಾನ್ ತಪಸ್ವಿಗೆ ಸೇರಿದ್ದಾಗಿದೆ. ಕಿನಾರಾಮ್ ಅವರನ್ನು ಅಘೋರಿಗಳು ದೇವರ ಸ್ವರೂಪ ಎಂದು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಆಧ್ಯಾತ್ಮಿಕವಾಗಿ ಅವರು ಯಾವಾಗಲು ಚಿಂತಿಸಲಿದ್ದಾರೆ.
ಇನ್ನೊಂದು ವಿಚಿತ್ರ ಎಂದರೆ ಈ ಅಘೋರಿಗಳು ಸ್ಮಶಾನದಲ್ಲಿ ಮಲಗುವುದು, ಮಾಂಸ, ಮದ್ಯ ಸೇವನೆ ಮಾಡುವುದು ಹಾಗೆ ಮನುಷ್ಯ ತಲೆ ಬುರುಡೆಯನ್ನು ತಟ್ಟೆಯಂತೆ ಬಳಸುವುದು ವಿಚಿತ್ರ ಸಂಪ್ರದಾಯಗಳಲ್ಲೂ ಒಂದಾಗಿದೆ. ಹಾಗೆ ಸ್ಮಶಾನದ ಬೂದಿ ಹಚ್ಚಿಕೊಳ್ಳುವುದು ಕೂಡ ಅವರ ಆಚರಣೆಯಲ್ಲಿ ಒಂದಾಗಿದೆ. ಅವರು ಮನೆಯ ಎಲ್ಲ ಜವಾಬ್ದಾರಿಯಿಂದ ಮುಕ್ತರಾಗಿರುತ್ತಾರೆ, ಅಘೋರಿತನವನ್ನು ತ್ಯಜಿಸಿ ಮತ್ತೆ ಅವರು ಕೌಟುಂಬಿಕ ಲೋಕಕ್ಕೆ ಕಾಲಿಡುವುದಿಲ್ಲ.
ಹಾಗೆ ಅಘೋರಿಗಳ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ನಂಬಲಾಗಿದೆ. ಅವರು ಮೃತಪಟ್ಟಾಗ ಅವರ ದೇಹವನ್ನು ಸುಡುವುದಿಲ್ಲ ಬದಲಿಗೆ ನದಿಯಲ್ಲಿ ತೇಲಿ ಬಿಡಲಾಗುತ್ತದೆ. ಅವರ ದೇಹದಿಂದಲೂ ಉಪಯೋಗವಾಗಬೇಕು ಎಂಬ ಚಿಂತನೆಯಂತೆ.



Click it and Unblock the Notifications