Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಯಾವಾಗ? ಆಚರಿಸುವುದು ಏಕೆ ಗೊತ್ತಾ?
ವರಮಹಾಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತವೆ. ಈಗ ಶ್ರೀಕೃಷ್ಣ ಜನ್ಮಾಷ್ಟಮಿ ಕೂಡ ಆಗಮಿಸುತ್ತಿದೆ. ಹಿಂಧೂ ಸಮುದಾಯ ಅತ್ಯಂತ ಸಡಗರದಿಂದ ಆಚರಿಸುವ ಹಲವು ಹಬ್ಬಗಳಲ್ಲಿ ಈ ಕೃಷ್ಣ ಜನ್ಮಾಷ್ಟಮಿ ಕೂಡ ಒಂದಾಗಿದೆ. ವಿಷ್ಣುವಿನ 8ನೇ ಅವತಾರ ಎಂದು ಪರಿಗಣಿಸಲಾದ ಕೃಷ್ಣನು ದ್ವಾಪರಯುಗದಲ್ಲಿ ಜನಿಸಿ ಅಧರ್ಮದ ಅಳಿವಿಗೆ ಕಾರಣನಾದ ಎಂದು ಹೇಳಲಾಗುತ್ತದೆ.
ಹಿಂದೂ ಪುರಾಣಗಳ ಪ್ರಕಾರ ಕೃಷ್ಣನು ಮಥುರಾದ ಸೆರೆಮನೆಯಲ್ಲಿ ದೇವಕಿ ಮತ್ತು ವಾಸುದೇವರಿಗೆ ದೇವಕಿಯ ಸಹೋದರನಾದ ರಾಜ ಕಂಸನ ಆಡಳಿತದಲ್ಲಿ ಜನಿಸಿದ. ದುಷ್ಟತನ ಹಾಗೂ ಅಧರ್ಮವನ್ನು ನಾಶ ಮಾಡಲು ಕೃಷ್ಣನು ಜನ್ಮ ತಾಳಿದನು ಎಂದು ನಂಬಲಾಗಿದೆ. ಹೀಗಾಗಿ ಈ ದಿನವನ್ನು ಜನ್ಮಾಷ್ಟಮಿ, ಕೃಷ್ಣಾಷ್ಟಮಿ, ಗೋಕುಲಾಷ್ಟಮಿ, ಅಷ್ಟಮಿ ರೋಹಿಣಿ, ಶ್ರೀಕೃಷ್ಣ ಜಯಂತಿ ಎಂದೂ ಕೂಡ ಕರೆಯಲಾಗುತ್ತದೆ.

ಈ ದಿನ ಕೃಷ್ಣನಿಗೆ ವಿಶೇಷ ಪೂಜೆಗಳು ನೆರವೇರಲಿದೆ. ಅದ್ರಲ್ಲೂ ಕೃಷ್ಣನಿಗಾಗಿ ಮನೆಯಲ್ಲೂ ವಿಶೇಷ ರೀತಿ ಹಬ್ಬ ಆಚರಿಸಲಾಗುತ್ತದೆ. ಉಪವಾಸ ಇರುವುದು ಸಾಮಾನ್ಯ ಆಚರಣೆಯಲ್ಲಿ ಒಂದಾಗಿದೆ. ಹಾಗೆ ಈ ಸಮಯದಲ್ಲಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಪೋಷಕರು ಸಂತಸ ಪಡುವುದು ನೋಡಬಹುದು.
ಈ ವರ್ಷ ಯಾವಾಗ ಕೃಷ್ಣ ಜನ್ಮಾಷ್ಟಮಿ
ಈ ವರ್ಷ ಆಗಸ್ಟ್ 16ರ ಶನಿವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಗಮಿಸಿದೆ. ರಾಣಿ ದೇವಕಿಯ ಸಹೋದರ ಕಂಸನು ಆಕೆಯ 8ನೇ ಮಗನೇ ತನ್ನ ಸಾವಿಗೆ ಕಾರಣ ಎಂಬ ಭವಿಷ್ಯವಾಣಿಯನ್ನು ನಂಬಿದ್ದನು. ಇದರಿಂದ ವಿಚಲಿತನಾಗಿದ್ದ ಕಂಸನು ದೇವಕಿಯ ಎಲ್ಲಾ ಮಕ್ಕಳನ್ನು ಸಾಯಿಸಲು ಮುಂದಾದನು. ಹಾಗೆ ದಂಪತಿಯನ್ನು ಜೈಲಿಗೆ ಹಾಕಿದನು. ಆದರೆ ದೇವಕಿಗೆ 8ನೇ ಮಗು ಜನಿಸಿದಾಗ ಆತನನ್ನು ರಹಸ್ಯವಾಗಿ ಅಲ್ಲಿಂದ ರವಾನಿಸಿದಳು. ಹಾಗೆ ಶ್ರೀ ಕೃಷ್ಣನು ಯಶೋಧೆಯ ಆರೈಕೆಯಲ್ಲಿ ಬೆಳೆದನು. ಹೀಗಾಗಿ ವೃಂದಾವನದಲ್ಲಿ ಆತ ಬೆಳೆದು ದೊಡ್ಡವನಾದನು.
ಆದ್ರೆ ಕಂಸನು 8ನೇ ಮಗುವನ್ನು ಬಿಟ್ಟು ವಾಸುದೇವ ನೀಡಿದ ಹೆಣ್ಣು ಮಗವೊಂದನ್ನು ಮೇಲೆ ಎಸೆದನಂತೆ. ಆದರೆ ಆ ಮಗು ಸಾಯುವ ಬದಲು ದುರ್ಗಾ ದೇವಿಯ ಸ್ವರೂಪ ಪಡೆದು ಮತ್ತೆ ಕಂಸನ ಸಾವಿನ ಭವಿಷ್ಯ ನುಡಿದಿತ್ತಂತೆ. ಅನಂತರ ಕೃಷ್ಣನು ಬೆಳೆದು ದೊಡ್ಡವನಾದನು. ಹಾಗೆ ಕಂಸನ ವಧೆ ಮಾಡಿ ಧರ್ಮ ಕಾಪಾಡಿದನು ಎಂಬುದು ಪುರಾಣದಲ್ಲಿದೆ.
ಕೃಷ್ಣ ಜನ್ಮಷ್ಟಮಿ ಆಚರಿಸುವುದು ಏಕೆ?
ಧರ್ಮವನ್ನು ಪುನಃಸ್ಥಾಪಿಸಿದ ದೈವಿಕ ಅವತಾರವಾಗಿ ಕೃಷ್ಣನ ಜನ್ಮವನ್ನು ಆಚರಿಸಲಾಗುತ್ತದೆ. ವಿಷ್ಣುವಿನ ಅವತಾರ ಎಂದು ಪರಿಗಣಿಸಲಾಗಿರುವುದರಿಂದ ವಿಷ್ಣುವಿನ ಆಶೀರ್ವಾದ ಪಡೆಯಲು ಕೃಷ್ಣನ ಪೂಜಿಸಲಾಗುತ್ತದೆ. ಹೀಗಾಗಿ ಈ ದಿನದಂದು ಕೃಷ್ಣನ ಜನ್ಮ ಸ್ಥಳವಾಗಿರುವ ಮಥುರಾದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಈ ದಿನ ಮಥುರಾದ ಶ್ರೀ ಕೃಷ್ಣನ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಅಚ್ಚರಿ ಏನೆಂದರೆ ಈ ಕೃಷ್ಣ ಜನ್ಮಾಷ್ಟಮಿಯನ್ನು ರಾತ್ರಿ ಆಚರಿಸಲಾಗುತ್ತದೆ.
ಏಕೆಂದರೆ ಶ್ರೀ ಕೃಷ್ಣನು ಮಧ್ಯರಾತ್ರಿ ಜನಿಸಿದನು ಎಂದು ನಂಬಲಾಗಿದೆ. ಹೀಗಾಗಿ ಇಡೀ ರಾತ್ರಿ ಹಲವು ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮಾರನೆ ದಿನ ಬೆಳಗ್ಗೆಯಿಂದ ಹಲವು ರೀತಿಯ ಪೂಜೆಗಳು, ಕಾರ್ಯಕ್ರಮಗಳು ಜರುಗುತ್ತವೆ. ಅದ್ರಲ್ಲೂ ಪ್ರಪಂಚದಾದ್ಯಂತ ಇರುವಂತಹ ಇಸ್ಕಾನ್ ದೇವಾಲಯಗಳಲ್ಲಿ ಬಹುದೊಡ್ಡ ಸಂಭ್ರಮಾಚರಣೆ ನೋಡಬಹುದು. ಈ ದೇವಾಲಯದಲ್ಲಿ ಇಡೀ ದಿನ ಜಪಗಳು, ಪೂಜೆಗಳು ನಡೆಯಲಿದೆ. ಹಾಗೆ ವಿಶ್ವದಾದ್ಯಂತ ಕೃಷ್ಣನ ಭಕ್ತಾಧಿಗಳು ದಾನ ಧರ್ಮ, ಅನ್ನ ಸಂತರ್ಪಣೆ ಮಾಡುವುದು ನೋಡಬಹುದು. ಇನ್ನು ಈ ದಿನ ಮನೆಯಲ್ಲಿಯೂ ವಿವಿಧ ರೀತಿಯ ರುಚಿ ರುಚಿಯ ಸಿಹಿ ತಿಂಡಿ ಮಾಡಿ ಸವಿಯುವುದು, ಹಾಗೆ ಸಾರ್ವಜನಿಕವಾಗಿ ಹೋಳಿ ಆಡುವ ಸಂಪ್ರದಾಯವೂ ಇದೆ.



Click it and Unblock the Notifications